“ಮಾವಿನ ಹಣ್ಣಿನ ಕೇಸರಿಬಾತ್”

ಆರೋಗ್ಯದ ಬಗ್ಗೆ ಇಪ್ಪದೇ, ಅದರೆ ಬೇರೆದೇ ರಜ್ಜ ಬರೆಂವ ಹೇಳಿ ಗ್ರೇಶಿದ್ದೆ. ನಿಂಗೊಗುದೇ ಇಷ್ಟ ಅಕ್ಕು. “ಮಾವಿನ ಹಣ್ಣಿನ ಕೇಸರಿಬಾತ್”, ಇದೆಂತ ಹೊಸತ್ತು ಹೇಳಿ ಕಾಂಗು ನಿಂಗೊಗೆ !! ಅಪ್ಪು, ಇಂದು ಹೊತ್ತೋಪಗ ಉದಾಸಿನ ಅವ್ತಾ ಇತ್ತು, ಕೇಸರಿಬಾತ್ ಮಾಡುಂವ ಹೇಳಿ ಆಲೋಚನೆ ಮಾಡಿದೆಂಯ, ಆದರೆ ಅನಾನಾಸು ಹಣ್ಣು ಇತ್ತಿಲ್ಲೆ 🙁 . ಮನೆಲಿ ಮಾವಿನ ಹಣ್ಣು ಇತ್ತಿದ್ದು, ಇದರ ಹಾಕಿ ಮಾಡಿರೆ ಹೇಂಗೆ ಹೇಳಿ ಕಂಡತ್ತು !! ಅನಾನಾಸಿನ ಕೇಸರಿಬಾತ್ ಮಾಡುವ ಹಾಂಗೆಯೇ ಮಾವಿನ ಹಣ್ಣು ಹಾಕಿ ಮಾಡಿದೆಂಯ !!! ಎಂತಾ ಲಾಯ್ಕ ಆತು ಗೊಂತಿದ್ದ? ನಿಂಗಳುದೇ ಮಾಡಿ ನೋಡಿ.
ಬೇಕಾದ ಸಾಮಾನು: ಒಂದು ಗ್ಲಾಸ್ ಸಜ್ಜಿಗೆ
ಎರಡು ಗ್ಲಾಸ್ ಸಕ್ಕರೆ
ಎರಡು ಗ್ಲಾಸ್ ತುಪ್ಪ
ಒಂದು ಸಣ್ಣ ಮಾವಿನ ಹಣ್ಣು
ಏಲಕ್ಕಿ, ಗೋಡಂಬಿ, ಒಣ ದ್ರಾಕ್ಷೆ
ಎರಡು ಗ್ಲಾಸ್ ನೀರು.
ಮಾಡ್ತ ಕ್ರಮ: ಸಜ್ಜಿಗೆಯ ರಜ್ಜ ತುಪ್ಪಲ್ಲಿ ಹೊರುದು ಕರೇಲಿ ಮಡುಗೆಕ್ಕು. ಒಂದು ಬಾಣಲೆಲಿ ಎರಡು ಗ್ಲಾಸ್ ನೀರು ಕೊದಿವಲೆ ಮಡುಗಿ, ನೀರು ಕೊದಿವಲೆ ಶುರು ಅಪ್ಪಗ ಹೊರುದು ಮಡುಗಿದ ಸಜ್ಜಿಗೆ ಹಾಕಿ ತೊಳಸೆಕ್ಕು, ಸಜ್ಜಿಗೆ ಉಂಡೆ ಕಟ್ಟದ್ದ ಹಾಂಗೆ ಸರೀ ತೊಳಸೆಕ್ಕು. ಸಜ್ಜಿಗೆ ಬೆಂದಮೇಲೆ ಅದಕ್ಕೆ ಸಕ್ಕರೆ ಹಾಕಿ ತೊಳಸೆಕ್ಕು, ಸಕ್ಕರೆ ಕರಗಿದಮೇಲೆ, ಮಾವಿನ ಹಣ್ಣಿನ ಗೊರತು,ಚೋಲಿ ತೆಗದು ಪುರುಂಚಿ ಬಾಣಲೆಗೆ ಹಾಕೆಕ್ಕು. ಸಜ್ಜಿಗೆ, ಸಕ್ಕರೆ, ಮಾವಿನಹಣ್ಣು ಎಲ್ಲ ಸರೀ ಮಿಕ್ಸ್ ಆದಮೇಲೆ ರಜ್ಜ ರಜ್ಜ ಆಗಿ ತುಪ್ಪ ಹಾಕಿ ತೊಳಸಿಗೊಂಡೇ ಇರೆಕ್ಕು, ಇದಕ್ಕೆ ಹೊಡಿ ಮಾಡಿದ ಏಲಕ್ಕಿ, ಹೊರುದ ಒಣ ದ್ರಾಕ್ಷೆ ಗೋಡಂಬಿ ಹಾಕಿ. ಕೇಸರಿಬಾತ್ ಅಡಿ ಬಿಡುವ ವರೇಗೆ ತೊಳಸಿ. ಮತ್ತೆ ಒಂದು ತಟ್ಟೆಗೆ ತುಪ್ಪ ಉದ್ದಿ ಅದರಲ್ಲಿ ಮಾವಿನಹಣ್ಣಿನ ಕೇಸರಿಬಾತ್ ಹಾಕಿ.
ಇಷ್ಟಾದಮೇಲೆ ಎಂತ ಮಾಡೆಕ್ಕು? ಎಲ್ಲರಿಂಗೂ ಕೊಟ್ಟುಗೊಂಡು ನಾವುದೇ ತಿಂಬದು !!!

ಸುವರ್ಣಿನೀ ಕೊಣಲೆ

   

You may also like...

21 Responses

 1. ಗುತ್ತು ಸದಾಶಿವ° says:

  ಬೆಳ್ಳಂಗಿಪ್ಪ ಶಕ್ಕರೆ ವಿಶಕ್ಕೆ ಸಮ ಹೇಳಿ ಕೆಲವು ಜನರ ಅಭಿಪ್ರಾಯ – ನಿಂಗೊಗೆ ಹೇಂಗೆ ಕಾಣುತ್ತು?

  • Suvarnini Konale says:

   ಅಪ್ಪು, ಸಕ್ಕರೆ ಮತ್ತೆ ಮೈದಾ , ಇದೆರಡರ ಬೆಳಿ ವಿಷ(white poison) ಹೇಳಿ ಹೇಳ್ತವ್ವು. ಇದು ಆರೋಗ್ಯಕ್ಕೆ ಒಳ್ಳೆದಲ್ಲ.
   ಸಕ್ಕರೆಲಿ ಇಪ್ಪದು ಬರೀ ಶರ್ಕರಪಿಷ್ಠ, ಅದುದೆ refined, ಹೇಳಿರೆ ಅದರ್ಲಿ ಕಬ್ಬಿಲ್ಲಿ ಇಪ್ಪ ಖನಿಜಾಂಶ, ಪ್ರೊಟೀನ್, ವಿಟಮಿನ್ ಯಾವ್ದುದೇ ಇರ್ತಿಲ್ಲೆ, ಈ ಸಕ್ಕರೆಯ ಕರಗ್ಸುಲೆ ದೇಹಕ್ಕೆ ಕಷ್ಟ. , ಇದರಿಂದಾಗಿ ಸಕ್ಕರೆಯ metabolism ಸರಿಯಾಗಿ ಅಗದ್ದೆ ಪೈರುವಿಕ್ ಆಸಿಡ್ ಮುಂತಾದ ಆಮ್ಲಂಗಳ ಉಂಟುಮಾಡುತ್ತು. ಇದು ಮೆದುಳು ಮತ್ತೆ ರಕ್ತ ಕಣಂಗಳಲ್ಲಿ ಸೇರಿಗೊಳ್ತು. ಇದರಿಂದ ಆಮ್ಳಜನಕದ ಸಂಚಾರ ಸರಿಯಾಗಿ ಆಗದ್ದೆ ಜೀವಕೋಶ ಸಾಯ್ತು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾರೆ ಈ ಲಿಂಕ್ ಗೆ ಹೋಗಿ.
   http://www.karlloren.com/Diabetes/p82.htm

 2. prashanth says:

  ಎರಡು glass ತುಪ್ಪ ಹಾಕೆಕ್ಕ??? ಹಂಗಾರೆ ಆನು ದೇವರಾಣೆ ಟ್ರೈ ಮಾಡ್ತಿಲ್ಲೇ
  ಪ್ರಶಾಂತ್ ಕುವೈತ್

 3. prashanth says:

  ತುಪ್ಪ ಜಾಸ್ತಿ ಆದರೆ ಎಂತ ತೊಂದರೆ ಇಲ್ಲೆಯ??

  • ಅಜ್ಜಿಮನೆ ಪುಳ್ಳಿ says:

   ನೀನೆಂತ ಗ್ರೇಶಿದ್ದೆ ಅಣ್ಣೊ.. fat ಆವುತ್ತು ಹೇಳಿಯೊ?. ಹಾಂಗೆ ಆಗ. ಆನು ದಿನಾ ತಿಂತೆ. ಸ್ಲಿಮ್ ಆಗಿದ್ದೆ ಆತೋ!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *