Oppanna
Oppanna.com

ಉಂಡ್ಲಕಾಳು

ವೇಣಿಯಕ್ಕ° 07/08/2012

ಉಂಡ್ಲಕಾಳು ಬೇಕಪ್ಪ ಸಾಮಾನುಗೊ: 10-12 ಕಪ್(ಕುಡ್ತೆ) ನೀರು ಸೊಳೆ 2 ಕಪ್(ಕುಡ್ತೆ) ಅಕ್ಕಿ ಹೊಡಿ ಅಥವಾ ಗಟ್ಟಿಗೆ ಕಡದ ಬೆಣ್ತಕ್ಕಿ ಹಿಟ್ಟು (ಸೋನಾ ಮಸೂರಿ ಒಳ್ಳೆದು) 3 ಕಪ್(ಕುಡ್ತೆ) ಕಾಯಿ ತುರಿ 1 ಕೊಪ್ಪರ ಕಾಯಿ ಎಣ್ಣೆ – ಹೊರಿವಲೆ ಮಾಡುವ ಕ್ರಮ: ನೀರು ಸೊಳೆಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳದು, ಲಾಯಿಕಲಿ ಹಿಂಡಿ ಮಡುಗಿ. (ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ಒಂದು ಅರ್ಧ ಘಂಟೆ ಬೊದುಳುಲೆ ಹಾಕಿ ಹಿಂಡಿ ತೆಗೆರಿ. ಹೆಚ್ಚಿಪ್ಪ ಉಪ್ಪಿನಂಶ ಹೋಪನ್ನಾರ ಹೀಂಗೆ 2-3 ಸರ್ತಿ ಮಾಡಿ.) ಕೊಪ್ಪರ ಕಾಯಿಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ತುಂಡು ಮಾಡಿ. ಹಿಂಡಿ ಮಡುಗಿದ ನೀರು ಸೊಳೆಯನ್ನೂ, ಕಾಯಿ ತುರಿಯನ್ನೂ ನೊಂಪಿಂಗೆ ರೆಜ್ಜವೆ ನೀರು ಹಾಕಿ ಗಟ್ಟಿಗೆ ಕಡೆರಿ. ಇದಕ್ಕೆ ಅಕ್ಕಿ ಹೊಡಿ ಅಥವಾ ಗಟ್ಟಿಗೆ ಕಡದ ಬೆಣ್ತಕ್ಕಿ ಹಿಟ್ಟು ಹಾಕಿ ಲಾಯಿಕಲಿ ತೊಳಸಿ. ಹಿಟ್ಟು ಉಂಡೆ ಮಾಡ್ಲೆ ಬಪ್ಪಸ್ಟು ಗಟ್ಟಿ ಬೇಕು. ಕೊಪ್ಪರ ಕಾಯಿಯ ಹಿಟ್ಟಿಂಗೆ ಹಾಕಿ ಬೆರುಸಿ ಅಥವಾ ಉಂಡೆ ಮಾಡುವಗ ಒಂದೊಂದೆ ಹೋಳಿನ ನಡುಕೆ ಮಡುಗಿ ಉಂಡೆ ಮಾಡಿ. ಹಿಟ್ಟಿನ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣ ದ್ರಾಕ್ಷೆಯಸ್ಟು ದೊಡ್ಡ ಉಂಡೆ ಮಾಡಿ.

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×