ಬಾಳುಕ ಮೆಣಸು…

February 20, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ವಾರ ಸೆಂಡಗೆ ಮಾಡಿತ್ತದ. ಬೆಶಿಲು ಹೇಳಿರೆ ಬೆಶಿಲು. ಒಣಗುಲೆ ಮಡಗಿದ ಎರಡು ದಿನಲ್ಲೇ ಮುಂಡಿ ಎಲೆ ಚಿರುಟಿ ಹೋಯಿದು. ಹ್ಮ್ ಸೆಂಡಗೆ ಒಣಗಿತ್ತನ್ನೆ. ಇನ್ನೆಂತರ ಮಾಡುದೂಳಿ ಆಲೋಚನೆ ಮಾಡ್ಯೊಂಡಿಪ್ಪಗ, ಅಬ್ರಾಜೆ ಪುಟ್ಟ° ಒಂದು ಕಿಲ ಹಸಿಮೆಣಸು  ಹಿಡ್ಕೊಂಡು ಬಂದ. “ಬಾಳುಕ ಮಾಡಿಕೊಡೇಕು ಅಜ್ಜೀ..” ಹೇಳ್ಯೊಂಡು. ಮೆಲ್ಲಂಗೆ ಅಮ್ಮಂಗೆ ಗೊಂತಾಗದ್ದಾಂಗೆ ತಂದದು ಮಾಣಿ. ಅಮ್ಮ “ಎಷ್ಟು ಕಾರ ತಿಂಬದು…” ಹೇಳಿ ಪರಂಚುತ್ತೊ ಕಾಣ್ತು. ಪಾಪ ಅದೊಂದು ಕೊದಿ ಅಲ್ದೊ. ಮಾಡಿ ಕೊಡುವೊ ಹೇಳಿ ಕಂಡತ್ತು. ಒಳ್ಳೆತ ಬೆಶಿಲುದೇ ಇದ್ದು…

ಹಸಿಮೆಣಸಿನ ತೊಳದು, ತೊಟ್ಟು ತೆಗದು, ಅರ್ಧ ಸಿಗಿವದು. ಸಿಗಿವಾಗ ಜಾಗ್ರತೆ. ಬಿತ್ತು ಕಣ್ಣಿಂಗೆ ಮಣ್ಣ ರಟ್ಟಿರೆ ಕೂಪಲೆಡಿಯಉರಿವದರ್ಲಿ. ಮತ್ತೆ ಕೆಲವು ಜನಕ್ಕೆ ಕೈ ಉರಿತ್ತು ಮೆಣಸು ಮುಟ್ಟಿರೆ. ನೆಂಪಿದ್ದನ್ನೆ, ಹಾಂಗಾವುತ್ತರೆ ಹುಳಿಮಜ್ಜಿಗೆಲೋ ಇಲ್ಲದ್ರೆ ಹುಳಿಲೋ ಮಣ್ಣ ಕೈ ತೊಳದರೆ ಆತು. ಅವ° ತಂದ ಮೆಣಸು ಬಾರೀ ಕಾರ ಇತ್ತೋಳಿ. ಮೂಗಿನೊಳ ಹೊಗ್ಗಿ ನಾಕು ಅಕ್ಷಿಯೂ ಬಂತು ಕೊರವಗ. ಅದರ ನಮ್ಮ ಪಂಜದ ರೂಪ° ಮಣ್ಣ ನೋಡಿದ್ದಿದ್ದರೆ ಬಾಳುಕ ಬೇಡ ಹೇಳ್ತಿತೋ ಏನೊ. ಪೇಟೆಲಿ ಪೆಕೆಟಿಲಿ ಹಾಕಿ ಮಾರುವ ಮೆಣಸು ಬಾರೀ ಶುದ್ದಲ್ಲಿ ಮಾಡಿದ್ದೂಳಿ ಲೆಕ್ಕ ಇದಾ. ಹ್ಮ್… ಸೀಳಿದ ಮೆಣಸಿಂಗೆ ಉಪ್ಪು ಹಾಕೆಕು. ಒಂದು ಕಿಲಕ್ಕೆ ಒಂದು ಸೇರು ಉಪ್ಪು ಬೇಕಕ್ಕು.

ಈಗಾಣ ಉಪ್ಪು ಉಪ್ಪೇ ಇರ್ತಿಲ್ಲೆ ಅಲ್ದೊ… ಒಪ್ಪಣ್ಣ ಕೊಡೆಯಾಲಕ್ಕೆ ಹೋಪಲಿದ್ದರೆ ಅಂಗಡಿ ಬದಲ್ಸಿ ಬದಲ್ಸಿ ತಪ್ಪಲೆ ಹೇಳುದು ಆನು. ಊಹೂಂ…ಏವ ಅಂಗಡಿದಾದರೂ ಅಷ್ಟೇ. ಉಪ್ಪೇ ಇಲ್ಲದ್ದ ಉಪ್ಪು! ಹಾಂಗಿದ್ದದಾದರೆ ರೆಜ ಜಾಸ್ತಿಯೇ ಹಾಕೆಕು. ಮತ್ತೆ ಅದಕ್ಕೆ ಹುಳಿ ಮಜ್ಜಿಗೆ ಸೇರುಸುದು. ಮಜ್ಜಿಗೆ ಹುಳಿ ಆದಷ್ಟೂ ಒಳ್ಳೆದು. ಅಜ್ಜಿಗೆ ಹುಳಿಮಜ್ಜಿಗೆ ಹೇಳ್ರೆ ಪ್ರೀತಿ ಇದಾ. ಹಾಂಗೆ ಒಳ್ಳೆ ಹುಳೀಮಜ್ಜಿಗೆ ಇಕ್ಕು ಯಾವಾಗಳುದೇ. ಮೆಣಸೆಲ್ಲ ಮುಳುಗುತ್ತಷ್ಟು ಮಜ್ಜಿಗೆ ಹಾಕಿ ಒಂದು ದಿನ ಮಡುಗೆಕ್ಕು. ಮತ್ತೆ ಅದರ ಒಲೆಲಿ ಮಡಗಿ, ರೆಜ ಹಸಿ ಮಾಸುವಷ್ಟು ಸೆಕೆಬರ್ಸೆಕು. ಅದಾದಿಕ್ಕಿ ಮೆಣಸಿನ ಎಲ್ಲ ಲಾಯ್ಕ ಬಳೀಶಿ ತೆಗದು ಒಣಗುಸುದು.

ಆ ಮಜ್ಜಿಗೆಯ ಮತ್ತೆ ಚೆಲ್ಲೆಕಷ್ಟೆ. ಅದೆಂತದೊ ಗೋಬರು ಗೇಸು ಇದ್ದಲ್ದೊ… ಅದಕ್ಕೆ ಹಾಕಿರೆ ಒಳ್ಳೆ ಗೇಸಾವುತ್ತಡ, ಅಜ್ಜಕಾನ ರಾಮ ಹೇಳ್ಯೊಂಡಿತ್ತಿದ. ಬಂಡಾಡಿಲಿ ಅದರ ಆ ಕೆಲಸದ ಚಿನ್ನಮ್ಮ ತೆಕ್ಕೊಂಡೋವುತ್ತು. ಅದರ ಪುಳ್ಯಕ್ಕೊಗೆಲ್ಲ ಬಾರೀ ಪ್ರೀತಿ ಅಡ ಆ ಕಾರದ ಮಜ್ಜಿಗೆ. ಒಳ್ಳೆ ಮೆಣಸಿನ ಪರಿಮ್ಮಳ ಇರ್ತಲ್ಲದೋ…. ಉಮ್ಮಪ್ಪ ಹಾಂಗುದೇ ಕಾರ ಕುಡುದರೆ ಹೊಟ್ಟೆ ಉರಿಯದೋ…. ಎನಗರಡಿಯಪ್ಪ (ಕಳ್ಳು ಗಂಗಾಸರ ಕುಡಿತ್ತವಕ್ಕೆ ಈ ಮಜ್ಜಿಗೆ ಅಷ್ಟು ಬೇಗ ನಾಟುಗೊ ಹೇಳಿ ಹೇಳುಗು ಮಾಷ್ಟ್ರಣ್ಣ). ಸುಮ್ಮನೆ ಚೆಲ್ಲಿ ಹಾಳುಮಾಡುದೆಂತಕೆ ತೆಕ್ಕೊಂಡೋಗಲೀಳಿ ಕೊಡುದು.

ಈ ಮೆಣಸುದೇ ಐದಾರು ಬೆಶಿಲಿಲಿ ಒಣಗುತ್ತು. ಒಂದು ಚಾಯ ಕುಡುದಿಕ್ಕಿ, ಒಂದು ವಾರ ಕಳುದು ಬತ್ತೆ ಹೇಳಿ ಅಬ್ರಾಜೆ ಮಾಣಿ ಹೆರಟ°. ಅವ ಹೆರಟ ಬೆನ್ನಿಂಗೇ ಚೋಮ ಪುತ್ತೂರು ಸಂತಗೆ ಹೋಗಿದ್ದದು ಕೈಲಿ ಎಂತದೋ ಚೀಲ ಹಿಡ್ಕೊಂಡು ಬಪ್ಪದು ಕಂಡತ್ತು. “ಮುಂಚಿ ಬಾರೀ ಎಡ್ಡೆ ಇತ್ತ್‌ಂಡ್ ಅಕ್ಕೆ…ಅಂಚ ಒಂತೆ ಕೊಣತ್ತೆ..” ಹೇಳಿತ್ತು. ಸರೀ ಆತದ. ಅದರ್ನ್ನುದೇ ಒಟ್ಟಿಂಗೆ ಸೇರುಸಿ ಮಾಡಿದೆ. ಮಾಡಿ ಮಡಗಿದರೆ ಮತ್ತೆ ಬೇರೆ ಆರಿಂಗಾರು ಬೇಕಾದವಕ್ಕೆ ಕೊಡ್ಳಕ್ಕಲ್ದೊ.

ಒಣಗಲೆ ಮಡಗಿದ್ದೆ. ಇದರ ಆದರೆ ಕಾಕೆ ತೆಕ್ಕೊಂಡೋಪ ಮಂಡೆಬೆಶಿ ಇಲ್ಲೆ ಇದಾ. ಕೈರಂಗಳದ ಕೂಸಿಂಗಂತೂ ಬಾಳುಕ ಮೆಣಸು ಇದ್ದರೆ ಮತ್ತೆಂತದೂ ಬೇಡ ಉಂಬಲೆ. ಅದು ಬಂದಿಪ್ಪಗ ಬಂದಿಪ್ಪಗ ಒಂದು ರೆಜ ಆದರೂ ಹೊರುದು ಕೊಂಡೋಕು. ಅದು ಈಗ ಇಪ್ಪದು ಕೊಡೆಯಾಲಲ್ಲಿ. ಅಲ್ಲಿ ಲಾಯ್ಕ ತೆಂಗಿನೆಣ್ಣೆ ಸಿಕ್ಕುತ್ತಿಲ್ಲೆಡ. ಹಾಂಗೆ ಇಲ್ಲಿಯೇ ಹೊರುದು ಕೊಂಡೋಪದು. ಅದರ ಹೊರಿವಾಗ ಬಾಯಿಲಿ ನೀರು ಬತ್ತಾತ. ಮದಲೆಲ್ಲ ಅದರಲ್ಲೇ ಉಂಡೊಂಡಿದ್ದದಲ್ದೊ. ಪ್ರಾಯ ಆದ ಮತ್ತೆ ಜಾಸ್ತಿ ಕಾರ ತಿಂಬಲಾಗ ಹೇಳಿ ಮೊನ್ನೆ ರೇಡ್ಯಲ್ಲಿದೇ ಹೇಳಿಯೊಂಡಿತ್ತಿದವು. ರುಚಿ ಆವುತ್ತೂಳಿ ತಿಂಬಲೆ ಗೊಂತಿಲ್ಲೆ ಇನ್ನು. ಆನು ನಿತ್ಯಕ್ಕೆ ಹೊರಿವಲೇ ಹೋಪಲಿಲ್ಲೆ. ಹೀಂಗೆ ಆರಾರು ಬಂದಿಪ್ಪಗ ಹೊರಿವದು. ಒಳುದ್ದರ ಅವಕ್ಕೇ ಕೊಟ್ಟುಕಳ್ಸುದು. ಅದು ಕಣ್ಣೆದುರು ಇದ್ದರೆ ತಿಂದು ಹೋವುತ್ತು.

ಸಾರಿಂಗೆ, ಮಜ್ಜಿಗೆಗೆ, ಮೇಲಾರಕ್ಕೆ ಎಲ್ಲದಕ್ಕೂ ಒಟ್ಟಿಂಗೆ ಸೇರುಸಿ ಉಂಬಲೆ ಲಾಯ್ಕಾವುತ್ತಿದು. ಈಗ ಒಳ್ಳೆತ ಬೆಶಿಲುದೇ ಇದ್ದಿದ. ಮಾಡಿಮಡಗಿ ಪುರುಸೊತ್ತಿಲಿ. ಹಾಂಗೆ ಮತ್ತೆ ಇತ್ಲಾಗಿ ಬಪ್ಪಲಿದ್ದರೆ ಕೊಡ್ಳಕ್ಕು ಬೇಕಾರೆ ಆತೊ…

ಇದರಾಂಗೇ ತೊಂಡೆಕಾಯಿ ಬಾಳುಕದೇ ಮಾಡ್ಳಾವುತ್ತು. ಹಾಗಲಕಾಯಿದುದೇ ಆವುತ್ತು. ಕಾರ ಆಗದ್ದೋರಿಂಗೆ ಇದು ಒಳ್ಳೆದು. ನೋಡೆಕು, ಚೂರಿಬೈಲು ದೀಪ° ಇನ್ನೊಂದರಿ ತೊಂಡೆಕಾಯಿ ಕೊಟ್ಟಿಪ್ಪಾಗ ರೆಜ ಬಾಳುಕ ಮಾಡೆಕು

ಬಾಳುಕ ಮೆಣಸು..., 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. bari layka ayidu. idara odi madyana ootakke balaka mensu madsi tinba haange ayidu.

  [Reply]

  VA:F [1.9.22_1171]
  Rating: 0 (from 0 votes)
 2. ಅಜ್ಜಕಾನ ರಾಮ

  ಅಜ್ಜಿ ಬಾಳುಕ ಮೆಣ್ಸು ಮಾಡಿದ್ದರ ಕೇಳಿ ಬಾಯಿಲಿ ನೀರು ಬತ್ತಾ ಇದ್ದು.. ಒಪ್ಪಣ್ಣ ಅಜ್ಜಿಯ ಬೈಲಿಲಿ ಇದ್ದೆ ಹೇಳಿ ಫೋನ್ ಮಾಡಿತ್ತಿದ್ದ.. ಅವನತ್ರೆ ರಜಾ ಕಳ್ಸಿಲಕ್ಕೋ ಹೇಳಿ ಕೇಳುತ್ತಾ ಇಪ್ಪದು..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನೈ ಬಾವ°ಅಡ್ಕತ್ತಿಮಾರುಮಾವ°ವಿದ್ವಾನಣ್ಣವಿನಯ ಶಂಕರ, ಚೆಕ್ಕೆಮನೆಮಾಷ್ಟ್ರುಮಾವ°ದೊಡ್ಮನೆ ಭಾವಡೈಮಂಡು ಭಾವಚೂರಿಬೈಲು ದೀಪಕ್ಕನೆಗೆಗಾರ°vreddhiಸಂಪಾದಕ°ಕೇಜಿಮಾವ°ನೀರ್ಕಜೆ ಮಹೇಶಚುಬ್ಬಣ್ಣಅಜ್ಜಕಾನ ಭಾವಉಡುಪುಮೂಲೆ ಅಪ್ಪಚ್ಚಿಕಳಾಯಿ ಗೀತತ್ತೆವಿಜಯತ್ತೆವಸಂತರಾಜ್ ಹಳೆಮನೆಬಟ್ಟಮಾವ°ಅನು ಉಡುಪುಮೂಲೆಜಯಗೌರಿ ಅಕ್ಕ°ಶ್ಯಾಮಣ್ಣಪೆರ್ಲದಣ್ಣಪಟಿಕಲ್ಲಪ್ಪಚ್ಚಿಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ