ವೈಶಾಕದ ಅಡಿಗೆಗೊ…

March 27, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವೈಶಾಕದ ಉರಿಸೆಕೆಗೆ ಉಂಬಲೂ ಮೆಚ್ಚುತ್ತಿಲ್ಲೆ. ಒಂದು ನೀರು ಸಾರೋ ಮಣ್ಣ ಮಾಡಿರೆ ಸಾಕಾವುತ್ತು. ಪುನರ್ಪುಳಿ, ನಿಂಬೆಯೊಳಿ ಸಾರೆಲ್ಲ ಮಾಡಿಯೊಂಡಿರ್ತಿದ.
ಹೇಳಿದಾಂಗೆ ಈ ಸರ್ತಿ ಪುನರ್ಪುಳಿ ಕಂಡಾವಟೆ ಆಯಿದು ಬಂಡಾಡಿಲಿ. ಮರದ ಬುಡಂದ ಕೊಡಿಯೊರೇಂಗೆ ತುಂಬಿಯೊಂಡಿದ್ದು, ಎಲೆಯೇ ಕಾಣದ್ದಾಂಗೆ. ಮಂಗ ಮಡಿಗಿರೆ ಎಲ್ಲ ಸಿಕ್ಕುಗು. ಅದು ಒಳಿಶೆಕ್ಕೆ. ಅಲ್ಲೇ ಹತ್ರಲ್ಲಿಪ್ಪ ಜಂಬುನೇರಳೆ ಸೆಸಿಲೂ ಒಳ್ಳೆತ ಹೂಗು ಹೋಯಿದು. ಪಾಪ ಪುಳ್ಯಕ್ಕೊ ಎಲ್ಲ ಆಶೆ ಬಿಟ್ಟೇ ಬಾಕಿ. ಮಂಗಂಗೊ ಎಲ್ಲವನ್ನೂ ಮುದ್ಪಿ ಹಾಳುಮಾಡಿಹಾಕುತ್ತವತ್ಲಾಗಿ..
ಪುನರ್ಪುಳಿ ಶರ್ಬತ್ತಿನ ಮೊನ್ನೆ ಮಾತಾಡಿದ್ದದ. ಶಾಂತಕ್ಕನಲ್ಲಿ ಮನ್ನೆ ನಿಂಬೆಯೊಳಿ, ಪುನರ್ಪುಳಿ ಎರಡ್ರನ್ನೂ ಒಟ್ಟಿಂಗೆ ಹಾಕಿ ಶರ್ಬತ್ತು ಮಾಡಿದ್ದವು. ಬಾರೀ ಚೀಪೆ ಆಗಿತ್ತದ. ಪುಳ್ಯಕ್ಕೊ ಎಲ್ಲ ಕೇಳಿ ಕೇಳಿ ಕುಡ್ಕೊಂಡಿತ್ತಿದವು. ಒಪ್ಪಕ್ಕಂಗೆ ತೆಕ್ಕೊಂಡೋಗಿ ಕೊಟ್ಟು ಕೊಟ್ಟು ಬಚ್ಚಿತ್ತಡ.
ಈ ಸಾರು, ಶರ್ಬತ್ತು ಎಲ್ಲ ಆರೋಗ್ಯಕ್ಕೆ ಬಾರೀ ಒಳ್ಳೆದಪ್ಪ. ಪುನರ್ಪುಳಿ ಸಾರಿಂಗೆ ಮಜ್ಜಿಗೆ ಹಾಕಿ ಕುಡಿವಲೂ ಲಾಯ್ಕಾವುತ್ತು.
ಪುನರ್ಪುಳಿ ತಂಬುಳಿಯುದೇ ಮಾಡ್ಳಾವುತ್ತು. ಒಣಗುಸಿದ್ದದಾದರೆ ಚೋಲಿ ಬೊದುಲುಲೆ ಹಾಕುದು. ಹಸಿ ಆದರೆ ಲಾಯ್ಕ ತೊಳದು, ಬಿತ್ತು ತೆಗವದು. ಮತ್ತೆ ಚೋಲಿಯ ಕಾಯಿಯೊಟ್ಟಿಂಗೆ ಹಸಿಮೆಣಸು, ಒಣಮೆಣಸು, ಬೆಲ್ಲ, ಉಪ್ಪು ಹಾಕಿ ಕಡದತ್ತು. ಮತ್ತೆ ಒಂದು ಚೂರು ಮಜ್ಜಿಗೆ ಸೇರುಸಿತ್ತು. ರಜ್ಜವೇ ಸಾಕು ಮಜ್ಜಿಗೆ, ಇದು ಮದಲೇ ಹುಳಿ ಅಲ್ಲದೋ. ಕೆಂಪು ತಂಬುಳಿ ತಯಾರಾತದ.

ಮತ್ತೆ ಇನ್ನೊಂದು ಈ ವೈಶಾಕಲ್ಲಿ ಆರೋಗ್ಯಕ್ಕೆ ಒಳ್ಳೆದಪ್ಪಂತದ್ದು ಹೇಳಿರೆ, ಬಾಳೆದಂಡು.
ಕದೊಳಿ ಗೊನೆ ಕಡಿತ್ತದಿದ್ದರೆ, ಅದರ ದಂಡು ತೆಕ್ಕಂಡು ಬಾ ಹೇಳುದು ಕಾಳಪ್ಪುವಿನತ್ತರೆ. ಈ ಪುಳ್ಯಕ್ಕೊ ಅದರ ಟ್ಯೂಬುಲೈಟು ಹೇಳಿ ಹಿಡ್ಕೊಂಡು ಕೊಣಿತ್ತವು. ಶೋ ದೇವರೇ… ಅವರ ಕೈಂದ ತೆಕ್ಕೊಂಡು ಅಡಿಗೆ ಮಾಡೆಕ್ಕಾರೆ ಅಜ್ಜಿಯ ಗೆಂಟ್ಳುಹರಿತ್ತು.
ಹ್ಮ್ ಅದಿರಳಿ. ಈ ಬಾಳೆದಂಡು ನಮ್ಮ ಹೊಟ್ಟೆಯ ಆರೋಗ್ಯಕ್ಕೆ ಬಾರೀ ಒಳ್ಳೆದಡ. ಅದೆಂತದೋ ಕಿಂಡಿಯೋ…ನಿಲ್ಲಿ…ಹ್ಮ್.. ಅಲ್ಲಲ್ಲ ಕಿಡ್ನಿ…ಆ ಕಿಡ್ನಿಗೆ ಒಳ್ಳೆದಡ ಕಿದೂರು ಡಾಕ್ಟ್ರುಮಾಣಿ ಹೇಳ್ಯೊಂಡಿತ್ತಿದ್ದ. ಉಮ್ಮಪ್ಪ ಅದೆಲ್ಲ ಅರಡಿಯ ನವಗೆ. ಆರೋಗ್ಯಕ್ಕೆ ಒಳ್ಳೆದೂಳಿ ಮದಲಿಂದಲೇ ಮಾಡಿಯೊಂಡು ಬತ್ತಾ ಇದ್ದಿದ.

ಅದರ ತಾಳ್ಳು, ಸಳ್ಳಿ, ಬೆಂದಿ, ಕೊಟ್ಟಿಗೆ ಎಲ್ಲ ಮಾಡ್ಳಾವುತ್ತು.
ದಂಡು ಹೇಳಿರೆ ಇಡೀ ದಂಡಿನ ಮಾಡುದಲ್ಲ. ಹೆರಾಣ ಚೋಲಿಯ ಸುಮಾರು ತೆಗೇಕು. ಒಳಾಣ ಬೆಳೀ ತಿರುಳಿನ ಮಾಡ್ತದು, ಗೊಂತಿದ್ದನ್ನೇ…
ದಂಡಿನ ಸಣ್ಣಕ್ಕೆ ಉರುಟುರೂಟು ಕೊರವದು. ಕೊರವಾಗ ನಾರು ಬತ್ತು. ಅದರ ತೆಗಕ್ಕೋಂಡು ಕೊರೆಯೇಕು. ಅಜ್ಜಕಾನ ರಾಮ ತಂದ ಮೆಟ್ಟುಕತ್ತಿಲಿ ಲಾಯ್ಕಾವುತ್ತದ ಕೊರವಲೆ. ಅವ ಸಿಕ್ಕಿರೆ ನಿಂಗಳೂ ಒಂದು ತಂದುಕೊಡ್ಳೆ ಹೇಳಿ.
ದಂಡು ಕೊರೆತ್ತದು ರಜ್ಜ ಗುರುಟಟೆ ಕೆಲಸ ಮಾಂತ್ರ. ಅಂಬೆರ್ಪಿನ ಪೇಟೆ ಪುಳ್ಯಕ್ಕೊಗೆ ಅರಡಿಯ. ಅಲ್ಲ ಅವಕ್ಕೆ ದಂಡುದೇ ಸಿಕ್ಕ ಹೇಳುವ.
ಹ್ಮ್…ನಾರು ಸರೀ ತೆಗದು ಕೊಚ್ಚೆಕ್ಕು ಅದರ.

ತಾಳ್ಳು ಮಾಡ್ಳೆ, ಕೊಚ್ಚಿದ ಬಾಗಕ್ಕೆ ಉಪ್ಪು, ಬೆಲ್ಲ, ಮೆಣಸಿನ ಹೊಡಿ, ರಜ ನೀರು ಹಾಕಿ ಬೇಶುದು. ಬೆಂದಪ್ಪಗ ಎಣ್ಣೆ ಸಜ್ಜಿಲಿ ಹಾಕಿ ಒಂದು ಒಗ್ಗರಣೆ ಕೊಟ್ಟತ್ತು. ಅಲ್ಲಿಗೆ ತಾಳ್ಳು ತಯಾರಾತು.

ಸಳ್ಳಿ ಮಾಡ್ಳೆ, ಸಣ್ಣ ಸಣ್ಣಕ್ಕೆ ಕೊಚ್ಚಿದ್ದದಕ್ಕೆ ಹಸಿಮೆಣಸು, ಶುಂಟಿ, ಮಜ್ಜಿಗೆ, ಉಪ್ಪು ಎಲ್ಲ ಹಾಕಿ ಬೆರುಸಿತ್ತು. ಮತ್ತೆ ಒಂದು ಸಣ್ಣ ಒಗ್ಗರಣೆ ಕೊಟ್ರೆ ಸಳ್ಳಿ ಆತು. ಪುಳ್ಳಕ್ಕೊಗೆಲ್ಲ ಬಾರೀ ಪ್ರೀತಿ ಈ ಸಳ್ಳಿ. ತಿಂಬಲೆ ರುಚೀ ಆವುತ್ತು. ಅದೇ ಕದೊಳಿ ಬಾಳೆದಂಡಾದರೆ ಲಾಯ್ಕಾವುತ್ತು. ಒಳುದ್ದದೂ ಆವುತ್ತು, ಆವುತ್ತಿಲ್ಲೇಳಿಲ್ಲೆ. ಕದಳಿಯಷ್ಟು ರುಚಿ ಇಲ್ಲೇಳಿ ಅಷ್ಟೆ.

ಕೊಟ್ಟಿಗೆ ಮಾಡುದು ನಾವು ಸೌತ್ತೆ ಕೊಟ್ಟಿಗೆ ಮಾಡಿದಾಂಗೆಯೇ. ಬೆಣ್ತೆಕ್ಕಿ ಹಿಟ್ಟಿಂಗೆ ಇದರ ಸಣ್ಣಕ್ಕೆ ಕೊಚ್ಚಿ ಹಾಕುದು. ಹ್ಞಾ ಹೇಳಿದಾಂಗೆ ಹಿಟ್ಟು ಕಡವಗ ಅದಕ್ಕೆ ರಜ್ಜ ಹುಳಿಯುದೇ ಒಣಗಿದ ಮೆಣಸನ್ನುದೇ ಹಾಕೆಕ್ಕು. ಕೇಬೇಜಿನ ಕೊಟ್ಟಿಗೆಯೂ ಹೀಂಗೇ ಮಾಡುದು. ಬಾಳೆದಂಡು ಕೊರವಗ ಆದಷ್ಟು ನಾರು ತೆಗೆಯೆಕ್ಕು. ಮತ್ತೆ ಆದಷ್ಟು ಸಣ್ಣಕ್ಕೆ ಕೊಚ್ಚೆಕ್ಕು. ಇಲ್ಲದ್ರೆ ಈ ಕೈರಂಗಳ ಪುಳ್ಳಿಯಾಂಗೆ ಬಾಯಿಗೆ ಕೊಚ್ಚಲು ಸಿಕ್ಕಿರೆ ಆಗದ್ದವು ತಿನ್ನಲೇ ತಿನ್ನವು.
ಹಾಂಗೆ ಹಿಟ್ಟಿನ ಹತ್ಸಿ ಕೊಟ್ಟಿಗೆ ಮಾಡಿತ್ತು.

ಉಮ್ಮಪ್ಪ..ಬಾಳೆದಂಡಿನ ಶರ್ಬತ್ತುದೇ ಮಾಡ್ಳಾವುತ್ತಡ. ಆನು ಮಾಡಿದ್ದಿಲ್ಲೆ ಇಷ್ಟ್ರೊರೆಗೆ. ಒಪ್ಪಣ್ಣನೋ, ಅಜ್ಜಕಾನ ರಾಮನೋ ಮಣ್ಣ ಇತ್ಲಾಗಿ ಬಪ್ಪೋರಿದ್ದರೆ ಒಂದರಿ ಮಾಡಿ ಕೊಡೆಕ್ಕು ಅವಕ್ಕೆ. ಹೇಂಗಾವುತ್ತೂಳಿ ಗೊಂತಾವುತ್ತನ್ನೆ… ಅಲ್ಲದೋ..

ವೈಶಾಕದ ಅಡಿಗೆಗೊ..., 4.2 out of 10 based on 5 ratings
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ. ಹಳೆಮನೆ

  ಬಾಳೆ ದಿಂಡಿನ ವರ್ಷಕ್ಕೆ ಒಂದು ಸರ್ತಿ ಆದರೂ ತಿನ್ನೆಕ್ಕು ಹೇಳಿ ಎಂಗಳ ಅಜ್ಜಿ ಹೇಳಿದ್ದು ನೆಂಪು ಆಗಿ, ಕೊಡೆಯಾಲದ ಬಾಯಮ್ಮನ ಹತ್ರಂದ ಪೈಸೆ ಕೊಟ್ಟು ತಂದದು ಇದ್ದು.
  ಬಂಡಾಡಿ ಅಜ್ಜಿ, ದಂಡಿನ ಶರ್ಬತ್ತಿನ ಪ್ರಯೋಗ ಒಪ್ಪಣ್ಣ ಇಲ್ಲದ್ದರೆ ಅಜ್ಜಕಾನ ರಾಮನ ಮೇಗೆ ಮಾಡಿಕ್ಕು ಹೇಳಿ ನಿಶ್ಚಯ ಮಾಡಿದ ಹಾಂಗೆ ಇದ್ದು. ಅವು ಎಂತ ಹೇಳ್ತವು ಹೇಳಿ ನೋಡುವ !!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿಪೆಂಗಣ್ಣ°ಜಯಶ್ರೀ ನೀರಮೂಲೆದೀಪಿಕಾಕೇಜಿಮಾವ°ಶಾ...ರೀಶ್ಯಾಮಣ್ಣಗಣೇಶ ಮಾವ°ಅನಿತಾ ನರೇಶ್, ಮಂಚಿಅನು ಉಡುಪುಮೂಲೆಮಾಲಕ್ಕ°ಬಂಡಾಡಿ ಅಜ್ಜಿvreddhiನೀರ್ಕಜೆ ಮಹೇಶವಿನಯ ಶಂಕರ, ಚೆಕ್ಕೆಮನೆಪವನಜಮಾವವಿದ್ವಾನಣ್ಣದೊಡ್ಡಮಾವ°ವಿಜಯತ್ತೆಕಾವಿನಮೂಲೆ ಮಾಣಿಪುತ್ತೂರಿನ ಪುಟ್ಟಕ್ಕಯೇನಂಕೂಡ್ಳು ಅಣ್ಣಶ್ರೀಅಕ್ಕ°ವೆಂಕಟ್ ಕೋಟೂರುದೊಡ್ಡಭಾವಪೆರ್ಲದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ