ವೇಣಿಯಕ್ಕ° 21/08/2012
ಸೌತೆಕಾಯಿ ಕೆರದ್ದು(ಸಿಹಿ) ಬೇಕಪ್ಪ ಸಾಮಾನುಗೊ: 2 ಕಪ್(ಕುಡ್ತೆ) ತುರುದ ಹಣ್ಣು ಸೌತೆ 1.5 ಕಪ್(ಕುಡ್ತೆ) ಕೆರಸಿದ ಬೆಲ್ಲ 1.5 ಕಪ್(ಕುಡ್ತೆ) ಸಣ್ಣಕೆ ತುರುದ ಕಾಯಿ ಸುಳಿ 1 ಕಪ್(ಕುಡ್ತೆ) ಅವಲಕ್ಕಿ 1/8 ಚಮ್ಚೆ ಉಪ್ಪು ಮಾಡುವ ಕ್ರಮ: ಹಣ್ಣು ಸೌತೆಯ ತೊಳದು, ಅರ್ಧ ಮಾಡಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತಿರುಳು ಬಿತ್ತಿನ ತೆಗೆರಿ. ಇದರ ಕೆರಮಣೆಲಿ ಜಾಗ್ರತೆಗೆ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೆರೆರಿ. ಕಾಯಿಯನ್ನೂ, ಬೆಲ್ಲವನ್ನೂ ಕೆರದು/ಕೆರಸಿ ಮಡಿಕ್ಕೊಳ್ಳಿ. ಸೌತೆಕಾಯಿ ಕೆರದು ಮಡಿಗಿದ್ದಕ್ಕೆ, ಉಪ್ಪು, ಬೆಲ್ಲ ಹಾಕಿ ತೊಳಸಿ. ಅದಕ್ಕೆ ಕಾಯಿ ತುರಿ, ಅವಲಕ್ಕಿ ಹಾಕಿ ಬೆರುಸಿ, ತಿಂಬಲೆ ಕೊಡಿ. ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ. ~ ವೇಣಿ ಅಕ್ಕ° ಸೂ: ಈ ಶುದ್ದಿಯ