ಗೋಟುಕಾಯಿ ಚಟ್ನಿಹೊಡಿ

February 6, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಕೊಪ್ಪರ ಒಡೆಶಿದ್ದು, ಎಣ್ಣೆ ತೆಗೆಶುಲೆ. ಏವಾಗಳೂ ಹಾಂಗೇ ಅಲ್ದೋ…ವೈಶಾಕ ಬಪ್ಪಲಪ್ಪಾಗ ಮಾಡ್ಸುದು. ತೆಂಗಿನೆಣ್ಣೆ ಸುಮಾರು ಬೇಕಾವುತ್ತು ನವಗೆ. ಒಡೆಯೋ, ಚಕ್ಕುಲಿಯೋ, ಉಂಡ್ಳಕಾಳೋ, ಕಾರಕಡ್ಡಿಯೋ, ಕೋಡುಬಳೆಯೋ ಹೀಂಗೆ ಎಂತಾರು ಕಾಟಂಕೋಟಿ ಅಂಬಗಂಬಗ ಹೊರುಕ್ಕೊಂಡೆ ಬೆಕಾವುತ್ತಿದ ಪುಳ್ಯಕ್ಕೊಗೆ. ಗಳಿಗ್ಗೆಗೊಂದರಿ ಎಲ್ಲ ಮಾಡ್ಳಿಲ್ಲೆ. ಒಂದರಿ ಮಾಡೊಗಳೇ ದಣಿಯ ಮಾಡಿ ಮಡುಗುದು. ಅದೂ ಒಪ್ಪಣ್ಣನ ಕೈಗೆ ಸಿಕ್ಕಿರೆ ಒಳಿಯ. ಹಾಂಗೆ ಜಾಗೆ ಬದಲ್ಸಿ ಬದಲ್ಸಿ ತೆಗದು ಮಡುಗುದು. ಬಂದಿಪ್ಪಗ ಬಂದಿಪ್ಪಗ ಎಲ್ಲಿಂದ ತೆಗದು ತೆಗದು ಕೊಡ್ತು ಈ ಅಜ್ಜಿ ಹೇಳಿ ಆಶ್ಚರ್ಯ ಪುಳ್ಯಕ್ಕೊಗೆ. ಒಂದರಿ ಹೊರುದ ಎಣ್ಣೆಲೆ ಸುಮಾರು ಸರ್ತಿ ಹೊರಿವಲಾವುತ್ತು. ಆದರೆ ಬಾಳುಕ ಮೆಣಸು ಹೊರುದರೆ ಮಾತ್ರ ಹೋತದು. ಕಾರ ಆವುತ್ತು ಎಣ್ಣೆ. ಮತ್ತೆ ಆ ಮೆಣಸು ಮಾಂತ್ರ ಹೊರಿಯೆಕಷ್ಟೆ.

ಹಾಂಗೆ ಕೊಪ್ಪರ ಒಡೆಶುವಗ ಬೈಲಿನ ಮಕ್ಕೊ ಎಲ್ಲ ಬಂಡಾಡಿಲಿ! ಹೇಂಗೆ ಶುದ್ದಿ ಸಿಕ್ಕಿತ್ತೋ ಪರಮಾತ್ಮಂಗೇ ಗೊಂತು. ಎಲ್ಲ ಬಂದು ಜೆಗಿಲಿಲಿ ಸಾಲಾಗಿ ಕೂಯಿದವು. ಕಜಂಪಾಡಿ ಅಕ್ಕನ ಪುಳ್ಳಿ, ಕುಂಞಿ ಕೂಚಕ್ಕ(ರಾಣಿ ಹೇಳುದು ಎಂಗೊ ಕೊಂಡಾಟಲ್ಲಿ) ಚೆಂದಕ್ಕೆ ಚಕ್ಕನ ಕಟ್ಟಿ ಕೂಯಿದು! ಪಿಕಿಲಾಟ, ಗಲಾಟೆ ಎಂತೂ ಇಲ್ಲದ್ದೆ ಚಾಮಿಕುಂಞಿಗಳ ಹಾಂಗೆ ಕೂದಿತ್ತಿದವು ಎಲ್ಲೊರು. ಎಂತಪ್ಪ ಇದು ಕತೆ ಹೆಳಿ ಗ್ರೇಶೆಡಿ. ವಿಷಯ ಎಂತರ ಹೇಳಿರೆ, ಎಲ್ಲೊರಿಂಗೂ ‘ಮುಂಗೆ’ ತಿಂಬ ಕೊದಿ. ಬೈಲಿಲಿ ಆರ ಮನೆಲಿ ಗೋಟುಕಾಯಿ ಒಡೆಶುತ್ತರುದೇ ಅಲ್ಲಿ ಇಕ್ಕು ಈ ಮಕ್ಕಳ ಸೈನ್ಯ. ಅದರ್ಲಿದೇ ಲೆಕ್ಕ ಇದ್ದು… ಒಬ್ಬಾದ ಮೇಲೆ ಒಬ್ಬಂಗೆ. ಇನ್ನೆನಗೆ, ಇನ್ನೆನಗೆ ಹೇಳಿ ಕಾದುಗೊಂಡಿಪ್ಪದು ನೋಡ್ಳೇ ಚೆಂದ. ಪಾಪ ಮಕ್ಕೊ. ಹ್ಮ್… ಗೋಟುಕಾಯಿ ಒಡವಾಗ ಅಜ್ಜಿಗೆ ಇನ್ನೊಂದು ಯೋಚನೆ ಬಪ್ಪಲಿದ್ದು. ಅದರ ಚಟ್ನಿಹೊಡಿ ಮಾಡೆಕ್ಕೂಳಿ. ಭಾರೀ ಲಾಯ್ಕಾವುತ್ತದು. ಉಪ್ಪಿನಕಾಯಿಯ ಹಾಂಗೆಯೇ ಕೂಡಿ ಉಂಬಲೆ.

ಇನ್ನೀಗ ಉಪ್ಪಿನಕಾಯಿಗೆ ಮಾವಿನಕಾಯಿಯೇ ಸಿಕ್ಕುತ್ತಿಲ್ಲೆ ಇದ. ಹೀಂಗಿದ್ದದೇ ಎಂತಾರು ಆಯೆಕಷ್ಟೆ. ಶಾಂತಕ್ಕನ ಮಕ್ಕೊಗೆ ಬೆಂಗ್ಳೂರಿಂಗೆ, ಅಮೆರಿಕಕ್ಕೆ ಎಲ್ಲ ತೆಕ್ಕಂಡೋಪಲುದೇ… ಆದರೆ ಇದು ಉಪ್ಪಿನಕಾಯಿಯ ಹಾಂಗೆ ವರ್ಷಗಟ್ಳೆ ಒಳಿತ್ತಿಲ್ಲೆ. ಒಂದು ತಿಂಗಳಿಂಗೆಲ್ಲ ಏನಾಗ.

ಅದರ ಮಾಡ್ಳೆ ಗೋಟುಕಾಯಿಯ ತೆಳೂವಿಂಗೆ ಕೊರೆಯೆಕ್ಕು. ಈ ಸರ್ತಿ ಆಚಾರಿ ಕೊಟ್ಟಗೆಂದ ಒಂದು ಹೊಸಾ ಮೆಟ್ಟುಕತ್ತಿ ತರುಸಿದ್ದು, ಅಜ್ಜಕಾನ ರಾಮನತ್ತರೆ. ಒಳ್ಳೆ ಹರಿತ ಇದ್ದು. ನಾಕು ಸರ್ತಿ ಹರಿತ ತೋರುಸಿದ್ದುದೇ! ಜಾಗ್ರತೆ ಬೇಕಾತೊ. ಅರಡಿಯದ್ದರೆ ಮಾಡ್ಳೆ ಹೆರಡೆಡಿ. ಎಲ್ಯಾರು ತಾಗಿತ್ತೂಳಿ ಆದರೆ, ಕೂಡ್ಳೆ ಆ ಸುಣ್ಣದಂಡೆಂದ ಸುಣ್ಣ ತೆಗದು ಕಿಟ್ಟೆಕು. ನೆತ್ತರು ಕಟ್ಟುತ್ತು. ಮತ್ತೆ ಪಂಚವಲ್ಲಿ ತೈಲ ಕಿಟ್ಟಿರೆ ಎರಡು ದಿನಲ್ಲೇ ಗಡಿ ಮಾಸುತ್ತು. ಓ ಮೊನ್ನೆ ಒಪ್ಪಕ್ಕ ಅದೆಂತದೋ ಕೆರಸುವ ತಗಡು ತಂದುಕೊಟ್ಟಿದು. ಅದರಲ್ಲಿ ಸುಲಾಬ ಆವುತ್ತಡಪ್ಪ. ಚಕಚಕನೆ ಮಾಡ್ಳಾವುತ್ತು ಹೇಳ್ತದು. ಎನಗೆ ಅದು ಅಬ್ಯಾಸ ಇಲ್ಲದ್ದೆ ಸರಿ ಆವುತ್ತಿಲ್ಲೆ, ಒಂದು ಜಾತಿ ಜಾರುತ್ತು. ಅದರಿಂದ ಸೊಸ್ತಕೆ ಕೂದಂಡು ಮೆಟ್ಟುಕತ್ತಿಲಿ ಕೊರವಲಕ್ಕಪ್ಪ.

ತೆಳೂವಿಂಗೆ ಕೊರದ್ದದರ ಬಣಲೆಲಿ ಹಾಕಿ ಹೊರಿಯೆಕು, ಕೆಂಪಪ್ಪಲ್ಲಿಯೊರೇಂಗೆ. ಹೇಳಿದಾಂಗೆ ಇದರ ಒಟ್ಟಿಂಗೇ ಬೆಳ್ಳುಳ್ಳಿಯನ್ನುದೇ ಹೊರಿಯೆಕ್ಕಾತೊ… ಬೆಳ್ಳುಳ್ಳಿ ಆವುತ್ತಿಲ್ಲೇಳಿ ಆದರೆ ಹಾಕುದು ಬೇಡ, ಸಾರ ಇಲ್ಲೆ. ಬೆಳ್ಳುಳ್ಳಿ ದೊಡ್ಡ ಎಸಳಾದರೆ ಹತ್ತು-ಹನ್ನೆರಡು ಹಾಕಿರೆ ಸಾಕು. ಮತ್ತೆ ಈಗಾಣ ಬೆಳ್ಳುಳ್ಳಿ ಪರಿಮ್ಮಳವೇ ಇಲ್ಲೆಪ್ಪ. ಎಂತದಾ..ಬೆಳ್ಳುಳ್ಳಿ ಹೇಳಿ ಹೆಸರಿಂಗೆ ಮಾತ್ರ. ಎಂತ ಮಾಡ್ಳೂ ಗೊಂತಿಲ್ಲೆ… ಇತ್ಲಾಗಿ ಬೆಳೆತ್ತಿಲ್ಲೆನ್ನೆ. ಹೊರುದ್ದದಕ್ಕೆ ಮೆಣಸು, ಉಪ್ಪು ಹಾಕಿ ಹೊಡಿಮಾಡುದು. ಮೆಣಸು ಅವಕ್ಕವಕ್ಕೆ ಬೇಕಾದ ಹಾಂಗೆ…ಕಾರ ಬೇಕಾರೆ ಜಾಸ್ತಿ ಹಾಕಿತ್ತು. ಚೆಪ್ಪೆ ಆಯೆಕಾರೆ ಕಮ್ಮಿ ಹಾಕಿತ್ತು. ಉಪ್ಪು ಅಂದಾಜಿಂಗೆ ಹಾಯ್ಕೊಂಬದು. ಗೋಟುಕಾಯಿ ಚಟ್ನಿಹೊಡಿ ತಯಾರಾತದ. ಮಜ್ಜಿಗೆ ಅಶನಕ್ಕೆಲ್ಲ ಬಾರೀ ಲಾಯ್ಕಾವುತ್ತು ಇದರ ಕೂಡಿ ಉಂಬಲೆ. ಪೇಟೆಲಿ ಉಪ್ಪೆಜ್ಜೆ ಉಂಬವಕ್ಕುದೇ.

ಹೀಂಗೇ ಬೇನ್ಸೊಪ್ಪಿನ ಚಟ್ನಿಹೊಡಿಯುದೇ ಮಾಡ್ಳಾವುತ್ತು. ಎರಡು-ಮೂರು ಮುಷ್ಟಿ ಬೇನ್ಸೊಪ್ಪಿನ ಹೊರಿವದು. ಹಸಿಮಾಸುವಲ್ಲಿಯೊರೇಂಗೆ. ನೋಡ್ಯೊಳ್ಳೆಕು, ಅದು ಕಪ್ಪಪ್ಪಲಾಗ. ಒಂದ್ರಜ ಗೋಟುಕಾಯಿಯುದೇ ಹೊರಿವದು. ಬೇರೆ ಬೇರೆ ಹೊರಿಯೆಕು. ಗೋಟುಕಾಯಿ ಇಲ್ಲೇಳಿ ಆದರೆ ಹಾಕದ್ರೂ ಅಕ್ಕು. ಮತ್ತೆ ರಜ ಉದ್ದಿನಬೇಳೆ ಹೊರುದು ಹಾಕೆಕು. ಕಡ್ಳೆಬೇಳೆ, ತೊಗರಿಬೇಳೆಯನ್ನುದೇ ಹಾಕಲಕ್ಕು ಬೇಕಾರೆ. ದಣಿಯ ಅಲ್ಲ, ರೆಜ ರೆಜ. ಇದಕ್ಕೆ ಮೆಣಸು, ಉಪ್ಪು ಹಾಕಿ ಹೊಡಿ ಮಾಡಿರೆ ಚಟ್ನಿಹೊಡಿ ಆತು. ಬೇನ್ಸೊಪ್ಪು ಆರೋಗ್ಯಕ್ಕುದೇ ಒಳ್ಳೆದು. ಬೆಂದಿಲಿ, ತಾಳ್ಳಿಲಿ, ತಂಬುಳಿಲಿ ಎಲ್ಲ ಸಿಕ್ಕುವ ಬೇನ್ಸೊಪ್ಪಿನ ಎಲ್ಲೊರೂ ಕರೆಲಿ ಮಡುಗುವೋರೇ. ತಿಂಬೋರು ಕಮ್ಮಿ. ಹೀಂಗೆ ಎಂತಾರು ಮಾಡಿರೆ ತಿಂಬಲೂ ಲಾಯ್ಕಾವುತ್ತು, ಆರೋಗ್ಯಕ್ಕೂ ಒಳ್ಳೆದಾವುತ್ತು.

ನಮ್ಮಲ್ಲಿ ಎಲ್ಲ ಹೆಚ್ಚಾಗಿ ಮಾಡ್ಯೊಂಡೇ ಇರ್ತಲ್ದಾ ಈ ಚಟ್ನಿಹೊಡಿಗಳ. ನಿತ್ಯ ಕಾಯಿ ಒಡವಾಗಳುದೇ ಗೋಟುಕಾಯಿ ಸಿಕ್ಕಿತ್ತೂಳಿ ಆದರೆ, ಅದರ ಚಟ್ನಿಹೊಡಿ ಮಾಡುದೂಳಿಯೇ ಲೆಕ್ಕ. ಹೀಂಗೆ ಕೊಪ್ಪರ ಒಡೆಶುವಾಗಂತೂ ಮಾಡದ್ರೆ ಒರಕ್ಕೇ ಬಾರ. ಹಾಂಗೆ ಲಾಯ್ಕ ಲಾಯ್ಕದ ಏಳೆಂಟು ದೊಡ್ಡ ದೊಡ್ಡ ಗೋಟುಕಾಯಿ ತೆಗದು ಮಡಿಕ್ಕೊಂಡೆ ಚಟ್ನಿಹೊಡಿ ಮಾಡ್ಳೇಳಿ. ಚೂರಿಬೈಲಿಂಗೆ, ಶಾಂತಕ್ಕಂಗೆ, ಅಜ್ಜಕಾನಕ್ಕೆ, ಎಡಪ್ಪಾಡಿಗೆ, ಹಳೆಮನೆಗೆ, ಕಜಂಪಾಡಿ ಅಕ್ಕಂಗೆ, ಬೊಳುಂಬಿಂಗೆ, ಕಾಂಬು ಅಕ್ಕಂಗೆ, ಮಾಡಾವಕ್ಕಂಗೆ – ಹೀಂಗೆ ಬೈಲಿನವಕ್ಕೆಲ್ಲ ಹಂಚದ್ರೆ ಮನಸ್ಸು ಕೇಳ ಇದಾ.

ಕಾಯಿ ಒಡದು ಮುಗುಕ್ಕೋಂಡು ಬಂತು. ಮುಂಗೆ ಇಪ್ಪ ಕಾಯಿ ಸಿಕ್ಕಿದ ಕೂಡ್ಳೆ, ಮಕ್ಕೊ ಎಲ್ಲ ಎಕ್ಕಳ್ಸಿ ಎಕ್ಕಳ್ಸಿ ನೋಡಿ ತೆಕ್ಕೊಂಡು ಕಾಲಿ ಮಾಡಿಯೊಂಡಿತ್ತವು. ಅಮ್ಮಂದ್ರು ಪಿತ್ತ ಪಿತ್ತ ಹೇಳಿ ಪರಂಚಿಯೆ ಬಾಕಿ. ಮಕ್ಕೊ ಕೇಳೆಕ್ಕೆ… ಆತನ್ನೇ, ಇನ್ನೀಗ ಒಡದ ಕಾಯಿಯ ಒಣಗುಲೆ ಮಡುಗೆಕು. ಒಳ್ಳೆತ ನೀರಾರಿದ್ದದಾದರೆ ಮೂರು ಬೆಶಿಲಿಲಿ ಒಣಗುತ್ತು. ನೀರಪಸೆ ಇದ್ದರೆ ಒಂದು ವಾರ ಎಲ್ಲ ಬೇಕಾವುತ್ತದ. ಒಣಗುಲೆ ಮಡುಗುದರಲ್ಲೂ ಒಂದು ಸಮಸ್ಯೆ ಇದ್ದು. ಕಾಕೆ ತೆಕ್ಕೊಂಡೋಪದು. ಅದಕ್ಕೆ ಈ ಮುಂಗೆ ತಿಂದು ಗಟ್ಟಿ ಆದ ಮಕ್ಕಳ ಕಾವಲೆ ಕೂರ್ಸಲಕ್ಕು ಹೇಳಿ ಗ್ರೇಶಿಯೊಂಡಿತ್ತಿದೆ. ಮಕ್ಕೊ ಎಲ್ಲ ಬಾರೀ ಚುರ್ಕು, ಈ ವಿಷಯ ಮದಲೇ ಅಂದಾಜಾಯಿದು. ಎಲ್ಲ ಮೆಲ್ಲಂಗೆ ಒಬ್ಬೊಬ್ಬನೇ ರಟ್ಟಿದ್ದಲ್ದಾ…. ಅಂಬಗ ಎಂತರ ಹೇಳೆಕ್ಕು. ಅಜ್ಜಿ ಬೊಬ್ಬೆ ಹೊಡದೇ ಬಾಕಿ. ಒಪ್ಪಣ್ಣನ ಕೂರ್ಸುವೊ ಹೇಳಿರೆ, ಹೊತ್ತೊಪ್ಪಾಗಂಗಪ್ಪಗ ಅರ್ದ ಕೊಪ್ಪರ ಕಾಲಿ ಅಕ್ಕೋಳಿ… ಹ್ಮ್.. ಎಡಿಯಪ್ಪ ಈ ಪುಳ್ಯಕ್ಕೊಳ ಹತ್ತರೆ.

ಸರಿ, ನಿಂಗಳಲ್ಲಿಯುದೇ ಗೋಟುಕಾಯಿ ಒಡೆಶುವಾಗ ಚಟ್ನಿಹೊಡಿ ಮಾಡಿಕ್ಕಿ. ಈ ಅಜ್ಜಿಗುದೇ ಕಳುಸಿ ರೆಜ ರುಚಿ ನೋಡ್ಳೆ ತಕ್ಕಿತ. ಆತೋ…

ಗೋಟುಕಾಯಿ ಚಟ್ನಿಹೊಡಿ, 1.5 out of 10 based on 2 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಹಳೆಮನೆ ಅಣ್ಣ

  ಈಗೀಗ ಹಳ್ಳಿಲಿ ಕಾಕೆಗೊ ಇಲ್ಲೆ ಅಜ್ಜಿ… ಎಲ್ಲ ಹಗಲು ಪೇಟೆಗೆ ಹೋವುತ್ತವು. ಅಲ್ಲಿ ಎಂತಾರೂ ಸಿಕ್ಕುತ್ತಿದ ತಿಂಬಲೆ ಕಾಟಂಕೋಟಿ, ಸುಲಾಬಲ್ಲಿ. ಕಸ್ತಲಪ್ಪಗ ವಾಪಾಸು ಊರಿಂಗೆ ಬಪ್ಪದು. ಕೊಡೆಯಾಲಲ್ಲಿ ಕೆಲಸಲ್ಲಿಪ್ಪ ಕೊಂಕಣಿಗೊ ಕಸ್ತಲಪ್ಪಗ ಮಂಜೇಶ್ವರಕ್ಕೆ ಬತ್ತ ಹಾಂಗೆ. 😀

  [Reply]

  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  ಉಮ್ಮ… ಅದೆಲ್ಲ ಗೊಂತಾಗಪ್ಪ ಎನಗೆ. ಗೋಟುಕಾಯಿ ಒಣಗುಸೊಗ ಕಾಕೆ ಬಂದು ತೆಕ್ಕೊಂಡೋವುತ್ತದು ಇದ್ದದೇ ಮದಲಿಂದಲೂ. ಎಲ್ಲಿಂದ ಬತ್ತವೂಳಿ ಅರಡಿಯಪ್ಪ!

  [Reply]

  VN:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°

  ನಿಂಗಳ ಚಟ್ಣಿ ಲೇಖನ ಓದುವಾಗಲೆ ಬಾಯಿಲಿ ನೀರು ಬತ್ತಾ ಇದ್ದು. ಇಂದು ಮನೆಲಿ ಮಾಡ್ಳೆ ಹೇಳೆಕು. ಕೊಡೆಯಾಲಲ್ಲಿ ಗೋಟುಕಾಯಿ ಎಲ್ಲಿ ಸಿಕ್ಕುತ್ತು ಹೇಳಿ ನೋಡೆಕು ಈಗ.

  ಒಳ್ಳೆ ಲೇಖನ; ಅಡುಗೆ ಮಾಡ್ಳೆ ಕಲಿತ್ತ್ತ ಇದ್ದ ಕೂಸುಗೊವಕ್ಕೆ / ಮಾಣಿಂಗವಕ್ಕುದೆ ಒಳ್ಳೆ ಉಪಕಾರ ಅಕ್ಕು. ಹೀಂಗೆ ಬರೆತ್ತ್ತಾ ಇರಿ ಅಜ್ಜಿ. ಲಾಯಕಾವುತ್ತು.

  [Reply]

  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  ಬಂಡಾಡಿಗೆ ಬಂದರೆ ನಾಕು ತೆಕ್ಕಂಡೋಪಲಕ್ಕದ. ಕೊಡೆಯಾಲಲ್ಲಿ ಅದುದೇ ಸಿಕ್ಕುತ್ತೋ…

  [Reply]

  VN:F [1.9.22_1171]
  Rating: 0 (from 0 votes)
 3. ಅಜ್ಜಕಾನ ಭಾವ
  ಅಜ್ಜಕಾನ ಭಾವ

  ಈ ಸರ್ತಿ ಅಜ್ಜಕಾನ ರಾಮಂಗೆ ಮೆಟ್ಟುಕತ್ತಿ ತಂದ ಲೆಕ್ಕಕ್ಕೆ ಎಂತ ಸಿಕ್ಕಿದ್ದಿಲ್ಲೆಡ.. ಕೊಪ್ಪರ ಒಡಶುವಗ ದಿನಿಗೇಳುತ್ತೆ ಹೇಳಿದ ಅಜ್ಜಿಗೆ ಮರೆತ್ತೆ ಹೋಯಿದ ಹೇಂಗೆ…

  [Reply]

  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  ಒಪ್ಪಣ್ಣನತ್ತರೆ ಹೆಳಿಕಳ್ಸಿತ್ತಿದೆನ್ನೇ… ಅವಂಗೆ ಮರತ್ತಿರೇಕು ಅಂಬಗ. ಚಟ್ನಿಹೊಡಿ ಕೊಡುವೊ ಆತೊ…

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಈ ಅಜ್ಜಿಯಕ್ಕೊ ಹೀಂಗೆಯೆ ಯಾರಾತ್ರೊ ಕೊಟ್ಟು ಕಳುಸಿದ್ದೆ ಹೇಳುದು. ಎನಗಂತು ಸಿಕ್ಕಿದ್ದಿಲ್ಲೆ.. ಆರತ್ರೆ ಕಳುಸಿದ್ದೊ.. ಒಪ್ಪಣ್ಣ ಮೊನ್ನೆ ಸಿಕ್ಕಿತ್ತಿದ್ದ.. ಅವ ಎಂತ ಹೇಳಿದ್ದನಿಲ್ಲೆ.. ಕೊಟ್ಟಿದ್ದರೆ ಹೇಳುತ್ತಿದ್ದ..

  [Reply]

  VA:F [1.9.22_1171]
  Rating: 0 (from 0 votes)
 4. ಕೆದೂರುಡಾಕ್ಟ್ರು

  ಕೊಪ್ಪರ ಕಾವಲೆ ಮಕ್ಕಳ ಕೂರುಸೆಡಿ ಅಜ್ಜಿ…ಮಕ್ಕಳುದೇ ಒಟ್ಟಿ೦ಗೆ ಒಣಗಿರೆ?…ಒಪ್ಪಣ್ಣನ ಕೂರುಸಿ ಅವ ಕಪ್ಪಣ್ಣ ಆದರೆ?
  ಅದಕ್ಕೊ೦ದು ಇಕ್ನೀಸು ಇದ್ದು, ಮಾಳಿಗೆಮನೆ ಅಜ್ಜ೦ದು..ಹಳೇ ಕೇಸೆಟಿನ ಹೆಡ್ಡಿ೦ಗೆ ಹಿಡುದು ಕೊಚ್ಚೆಕಟ್ಟಿದ ಟೇಪಿನ ಕೊಪ್ಪರದ ಮೇಲೆ ಹರಗಿ ಮಡಗಿರೆ ಸೂರ್ಯನ ಬೆಣ್ಚಿಗೆ ಅದು ಹೊಳದು ಕಾಕೆಗ ಹೆದರಿ ಓಡುತ್ತವಡ..(ಈ ಕೇಸೆಟು ಎಲ್ಲಿ ಸಿಕ್ಕುತ್ತು ಹೇಳಿ ಎನಗೆ ಗೊ೦ತಿಲ್ಲೆ ..ಈಗ ಎಲ್ಲ ಸಿ.ಡಿಗಳೂ ಐಪೋಡುಗಳೂ ಅಲ್ಲದ?)
  ಕೆಲವು ದಿಕ್ಕೆ ಕನ್ನಾಟಿಯೂ ಮಡಗುತ್ತವು
  ಕಾಯಿಸೊಪ್ಪು ಅರ್ಧ ಹೊತ್ತುಸಿ ಮಸಿಹಿಡುಕ್ಕಟೆಯ ನೇಲುಸಿರೂ ಕಾಕೆ ಬತ್ತಿಲ್ಲೆ
  ದೊದ್ಡ ಬಲೆ ಇದ್ದರೂ ಮುಚ್ಚುಲಕ್ಕು.
  ದೊಡ್ಡಕ್ಕೆ ಕೊರಪ್ಪುವ ನಾಯಿ ಇದ್ದರೆ ಹತ್ರಾಣ ಕ೦ಬಕ್ಕೆ ಕಟ್ಟಿಗೊಳ್ಳಿ( ಸ೦ಕೋಲೆ ಬಿಗಿ ಇದ್ದ ಹೇಳಿ ಎರಡೆರಡು ಸರ್ತಿ ನೋಡಿಗೊಳ್ಳಿ!!!!ಇಲ್ಲದ್ರೆ ನಿ೦ಗ ಎನ್ನ ಬೈವಲೆ ಸುರು ಮಾಡುವಿ…ಕೆಲವು ನಾಯಿಗಳ ಬುರುಡೆ ಕೊರಳಿ೦ದ ಸಣ್ಣ ಇದಾ…ಬೇಗ ಬಿಡುಸಿಗೊಳ್ತವು…)

  [Reply]

  VA:F [1.9.22_1171]
  Rating: 0 (from 0 votes)
 5. catni hodi enagu rajja kalusi kodu aato. enna sosege idella madule helire dodda galate avuttida hange keliddu idaa. praya aadaru timba ase kammi ayidille idaa. tambittunde timbale banga akku, hallu gatti ille idaa. haange idara keliddu.

  [Reply]

  VA:F [1.9.22_1171]
  Rating: 0 (from 0 votes)
 6. ಕೊಪ್ಪರ ಜಾಲಿಲ್ಲಿ ಮಡಗಿರೆ ತೆಗವಗ ಒಂದೊಂದು ತುಂಡು ಖಾಲಿ ಅಕ್ಕು. ಅದು ಮೊದಲಿಂದಲೂ ಹಾಂಗೆಯೇ. 😉

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ಸುಭಗಡಾಮಹೇಶಣ್ಣಗೋಪಾಲಣ್ಣಅಕ್ಷರ°ಅನು ಉಡುಪುಮೂಲೆಬಂಡಾಡಿ ಅಜ್ಜಿvreddhiವೆಂಕಟ್ ಕೋಟೂರುಮುಳಿಯ ಭಾವನೆಗೆಗಾರ°ಪ್ರಕಾಶಪ್ಪಚ್ಚಿಸರ್ಪಮಲೆ ಮಾವ°ದೊಡ್ಡಭಾವಶೇಡಿಗುಮ್ಮೆ ಪುಳ್ಳಿಹಳೆಮನೆ ಅಣ್ಣಮಾಲಕ್ಕ°ಮಂಗ್ಳೂರ ಮಾಣಿಜಯಗೌರಿ ಅಕ್ಕ°ಕೆದೂರು ಡಾಕ್ಟ್ರುಬಾವ°ದೇವಸ್ಯ ಮಾಣಿವಿಜಯತ್ತೆಅಜ್ಜಕಾನ ಭಾವಪವನಜಮಾವಅಕ್ಷರದಣ್ಣಶ್ರೀಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ