Oppanna.com

ಚೈನು- ಭಾಗ ಏಳು

ಬರದೋರು :   ಶ್ಯಾಮಣ್ಣ    on   17/09/2013    26 ಒಪ್ಪಂಗೊ

ಶ್ಯಾಮಣ್ಣ

(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.)
————————————————————————————————-
ಇಲ್ಯಾಣವರೇಗೆ…..
ಕಿಷ್ಣಪ್ಪಂಗೆ ಈ ಮೀನಿನ ನೆನೆಸಿಕೊಂಡರೆ ಸಾಕು ಬಾಯಿಲಿ ನೀರಿಳಿತ್ತು. ಈಗ ಅದ್ರಾಮನ ಮನೆಗೆ ಎತ್ತುದಕ್ಕೂ, ಒಳಂದ ಅದ್ರಾಮನ ಹೆಂಡತ್ತಿ ಹೊರಿತ್ತಾ ಇತ್ತಿದ್ದ ಈ ಮಸಾಲೆ ಮೀನಿನ ಪರಿಮ್ಮಳ ಕಿಷ್ಣಪ್ಪನ ಮೂಗಿಂಗೆ ಎತ್ತುದಕ್ಕೂ ಸರೀ ಆತು.
ಮುಂದೆ ಓದಿ…..
——————————————————————————————-
ನಾಲ್ಕು ಗಂಟೆ ಹೊತ್ತಿಂಗೆ ಗವರ್ಮೆಂಟು ಡಾಟ್ರ ತೋಟಕ್ಕೆ ಎತ್ತಿತ್ತು. ಶಿವರಾಮ ಶೆಟ್ಟಿ ಹೇಳಿ ಹೆಸರು. ಸುಮಾರು ಸಮೆಯಂದ ಗರ್ಮೆಂಟು ಆಸ್ಪತ್ರೆಲಿ ತಳ ಊರಿದ್ದು ಅದು. ಉದಿಯಪ್ಪಗ ಆಸ್ಪತ್ರೆಗೆ ಬಂದರೆ ಬಂತು… ಇಲ್ಲದ್ರೆ ಇಲ್ಲೆ. ಅಲ್ಲೆಲ್ಲಿಯೋ ಪುಣಚದ ಹತ್ತರೆ ಮೂರು ಎಕ್ರೆ ಜಾಗೆ ತೆಕ್ಕೊಂಡು ಕ್ರುಷಿ ಮಾಡುಸುತ್ತಡ. ಅಲ್ಲೇ ಸ್ವಂತ ಮನೆಯೂ ಕಟ್ಟುಸುತ್ತಾ ಇದ್ದು ಹೇಳಿ ಸುದ್ದಿ ಇದ್ದು. ಆಸ್ಪತ್ರೆಗೆ ಬಂದ ಮದ್ದು ಅದರ ಮನೆಗೆ ಸಾಗುಸುತ್ತು ಹೇಳಿಯೂ ಗುಮಾನಿ ಇದ್ದು. ಅದರ ಹತ್ತರೆ ಮದ್ದಿಂಗೆ ಜೆನ ಬಂದರೆ ಎಂತದೋ ಕೆಂಪು ನೀರಿನ ಕೊಟ್ಟು ‘ ಮತ್ತೆ ಮನೆಗೆ ಬನ್ನಿ’ ಹೇಳಿ ಕಳುಸುತ್ತಡ ಈ ಗವರ್ಮೆಂಟು ಡಾಟ್ರ. ಗವರ್ಮೆಂಟು ಕೊಟ್ಟ ಕೋಟ್ರಸಿನ ಮನೆ ಹತ್ತರೆಯೇ ಇಪ್ಪದು.
ಡಾಟ್ರ ಕಲಿವ ಕಾಲಕ್ಕೆ ಇದೆಂತ ಬಾರೀ ಉಷಾರಿಯ ಹುಡುಗ ಅಲ್ಲ. ಅದರ ಅಪ್ಪನ ಹಟಕ್ಕೆ ಇದು ಡಾಟ್ರ ಕಲ್ತದಡ. ಕ್ಲಾಸಿಲಿ ಇದರ ಮಾಷ್ಟಕ್ಕ ‘ನೀನು ಹೆಣ ಕುಯ್ಯಲಿಕ್ಕೆ ಆದೀತು’ ಹೇಳಿ ಇದರ ಹಂಗಿಸಿಕೊಂಡು ಇತ್ತವಡ. ಕಡೆಂಗೆ ಈಗ ಗವರ್ಮೇಂಟು ಡಾಟ್ರ ಆಗಿ ಹೆಣ ಕೊಯ್ವ ಕೆಲಸವನ್ನೆ ಮಾಡುವ ಹಾಂಗಾತು.
ಬಂದ ಕೂಡ್ಳೆ ಸಬ್ಬಿನಿಸ್ಪೇಟ° ಅದಕ್ಕೆ ಬಾರೀ ಗೌರವ ಕೊಟ್ಟತ್ತು. ಗವರ್ಮೆಂಟು ಡಾಟ್ರ° ಹೇಳಿರೆ ಅದರ ಲೆವೆಲು ಮೇಲೆ ಹೇಳಿ ಲೆಕ್ಕ. ‘ಕೂತುಕೊಳ್ಳಿ ಕೂತುಕೊಳ್ಳಿ’ ಹೇಳಿ, ಕಿಟ್ಟಣ್ಣ ಮನೆಂದ ತಂದು ಮಡಿಗಿತ್ತಿದ್ದ ಎರಡು ಕಬ್ಬಿಣದ ಮಡುಸುವ ಕುರ್ಶಿಲಿ ಒಂದರ ಕೊಟ್ಟತ್ತು.
“ಎಂತದ್ದಿದು ಇನ್ಸ್ ಪೆಕ್ಟ್ರೆ?… ಇಷ್ಟೊತ್ತಿಗೆ ನಮ್ಮನ್ನು ಬರ್ಲಿಕ್ಕೆ ಹೇಳಿದ್ರೆ ಎಷ್ಟೊತ್ತಿಗೆ ಕೊಯ್ದು ಮುಗಿಸೂದು…. ಇದೆಂತ ತರ್ಕಾರಿ ಕೊಚ್ಚೂದು ಅಂತ ಗ್ರಹಿಸಿದ್ದೀರಾ?” ಸಬ್ಬಿನಿಸ್ಪೇಟನ ಪರಂಚಿತ್ತು.
“ಹೆ…ಹೀ…” ಹೇಳಿತ್ತು ಸಬ್ಬಿನಿಸ್ಪೇಟ°.
“ಹುಮ್ ಬೇಗ ಬೇಗ…. ಎಲ್ಲಿ ಬೆಂಚು? ಎಲ್ಲಿ ಉಂಟು…? ಹೆಣ ಅದ್ರ ಮೇಲೆ ಮಲಗಿಸಿ… ಸುರು ಮಾಡುವ… ಒಂದು ಅಡ್ಡ ಮರೆ ಕಟ್ಬೇಕು… ಯಾರೂ ನೋಡ್ಬಾರ್ದು…”
“ಬೆಂಚಾ?”
“ಮತ್ತೆಂತ? ನೆಲದಲ್ಲಿ ಊಟಕ್ಕೆ ಕೂತ ಹಾಗೆ ಕೂತು ಕೊಯ್ಲಿಕ್ಕೆ ಆಗ್ತದಾ? ಎಲ್ಲಿ ಉಂಟು ಬೆಂಚು? ಇಲ್ಲದಿದ್ರೆ ಬೇಗ ತರ್ಸಿ… ಬೆಳಕಿಗೆ ಎಂತ ಮಾಡಿದ್ದೀರಿ? ಮುಗೀಲಿಕ್ಕಾಗುವಾಗ ರಾತ್ರಿ ಆಗ್ತದೆ… ಎರಡು ಗ್ಯಾಸು ಲೈಟು ತರ್ಸಿ… ಅದೆಲ್ಲ ಎಂತ… ನಾವು ಹೇಳಿಯೇ ಆಗ್ಬೇಕಾ?”
ಸಬ್ಬಿನಿಸ್ಪೇಟಂಗೆ ಮಂಡೆ ಬೆಶಿ ಅಪ್ಪಲೆ ಸುರು ಆತು… ಈಗ ಒಂದು ಬೆಂಚು ಆಯೆಕ್ಕನ್ನೆ? ಹೆಣ ಮನುಗುಶುಲೆ….
“ಏ ಬಟ್ಟ… ಹೋಗು ಒಂದು ಬೆಂಚು ತರ್ಸು…”
ಸಿಕ್ಕಿ ಬಿದ್ದದು ಪುನಾ ಎಂಕಣ್ಣ. ಹಾಂಗೇಳಿ ಎಂಕಣ್ಣನ ಮನೆಲಿ ಬೆಂಚು ಇಲ್ಲದ್ದೆ ಅಲ್ಲ. ಅಟ್ಟುಂಬಳಲ್ಲಿ ಪಾತ್ರೆ ಕವುಂಚಿ ಮಡುಗುಲೆ ಒಂದು ಬೆಂಚು ಇದ್ದು… ಆದರೆ ಅದರ ಕೊಟ್ಟರೆ ಆಗ… ಹೆಣ ಮನಿಶಿದ ಬೆಂಚಿಲಿ ಮತ್ತೆ ಅಡಿಗೆ ಪಾತ್ರೆ ಮಡುಗುಲಾವುತ್ತಾ?
“ನ…ನಮ್ಮಲ್ಲಿ ಬೆ.. ಬೆಂಚಿಲ್ಲ…” ಹೇಳಿದ°.
ಕಿಟ್ಟಣ್ಣಂಗೆ ಗೊಂತಿದ್ದು ‘ಬೆಂಚಿದ್ದು ಹೇಳಿ’ ಅವ “ಆಪ್ಪ… ಅಪ್ಪ…” ಹೇಳಿದ°.
ಎಂಕಣ್ಣಂಗೆ ತಲೆ ಬೆಶಿ ಆತು, ಇನ್ನು ಈ ಮಗ° ಎಲ್ಲಿಯಾದರೂ ಹೇಳಿ ಬಿಟ್ಟಿಕ್ಕುತ್ತನೋ ಹೇಳಿ… “ಇಲ್ಲ… ಇಲ್ಲ ನಮ್ಮಲ್ಲಿ ಬೆಂಚು ಇಲ್ಲ” ಕಿಟ್ಟಣ್ಣನ ಹೊಡೆಂಗೆ ತಿರುಗಿ ಹೇಳಿದ° ” ಎಂತದಾ°… ನಮ್ಮತ್ರೆ ಬೆಂಚು ಎಲ್ಲಿದ್ದು…? ನಮ್ಮತ್ರೆ ಇಲ್ಲೆ ಬೆಂಚು, ನೀನು ಸುಮ್ಮನೆ ಮಾತಾಡ್ಡ…”
“ಅಲ್ಲ ಅಪ್ಪ°… ಅದೂ…”
“ಎಂತ ಅಲ್ಲ…? ಅಲ್ಲ ಇಲ್ಲೆ… ಬಿಲ್ಲ ಎಂತ ಇಲ್ಲೆ… ನಮ್ಮತ್ರೆ ಬೆಂಚು ಮೊದಲೇ ಇಲ್ಲೆ ಗೊಂತಾತಾ?”
“ಹಾಂಗಲ್ಲ ಅಪ್ಪ…. ಲಿಂಗಪ್ಪನ ಮನೆಲಿ ಒಂದು ಬೆಂಚಿದ್ದಲ್ಲದಾ?” ನಿಜಕ್ಕಾದರೆ ಎಲ್ಲಿಯಾದರೂ ಈ ಅಪ್ಪ° ‘ಬೆಂಚು ಇದ್ದು” ಹೇಳಿ ಹೇಳಿಕ್ಕುತ್ತನೋ ಹೇಳಿ ಹೆದರಿ ಕಿಟ್ಟಣ್ಣ ಅಪ್ಪನ ದಿನುಗಿದ್ದು…. ಲಿಂಗಪ್ಪನ ಮನೆಲಿ ಒಂದು ಬೆಂಚು ಇದ್ದು ಹೇಳಿ ಅಪ್ಪಂಗೆ ನೆಂಪು ಮಾಡ್ಳೆ. (ಮಗ° ಹೇಳಿ ಸಿಕ್ಕುಸಿ ಹಾಕುತ್ತನೋ ಹೇಳಿ ಅಪ್ಪ° ಹೆದರಿದ್ದು… ಅಪ್ಪ ಹೇಳಿಕ್ಕುತ್ತನೋ ಹೇಳಿ ಮಗ° ಹೆದರಿದ್ದು…) ಎರಡು ತಿಂಗಳ ಹಿಂದೆ ಎಂಕಣ್ಣನ ಮನೆಲಿ ಇತ್ತಿದ್ದ ಒಂದು ಮುರ್ಕಟೆ ಬೆಂಚು ಹೆರ ಮಡುಗಿದ್ದರ ಲಿಂಗಪ್ಪ° “ಎಂಕು ಬೋಡಣ್ಣೇರೆ” ಹೇಳಿ ತೆಕ್ಕೊಂಡು ಹೋಗಿತ್ತಿದ್ದು. ಅದರ ಮನೆ ಜೆಗಿಲಿಲಿ ಅದರ ಮಡುಗಿದ್ದು. ಆರೂ ಕೂರ್ತವಿಲ್ಲೆ ಅದರ ಮೇಲೆ. ಎಲ್ಲಿಯಾದರೂ ಬಿದ್ದು ಸೊಂಟ ಮುರುದರೆ?
ಎಂಕಣ್ಣಂಗೆ ನೆಂಪಾತು… ಅಪ್ಪಲ್ಲದಾ? ಲಿಂಗಪ್ಪನ ಹೊಡೆಂಗೆ ನೋಡಿತ್ತು…. ಲಿಂಗಪ್ಪನ ಮೋರೆ ಸಣ್ಣ ಸಣ್ಣ ಆಯಿದು… ಮೊದಲೇ ಕಿಷ್ಣಪ್ಪನ ಒಟ್ಟಿಂಗೆ ಎಂತದೋ ಆಯಿದು… ಈಗ ಪುನ…
ಇನ್ನು ಪುನ ಆ ಕಿಷ್ಣಪ್ಪನ ಯೆವಾರ ಬೇಡ ಹೇಳಿ “ತರ್ತೇನೆ..” ಹೇಳಿ ಮನೆ ಹೊಡೇಂಗೆ ಓಡಿತ್ತು.
ಇನ್ನು ಗೇಸು ಲೈಟು? ಕಸ್ತಲೆ ಆದರೆ ಚಿಮ್ಣಿ ಎಣ್ಣೆ ದೀಪ ಮಡಿಕ್ಕೊಂಡು ಕೊಯ್ವಲೆ ಆವುತ್ತಾ? ಆರು ತರ್ಸುದು ಗೇಸು ಲೈಟು? ಆದುದೆ ಎಂಕಣ್ಣನೇ ತರ್ಸೆಕ್ಕಷ್ಟೆ…ಎಂಕಣ್ಣ ಕಿಟ್ಟಣ್ಣನ ಹತ್ತರೆ ನೀರಕಣಿ ತಿಮ್ಮಪ್ಪನ ಅಂಗಡಿಂದ ಗೇಸು ಲೈಟು ತಪ್ಪಲೆ ಹೇಳಿದ°. ತಿಮ್ಮಪ್ಪನ ಅಂಗಡಿ ಹೊಸತ್ತಾಗಿ ಸುರು ಆದ್ದು. ಅದು ಬಾಡಿಗೆಗೆ ಗೇಸು ಲೈಟು ಕೊಡ್ತು. ಒಂದು ಲೈಟಿಂಗೆ ದಿನಕ್ಕೆ ಒಂದು ರೂಪಾಯಿ ಬಾಡಿಗೆ. ಅದು ಒಂದು ಐಸುಕ್ಯಾಂಡಿ ಅಂಗಡಿಯೂ ಮಡುಗಿದ್ದು. ಒಂದೊಂದು ಸರ್ತಿ ಅದರ ಅಂಗಡಿಲಿ ತಯಾರಾದ ಐಸು ಕ್ಯಾಂಡಿ ಚಿಮ್ಣಿ ಎಣ್ಣೆ ವಾಸನೆ ಬಪ್ಪದಿದ್ದು.
ಲಿಂಗಪ್ಪ° ತಂದ ಮುರ್ಕಟೆ ಬೆಂಚಿ ಮೇಲೆ ತ್ಯಾಂಪಸೆಟ್ಟಿಯ ಹೆಣವ ಅದರ ಮಕ್ಕ ಮನುಗಿಶಿದವು. ಎಂಕಣ್ಣನ ಮನೆಂದ ತಂದ ನಾಲ್ಕು ಗೋಣಿಯೊಟ್ಟಿಂಗೆ ಅಡಕ್ಕೆ ಸೋಗೆಯನ್ನು ಸೇರ್ಸಿ ಅದಕ್ಕೆ ಮರೆ ಕಟ್ಟಿದವು. ಒಳ ಡಾಟ್ರ° ಕೂದುಕೊಂಡು ಹೆಣ ಕೊಯ್ದು ನೋಡುವ ಕೆಲಸ ಸುರು ಮಾಡಿತ್ತು.
ಅಷ್ಟು ಹೊತ್ತಿಂಗೆ ಕಿಷ್ಣಪ್ಪ ಅದ್ರಾಮನ ಮನೆಂದ ತೋಟಕ್ಕೆ ಎತ್ತಿತ್ತು. ಅದರ ಕೈಲಿ ಒಂದು ಭರ್ತಿ ತುಂಬಿದ ಚೀಲ.ಆ ಚೀಲದ ಒಳ ಎಂತ ಇದ್ದು ಹೇಳಿ ಅಲ್ಲಿ ಹರಡಿದ ಹೊರುದ ಮೀನಿನ ಪರಿಮ್ಮಳಲ್ಲೇ ಅಲ್ಲಿ ಇದ್ದವಕ್ಕೆಲ್ಲ ಗೊಂತಾತು. ಅದರ ತಿಂಬವಕ್ಕೆ ಬಾಯಿಲಿ ನೀರು ಇಳಿವಲೆ ಸುರು ಆತು. ತಿನ್ನದ್ದವಕ್ಕೆ ಹೆಣದ ವಾಸನೆಯ ಒಟ್ಟಿಂಗೆ ಈ ವಾಸನೆಯೂ ಸೇರಿ ಹೊಟ್ಟೆ ತೊಳಸುಲೆ ಸುರು ಆತು. ಕಿಷ್ಣಪ್ಪನ ಒಟ್ಟಿಂಗೆ ಅದ್ರಾಮ ಇಲ್ಲೆ. ಬಪ್ಪದು ಬೇಡ ಹೇಳಿ ಕಿಷ್ಣಪ್ಪನೇ ಹೇಳಿತ್ತ ಕಾಣ್ತು.
ಕುರ್ಶಿಲಿ ಕೂದುಗೊಂಡಿತ್ತಿದ್ದ ಸಬ್ಬಿನಿಸ್ಪೇಟನ ಹತ್ತರಂಗೆ ಬಂದ ಕಿಷ್ಣಪ್ಪ° ಅದರ ಕೆಮಿಲಿ ಎಂತದೋ ಗುಸು ಗುಸು ಹೇಳಿತ್ತು. ಸಬ್ಬಿನಿಸ್ಪೇಟ° ‘ಅಕ್ಕು ಅಕ್ಕು’ ಹೇಳುವಾಂಗೆ ತಲೆ ಆಡ್ಸಿತ್ತು. ಕಿಷ್ಣಪ್ಪ ಅದರ ಕುರ್ಶಿಯ ಹತ್ತರೆ ಆ ಚೀಲವ ಮಡುಗಿತ್ತು.
ಸಬ್ಬಿನಿಸ್ಪೇಟ° ಕೂದಲ್ಲಿಂದಲೇ ಸುತ್ತ ನೋಡಿತ್ತು. ಅದರ ತನಿಕೆ ಮುಂದುವರಿಯೆಕ್ಕನ್ನೆ…. ಇನ್ನು ಆರಿನ ಹೆದರ್ಸುಲೆ ಅಕ್ಕು ಹೇಳಿ ನೋಡಿಕೊಂಡು ಇಪ್ಪಗ ತೋಟದ ಒಳಂಗೆ ತೌಡೂರು ರಾಮಣ್ಣನ ಪ್ರವೇಶ ಆತು.
——————————————————————————————-
ತೌಡೂರು ರಾಮಣ್ಣ° ಹೇಳಿರೆ ಊರಿಲಿ ಗೌರವಾನ್ವಿತ ವ್ಯಕ್ತಿ. ನಾಲ್ಕು ಜೆನಕ್ಕೆ ಉಪಕಾರಕ್ಕೆ ಅಪ್ಪ ಜೆನ ಹೇಳಿ ಇದ್ದರೆ ಅದು ತೌಡೂರು ರಾಮಣ್ಣ°. ಊರಿಲೆ ಆರಿಂಗೆ ಆಗಲಿ ಎಂತಾರೂ ತಾಪತ್ರಯ ಸುರು ಆದರೆ ಅವಕ್ಕೆ ಮೊದಲು ನೆಂಪಪ್ಪದೇ ತೌಡೂರು ರಾಮಣ್ಣನ. ರಾಮಣ್ಣ ಊರಿನ ಪಂಚಾಯತು ಪ್ರೆಸಿಡೆಂಟನೂ ಅಪ್ಪು. ಹಾಂಗಾಗಿ ಸಬ್ಬಿನಿಸ್ಪೇಟಂದೆ ಅವಂಗೆ ಗೌರವ ಕೊಡ್ತು, ಮನಸ್ಸಿಲ್ಲದ್ರುದೆ.
ಮೊದಲಿಂಗೆ ರಾಮಣ್ಣ ಬರಿ ಪಾಪದೋನು ಆಗಿತ್ತಿದ್ದ°. ಮತ್ತೆ ಒಂದು ಸರ್ತಿ ಗಟ್ಟದ ಮೇಲೆ ಹೋಗಿ ಎಲ್ಲಿಯೋ ಏಲಕ್ಕಿ ತೋಟ ಮಾಡಿದನಡ. ಏಲಕ್ಕಿ ಬೆಳೆ ಲಾಯ್ಕ ಬಪ್ಪದಕ್ಕೂ, ಏಲಕ್ಕಿಗೆ ಒಳ್ಳೆ ರೇಟು ಬಪ್ಪದಕ್ಕೂ ಸರೀ ಆತು. ತೆಕ್ಕಾ… ರಾಮಣ್ಣಂಗೆ ಲೋಟ್ರಿ ಎದ್ದಾಂಗೆ ಆತು. ಮತ್ತೆ ದೊಡ್ಡ ಮನೆ ಕಟ್ಟಿಸಿದ°, ಲಾಯಿಕಕ್ಕೆ ಕೃಷಿ ಮಾಡ್ಸಿದ°… ದೊಡ್ಡ ಶ್ರೀಮಂತಿಗೆ ಬಂತು. ಹೃದಯ ಶ್ರೀಮಂತಿಗೆಯೂ ಹಾಂಗೆ ಇದ್ದತ್ತು. ಆರು ಸಹಾಯ ಕೇಳಿ ಹೋದರೂ, ಏವ ಜಾತಿಯವು ಆದರೂ, ಇಲ್ಲೆ ಹೇಳಿದ್ದಾಯಿಲ್ಲೆ. ಸಹಾಯ ಮಾಡುಗು. ಪೈಶೆಯ ಶ್ರೀಮಂತಿಗೆ ಬಂದರೂ ಮೊದಲಿತ್ತಿದ್ದ ಬಡತನವ ಮರತ್ತೋನು ಅಲ್ಲ.
ಒಂದ್ಸರ್ತಿ ಹೀಂಗಾತಡ….
ಸುಮಾರು ಸರ್ತಿ, ಆವಾಗಾವಗ ರಾಮಣ್ಣನ ತೋಟಲ್ಲಿ ಅಡಕ್ಕೆ ಕಳ್ಳತನ ಅಪ್ಪಲೆ ಸುರುವಾತು. ಆರು ಕದಿವದು ಹೇಳಿ ಗೊಂತಾಗ. ಕಸ್ತಲೆ ಉದಿ ಆಯೆಕ್ಕಾರೆ ಕೆಲವು ಮರಂದ ಕೆಲವು ಕಿಲೆ ಹಣ್ಣಾದ ಅಡಕ್ಕೆ ಕಾಣೆ. ಕಸ್ತಲೆಗೆ ಅಡಕ್ಕೆ ಮರ ಹತ್ತಿ ಅಡಕ್ಕೆಯ ಆರಿಂಗೂ ಗೊಂತಾಗದ್ದ ಹಾಂಗೆ ಕಳ್ಳತನ ಮಾಡೆಕ್ಕಾರೆ ಕಳ್ಳ ಅಷ್ಟೇ ಉಷಾರಿ ಇರೆಕ್ಕಲ್ಲದಾ? ಹೇಂಗೆ ಕಳ್ಳನ ಹಿಡಿವದು? ಹಾಂಗೇಳಿ ಸುಮ್ಮನೆ ಬಿಡುವ ಹಾಂಗೆ ಇಲ್ಲೆ. ಕಳ್ಳನ ಹೇಗಾರೂ ಮಾಡಿ ಹಿಡಿಯಲೇ ಬೇಕು ಹೇಳಿ ರಾಮಣ್ಣ ಕೆಲಸದವಕ್ಕೆ ಹೇಳಿದ°. ಸರಿ… ಒಂದು ಹತ್ತು ಜೆನ ಕೆಲಸದವು ತಯಾರಾದವು ಕಳ್ಳನ ಹಿಡಿವಲೆ.
ಹತ್ತು ಜೆನವುದೆ ತೋಟಲ್ಲಿ ಆರಿಂಗೂ ಗೊಂತಾಗದ್ದ ಹಾಂಗೆ ಹುಗ್ಗಿ ಕೂದವು. ಸುರೂವಾಣ ಎರಡು ದಿನ ಆರುದೆ ಬಯಿಂದವಿಲ್ಲೆ ಕದಿವಲೆ. ಮೂರ್ಣೇ ದಿನ ಕಸ್ತಲಪ್ಪಗ ಸುಮಾರು ಒಂದೂವರೆ ಗಂಟೆ ಹೊತ್ತಿಂಗೆ ಬೇಲಿ ಕರೆಯಾಣ ಒಂದು ಅಡಕ್ಕೆ ಮರಂದ ಅಡಕ್ಕೆ ಬಿದ್ದಂಗೆ ಶಬ್ದ ಆತು.ಅಲ್ಲೆ ಹತ್ತರೆ ಹುಗ್ಗಿ ಕೂದ ಆಳು ರಪ್ಪ ಹೇಳಿ ಅಡಕ್ಕೆ ಮರದ ಕೊಡೀಂಗೆ ಬೆಟ್ರಿಯ ಲೈಟು ಬಿಟ್ಟು ನೋಡಿತ್ತು. ನೋಡಿದರೆ ಕೊಡೀಲಿ ಒಂದು ಮನುಷ್ಯ ಕಂಡತ್ತು…!!! ಅರೆ…! ಅಲ್ಲೆ ಬುಡಲ್ಲಿ ಅಷ್ಟೊತ್ತಿಂದ ಕೂದರೂ ಈ ಕಳ್ಳ ಬಂದದೂ ಗೊಂತಾಯಿದಿಲ್ಲೆ, ಹತ್ತಿದ್ದೂ ಗೊಂತಾಯಿದಿಲ್ಲೆ. ಈ ಕಳ್ಳ ಬಾರೀ ಉಷಾರಿದ್ದು…
ಪುಣ್ಯಕ್ಕೆ, ಮೇಲೆ ಇತ್ತಿದ್ದ ಕಳ್ಳ ಲೈಟು ಬಿದ್ದ ಕೂಡ್ಳೆ ಕೈಕ್ಕಾಲು ಬಿಟ್ಟೂ ಕೆಳಂಗೆ ಬಿದ್ದಿದಿಲ್ಲೆ. ಅಲ್ಲಿಯೇ ಗಟ್ಟಿ ಕೊಬೆಯ ಹಿಡ್ಕೊಂಡು ಕೂದತ್ತು. ಲೈಟು ಹಾಕಿದ ಆಳು ಕೆಳಂದಲೇ ಬಿಗಿಲು ಊದುಲೆ ಸುರು ಮಾಡಿತ್ತು. ಎಲ್ಲ ಆಳುಗಳು ಓಡಿಕೊಂಡು ಬಂದವು. ಮೇಲೆ ನೋಡಿರೆ ಕಳ್ಳ ಇದ್ದು ಮರದ ಮೇಲೆ. ಜೆನ ಸೇರಿದ್ದರ ನೋಡಿದ ಕಳ್ಳ ಇನ್ನುದೆ ಗಟ್ಟಿ ಮೇಲೆ ಕೂದತ್ತು. ಕೆಳಂದ ಈ ಆಳುಗ “ಜಪ್ಪುಲ ಉಂಬೆ ಜಪ್ಪು..” ಹೇಳಿ ಬೊಬ್ಬೆ ಹೊಡವಲೆ ಸುರು ಮಾಡಿದವು. ಇವರ ಬೊಬ್ಬೆ ಜಾಸ್ತಿ ಆದಷ್ಟೂ ಅದು ಗಟ್ಟಿ ಮೇಲೇ ಕೂದತ್ತು. ಇವು ಕೆಳಂದ ಏನು ಮಾಡಿರೂ ಇಳಿಯ. ಇವು ಎಷ್ಟು ‘ಜಪ್ಪು… ಜಪ್ಪು.. ‘ ಹೇಳಿರೂ ಜಪ್ಪಯ್ಯ ಹೇಳಿರೂ ಅದು ಕೆಳ ಇಳಿಯ. ಅದಕ್ಕೆ ಗೊಂತಿದ್ದು ಕೆಳ ಇಳುದರೆ ಇವು ಜೆಪ್ಪುತ್ತವು ಹೇಳಿ.
ರಾಮಣ್ಣಂಗೆ ಸುದ್ದಿ ಹೋತು.’ಕಳ್ಳ ಸಿಕ್ಕಿ ಬಿದ್ದಿದು. ಆದರೆ ಮರದ ಕೊಬೆ ಮೇಲೆ ಕೂಯಿದು. ಏನು ಮಾಡಿರೂ ಇಳಿತ್ತಿಲ್ಲೆ…’
ರಾಮಣ್ಣ ತೋಟಕ್ಕೆ ಬಂದ°. ಬೆಣ್ಚಿ ಹರಿವಲೆ ಸುರು ಆಯಿದು. ಮೇಲೆ ಕೂದ ಕಳ್ಳ ಆರು ಹೇಳಿ ಆ ಮಯ ಮಯ ಬೆಣ್ಚಿಲಿ ಅಂದಾಜು ಅಪ್ಪಲೆ ಸುರು ಆತು. ಅದು ತುಕ್ರ ಮೇರ.
ಈ ತುಕ್ರ ಮೇರಂಗೆ ಕಳ್ಳ ತುಕ್ರ ಹೇಳಿಯೇ ಹೆಸರು. ಅಡಕ್ಕೆ ಕದಿವದು ಅದರ ಹವ್ಯಾಸ. ಮೈಮುರುದು ಕೆಲಸ ಮಾಡ್ಳೆ ಉದಾಸನ ಆಗಿ ಈ ಕಳ್ಳತನ ಸುರುಮಾಡಿದ್ದು. ಅದಕ್ಕೆ ಮದುವೆ ಆಗಿ ಈಗ ಮೂರು ತಿಂಗಳ ಒಂದು ಬಾಲೆ ಇದ್ದು.
ರಾಮಣ್ಣ ಮರದ ಮೇಲೆ ನೋಡಿ ಅಪ್ಪಗ ಅದು ತುಕ್ರ ಮೇರ ಹೇಳಿ ಗೊಂತಾತು. ‘ಜಪ್ಪುಲ ತಿರ್ತು’ ಹೇಳಿರೆ ಕೇಳ್ತಿಲ್ಲೆ. ಮೇಲೇ ಕೂಯಿದು. ಅಷ್ಟಪ್ಪಗೆ ಅದರ ಹೆಂಡತ್ತಿಗೆ ಸುದ್ದಿ ಎತ್ತಿತ್ತು. ಅದು ಕೂಡ್ಳೆ ಅದರ ಮೂರು ತಿಂಗಳ ಬಾಲೆಯ ಕಟ್ಟಿಗೊಂಡು ದಿರೀನೆ ಕೂಗಿಗೊಂಡು ಬಂತು. ಮೂರು ತಿಂಗಳ ಬಾಲೆಯ ಬಾಣಂತಿ ಬಂದದೇ ರಾಮಣ್ಣನ ಕಾಲಿಂಗೆ ಬಿದ್ದತ್ತು.
“ಅಣ್ಣೇರೆ.. ಅಣ್ಣೇರೆ… ತತ್ತ್ಂಡ್ ಅಣ್ಣೇರೆ…. ಬುಡ್ಳೆ ಬುಡ್ಳೆ…ಬುಡ್ಲೇ…” ಹೇಳಿ ಕೂಗುಲೆ ಸುರು ಮಾಡಿತ್ತು.
ಬಾಣಂತಿ ಹಾಂಗುದೆ ಕೂಗಿಗೊಂಡು ಕಾಲಿಂಗೆ ಬೀಳುವಗ ರಾಮಣ್ಣನ ಮನಸ್ಸು ಕರಗದ್ದೆ ಇಕ್ಕಾ?
ಮೇಲೆ ಕೂದ ತುಕ್ರಂಗೆ ಕೇಳುವಾಂಗೆ ಕೆಳಂದಲೇ ಹೇಳಿದ°.”ಇಂದಾ.. ತುಕ್ರ… ನಿಕ್ ದಾಲ ಮಾಲ್ಪುಜ್ಜಿ… ತಿರ್ತ್ ಜಪ್ಪುಲ… ನಿನ್ನ ಬುಡೆದಿನ ತರೆಟ್ಟ್ ಕೈ ದೀದ್ ಪನ್ಪೆ… ತಿರ್ತ್ ಜಪ್ಪುಲ”
ಅವ° ಅಷ್ಟು ಹೇಳಿದ ಮತ್ತೆ ತುಕ್ರ ಕೆಳ ಇಳ್ತು.
“ಆಯೆಗ್ ದಾಲ ಮಾಲ್ಪೊಡ್ಚಿ…” ಕೆಲಸದವಕ್ಕೆ ಹೇಳಿದ°. “ಈ ಎಂಚಿನಾಂಡಲ ತಿಂದದಾನ?” ತುಕ್ರನ ಹೆಂಡತ್ತಿಯ ಹತ್ತರೆ ಕೇಳಿದ°. ಅದು ಮೂಗಿನ ಸುರು ಸುರು ಮಾಡಿಗೊಂಡು ಹೇಳಿತ್ತು. “ಇಜ್ಜಿ ಅಣ್ಣೇರೆ… ಕೋಡೆ ಮದ್ಯಾನ್ನಡದು ಬುಕ್ಕ ದಾಲ ತಿಂದಿಜ್ಜಿ.. ಅರಿ ಕೊಂಡ್ರಿಯಾರ ಕಾಸಿಜ್ಜಿ… ಅಂಚ ಆಯೆ ಕಂಡ್ಯರ ಬತ್ತುನೆ….”
“ಇಲ್ಲಗ್ ಬಾಲೆನ್ ಪತ್ತೊಂಡು ಬಲ…” ಹೇಳಿದ ರಾಮಣ್ಣ. “ಆಯೆನ್ಲಾ ಲೆತ್ತೊಂಡು ಇಲ್ಲಗ್ ಬಲೆ” ಹೇಳಿ ಕೆಲಸದವಕ್ಕೆ ಹೇಳಿದ.
ಎಲ್ಲೋರುದೆ ಮನೆಗೆ ಬಂದವು. ಹೆಂಡತ್ತಿಯ ಹತ್ತರೆ ಎರಡು ಬಾಳೆ ಎಲೆ ಹಾಕುಲೆ ಹೇಳಿದ°. ರಾಮಣ್ಣನ ಹೆಂಡತ್ತಿ ಗೆಂಡಂಗೆ ತಕ್ಕ ಹೆಂಡತ್ತಿ. ತುಕ್ರನನ್ನು, ಅದರ ಹೆಂಡತ್ತಿಯನ್ನು ಕೂರ್ಸಿ ಅವರ ಎದುರು ಬಾಳೆ ಎಲೆ ಹಾಕಿತ್ತು. ಉದಿಯಪ್ಪಂಗೆ ಮಾಡಿದ್ದು ಇಡ್ಳಿದೆ, ತೆಂಗಿನ ಕಾಯಿ ಚಟ್ಣಿದೆ. ಎರಡರ ಎಲೆಗೂ ನಾಲ್ಕು ನಾಲ್ಕು ಇಡ್ಳಿ ಹಾಕಿತ್ತು, ಸರೀ ಚಟ್ಣಿ ಬಳುಸಿತ್ತು. ಅವಕ್ಕೆ ತಿಂದಪ್ಪಗ ಇನ್ನೂ ನಾಲ್ಕು ನಾಲ್ಕು ಇಡ್ಳಿ ಹಾಕಿತ್ತು. ಒಂದು ಗ್ಲಾಸಿಲಿ ಹಾಲು ತಂದು “ಬಾಲೆಗ್ ಪರ್ಪಾಲ” ಹೇಳಿ ಕೊಟ್ಟತ್ತು. ಎರಡಕ್ಕುದೆ ದೊಡ್ಡ ಗ್ಲಾಸಿಲಿ ಬೆಲ್ಲದ ಕಾಪಿ ಕೊಟ್ಟತ್ತು. ಎರಡುದೆ ಹೊಟ್ಟೆ ತುಂಬ ತಿಂದಪ್ಪಗ ಒಂದು ಚೀಲಲ್ಲಿ ಎರಡು ಸೇರು ಕೊಶಿ ಅಕ್ಕಿ ತುಂಬುಸಿ ತಪ್ಪಲೆ ಹೇಳಿದ ರಾಮಣ್ಣ. ಆ ಅಕ್ಕಿ ತುಂಬಿದ ಚೀಲವ ತುಕ್ರನ ಹೆಂಡತ್ತಿಯ ಕೈಲಿ ಕೊಟ್ಟು ತೆಕ್ಕೊಂಡು ಮನೆಗೆ ಹೋಪಲೆ ಹೇಳಿದ.
ಮತ್ತೆಂತ ಆತು? ಎಂತ ಅಪ್ಪಲೆ ಇದ್ದು? ಈ ಘಟನೆ ಆದ ಮತ್ತೆ ತುಕ್ರ ಅದರ ಜೀವನಲ್ಲಿ ಮತ್ತೆ ಯಾವತ್ತೂ ಕದಿವಲೆ ಹೋಯಿದಿಲ್ಲೆ. ಈಗ ರಾಮಣ್ಣನ ತೋಟಲ್ಲಿ ಅಡಕ್ಕೆ ತೆಗವಲೆ ಈ ತುಕ್ರ ಪರ್ಮನೆಂಟು ಜೆನ. ರಾಮಣ್ಣನ ಹೆಂಡತ್ತಿಗೆ ಮನೆಕೆಲಸಕ್ಕೆ ತುಕ್ರನ ಹೆಂಡತ್ತಿ ಯಾವಾಗಳು ಹಾಜರು…
——————————————————————————————-
ಕತೆ ಇನ್ನುದೇ ಮುಂದುವರಿವಲೆ ಇದ್ದು…. 🙂

26 thoughts on “ಚೈನು- ಭಾಗ ಏಳು

  1. ನಮಸ್ತೆ ಶ್ಯಾಮಣ್ಣ ,
    ಚೈನು ತುಂಬಾ ಲಾಯಕ್ಕು ಇದ್ದು ,ಹಳ್ಲ್ಲಿಯ ಜನ ಜೀವನದ ಸಹಜ ವರ್ಣನೆಗೆ ಕಥೆಯಾಗಿ ಆಕರ್ಷಕವಾಗಿ ಬತ್ತಾ ಇದ್ದು ,ಮುಂದಣ ಕಂತಿನ ಕಾಯ್ತಾ ಇದ್ದೆ ,ಅಭಿನಂದನೆಗ

    1. ಮುಂದಾಣ ಕಂತು (ಕಂತು ಎಂಟು) ಬಯಿಂದು ಅಕ್ಕೋ… ಓದಿ…

  2. ಅಪ್ಪು ಸುಮನಕ್ಕೋ… ಕಂತು ಸರಿಯಾದ ಸಮಯಕ್ಕೆ ಕಟ್ಟದ್ರೆ ಡಿಫಾಲ್ಟರು ಆವುತ್ತು ಹೇಳಿ ಒಪ್ಪಣ್ಣ ನೋಟೀಸು ಕಳುಸುದು ಬೇಡ ಹೇಳಿ, ಕಂತು ಪಿತನ ಧ್ಯಾನ ಮಾಡಿ ಎಂಟನೇ ಕಂತು ಕಟ್ಟಿದ್ದೆ… ಓದಿ ಒಪ್ಪ ಕೊಡಿ…

  3. ಓಹ್! ಹಾಂಗೆ ವೈರಸ್ಸು ಬಂದು ತೊಂದರೆಲಿದ್ದಾ ಚೈನು ಕತೆ?
    ಅದೇ ಗ್ರೇಶುತ್ತಾ ಇದ್ದೆ, ಎಂತ ಬಯಿಂದಿಲ್ಲೆ ಮುಂದಾಣ ಕಂತು ಹೇಳಿ.
    ಬೇಗ ವೈರಸ್ಸು ಹೋಗಿ ಕಂಪ್ಯೂಟರು ಸರಿ ಆಗಲಿ…

  4. ಚೈನಿನ ಮುಂದಾಣ ಭಾಗಕ್ಕೆ ಕಾಯ್ತಾ ಇದ್ದೆ… ದಯಮಾಡಿ ಅರಾದರೂ ಶ್ಯಾಮಣ್ಣನ ಕಂಪ್ಯೂಟರ್ ಸರಿ ಮಾಡಿ ಕೊಡಿ…

    1. ಅಪ್ಪಪ್ಪು. ಕಳುದವಾರವೇ ಓಂಗಿ ಓಂಗಿ ಸಾಕಾತು. ಈ ವಾರಾದರೂ ಬಕ್ಕೋದು ಎಕ್ಕಳ್ಸಿ ಕಾಯ್ತಾ ಇದ್ದಿಲ್ಲಿ. ಕೂಊಊಊಒಯ್ ಶ್ಯಾಮಣ್ಣೋ ಹೇಂಗಾತು ಅಲ್ಲಿ ?

      1. ನಿಂಗ ಆ ಚೆನ್ನೈಂದ ಕೂಕ್ಳು ಹಾಕಿರೆ ಈ ಕೊಡಿಯಂಗೆ ಕೇಳುಗೋ ಭಾವ?

    2. ನಮ್ಮ ಬೈಲಿನ ಒಪ್ಪಣ್ಣನ ಗುರ್ತದವು ಆರೋ ಮಹೇಶ ಹೇಳಿ ಇದ್ದವಡ… ಅವಕ್ಕೆ ಕಂಪ್ಯೂಟರಿನ ಕಂಪನಿ ಇದ್ದಡ… ಆವ್ವೇ ಎನ್ನ ಕಂಪ್ಯೂಟರು ಸರಿ ಮಾಡಿ ಕೊಡುಗು ಹೇಳಿ ಗ್ರೇಶಿದೆ… ಆದರೆ ಆ ಜೆನದ ಸುದ್ದಿ ಇಲ್ಲೆ… 🙁

    1. ಸತ್ಯ ಎಂತದು? ವೈರಸ್ಸು ಬಂದದೋ?… ಅದು ಅಪ್ಪು. ಆದರೆ ವೈರಸ್ಸು ಬಂತು ಹೇಳಿ ಆನು ಮಂಡೆಬೆಶಿಲಿ ಇದ್ದರೆ… ಈ ಪ್ರಕಾಶಂಗೆ ಖುಷಿ ಅವ್ತಾ ಇದ್ದಡ… ಆಗ ಆತಾ…

  5. ಅಪ್ಪೋ ಒಪ್ಪಣ್ಣ, ಮೊಬೈಲಿಲಿ ಟೈಪು ಮಾಡ್ಳೆ ಎಡಿಗಪ್ಪಾಂಗೆ ಮಾಡ್ಳೆ ಆವುತ್ತೋ?

  6. ಚೈನು ಕತೆಯ ಓದುತ್ತಾ ಇಪ್ಪ ಎಲ್ಲೋರಿಂಗೂ ಧನ್ಯವಾದಂಗ. ಓದುತ್ತಾ ಇಪ್ಪಎಲ್ಲೋರ ಹತ್ರೆ ಒಂದು ವಿನಂತಿ.
    ಮನೆಲಿ ಎನ್ನ ಕಂಪ್ಯೂಟರಿಂಗೆ ವೈರಸು ಬಯಿಂದು. ಹಾಂಗಾಗಿ ಕಂಪ್ಯೂಟರು ಹಂದುತ್ತಿಲ್ಲೆ. ದಿನಾಗ್ಳೂ ಎರಡು ಗಂಟೆ ಬಸ್ಸಿಲಿ ಆಪೀಸಿಂಗೆ ಹೋಪ ಬಪ್ಪ ಪ್ರಯಾಣ, ಇದರಂದಾಗಿ ಎರಡು ಗಂಟೆ ವೇಸ್ಟ್ ಆದ ಹಾಂಗೆ ಆಯಿದು. ಆಪೀಸಿಲಿ ಸಿಕ್ಕುವ ಸಮೆಯಲ್ಲೇ ಕತೆ ಬರೆಯಕ್ಕಾಗಿ ಬಯಿಂದು.
    ಅಂಬ್ಯರ್ಪಿನ ಎಡೇಲಿ ವಾರಲ್ಲಿ ಸಮಯಕ್ಕೆ ಸರಿಯಾಗಿ ಪ್ರಕಟ ಮಾಡ್ಳೆ ಎಡಿಗಾವುತ್ತಿಲ್ಲೆ. ಹಾಂಗಾಗಿ ರಜಾ ಎಜಸ್ಟು ಮಾಡಿಕೊಳ್ಳೆಕ್ಕಾಗಿ ಪ್ರಾರ್ಥನೆ. ಆರೂ ಬೇಜಾರು ಮಾಡೆಡಿ. ವಾರದ ಏಳುದಿನದ ಒಳ ಯಾವದೇ ದಿನ ಕತೆ ಪ್ರಕಟ ಆವುತ್ತು. ಮನೆ ಕಂಪ್ಯೂಟರು ಸರಿಯಾದ ಮೇಲೆ ಸರಿಯಾದ ಸಮೆಯಕ್ಕೆ ಬತ್ತು.
    ನಿಂಗಳ ಸಹಕಾರಕ್ಕೆ ವಂದನೆಗೋ. 🙂 🙂 🙂

    1. ಆ ಸಬ್ ಇನ್ಸ್ಪೇಟನ ಕರಕ್ಕೊ೦ಡು ಹೋಗಿ ಕೋಲು ತೋರ್ಸಿ ಹೆದರ್ಸಿರೆ ವೈರಸು ಹೋತಿಕ್ಕುಗೋ ಏನೋ..ಏನೇ ಆಗಲಿ ಚೈನು ಕಡಿಯದ್ದೆ ಬೇಗ ಬರಳಿ ಶ್ಯಾಮಣ್ಣ..

      1. ಚೈನು ಕಂಡಿತಾ ಕಡಿತ್ತಿಲ್ಲೆ…ಭಾವಾ… ಸಮೆಯಕ್ಕೆ ಸರಿಯಾಗಿ ಬೈಲಿಂಗೆ ಎತ್ತುಲೆ ರಜಾ ಕಷ್ಟ ಅಕ್ಕು ಹೇಳಿ ಅಷ್ಟೆ…

    2. ಆ ಡಾಗುಟ್ರ ಶಿವರಾಮ ಶೆಟ್ಟಿಯತ್ರೆ ವೈರಸ್ಸಿಂಗೆ ಯೇನಾರು ಮದ್ದಿಕ್ಕೋ ?

  7. ಪ್ರತಿಯೊ೦ದು ಸೂಕ್ಷ್ಮ೦ಗೊ ಚೆ೦ದಕೆ ಚಿತ್ರಣ ಆಯಿದು.
    ಕತೆ-ಉಪಕತೆ ರೈಸಿತ್ತು ಶ್ಯಾಮಣ್ಣ.

  8. ಶಾಮಣ್ಣನ ಸರಪಳಿ ಚೆಂದಕೆ ಬತ್ತಾ ಇದ್ದು. ಕಳ್ಳ ಒಳ್ಳೆಯವನಾದ ಕತೆ ಲಾಯಕಿತ್ತು. ಮನ್ನೆ ಗುರುಗಳ ಸಮಕ್ಷಮ ಹೇಳಿದ ಹಾಂಗೆ ಶ್ಯಾಮಣ್ಣನ ಪೆನ್ಸಿಲುದೆ, ಚೈನುದೆ ಪುಸ್ತಕ ರೂಪಲ್ಲಿ ಹೆರಬರಳಿ.

  9. ”ಮತ್ತೆಂತ ಆತು? ಎಂತ ಅಪ್ಪಲೆ ಇದ್ದು? ಈ ಘಟನೆ ಆದ ಮತ್ತೆ ತುಕ್ರ ಅದರ ಜೀವನಲ್ಲಿ ಮತ್ತೆ ಯಾವತ್ತೂ ಕದಿವಲೆ ಹೋಯಿದಿಲ್ಲೆ”
    ಕತೆಯ ಈ ಗೆರ ಎನಗೊಂದು ಕತೆ ನೆನಪ್ಪು ಮಾಡಿ ಕೊಟ್ಟತ್ತು —ಅಪ್ಪ ಮಗನ ಕೂಡಿಗೊಂಡು ರಜೆದಿನ ಮಗಂಗೆ ಮೀನು ಹಿಡಿವದು ಕಲಿಶುಲೆ ಹೊಳಗೆ ಮೀನು ಹಿಡಿವಲೆ ಕರಕ್ಕೊಂಡು ಹೋವುತ್ತ°. ಅಲ್ಲಿ ೯ ಘ೦ಟೆ೦ದ ೧೦ ಘ೦ಟೆ ವರೆಗೆ ಮಾತ್ರ ಮೀನು ಹಿಡಿವಲಕ್ಕು ಹೇಳಿ ಬೋರ್ಡ್ ಇರುತ್ತು . ಇಬ್ರುದೆ ೯ ಘ೦ಟೆಗೆ ಸುರು ಮಾಡಿದವಕ್ಕೆ ೧೦ಘಂಟೆ ವರೆಗೆ ಒಂದು ಮೀನೂ ಸಿಕ್ಕಿದ್ದಿಲ್ಲೆ . ೧೦ಘಂಟೆ ಕಳುದು ೧ ಮಿನಿಟಪ್ಪಗ ಮಗನ ಗಾಳಕ್ಕೆ ಒಂದು ಮೀನು ಸಿಕ್ಕಿತ್ತು .”ಅಪ್ಪಾ, ಅಪ್ಪಾ ಎನಗೆ ಮೀನು ಸಿಕ್ಕಿತ್ತು ” ಹೇಳಿ ಮಗ ಕೊಶಿಲಿ ಬೊಬ್ಬೆ ಹೊಡದ ° . ಇದರ ಮನಗೆ ತೆಕ್ಕೊಂಡು ಹೋಪ ಹೇಳಿದ ° . ಅಪ್ಪಂಗು ಮಗ ಮೀನು ಹಿದುದ್ದಕ್ಕೆ ಕೊಶಿಯೇ . ಹಾಂಗೇಳಿ ನಿಯಮವ ಮೀರಿ ನಡವ ಅಪ್ಪ° ಅವ° ಅಲ್ಲ . ಮಗನ ಹತ್ತರೆ ಹೇಳಿದ°. ಘ೦ಟೆ ನೋಡು -ಅಲ್ಲಿ ಎಂತ ಹೇಳಿ ಬರಕ್ಕೊಂಡು ಇದ್ದು ? ಮಗ ನೋಡಿದ್ದರ ಹೇಳಿದ . ಈಗ ಘಂಟೆ ೧ ನಿಮಿಷ ಹೆಚ್ಚತಲ್ಲದಾ ?. ಹಾಂಗಾಗಿ ಅದರ ನೀರಿಂಗೆ ಬಿಡು .ಇನ್ನೊ೦ದು ದಿನ ಬಂದು ಹಿಡಿವ °. ಮಗ ಹೇಳಿದ – ಇಲ್ಲಿ ಆರೂ ಇಲ್ಲೆ . ನಮ್ಮ ಆರೂ ನೊಡ್ತವಿಲ್ಲೆ .ಕೊಂಡೋಪ . ಅಪ್ಪ ಒಪ್ಪಿದ್ದಾ ° ಇಲ್ಲೆ . ಮಗ ಮೀನಿನ ನೀರಿಂಗೆ ಬಿಟ್ಟ . ಆರಾರು ಇದ್ದವೋ , ಇಲ್ಲೆಯೋ ಹೇಳಿ ಗೊಂಡು ನಿಯಮ ಪಾಲಿಸೆಕ್ಕಪ್ಪದಲ್ಲ ಹೇಳಿ ಮಗಂಗೆ ಗೊಂತಾತು .
    ಶ್ಯಾಮಣ್ಣ , ತಾನೂ ಒಳ್ಳೆದಾಯೆಕ್ಕು ; ತನ್ನೊಟ್ಟಿ೦ಗೆ ಊರೂ ಒಳ್ಳೆದಾಯೇಕ್ಕು ಹೇಳಿ ಇಪ್ಪ ತೌಡೂರು ರಾಮಣ್ಣನಾ೦ಗಿಪ್ಪ ಜೆನ೦ಗಳೇ ಎಲ್ಲ ದಿಕ್ಕೂ ಬೇಕಪ್ಪದು . ಚೈನು ಕತೆಗೆ ಪದಕ ಕೊಡುವ ಹಾಂಗಿಪ್ಪ ವ್ಯಕ್ತಿತ್ವವ ಪರಿಚಯಿಸಿದ್ದಕ್ಕೆ ಓದುವ ಉತ್ಸಾಹ ಹೆಚ್ಚಾತು.
    (ವಿನಂತಿ :—- ಈ ಒಪ್ಪಕ್ಕೆ ಇನ್ನೊಂದು ಒಪ್ಪ ಕೊಡುದರ ಆನು ಇಷ್ಟ ಪಡ್ತಿಲ್ಲೆ . ಸೂಚನೆ — ಈ ಮೀನಿಂಗೂ ಕತೆಲಿ ಬಪ್ಪ ಮೀನಿಂಗೂ ಸಂಬದ ಇಲ್ಲೆ .

  10. ಹೆಸರಿಂಗೆ ತಕ್ಕ ಕತೆ. ಚೈನಿಂಗೆ ಒಂದೊಂದೆ ಕೊಂಡಿ ಸೇರಿಗೊಂಡು ಚೆಂದಕ್ಕೆ ನೆಕ್ಲೇಸು ಮೂಡುತ್ತಾ ಇದ್ದಪ್ಪ.

  11. ಶ್ಯಾಮಣ್ಣಾ!
    ನಿಂಗಳ ನಿರೂಪಣೆ ಭಾರೀ ಲಾಯ್ಕ ಇದ್ದು. ವಿಶಿಷ್ಟ, ಅಮೋಘ, ಕುತೂಹಲಕಾರಿ, ರಸಭರಿತ, ಸುಂದರ, ರಮಣೀಯ, ಆಕರ್ಷಕ, ಮನೋಹರ……..
    ಚೈನಿಂಗೆ ಮಣಿ ಮಾಣಿಕ್ಯ ಸೇರ್ತಾ ಇದ್ದು. ಭರ್ಜರಿ ಡಿಸೈನು !
    ಕಳ್ಳನ ಒಳ್ಳೆ ಜೆನ ಮಾಡಿದ ರಾಮಣ್ಣನ ಮೆಚ್ಚೆಕು!

  12. ಕತೆಗೆ ಒಂದೊಂದೇ ಉಪಕತೆಗೊ ಸೇರಿಂಡು, ಕುತೂಹಲವ ಹೆಚ್ಚಿಸಿಂಡು ಹೋವ್ತಾ ಇದ್ದು.
    ಕದಿವಲೆ ಬಂದದರ ಮನ ಪರಿವರ್ತನೆ ತುಂಬಾ ಲಾಯಿಕಕೆ ಮೂಡಿ ಬಯಿಂದು.
    ಸಬ್ಬಿನಿಸ್ಪೇಟ° ಗವರ್ಮೆಂಟ್ ಡಾಕ್ಟ್ರಂಗೆ ಕೊಡುವ ಮರ್ಯಾದಿ, ಡಾಕ್ಟ್ರ ದರ್ಪ ತೋರುಸುವದು, ಬೆಂಚು ತಪ್ಪಲೆ ಹೇಳುವಾಗ ವೆಂಕಣ್ಣ ಕಿಟ್ಟಣ್ಣನ ದ್ವಂದ ಎಲ್ಲವೂ ನೈಜವಾಗಿ ನಿರೂಪಣೆ ಆಯಿದು.

  13. ಕಳ್ಲನ್ಗೆ ಊಟ ಹಾಕಿದ ಕತೆ ಯೆಲ್ಲೊ ಕೆಳಿದ ಹಾನ್ಗೆ ಆವುತ್ತು. ಕತೆ ಲಾಯಕಲ್ಲಿ ಹೂವುತ್ತ ಇದ್ದು.

  14. [ ನೀನು ಹೆಣ ಕುಯ್ಯಲಿಕ್ಕೆ ಆದೀತು’ ಹೇಳಿ ಇದರ ಹಂಗಿಸಿಕೊಂಡು ]- ಗುರುಶಾಪ ಒಳ್ಳೆತ ತಟ್ಟಿತ್ತು ಅಪ್ಪೋ!!
    [ಐಸು ಕ್ಯಾಂಡಿ ಚಿಮ್ಣಿ ಎಣ್ಣೆ ವಾಸನೆ ಬಪ್ಪದಿದ್ದು.] – ಎಂತಾ ವಾಸ್ತವಿಕ ಸತ್ಯ !!! ಅಲ್ಲ.. ಎನಕಾಂಬದು.. ನಿಂಗೊ ಪ್ರತ್ಯಕ್ಷ ಆ ಘಟನೆಯ ಅಪ್ಪ ಆ ಕಾಲಲ್ಲಿ ಅಲ್ಲಿ ಇತ್ತಿದ್ದಿರೋದು. ಒಂದರ್ನೂ ಮರೆಯದ್ದೆ ಕಣ್ಣಾರೆ ಕಂಡ ಹಾಂಗೆ ಹೇಳ್ತಾ ಇದ್ದಿ 😀 😀
    [ಮೂರು ತಿಂಗಳ ಬಾಲೆಯ ಬಾಣಂತಿ ಬಂದದೇ ರಾಮಣ್ಣನ ಕಾಲಿಂಗೆ ಬಿದ್ದತ್ತು.] – ಎಂತಾ ಸನ್ನಿವೇಶ ಜೋಡಣೆ ಶಾಮಣ್ಣ!
    ತುಕ್ರನ ಪರಿವರ್ತನೆ ಮಾಡಿದ ರಾಮಣ್ಣನ ಕ್ರಮ ! – ಯಪಾ! ಅವ° ಜೆನ ಅಪ್ಪು.
    ಇದು… ಶೀರ್ಷಿಕೆ ಒಪ್ಪೆಕ್ಕಾದ್ದೇ ಚೈನು ಚೈನೇ. ಚೀನಾ ಚೈನು ಅಲ್ಲ ಕಾಣುತ್ತು. ಶಾಮಣ್ಣಂಗೆ ಜೈ

  15. ‘ಚೈನು’ ಲಾಯಕಲ್ಲಿ ಉದ್ದ ಎಳತ್ತಾ…. ಇದ್ದು.
    * ಅಲ್ಲ, ಈ ಗೇಸು ಲೈಟಿಂಗೆ ಒಂದು ರೂಪಾಯಿ ಬಾಡಿಗೆ ಹೆಚ್ಚಾತಿಲ್ಲೆಯೋ?
    * ಆ ಹೊರುದ ಮೀನಿನ ಒಂದಾರಿ ಎಲ್ಲೋರು ಸೇರಿ ತಿಂದು ಮುಗುಶಲಿ, ಇಲ್ಲಿ ಅದರ ಪರಿಮ್ಮಳಲ್ಲಿ ಕೂದಿಕ್ಕಲೆ ಎಡಿದಿಲ್ಲೆ .

  16. ಚೈನಿಂಗೆ ಒಂದೊಂದೇ ಎಳೆ ಸೇರ್ತಾಹೋವುತ್ತದ! ಸಬ್ಬಿನ್ಸ್ಪೇಟಂಗೆ ಕುರ್ಶಿಲಿ ಕೂಪಲೆ ಎಡಿಯದೋ ಹೇಳಿ! ಹೊರುದ ಮಸಾಲೆ ಮೀನಿನ ಪರಿಮ್ಮಳ ಹೊಡೆತ್ತನ್ನೆ ಮೂಗಿಂಗೆ! ತೌಡೂರು ರಾಮಣ್ಣ ಎಂತಾರು ಒಂದು ವಿಲೇವಾರಿ ಮಾಡುಗಿನ್ನು [ಹೊರುದ ಮೀನಿಂಗಲ್ಲ!!] ಇಷ್ಟು ನಿಧಾನಕ್ಕೆ ಕಥೆ ಹೇಳಿರೆ ಆಗ- ವಾರಕ್ಕೊಂದು ಸರ್ತಿ ಅಲ್ಲ- ಎರಡುದಿನಕ್ಕೊಂದು ಸರ್ತಿ ಹೇಳುಲಕ್ಕು- ಇಲ್ಲದ್ರೆ ಸುರುವಾದ್ದು ಹೇಂಗೆ ಹೇಳಿ ಮರದುಹೋಕು. ತುಂಬ ತಡವಾದರೆ ಎಂಕಣ್ಣಂಗೆ ಗಾಯತ್ರಿಜೆಪ ಮಾಡೆಡದೋ. ಐವತ್ತು ವರ್ಷದ ಹಿಂದೆ ಹೆಣ ಸಿಕ್ಕಿದ ಜಾಗೆಲಿಯೇ ಹೆಣಕೊರವ ಕ್ರಮ ಇದ್ದದೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×