ಕ್ಯಾರೆಟ್ ಸೂಪ್ (Carrot soup)

ಆರೋಗ್ಯ ಒಳ್ಳೆದಾಯಕ್ಕಾರೆ ಆಹಾರ.ವಿಹಾರ,ಆಚಾರ,ವಿಚಾರ ಒಳ್ಳೆದಾಗಿರೆಕ್ಕು. ಆರೋಗ್ಯಕರವಾದ ಒಂದು ಸೂಪ್ ಮಾಡುದರ ಬಗ್ಗೆ ಬರೆತ್ತೆ, ಇದು ದೇಹಕ್ಕೂ ಒಳ್ಳೆದು, ರುಚಿಯೂ ಲಾಯ್ಕಿದ್ದು 🙂
ಇದರ ಮಾಡ್ಲೆ ಬೇಕಪ್ಪ ಸಾಮಾನುಗೊ:
ಕ್ಯಾರೆಟ್ 200 ಗ್ರಾಂ
ಒಂದು ನಿಂಬೆಯಷ್ಟು ಗಾತ್ರದ ಬೆಲ್ಲ
ಕಾಲು ಚಮ್ಚೆ ಗೆಣಮೆಣ್ಸಿನ ಹೊಡಿ
ಒಂದು ದೊಡ್ಡ ಚಮ್ಚೆ ಎಣ್ಣೆ(ತುಪ್ಪ)
1 ಚಮ್ಚೆ ಜೀರಿಗೆ
1 ಚಮ್ಚೆ ಸಾಸಮೆ
ನೀರು
ರಜ್ಜ ಉಪ್ಪು
ರಜ್ಜ ಕೊತ್ತಂಬರಿ ಸೊಪ್ಪು
ಮಾಡುವ ಕ್ರಮ:
ಕ್ಯಾರೆಟ್ಟಿನ ತೊಳದು ತುಂಡು ಮಾಡಿ ರಜ್ಜ ನೀರಿನೊಟ್ಟಿಂಗೆ ಬೇವಲೆ ಮಡುಗೆಕು, ಅದಕ್ಕೆ ಬೆಲ್ಲ ಮತ್ತೆ ಉಪ್ಪು ಹಾಕಿ, ಬೆಂದಮೇಲೆ ತಣಿವಲೆ ಬಿಡಿ. ಇದರ ನೀರಿನೊಟ್ಟಿಂಗೆ ಮಿಕ್ಸಿಗೆ ಹಾಕಿ ಕಡೇರಿ, ಮತ್ತೆ ಅದರ ಅರುಶಿ ನೀರಿನ ಮತ್ತೆ ಕ್ಯಾರಟ್ pulp ಬೇರೆ ಮಾಡಿ.
ಇನ್ನು ಒಂದು ತಪಲೆಲಿ ಎಣ್ಣೆ, ಜೀರಿಗೆ,ಸಾಸಮೆ ಹಾಕಿ ಅದು ಹೊಟ್ಟುವಗ ಅರುಶಿ ಮಡುಗಿದ ಕ್ಯಾರೆಟ್ ನೀರಿನ ಹಾಕಿ ಕೊದುಶಿ,ಅದಕ್ಕೆ ಗೆಣಮೆಣಸಿನ ಹೊಡಿ ಹಾಕಿ. ಸರೀ ಒಂದು ಕೊದಿ ಬಂದಮೇಲೆ ಅದಕ್ಕೆ ಅರುಶಿ ಉಳುದ ಕ್ಯಾರೆಟ್ಟಿನ ಹಾಕಿ ಸರೀ ತೊಳಸಿ ಮೇಲಂದ ಕೊತ್ತಂಬರಿ ಸೊಪ್ಪು ಕತ್ತರ್ಸಿ ಹಾಕಿ.
ಕ್ಯಾರೆಟ್ ಸೂಪ್ ರೆಡಿ !!
ಪ್ರಾಯೋಜನಂಗೊ: ಕ್ಯಾರೆಟ್ಟಿಲ್ಲಿ ಬೀಟ ಕೆರೊಟಿನ್ (ವಿಟಮಿನ್ ’ಎ’ಯ ಒಂದು ರೂಪ) ಇಪ್ಪ ಕಾರಣ ಕಣ್ಣಿನ ತೊಂದರೆಗೊಕ್ಕೆ ತುಂಬಾ ಒಳ್ಳೆದು. ವಿಟಮಿನ್ ’ಎ’ ಯ ಕೊರತೆಂದ ಬಪ್ಪ ಎಲ್ಲಾ ಸಮಸ್ಯೆಗೊಕ್ಕುದೆ ಒಳ್ಳೆದು.
-ಸುವರ್ಣಿನೀ ಕೊಣಲೆ.

ಸುವರ್ಣಿನೀ ಕೊಣಲೆ

   

You may also like...

13 Responses

 1. subrahmanya bhat says:

  super !

 2. TARANI says:

  ತುಂಬಾ ಚನ್ನಾಗಿದೆ.. Bangalore ಅಂತಹ ದೊಡ್ಡ ಊರುಗಳಲ್ಲಿ weekend ಸಂಸ್ಕೃತಿ ಧಾವಿಸುತ್ತಿದೆ. ವಾರದ ಕೊನೆಯ 2 ದಿನಗಳು ಮನೆಯಲ್ಲಿ ಅಡುಗೆ ಮಾಡುವುದೇ ಅಲ್ಲಲ್ಲಿ ಕಡಿಮೆ ಆಗುತ್ತಿದೆ. ಈ ಸಂದರ್ಭದಲ್ಲಿ ಮನೆಯಲ್ಲೇ ಕುಳಿತು ಕ್ಯಾರೆಟ್ ಸೂಪ್ ತಯರಿಸುವುದರ ಬಗ್ಗೆ ತುಂಬ ಚನ್ನಗಿ ತಿಳಿಸಿದ್ದೀರಿ. ಅದಲ್ಲದೇ ಅದರಿಂದ ಶರೀರಕ್ಕೆ ಆಗುವ ಉಪಯೋಗವನ್ನೂ ವಿವರಿಸಿದ್ದು ಇನ್ನೂ ಉತ್ತಮವಾಗಿದೆ.

 3. ನೀರ್ಕಜೆ ಚಿಕ್ಕಮ್ಮ says:

  ಲಾಯಿಕ ಕಾಣುತ್ತು, ಕ್ಯಾರೆಟ್ ಬೇವಲೆ ಮಡುಗುಲೆ ಹೋವುತ್ತೆ!

  • ಇರುಳಿಂಗಾದರೆ ಆನುದೆ ಒಪ್ಪಣ್ಣನುದೆ ಬತ್ತೆಯೊ.. ಹೊಟ್ಟೆಗಿಪ್ಪದರ ಬಿಡೆಯೋ..

   • ನೀರ್ಕಜೆ ಚಿಕ್ಕಮ್ಮ says:

    ಹೂಂ…… ಅಂಬಗ ಸ್ಟವ್ ನಂದ್ಸಿ ಫ್ರಿಜ್ಜಿಲ್ಲಿ ಮಡುಗುತ್ತೆ.

    • ಹೀಂಗೊಂದು ಇದ್ದೋ ಅಂಬಗ!
     ಷ್ಟವ್ವಿನ ಪ್ರಿಜ್ಜಿಲಿ ಮಡಗುತ್ತದರ ಆನು ಕಂಡಿದಿಲ್ಲೆಪ್ಪ!! 🙂 😉

     • ನೀರ್ಕಜೆ ಚಿಕ್ಕಮ್ಮ says:

      🙂 ಗ್ರೇಶಿದೆ ಹೀಂಗಿಪ್ಪ ಉತ್ತರ ಬಕ್ಕು ಹೇಳಿ ಬರದು ಕಳುಸಿ ಆದ ಮೇಲೆ. ಇನ್ನು ನಿಂಗೆಲ್ಲ ಬಂದಪ್ಪಗ ತೋರ್ಸಲೇ ಬೇಕನ್ನೆ!

     • Suvarnini Konale says:

      🙂 🙂 🙂

 4. ಅದಾ ಚಿಕ್ಕಮ್ಮ ತಂಪು ಪೆಟ್ಟಿಗೆಲಿ ಮಡಗಿ ಹಾಳು ಮಾಡುದು.. ಕೊಣಲೆ ಅಕ್ಕಂಗೆ ಗೊಂತಾರೆ ಬೈಗು….

 5. { ಕಣ್ಣಿಂಗೆ ತುಂಬಾ ಒಳ್ಳೆದು } ಹೇಳಿ ಬರದ್ದಿ ಅಲ್ಲದೋ ನಿಂಗೊ.
  ಅಪ್ಪಪ್ಪು, ಕಣ್ಣಿಂಗೆ ತುಂಬಾ ಒಳ್ಳೆದು – ಚೆಂದ ಕಾಣ್ತು, ಕೆಂಪು ಕೆಂಪು!!!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *