ಪಟಕಲ ಕಾಯಿ ಪಾಯಸ

November 7, 2010 ರ 9:07 pmಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಬ್ಬ ಕಳತ್ತು, ಇನ್ನು ಮತ್ತೆ ಅದೇ ಲೈಫು !! ಶಾಲೆ, ಕಾಲೇಜು, ಆಪೀಸು, ಆ ಕೆಲಸ, ಈ ಕೆಲಸ ಎಲ್ಲ ಇಪ್ಪದೇ. ಅದರೊಟ್ಟಿಂಗೆ ಊಟ ತಿಂಡಿ ನಿತ್ಯಾಣ ಹಾಂಗೆ ನಡಕ್ಕೊಂಡು ಹೋವ್ತು. ನಿತ್ಯಕ್ಕೆ ಮಾಡುವ ಒಂದು ಸುಲಭದ ಪಾಯಸವ ಮಾಡುವ ಕ್ರಮ ಹೇಳ್ತೆ. ಎನಗೆ ಗೊಂತಿಪ್ಪ ಹಾಂಗೆ ನಮ್ಮ ದಕ್ಷಿಣಕನ್ನಡಲ್ಲಿ ಇದರ ನಾವು ಮಾಡ್ತಿಲ್ಲೆ, [ಮಾಡುವ ಕ್ರಮ ಇದ್ದರೆ,ಎನಗೆ ಗೊಂತಿಲ್ಲೆ] ಅಷ್ಟಕ್ಕೂ ಇದು ಎಂತರ ಹೇಳಿರೆ “ಪಟಕಲ ಕಾಯಿ ಪಾಯಸ”. ಇದು ಎಂಗಳ ಊರಿಲ್ಲಿ ಹಬ್ಬದ ಸಮಯಲ್ಲಿ ಬಾಳೆ ಕೊಡೀಲಿ ಬಳುಸುಲೆ ಮಾಡ್ತವು[ಅಲ್ಲಿ ಪಾಯಸಕ್ಕೆ ಹೆಚ್ಚು importance ಇಲ್ಲೆ].
ಬೇಕಾದ ವಸ್ತುಗೊ:
 • ಒಂದು ಪಟಕಲಕಾಯಿ (snakegourd)
 • ಬೆಲ್ಲ
 • ಒಂದು ಬೌಲ್ ಅಕ್ಕಿ
 • ಒಂದು ಬೌಲ್ ಕೆರದ ಕಾಯಿ
 • ನೀರು
 • ಏಲಕ್ಕಿ ೩-೪
ಮಾಡುವ ಕ್ರಮ:
 • ಒಂದು ಗಂಟೆ ಮೊದಲು ಅಕ್ಕಿಯ ನೀರಿಲ್ಲಿ ಬೊದುಳ್ಸುಲೆ ಹಾಕೆಕ್ಕು.
 • ಪಟಕಲಕಾಯಿಯ ಸಣ್ಣಕ್ಕೆ ತುಂಡು ಮಾಡೆಕ್ಕು.
 • ಪಾತ್ರೆಲಿ ಪಟಕಲಕಾಯಿ ಹೋಳು, ಬೆಲ್ಲ ಮತ್ತೆ ರಜ್ಜ ನೀರು ಹಾಕಿ ಬೇವಲೆ ಮಡುಗೆಕ್ಕು.
 • ಕೆರದ ಕಾಯಿ, ಬೊದುಳಿದ ಅಕ್ಕಿ ಮತ್ತೆ ಏಲಕ್ಕಿಯ ರಜ್ಜ ನೀರು ಹಾಕಿ ಕಡೆಯಕ್ಕು, ತರಿತರಿ ಅಪ್ಪಷ್ಟು ಕಡದರೆ ಸಾಕು.
 • ಈ ಮಿಶ್ರಣವ ಬೆಂದ ಪಟಕಲಕಾಯಿಗೆ ಹಾಕಿ,ಅಗತ್ಯ ಇದ್ದರೆ ರಜ್ಜ ನೀರು ಹಾಕಿ.
 • ಎಲ್ಲವನ್ನೂ ಒಟ್ಟಿಂಗೆ ಮತ್ತೊಂದರಿ ಕೊದುಶಿ ಇಳುಗಿ.
ಪಟಕಲ ಕಾಯಿ ಪಾಯಸ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. vaishali avinash
  Vaishali Bedrady

  suvarnini akka, ee payasa anu try madi nodeka heli… but patakila kayiya aa smell irtilya?

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ ಕೊಣಲೆ Reply:

  ಇಲ್ಲೆ ಪಾಯಸ ಮಾಡಿಯಪ್ಪಗ smell ಇರ್ತಿಲ್ಲೆ. ಸೊರೆಕ್ಕಾಯಿ ಪಾಯಸವನ್ನುದೇ ಇದೇ ಕ್ರಮಲ್ಲಿ ಮಾಡ್ಲಾವ್ತು.

  [Reply]

  vaishali avinash

  Vaishali Bedrady Reply:

  sari..dhanyavadango..

  [Reply]

  VA:F [1.9.22_1171]
  Rating: 0 (from 0 votes)
 2. ಪುಟ್ಟಬಾವ°
  ಪುಟ್ಟಭಾವ ಹಾಲುಮಜಲು

  ಪಾಯಸ ಲಾಯ್ಕಾಯ್ದು!! ನಿಂಗ ಬಂಡಾಡಿ ಅಜ್ಜಿಯ ಕೈಂದ “ರೈಟ್ಸ್” ತೆಕ್ಕೊಂಡಿದಿರೋ!!
  ಇನ್ನಣ ಸರ್ತಿ ಬೆಂಡೆಕಾಯಿ ಪಾಯಸ ವೋ ಹೆಂಗೆ ?? 😀 😀

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ ಕೊಣಲೆ Reply:

  ಬಂಡಾಡಿ ಅಜ್ಜಿಯ ಹತ್ತರೆ ಮಾರ್ಕು ತೆಕ್ಕೊಳ್ಳೆಕಷ್ಟೆ !! ಪಾಸು ಮಾಡುಗು ಕಾಣ್ತು, ಅಲ್ಲದಾ? :) :)
  ಬೆಂಡೆಕಾಯಿ ಪಾಯಸ ಮಾಡ್ಲೆ ಎಡಿಯ ಹೇಳಿ ಕಾಣ್ತು. :) ಇನ್ನೆಂತಾರು ಹೊಸತ್ತು , ಎಂಗಳ ಊರಿನ ಅಡಿಗೆಯ ಬರೆತ್ತೆ ಇನ್ನಾಣ ಸರ್ತಿ :)

  [Reply]

  VN:F [1.9.22_1171]
  Rating: 0 (from 0 votes)
  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಬೆಂಡೆ ಕಾಯಿ ಪ್ರಯೋಗ ಮಾಡ್ತೆಯಾ?
  ದಾರಳೆ ಕಾಯಿ ಪಾಯಸ ಮಾಡಿ ನೋಡು. ಲಾಯಿಕ ಆವ್ತು.
  ಎಂಗೊ ಮಾಡಿತ್ತಿದ್ದೆಯೊ.

  [Reply]

  VA:F [1.9.22_1171]
  Rating: +1 (from 1 vote)
 3. ಗಣೇಶ ಮಾವ°

  ಓಹ್…ಎನಗೆ ಗೊಂತೆ ಇತ್ತಿಲ್ಲೇ…ಪಟಕಿಲದ್ದೂ ಪಾಯಸ ಆವ್ತು ಹೇಳಿ.ವಿವರಣೆ ಕೊಟ್ಟದಕ್ಕೆ ಧನ್ಯವಾದಂಗ…

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ ಕೊಣಲೆ Reply:

  ಮನೆಲಿ ಮಾಡ್ಸಿ ರುಚಿ ನೋಡಿ :) ಅಲ್ಲದ್ದರೇ ನಿಂಗಳೆ ಅಡಿಗೆಕೋಣೆ ಹೊಕ್ಕು try ಮಾಡಿ.

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  (ಮನೆಲಿ ಮಾಡ್ಸಿ ರುಚಿ ನೋಡಿ)
  ಮಾಡ್ಸುದು ಆರತ್ರೆ???

  [Reply]

  VA:F [1.9.22_1171]
  Rating: +1 (from 1 vote)
 4. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಸುವರ್ಣಿನಿ ಅಕ್ಕೋ,
  ಒಳ್ಳೆ ಪಾಯಸ ಮಾಡ್ಲೆ ಹೇಳಿ ಕೊಟ್ಟಿದಿ. ಮಕ್ಕೊ ಅಲ್ಲದ್ದರೆ ಪಟಗಿಲ ಮಾಡಿದರೆ ತಿಂತವಿಲ್ಲೇ. ಪಾಯಸ ಪ್ರೀತಿಯನ್ನೇ!!! ರುಚಿ ಗೊಂತಾಗದ್ದರೆ ತಿನ್ನುಗು ಅಲ್ಲದಾ? 😉

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಮಜ್ಜಿಗೆ ಆಗದ್ದವು ಕತ್ತಲೆಲಿ ಉಂಡಾಂಗೆ ಅಕ್ಕು…..

  [Reply]

  VN:F [1.9.22_1171]
  Rating: +1 (from 1 vote)
  ಸುವರ್ಣಿನೀ ಕೊಣಲೆ

  ಸುವರ್ಣಿನೀ ಕೊಣಲೆ Reply:

  ಅಪ್ಪು, ಮಕ್ಕೊ ತರಕಾರಿ ಹಣ್ಣು ತಿನ್ನದ್ದರೆ ಹೀಂಗೇ ಎಂತಾರು ಮಾಡಿ ಕೊಡೆಕ್ಕು. ಯಾವ ತರಕಾರಿ ತಿಂತವಿಲ್ಲೆ ಹೇಳಿ, ಹೊಸರುಚಿ ಮಾಡ್ಲಾವ್ತ ನೋಡುವ !!
  ಎನ್ನ ಚಿಕ್ಕಮ್ಮನ ಮಗಳಿಂಗೆ ಹಸರು ಪಾಯಸ ಆಗ ! ಕಾರಣ ಎಂತರ ಹೇಳಿರೆ ಅದರ ಅಣ್ಣಂಗೆ ಆವ್ತಿಲ್ಲೆ !! ಅಣ್ಣ ತಿಂತಾ ಇಲ್ಲೆ ಹೇಳಿ ಅದುದೇ ತಿನ್ನ. ಒಂದರಿ ರಜೆಲಿ ಆನು ಹೋದಿಪ್ಪಗ, ಚಿಕ್ಕಮ್ಮ ಹಸರು ಪಾಯಸ ಮಾಡಿತ್ತವು, ಈ ಕೂಸು ಶಾಲೆಂದ ಬಂದು ಹಶು ಅಪ್ಪಗ ಸಮಾ ಹಸರು ಪಾಯಸ ತಿಂದತ್ತು [ಬಗೆ ಎಂತರ ಹೇಳಿ ತಿಂಬಗ ಗೊಂತಿತ್ತಿಲ್ಲೆ ಅದಕ್ಕೆ!] . ಮಾಡಿದ್ದು ರಜ್ಜ ಆದಕಾರಣ ಅಂದು ಇರುಳೇ ಖಾಲಿ ಆತು. ಈ ಜೆನ “ಹಸರು ಪಾಯಸ ಇಷ್ಟು ಲಾಯ್ಕಾವ್ತು ಹೇಳಿ ಗೊಂತೇ ಇತ್ತಿಲ್ಲೆ, ಎನಗೆ ನಾಳೆ ಮತ್ತೆ ಮಾಡಿ ಕೊಡು” ಹೇಳಿ ಶುರು ಮಾಡಿತ್ತು. ಈಗಳೂ ಹಸರು ಪಾಯಸದ ಶುದ್ದಿ ಬಂದಪ್ಪಗ ಅದರ ನೆಗೆ ಮಾಡ್ತೆಯ :) :)

  [Reply]

  VN:F [1.9.22_1171]
  Rating: +1 (from 1 vote)
 5. ಮುಳಿಯ ಭಾವ
  ರಘುಮುಳಿಯ

  ಪಟಗಲದ ಪಾಯಸ ನೋಡಿ ಮೋರೆ ಅಗಲ ಆತು.ಕೂಡಲೇ ಮನೆಗೆ ತೆಕ್ಕೊಂಡು ಹೋಯೆಕ್ಕಿದ .
  ಎನ್ನ ತಮ್ಮಂಗೆ ಒಂದು ಕಾಲಲ್ಲಿ ಬದನೆ ಕಂಡರಾಗ (ಕಂಡರೆ ರಾಗ). ಒಂದರಿ ಎನ್ನ ಅತ್ತಿಗೆ ನಾಳಿ ಬದನೆ ಕೊದಿಲು ಮಾಡಿ ಬಳುಸಿತ್ತು.ಈ ಮಾಣಿ ಸಂಶಯ ಬಂದು ಕೇಳಿದ°-ಎಂತ ಬಾಗ ಇದೂ ಹೇಳಿ. ಅತ್ತಿಗೆ ಹೇಳಿತ್ತು -ಬೆಂಗಳೂರು ಪಟಗಲ ಹೇಳಿ.ತಮ್ಮ ತಿಂದು ಒಳ್ಳೆ ರುಚಿ ಇದ್ದು ಹೇಳಿ ತಿರುಗಿ ಬಳುಸಿಗೊಂಡ°.ಈಗಳೂ ಅವನ ಕಂಡಪ್ಪಗ ಒಂದರಿ ನೆನಪುಸುಲೆ ಇದ್ದು..

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣತೆಕ್ಕುಂಜ ಕುಮಾರ ಮಾವ°ಅನುಶ್ರೀ ಬಂಡಾಡಿವಿಜಯತ್ತೆಕಳಾಯಿ ಗೀತತ್ತೆಮುಳಿಯ ಭಾವಸಂಪಾದಕ°ರಾಜಣ್ಣಡಾಗುಟ್ರಕ್ಕ°ಚುಬ್ಬಣ್ಣಅನು ಉಡುಪುಮೂಲೆನೆಗೆಗಾರ°ವಿನಯ ಶಂಕರ, ಚೆಕ್ಕೆಮನೆದೀಪಿಕಾಪುತ್ತೂರುಬಾವಡಾಮಹೇಶಣ್ಣನೀರ್ಕಜೆ ಮಹೇಶಪವನಜಮಾವಶಾ...ರೀಶುದ್ದಿಕ್ಕಾರ°ಪೆರ್ಲದಣ್ಣಡೈಮಂಡು ಭಾವಕೇಜಿಮಾವ°ವಸಂತರಾಜ್ ಹಳೆಮನೆಸುವರ್ಣಿನೀ ಕೊಣಲೆಶ್ರೀಅಕ್ಕ°ಹಳೆಮನೆ ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ