Oppanna.com

ಸಮಸ್ಯೆ 05: “ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು”

ಬರದೋರು :   ಸಂಪಾದಕ°    on   04/08/2012    33 ಒಪ್ಪಂಗೊ

ಎಲ್ಲೋರಿಂಗೂ ನಮಸ್ಕಾರ.
ಕಳುದ ನಾಕು ವಾರಂಗಳಲ್ಲಿ ಶರ, ಕುಸುಮ, ಭೋಗ, ಭಾಮಿನೀ ಷಟ್ಪದಿಗಳಲ್ಲಿ ಒಂದೊಂದು ಸಮಸ್ಯೆ ಬಿಡುಸಿದ್ದು.
ಬೈಲಿನ ಆಸಕ್ತ ಎಲ್ಲೋರುದೇ ಒಂದೊಂದು ಪ್ರಯತ್ನ ಮಾಡಿದ್ದವು.
ಈ ವಾರ, ಐದನೇ ಸಮಸ್ಯೆ – ಪರಿವರ್ಧಿನೀ ಷಟ್ಪದಿಲಿ.

ಈ ವಾರದ ಸಮಸ್ಯೆ:

” ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು “

ಎಲ್ಲೋರುದೇ ಸಮಸ್ಯೆ ಬಿಡುಸುವಿರಲ್ಲದೋ?

– ಈ ಸಮಸ್ಯೆ “ಪರಿವರ್ಧಿನೀ” ಷಟ್ಪದಿಲಿ ಇದ್ದು.
ನಾಕು ನಾಕರ ನಾಕು ಗುಚ್ಛ, ಮೊದಲೆರಡು ಸಾಲಿಲಿ.
ನಾಕು ಮಾತ್ರೆಯ ಆರು ಗುಚ್ಛ, ಕೊನೆಗೊಂದು ಗುರು – ಮೂರು ಮತ್ತು ಆರ್ನೇ ಸಾಲಿಲಿ.

ಹೆಚ್ಚಿನ ಮಾಹಿತಿಗೆ:
https://oppanna.com/oppa/shara-kusuma-bhoga-bhamini-shatpadi
http://padyapaana.com

33 thoughts on “ಸಮಸ್ಯೆ 05: “ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು”

  1. timrootu= ಮುರುಟು ನ್ಯಾಯವು ಬತ್ತಾ ಹೇಳಿ ಗೊಂತಿಲ್ಲೆ. ಹಳೆ ತಲೆಗಳೆ ಹೇಳೆಕ್ಕಶ್ತೆ.ಈ ಶಬ್ದದ ಬಳಕೆ ಈ ಭಾಗಲ್ಲಿ ಸಾಮಾನ್ಯ

    ವಾಗಿ ಕಾಣುತ್ತು.

    1. ಅಪ್ಪು. ಕುಂಬಳೆ ಸೀಮೆಲಿ ಚಾಲ್ತಿಲಿ ಇಪ್ಪ ಶಬ್ದ-ತಿಮ್ರೂಟು. ಉದ್ದೇಶಪೂರ್ವಕವಾಗಿ ಮಾಡುವ ಕೀಟಲೆ ಅಥವಾ ಉಪದ್ರ ಮಾಡುವ ಬುದ್ಧಿ – ಈ ಶಬ್ದಕ್ಕೆ ಚಾಲ್ತಿಲಿ ಇಪ್ಪ ಅರ್ಥ. ಇದರ ವ್ಯುತ್ಪತ್ತಿ ಹೇಂಗೆ ಹೇಳಿ ಎನಗೆ ಗೊಂತಿಲ್ಲೆ.ತಿಳಿವ ಪ್ರಯತ್ನ ಮಾಡುತ್ತೆ.

  2. ನಮ್ಮ ಹವ್ಯಕಕವಿಗಳ ಪ್ರತಿಭೆ ಬೈಲಿಲಿ ಬೆಳಗುತ್ಸು ಕಾಂಬಗ ಭಾರೀ ಕೊಶಿ ಆವುತ್ತು. ಎಲ್ಲೋರ ಪದ್ಯಂಗಳು ಬಾರೀ ಲಾಯಕ ಆಯಿದು

    ‘ತಿಮ್ರೂಟು’=’ಪೆದಂಬು’ ಹೇಳಿ ಹೇಳಲಕ್ಕು ಹೇಳಿ ತೋರುತ್ತು , ಆದರೆ ,ಅದರಸ್ತು ಅರ್ಥ ವ್ಯಾಪ್ತಿ ಸಿಕ್ಕ ಮಿನಿಯಾ.

  3. ಅಣ್ಣಾ ನಿನ್ನಾ ಕ೦ಡಪ್ಪಗ ಮನ
    ತಣ್ಣ೦ಗಾತಿ೦ದೀ ಮರುಭೇಟಿಲಿ
    ಕಣ್ಣೀರಿನ ಹೊಳೆ ಕಟ್ಟವ ಕಡುದಾ೦ಗೊ೦ದರಿ ಹರುದತ್ತು|
    ಸಣ್ಣಾದೆಯ ಪರದೇಶದ ವಾಸಕೆ
    ಹಣ್ಣಾದರು ಮೈ ಮನಸಿನ ಒಳ ನಾ
    ವ್ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು॥

  4. ಮಣ್ಣಿಯ ತಿಂಬಗ ಗಿಣ್ಣಲು ಇಡ್ಕುದು
    ಸುಣ್ಣದ ನಾಮವ ಕಂಜಿಗೆ ಎಳವದು
    ಅಣ್ಣನ ಚಡ್ಡಿಯ ಬಳ್ಳಿಯ ಹಿಂದಿನ ಕಿಟಿಕಿಗೆ ಕಟ್ಟಿದ್ದು॥
    ಬೆಣ್ಣೆಯ ಮುದ್ದೆಯ ಚೂಂಟಿಯೆ ತಿಂದದು
    ಬಣ್ಣದ ಶಾಯಿಯ ಬೆಂದಿಗೆ ಹೊಯ್ದದು
    ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು॥
    [ಈ ತಿಮ್ರೂಟು ಆನು ಮಾಡಿದ್ದಿಲ್ಲೆ ಆತೊ. ಸುಮ್ಮನೆ ಬರದ್ದು.ನಿಂಗಳ ಹತ್ತರೆ ಮೊದಲೇ ಜಾಮೀನು ಕೇಳುತ್ತೆ]

    1. ಒಹ್ ! ಈ ಮಾಣಿಯ ತುಂಟಾಟ ಒಳ್ಳೆತ ಇದ್ದಾನೆ. ಒಳ್ಳೆ ಕಿಲಾಡಿ ಹುಡುಗ. ಪದ್ಯ ಚೆಂದ ಬಯಿಂದು.

    2. {ಬಣ್ಣದ ಶಾಯಿಯ ಬೆಂದಿಗೆ ಹೊಯ್ದದು} ಇದರಿ೦ದ ದೊಡ್ದ ಲೂಟಿ ಬೇಕೊ? ಗೋಪಾಲಣ್ಣ,ಮರವಲೆಡಿಯದ್ದ ಸ೦ಗತಿಯೇ.
      ತಿಮ್ರೂಟು ಶಬ್ದದ ಅರ್ಥ ಎ೦ತರ? ಲೂಟಿಯೊ ?

    3. ಲೂಟಿ ಮಾಡ್ತ ಚಿತ್ರಣ ಪಷ್ಟಾಯಿದು.
      ಒಂದು ಸಂಗತಿ ಎಂತ ಹೇಳಿರೆ, (‘ ಪದ್ಯಪಾನ’ಲ್ಲಿ ಕಲ್ತದು) ಸಂಧಿ ಅಪ್ಪಲ್ಲಿ ವಿಂಗಡಿಸಿರೆ ಅದು ‘ವಿಸಂಧಿ’ ದೋಷ ಆವುತ್ತಡ. ಶುರುವಾಣ ಎರಡು ಪಾದಲ್ಲಿ “ಗಿಣ್ಣಲು ಇಡ್ಕುದು” ಮತ್ತೆ “ಕಂಜಿಗೆ ಎಳವದು” ಹೇಳ್ತಲ್ಲಿ ವಿಸಂಧಿ ಆಯಿದು. ಅದರ ತಿದ್ದಿರೆ, ( ಗಿಣ್ಣಾಲಿಡ್ಕುದು, ಕಂಜಿಗೆ ಹಾಕುದು) ತುಂಬ ಒಳ್ಳೆ ಪೂರಣ.

      1. ಸರಿ.
        ಗಿಣ್ಣಾಲಿಡ್ಕುದು
        ಮತ್ತೆ
        ಕಂಜಿಗೆಳದ್ದದು
        ಹೇಳಿ ಓದಿಕೊಳಿ.
        ಧನ್ಯವಾದ.

    4. ಲೂಟಿ ಮಾಡ್ತ ಚಿತ್ರಣ ಪಷ್ಟಾಯಿದು.
      ಒಂದು ಸಂಗತಿ ಎಂತ ಹೇಳಿರೆ, (‘ ಪದ್ಯಪಾನ’ಲ್ಲಿ ಕಲ್ತದು) ಸಂಧಿ ಅಪ್ಪಲ್ಲಿ ವಿಂಗಡಿಸಿರೆ ಅದು ‘ವಿಸಂಧಿ’ ದೋಷ ಆವುತ್ತಡ. ಶುರುವಾಣ ಎರಡು ಪಾದಲ್ಲಿ “ಗಿಣ್ಣಲು ಇಡ್ಕುದು” ಮತ್ತೆ “ಕಂಜಿಗೆ ಎಳವದು” ಹೇಳ್ತಲ್ಲಿ ವಿಸಂಧಿ ಆಯಿದು. ಅದರ ತಿದ್ದಿರೆ, ( ಗಿಣ್ಣಾಲಿಡ್ಕುದು, ಕಂಜಿಗೆ ಹಾಕುದು) ತುಂಬ ಒಳ್ಳೆ ಪೂರಣ.
      ತಿಮ್ರೂಟು ಶಬ್ದದ ಅರ್ಥ ಎನಗೂ ಗೊಂತಾಯಿದಿಲ್ಲೆ.

  5. ಬಾಲಣ್ಣ, ಜಯಕ್ಕ ತಡವಾಗಿ ಬಂದರುದೆ, ತುಂಬ ಚೆಂದಕ್ಕೆ ಪೂರಣಂಗಳ ಕೊಟ್ಟದಕ್ಕೆ ಅಭಿನಂದನೆಗೊ.

  6. ಬೊಳುಂಬು ಮಾವ, ಚೆನ್ನೈ ಭಾವ,ತೆಕ್ಕುಂಜ ಮಾವ ,ಮುಳಿಯ ಭಾವ ,ಪೆರ್ಲದಣ್ಣ,ಬಾಲಣ್ಣ ಎಲ್ಲರ ಪೂರಣಂಗ ಖುಷಿ ಆತು. ಹಲವು ಸಮಸ್ಯೆಗಳ ನಡುವೆ ಪೂರಣ ತಡವಾತು.

    ಎಣ್ಣೆಯ ಹಾಕಿದ ಕೊಟ್ಟಿಗೆ ಬೇಕೂ
    ಬೆಣ್ಣೆಯ ಹಾಕಿದ ದೋಸೆಯೆ ಬೇಕೂ
    ನುಣ್ಣಗೆ ರುಬ್ಬಿದ ಚಟ್ನಿಯೆ ಯಾವಾಗಲು ಬೇಕೇ ಬೇಕೂ |
    ಬಣ್ಣದ ತೊಟ್ಟೆಯ ತಿಂಡಿಯೆ ಬೇಕೂ
    ಕಣ್ಣೀರಿಳಿಸುವ ಮಕ್ಕಳ ನೋಡಿರೆ
    ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು ॥

    1. ಪೂರಣ ಒಳ್ಳೆ ರುಚಿ ರುಚಿ ಆಗಿ ಇದ್ದು. ತರ್ಕ ಹಿಡಿವ ಮಕ್ಕಳ ಚಿತ್ರಣ ಚೆಂದಕೆ ಬಯಿಂದು.

    2. olledaidu
      bannada thotteya thindiga ella igana makkala kathe athallada,,,

      modalana makkage churi hannu jede hannu ,,,puchekkai,,sarali heli

      ,,,,,,,,,,,,,,,,,,,,kadannugala ruchi maanthra gonthikku

      haam,,,kuntaangila hannu,,, shalege hopaga koidu ,,thindare

      mastru bai eke nili heli baiguli punarpuli chiguru thimbadu,,,

  7. ಬಣ್ಣದ ಬೊಂಬೆಯ ತಂದದು ಎನಗೇ

    ಅಣ್ಣನೊ ತೆಗೆದದ ಆಡಲೆ ನೋಡಿದ

    ಸಣ್ಣಕೆ ಜಗಳವೆ ಆತದ, ಬಿಡುಸಲೆ ಅಬ್ಬೆಯೆ ಬರೆಕಾತು \

    “ಸಣ್ಣವ ಅಲ್ಲದೊ ಆಡಲಿ ಬಿಡು,ನೀ-

    ನಣ್ಣನೆ ಸುಮ್ಮನೆ ಕೂರೆಕು”ಹಾಂಗೆ

    ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು\

    1. ಅಣ್ಣ ತಮ್ಮಂದ್ರ ಕಚ್ಚಾಟ, ಅಬ್ಬೆಯ ಮಧ್ಯಸ್ಠಿಕೆ ಒಳ್ಳೆ ದಾಯಿದು.

  8. ಬೊಣ್ಯವ ಮಾಡ್ಳೇ ಹಾಕಿದ ಸೂಟೂ
    ಮಣ್ಣಿನ ಕಿಚ್ಚಿಗೆ ಹಾಕಿದ ಬೀಜವು
    ಠಣ್ಣನೆ ಮುಸುಡಿಗೆ ರಟ್ಟಿದ ಸೊನೆಕಲೆ ಇಂದುದೆ ಕಾಣುತ್ತು ।

    ತಣ್ಣನೆ ನೆಗುಡಿಗೆ ಬೆಶಿ ಬೆಶಿ ನೀಲ್ಗಿರಿ
    ಎಣ್ಣೆಯ ಮೋರಗೆ ದಪ್ಪಕೆ ಕಿಟ್ಟಿದ
    ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು ॥

    ಬೀಜ = ಗೇರುಬೀಜ
    ನೀಲ್ಗಿರಿ = ನೀಲಗಿರಿ

  9. ಸುಭಗಣ್ಣ, ಪೆಂಗಣ್ಣ, ಒಪ್ಪಣ್ಣ ಕಾನಾವು ಉಪ್ನಾನಲ್ಲಿ ಎಲೆತಿಂದೊಂಡು ಬೆಂದಿಗೆ ಕೊರಕ್ಕೊಂಡು, ಹಳೆಯ ಮಧುರಕ್ಷಣಂಗಳ ನೆಂಪು ಮಾಡಿದ್ಸು ಲಾಯಕಾಯಿದು. ಒಳ್ಳೆ ಕಲ್ಪನೆ.

  10. ಕಣ್ಣಿನ ಡಾಟ್ರನ ಮನೆ ಜೆಂಬ್ರಕೆ ಸುಭ
    ಗಣ್ಣನು ಬಂದದು ಮುನ್ನಾದಿನ, ಪೆಂ
    ಗಣ್ಣನು ಸೇರಿಯೆ ಕೂದವು ಬೆಂದಿಗೆ ಕೊರವಲೆ ಎಲೆತಿಂದು ।
    ಅಣ್ನನ ಜತೆ ಸೇರಿದ ಸಾರಡಿಯೊ
    ಪ್ಪಣ್ಣನು ಮಾತಾಡುಲೆ ಶುರು ಮಾಡಿದ°
    ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು ॥
    ತಮಾಷೆಗೆ ಬರದ್ದು, ಇದರ ಓದಿ ನೆಗೆ ಮಾಡಿಕ್ಕಿ. –

  11. ಅಣ್ಣನ ಒಬ್ಬನ ದಾರಿಲಿ ಕಾಂಬಗ
    ಬಣ್ಣನ ರಕ್ಷೆಯ ಕಟ್ಟುಲೆ ಹೆರಟರೆ
    ಕಾಣದ್ದಾಂಗೇ ಮೋರೆಯ ಮಾಡುಲೆ ಕಾರಣ ಎಂತಿಕ್ಕು?

    ಕೋಣನ ಹಾಂಗೇ ಬೆಳೆದರು ಇನ್ನುದೆ
    ಬಾಣವ ತಾಗಿಸಿ ಬೀಳಿಸಿ ಕೂಗಿಸಿ
    ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು

    1. ಸರಿ ಇದ್ದು ಪೆರ್ಲದಣ್ಣ.ಲೂಟಿ ಭಾರೀ ಮಾಡಿದ್ದಿ ಹೇಳಿ ಆತ೦ಬಗ !
      (ಕೋಣನ)-ಗೋಣನ ಹೇಳಿ ಬದಸುಲಕ್ಕು.

  12. ಮಾಣಿಯ ಹೆಗಲಿ೦ಗೇರುಸಿ ಉಪ್ಪಿನ
    ಗೋಣಿಯ ಹೊರುವಾ ಆಟವನಾಡೊಗ
    ಜಾಣನ ಲೂಟಿಯ ಕಾ೦ಬಗ ಬಾಲ್ಯದ ಲಾಗದ ನೆ೦ಪಕ್ಕು।
    ಕಾಣದ್ದಾ೦ಗೆಯೆ ಹಟ್ಟಿಗೆ ನೆಡದೂ
    ಗೋಣನ ಬೆನ್ನಿಲಿ ಬೆತ್ತವ ಹಿಡುದೂ
    ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು ॥

    ಉಣ್ಣೋ° ಹೇಳಿರೆ ತಲೆಯಾಡುಸಿಯೇ
    ಗಿಣ್ಣಾಲಿಲಿ ಬೆಶಿ ಪಾಯಸ ಸುರುದೂ
    ಕಣ್ಣು ಹೊಡಚ್ಚೊಗ ಪುಳ್ಳರ ಕೂಟವೆ ಮಾವಿನ ಮರ ಹತ್ತಿ।
    ಹಣ್ಣಿನ ಕೊಯ್ವಗ ಸೊನೆ ಮೈಗ೦ಟಿದ
    ಹುಣ್ಣೊಣಗಿದರೂ ಜೀವನದುದ್ದಕೆ
    ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು ॥

    1. ಪರಿವರ್ಧಿನೀ ಷಟ್ಪದಿಯ ರಚನೆ ಲಾಯಿಕಿದ್ದು

  13. ‘ಹಸಿಯಿಕ್ಕು’ ಹೇಳುದರ ಸಂದರ್ಭಕ್ಕೆ ಸರಿ ಅರ್ಥಪೂರ್ಣ ಅಪ್ಪಲೆ “ಹಸಿಯಿದ್ದು” ಹೇಳಿ ತಿದ್ದಿದ್ದೆ. ( ಮಾರ್ಕು ಕಮ್ಮಿ ಕೊಡುಗು, ಆದರೂ ಹಾಂಗೆ ಮಾಡಿದ್ದೆ..!)

    ಸುಣ್ಣದ ಕರಡಿಗೆ ಹುಗ್ಗುಸಿ ಹಿಡ್ಕೊಂ
    ಡಣ್ಣನ ಕೋಣೆಗೆ ಹೋಗಿಕ್ಕವನಾ
    ಕಣ್ಣಿಂಗೆರಚುವಗವನಬ್ಬೆಗೆ ಕೇಳಿತ್ತಾ ಬೊಬ್ಬೆಯುದೆ ।
    ದೊಣ್ಣೆಯ ಹಿಡ್ಕೊಂಡಬ್ಬರಿಸೆನ್ನಾ
    ಬೆನ್ನಿಂಗೆರಡೇರಿಸಿದಾ ಗುಟ್ಟದು
    ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿದ್ದು ॥

    1. ಲಾಯಕಿದ್ದು ಕುಮಾರಣ್ಣಾ. ಸಣ್ಣಾದಿಪ್ಪಗ ಪೆಟ್ಟು ತಿನ್ನದ್ದವು ಆರುದೆ ಇಲ್ಲೇ ಹೇಳಿ ಕಾಣ್ತು ಅಲ್ದೊ ?

  14. ಸಣ್ಣಕೆ ಎರೆಯದೆ ದೋಸೆಯೆ ಆಗಡ
    ಎಣ್ಣೆಯ ಕಿಟ್ಟದೆ ತಿಂಬಲೆ ಇಲ್ಲೆಡ
    ಮಣ್ಣಿಲಿ ಸೊಕ್ಕಿರೆ ಮೀವಲೆ ಕೊಟ್ಟಗೆಯೊಳವೇ ಬಾರೆನಡಾ ।

    ಅಣ್ಣನ ಹಿ೦ದೆಯೆ ಶಾಲಗೆ ಹೆರಟದು
    ಬಣ್ಣದ ಅ೦ಗಿಗೆ ಗೆ೦ಟು ಹಿಡುದ್ದದು
    ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು ॥

    1. ವಾಹ್ ! ಕುಂಞಿ ದೋಸೆಯ ಮರುಳು ಚೆನ್ನೈ ಭಾವಯ್ಯಂಗು ಇತ್ತೊ ಅಂಬಗ. ಗೆಂಟು ಹಿಡುದ ಪ್ರಯೋಗ ಲಾಯಕಾಯಿದು. ಪದ್ಯ ಎನಗೆ ಕೊಶಿ ಕೊಟ್ಟತ್ತು.

  15. ಸುಣ್ಣದ ಹೊಡಿಯಾ ಪೌಡರು ಬಳುದೂ
    ಬಣ್ಣದ ಹರ್ಕಟೆ ವಸ್ತ್ರವ ಸುತ್ತೀ
    ಹೆಣ್ಣಿನ ಹಾಂಗೇ ತಿರುಗುಸಿ ನೆಡವದು ಇನ್ನೂ ನೆಂಪಿದ್ದೂ ।

    ಅಣ್ಣನು ಮಾಡಿದ ಚೆಂದದ ಚಿತ್ರಕೆ
    ಮಣ್ಣಿನ ಬಳುದೂ ಓಡಿದ ಎನ್ನಾ
    ಬೆನ್ನಿನ ಚೋಲಿಯ ಜಾರುವ ಹಾಂಗೇ ಕೊಟ್ಟದು ನೆಂಪಿದ್ದೂ ।।

    ಹಣ್ಣಿನ ಚಿಕ್ಕಿನ ಚೆಂದಕೆ ತೆಗದೂ
    ತಣ್ಣನೆ ತಮ್ಮನ ಕಿಸೆಯೊಳ ಪೆಜಕೀ
    ಕಣ್ಣಿಲಿ ನೀರೂ ಬರುಸೀ ಪೆಟ್ಟುದೆ ತಿಂದದು ನೆಂಪಿದ್ದೂ ।

    ಎಣ್ಣೆಲಿ ಕಾಸಿದ ಬೆಶಿ ಬೆಶಿ ಪೋಡಿಯ
    ಮಣ್ಣಿಯ ತಿಂಬಾ ಬಾಬಗೆ ಕೊಟ್ಟೂ
    ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು ॥

    1. ಚಂದ ಆಯ್ದು ಇದು ಬೊಳುಂಬು ಮಾವ°

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×