Oppanna.com

“ಅಬ್ಬಿ” : ಹವ್ಯಕ ಭಾವಗೀತೆ (ಧ್ವನಿಸಹಿತ)

ಬರದೋರು :   ಶ್ರೀಶಣ್ಣ    on   19/07/2012    16 ಒಪ್ಪಂಗೊ

ಮಧುರಕಾನ ಬಾಲಮಾವ ಅಂದು “ಅಬ್ಬಿ” ಪದ್ಯ ಬರದು “ನೆರೆಕರೆ ಪ್ರತಿಷ್ಠಾನ”ದ ಸ್ಪರ್ಧೆಲಿ ಪ್ರಥಮಸ್ಥಾನ ಪಡದ್ದು ಗೊಂತಿದ್ದನ್ನೇ?
ಆ ಸಮಯಲ್ಲಿ ಪ್ರಕಟ ಮಾಡಿದ ಶುದ್ದಿ ಇಲ್ಲಿದ್ದು: (ಸಂಕೊಲೆ)
ಬಾಲಮಾವ ಬರದ ಪದ್ಯವ ನಮ್ಮ ಬೈಲಿನ “ಶ್ರೀಶಣ್ಣ” ಚೆಂದಕೆ ಹಾಡಿ ಬೈಲಿಂಗೆ ಕೇಳುಸೆಂಡಿದ್ದವು.
ಚೆಂದದ ಪದ್ಯ ಬರದ ಬಾಲಮಾವಂಗೂ, ಚೆಂದಕೆ ಹಾಡಿ ಬೈಲಿಂಗೆ ಕೇಳುಸಿದ ಶ್ರೀಶಣ್ಣಂಗೂ – ಅಭಿನಂದನೆಗೊ.
ಪದ್ಯ ಕೇಳಿಕ್ಕಿ, ಹೇಂಗಿದ್ದು ಹೇಳಿಕ್ಕಿ.

ಅಬ್ಬಿ (ಹವ್ಯಕ ಭಾವಗೀತೆ):

ರಚನೆ: ಬಾಲ ಮಧುರಕಾನನ
ಧ್ವನಿ: ಶ್ರೀಶಣ್ಣ, ಹೊಸಬೆಟ್ಟು

ಬಳ್ಳಿ ಪುದೆಲುಗಳೆಡೆ೦ದ
ಪಾರೆಕಲ್ಲಿನ ಕೊರದು
ಜೊಳಜೊಳನೆ ಹರಿವ ಈ ಅಬ್ಬಿ ನೋಡು|
ಹಾಲ ಹೊಳೆ ಹರುದಾ೦ಗೆ
ದಬದಬನೆ ಬೀಳುತ್ತು
ಎ೦ತ ಚೆ೦ದವೊ ನೋಡು, ಸುತ್ತ ಕಾಡು||1||

ಪಾರೆಗಳ ಮೈತೊಳದು
ನೀರು ಪಳಪಳ ಹೊಳದು
ಕೈಬೀಸಿ ದೆನಿಗೋಳ್ತು ಕೇಳ್ತಿಲ್ಲೆಯೋ?|
ಮುಳ್ಳುಬಲ್ಲೆಯೊ! ಕಾಡೊ!
ಚಿಗುರು,ಬಳ್ಳಿಯ ಕೊಡಿಯೊ!
ಪಿಸಿಪಿಸಿನೆ ಕೆಮಿಲೆ೦ತೊ ಹೇಳ್ತಿಲ್ಲೆಯೋ?||2||

ಪದ್ಯ ಕರ್ತೃ: ಶ್ರೀ "ಬಾಲ" ಮಧುರಕಾನನ

ಕೆಮಿಗೊ೦ಡೆ ಮಾಡಿದರೆ
ಸ೦ಗೀತ ಕೇಳುತ್ತು
ತಿಳಿನೀರ ಕನ್ನಟಿಲಿ ಮೋರೆ ಕಾಣುತ್ತು|
ಅಲ್ಲೆ ಸೀರಣಿ ಹಾರಿ
ಕೊಣಿವ ಚೆ೦ದವ ನೋಡಿ
ಇಲ್ಲೆ ಇಪ್ಪೊ° ಹೇಳಿ ಮನಸು ಹೇಳುತ್ತು||3||

ಉಗುರು ಬೆಚ್ಚ೦ಗಿಪ್ಪ
ಹರಿವ ನೀರಿ೦ಗಿಳುದು
ಮು೦ಗಿ ಮೀಸುವ ಕೊಶಿಯ ಹೇಳಲೆಡಿಗ?|
ಜಳು೦ಬುಳುನೆ ಕೈಕಾಲು
ಬಡುದು ನೀರಿಲಿ ಸೊಕ್ಕಿ
ಬೊಬ್ಬೆ ಹಾಕುವ ಸುಖವ ಮರವಲೆಡಿಗ?||4||

ಈ ಕಾಡು ಈ ನೀರು
ಈ ಗುಡ್ಡೆ ಆ ಬೈಲು
ಎ೦ದಿ೦ಗು ಚೆ೦ದಕ್ಕೆ ಒಪ್ಪಕಿರಲಿ|
ಕಲ್ಲು ಬ೦ಡೆಯ ತೋಚಿ
ಹಿಡುದು ನಿ೦ದಾ ಬೇರು
ಕೊಡುವ ಸ೦ದೇಶ ನಮ್ಮ ನೆ೦ಪಿಲಿರಲಿ||5||

~*~*~

ಧ್ವನಿ:
ಹೊಸಬೆಟ್ಟು ಶ್ರೀಶಣ್ಣ

16 thoughts on ““ಅಬ್ಬಿ” : ಹವ್ಯಕ ಭಾವಗೀತೆ (ಧ್ವನಿಸಹಿತ)

  1. thumba samayanda havyaka hadu kelekku heli kaytha ittidde.poorayisida elloringu dhanyavadagalu. shubhashayagalu

  2. ಎನ್ನ ಡ್ರಾಯಿ೦ಗ್ ಮಾಸ್ಟ್ರ ರಚನೆ ಸೂಪರ್. ಎ೦ಗಳ ಶ್ರೀಶಣ್ಣ ರಾಗ ಹಾಕಿ ಹಾಡಿದ್ದೊ ಕೂಡ ತು೦ಬಾ ಲಾಯಕ ಆಯಿದು

  3. ನಿಂಗೊ ಎಲ್ಲೊರು ಹೇಳಿದ ಒಪ್ಪಂಗೊಕ್ಕೆ ಅಡ್ಡ ಬಿದ್ದೆ. ಎಲ್ಲೊರಿಂಗು ಮುಟ್ಟುಸಿದ್ದು ಶ್ರಿಶಣ್ಣ, ಅವಕ್ಕೆ ತುಂಬಾ ತುಂಬಾ ದನ್ಯವಾದಂಗೊ. ಓದಿದರೆ ಸಿಕ್ಕುವ ರುಚಿಬೇರೆ, ಕೇಳಿದರೆ ಅದರ ಸುಖವೇ ಬೇರೆ .ಹಾಂಗೆಯೆ ಹಾಡುವ ಸುಖವು ಕೂದಾ. ಅಲ್ಲದೋ?

    1. @ ಬಾಲಣ್ಣ.
      ನಿಂಗಳ ಈ ಕವನ ಎನಗೆ ತುಂಬಾ ಇಷ್ಟ ಆತು. ಹಾಂಗೇ ಸ್ವರ ಸೇರುಸುವ ಪ್ರಯತ್ನ ಮಾಡಿದೆ.
      ಅನುಭವಿಗೊ ಹಾಡಿದ್ದರ ಬಗ್ಗೆ ವಿಮರ್ಶೆ ಮಾಡಿರೆ, ಮುಂದಂಗೆ ಸರಿ ಪಡಿಸಿಗೊಂಬಲೆ ಅನುಕೂಲ ಅಕ್ಕು
      ಮೆಚ್ಚಿ ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಎಲ್ಲರಿಂಗೂ ಧನ್ಯವಾದಂಗೊ.

      1. ಆನು ಈ ವಿಶ್ಯ್ದಲ್ಲಿ ಅನುಭವಸ್ಥನಲ್ಲ, ಬರದ್ದಕ್ಕೆ ಇಬ್ಬರೂ ಮನ್ನಿಸೆಕ್ಕು ,ಕೇಳಿ .ಮು೦ದುವರಿಸುತ್ತೆ.
        ಕವನ ವಾಚನಲ್ಲಿ ಈ ಎರಡು ಪದ ಕವಿಗಳಿ೦ತ ಭಿನ್ನವಾಗಿ ಕೇಟತ್ತು.೧.ಅಲ್ಲೆ. ೨.ಜಳು೦ಬುಳುನೆ.

        ಪೆರಟು ಹೇದ್ದಕ್ಕೆ , ಇಬ್ಬರಲ್ಲು ಮರಳಿ ಕ್ಷ ಮ್ಸಿಸೆಕ್ಕು ಅ೦ತ ಬೈಲಿ ಲಿ ಕೇಳುತ್ತಾ ಇ ದ್ದೆ.

        1. ತೋರಿಸಿಕೊಟ್ಟದಕ್ಕೆ ಧನ್ಯವಾದಂಗೊ.
          ಇನ್ನೊಂದು ಸರ್ತಿ ಇದರ ಗಮನಲ್ಲಿ ಮಡ್ಕೊಳ್ತೆ.

  4. ಕೇಳಿದಷ್ಟು ಸರ್ತಿ ಹೊಸ ಉಲ್ಲಾಸ ತಪ್ಪ ಈ ರಚನೆ – ಗಾಯನ ಎರಡೂ ಹವ್ಯಕ ಸಾಹಿತ್ಯಕ್ಕೆ ಕೊಡುಗೆಯೇ ಸರಿ.ಬಾಲಣ್ಣ-ಶ್ರೀಶಣ್ಣರು ಹೀ೦ಗೆಯೇ ಬೈಲಿಲಿ ಭಾವಪೂರ್ಣ,ಅರ್ಥಪೂರ್ಣ ಕವಿತೆಗಳ ಸುಧೆ ಹರುಸಲಿ.ಅಭಿನ೦ದನೆಗೊ.

  5. ಅದೇ ನೀರಿಲಿ,ಗದ್ದೆಲಿ ಹೂಡಿ -ನೇಜಿ ನೆಟ್ಟು ಬ0ದ ,ಮಾದಿ0ಗೆ ಬಾರದ್ದ ಗೋಣ0ಗಳ ಕೆ0ಪಾದ ,ಕೋರ್ಸ್0ಡಿ ?

    ಎಣ್ಣೆ ಕಿಟ್ಟಿದ ಬೆನ್ನ ,ತೊರ್ಸುವ ಎಲೆಗಳ ತ0ದು ತಿಕ್ಕಿದ್ದ ನೆ0ಪಾತು.ಅಲ್ಲೆ ಮರಲ್ಲಿ ಇದ್ದ ಮರ ಕೆಸವ ಮರೆಯೆಲೆಡಿಯ. ಅದೇ ತೋಡಿಲಿ ಕೆಪ್ಪೆಕಲ್ಲುಗಳ ಕುಣಿತವೂ ಕ0ಡತ್ತು. ಹಾಡಲಿ ಬ0ದ ಪ್ರಶಾ0ತತೆ,

    ಮತ್ತೆ ,ಮತ್ತೆ ,ಕೆಮಿ ಕೊಡುವಾ0ಗೆ ಆತು. ಒ0ದೇ ಮಾತಲಿ,ಸೂಪರ್.

  6. ಅಬ್ಬಿಯ ಜೊಳುಜೊಳು ಶಬ್ದಕ್ಕೆ ಹೊಂದುವ ರಾಗ,ಹಾಡಿದ್ದು ಲಾಯ್ಕ ಆಯಿದು.

  7. ಬಾಲಣ್ಣ ರಚನೆ ಲಾಯಕ ಬಯಿಂದು,ಶ್ರೀಶಣ್ಣಹಾಡಿದ್ದು ಲಾಯಕ ಆಯಿದು.ಸಣ್ಣಇಪ್ಪಗಅಬ್ಬಿಲಿ ಮಿಂದ ನೆನಪು ಆವುತ್ತು.ಒಂದರಿ ಅಬ್ಬಿಲಿ ಮಿನ್ದಾನ್ಗೆ ಆತು. ಅಬಿನಂದನೆಗಳು. ಮುಂದುವರಿಯಲಿ.ತುಂಬ ಸಂತೋಷ

  8. ಲಾಯಕ ಲಾಯಕ ಲಾಯಕ ಆಯ್ದು.

    ಬಾಲಣ್ಣ – ಶ್ರೀಶಣ್ಣ ಜೋಡಿಗೆ ಅಭಿನಂದನೆಗೊ. ಇನ್ನೂ ಇನ್ನೂ ಹೀಂಗಿರ್ಸು ಬೈಲಿಲಿ ಬಂದುಗೊಂಡಿರೆಕು ಎಂಬುದೀಗ – ‘ಚೆನ್ನೈವಾಣಿ’

  9. ವ್ಹಾ!
    ಡ್ರಾಯಿಂಗ್ ಮಾಷ್ಟ್ರ ಪದ್ಯ ತುಂಬಾ ಲಾಯ್ಕ ಆಯಿದು, ಕೇಳ್ಳೆ ತುಂಬ ಕೊಶಿ ಆವ್ತು.
    ಪದ್ಯ ಕೇಳ್ಯೊಂಡು “ಇಲ್ಲೆ ಇಪ್ಪೊ° ಹೇಳಿ ಮನಸು ಹೇಳುತ್ತು” !

    1. ಮಹೇಶಣ್ಣ ಅಬ್ಬಿ ಅಡಿಲಿ ಕೂದೊಂಡಿದ್ದಿರೊ ಹೇಂಗೆ ?
      ಡ್ರಾಯಿಂಗ್ ಮಾಷ್ಟ್ರ ಪದ್ಯವುದೆ, ಶ್ರೀಶಣ್ಣನ ರಾಗವುದೆ ಭಾರೀ ಚೆಂದ ಆಯಿದು. ಶ್ರೀಶಣ್ಣ ಒಳ್ಳೆ ಅನುಭವಿಸಿ ಹಾಡಿದ್ದವು.

  10. ಸಾಹಿತ್ಯ-ಧ್ವನಿ ಎರೆಡೂ ಸೂಪರ್!
    ಯಾವುದೇ ಪದ್ಯದ ಸವಿ ಸುಮ್ಮನೇ ಓದಿದ್ರೆ ಅಷ್ಟು ಗೊತ್ತಾಗ್ತಿಲ್ಲೆ, ಅದರ ಜತೆ ಸ೦ಗೀತ ಸೇರಿದ್ರೆ ಅದರ ಭಾವ-ಮಾಧುರ್ಯದ ಆಳ ಗೊತ್ತಾಪುದು. ಬಾಲಣ್ಣ, ಶ್ರೀಶಣ್ಣ ಇಬ್ಬರಿಗೂ ಅಭಿನ೦ದನೆಗೊ.
    ಇ೦ಥದು ಇನ್ನೂ ಬರ್ತಾ ಇರಳಿ, “ಹವಿಗನ್ನಡ” ಸಾಹಿತ್ಯ-ಸ೦ಗೀತ ಬೆಳೇತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×