ಹಸಿಮೆಣಸಿನ ಒಡೆ…

February 27, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ರಾಮ ರಾಮಾ… ಉದ್ದಿಂಗೆ ಎಂತಾ ರೇಟಪ್ಪಾ… ವಿಪರೀತ ಏರಿದ್ದು. ಮೊನ್ನೆ ಬಾಳುಕ ಮಾಡಿಯಪ್ಪಾಗ ಮೆಣಸಿನ ಒಡೆಯನ್ನುದೇ ಮಾಡುವೋಳಿ ಕಂಡತ್ತು. ಅದಕ್ಕೆ ಉದ್ದು ಬೇಕಿದಾ. ಹಾಂಗೆ ‘ಕೊಡೆಯಾಲಕ್ಕೆ ಹೋಪಲಿದ್ದರೆ ರೆಜ ಉದ್ದು ತಂದಿಕ್ಕು’ ಹೇಳಿದೆ ಒಪ್ಪಣ್ಣನ ಹತ್ತರೆ. ಅವ° ಹೋಗಿ ಒಪಾಸು ಬಂದೋನು ‘ಇನ್ನು ಉದ್ದಿಂದೆಲ್ಲ ಎಂತ ಮಾಡುವಾಂಗಿಲ್ಲೆಜ್ಜಿ. ನವಗೆ ಅಸಲಾಗ…’ ಹೇಳಿದ°. ಎಡಿಯಪ್ಪ, ಹೀಂಗೇ ಆದರೆ ಎಂತರ ಮಾಡುದು…

ಹ್ಮ್… ತಂದದಕ್ಕೆ ಒಂದರಿ ಒಡೆ ಮಾಡಿಕ್ಕುವೋಳಿ ಹೆರಟೆ. ಬಾಳುಕ ಎಲ್ಲ ಒಣಗಿ, ಕೀಜಿ ಕರಡಿಗೆಲಿ ತುಂಬಿ ಜೆಂಗ ಸೇರಿದ್ದು. ಅದರೊಟ್ಟಿಂಗೆ ಇದುದೇ ಇದ್ದರೆ ಲಾಯ್ಕಾವುತ್ತು. ಕಾರ ಜಾಸ್ತಿ ಬೇಕಪ್ಪವಕ್ಕೆ ಬಾರೀ ಪ್ರೀತಿ ಇದು. ಇದರ ಮಾಡ್ಳೆ, ಹಿಂದಾಣ ದಿನ ಒಂದು ಗ್ಲಾಸು ಉದ್ದು ಬೊದುಲುಲೆ ಹಾಕೆಕ್ಕು. ಮರದಿನ ಉದಿಯಪ್ಪಗ ಅದರ ಚೆಂದಕ್ಕೆ ಕಡವದು. ಅದಕ್ಕೆ ಮದಲು, ಒಂಡು ಎಂಟು-ಹತ್ತು ಹಸಿಮೆಣಸಿನ ಸಣ್ಣ ಸಣ್ಣಕ್ಕೆ ಕೊರದು ಮಡಿಕ್ಕೊಳೇಕು. ಉದ್ದು ಪೂರ್ತಿ ನೊಂಪಾಯೆಕಾರೆ ಮೊದಲು, ಈ ಕೊರದ ಮೆಣಸಿನ ಸೇರ್ಸೆಕು ಅದಕ್ಕೆ. ಅದರ ರಜ ಕೊಜಕ್ಕು ಮಾಡಿ ತೆಗದತ್ತು. ಮತ್ತೆ ತೋಟಂದ ಏವದಾರು ಒಡ್ತ ಬಾಳೆಲೆಯ ತಂದು, ಲಾಯ್ಕಲ್ಲಿ ಉದ್ದಿ ಅದರಲ್ಲಿ ಒಡೆಯ ಹಾಂಗೆ ಹತ್ಸುದು. ಬಾಳೆಲೆ ತಪ್ಪದು ಹೇಳೊಗ ಎನಗೆ ಆ ಕೆಲಸಕ್ಕೆ ಬತ್ತ ಆಳುಗಳ ನೆಂಪಾವುತ್ತು. ಊಟಕ್ಕೆ ಅವ್ವೇ ಹೋಗಿ ತೋಟಂದ ಬಾಳೆಲೆ ಕೊಯ್ಕೊಂಡು ಬಪ್ಪದು. ಅಲ್ಲ ಅವಕ್ಕೆ ಅಷ್ಟೂ ಗೊಂತಾವುತ್ತಿಲ್ಲೆಯೊ ಎಂತದೊ ಎನಗರಡಿತ್ತಿಲ್ಲೆ… ಸಣ್ಣ ಸಣ್ಣ ಸೆಸಿಂದ ಎಳತ್ತೆಳತ್ತು ಬಾಳೆ ಕಡುದು ತಪ್ಪದೂಳಿ. ತಿರಿಂದಲೇ ಕಡಿವದು. ತೋಟಲ್ಲಿ ಅಷ್ಟು ಒಡ್ತ ಬಾಳೆಗೊ ಇರ್ತು. ಅದರಿಂದ ತಪ್ಪಲಾಗದೋ. ಪಿಸುರು ಬತ್ತು. ಪರಂಚಿರೆ ಆರು ಕೇಳ್ತ° ಬೇಕೆ. ಒಂದರಿ ಹೇಳಿದ್ದದು ಒಂದರಿಯಂಗೇ. ಇನ್ನೊಂದರಿ ಬಪ್ಪಾಗ ಪುನಾ ಅದೇ ಕತೆ ಅವರದ್ದು.

ಹ್ಮ್…ಬೆಶಿಲು ಕಾವಲಪ್ಪಾಗ ಈ ಒಡೆಗೆ ಕಡದು, ಹತ್ಸಿ ಆವುತ್ತು. ಆವಗಳೇ ಒಣಗುಲೆ ಮಡಗಿತ್ತು. ಲಾಯ್ಕ ಒಣಗಿದ ಮತ್ತೆ ತೆಗದು ಮಡಗಿ, ಬೇಕಪ್ಪಾಗ ಹೊರುಕ್ಕೊಂಡು ಅಶನಕ್ಕೆ ಕೂಡಿ ಉಂಡತ್ತು. ಕೆಲಾವು ಮೆಣಸುಗೊ ವಿಪರೀತ ಕಾರ ಇರ್ತು. ಅದು ಕೊರವಗ ಅಂದಾಜಿ ಆವುತ್ತು, ಅದರ ಪರಿಮ್ಮಳ ಕೇಳುವಾಗಳೇ. ತುಂಬ ಕಾರ ಇಕ್ಕೂಳಿ ಅನಿಸಿರೆ, ಒಂದೆರಡು ಮೆಣಸು ಕಮ್ಮಿ ಹಾಕಲಕ್ಕು.

ಹ್ಞಾ ಅದಕ್ಕೆ ಉಪ್ಪಾಕಲೆ ಮರದಿಕ್ಕೆಡಿ ಆತೊ. ಒಂದರಿ ಹಾಂಗೇ ಆಯಿದು ಎನಗೆ. ಬಾರೀ ಲಾಯ್ಕಿನ ಹಸಿ ಮೆಣಸು ಸಿಕ್ಕಿತ್ತಿದು. ಒಳ್ಳೆತ ಬೆಶಿಲುದೇ ಇತ್ತು. ನಾಕು ದಿನ ಕಳುದು ಏನಂಕೂಡ್ಳು ಮಾಣಿಯುದೇ ಬಪ್ಪೋನಿತ್ತಿದ. ಅವಂಗೆ ಬಾರೀ ಪ್ರೀತಿ ಇದು ಹೇಳಿ ರೆಜ ಮಾಡಿಮಡುಗುವೋಳಿ ಹೆರಟೆ. ಚೆಂದಲ್ಲಿ ಕಡದು, ಹತ್ಸಿ, ಒಣಗುಸಿ, ಅವಂಗೆ ಕೊಟ್ಟೂ ಆತು. ಆನು ಹೊರುದು ನೋಡಿತ್ತಿಲ್ಲೆ. ಹೊರುದರೆ ತಿಂದು ಹೋವುತ್ತು, ಆರೋಗ್ಯಕ್ಕೆ ಆವುತ್ತಿಲ್ಲೆ ಇದಾ..ಹಾಂಗೆ. ಮಾಡಿದ್ದದರ ಪೂರ ಕೊಟ್ಟೆ ಅವಂಗೆ. ಬಾರೀ ಲಾಯ್ಕು ಮಾಡಿದ್ದೇಳಿ ಲೆಕ್ಕ ಎನ್ನದು. ಆದರೆ ಅಜ್ಜಕಾನ ರಾಮ ಅವನಲ್ಲಿಗೆ ಹೋಗಿ ಬಂದೋನು- ‘ ಎಂತಜ್ಜಿ…ಮನೆಲಿ ಉಪ್ಪು ಮುಗುದ್ದೋ… ಯೇನಂಕೂಡ್ಳು ಬಾವ ಕೇಳ್ಳೇಳಿದ..’ – ಹೇಳಿಯಪ್ಪಾಗ ಅಜ್ಜಿಗೆ ನಾಚಿಕೆ ಆಗಿ ಏನಿಲ್ಲೆ. ಎಂತರ ಮಾಡುದು…ಪ್ರಾಯದ ಗುಣ. ಈ ಮರವದಕ್ಕೆ ಮದ್ದಿದ್ದೋ…

ಈಗ ಒಳ್ಳೆತ ಬೆಶಿಲಿದ್ದು. ಮನೆಲಿ ಉದ್ದು ತಂದದಿದ್ದರೆ ನಾಕು ವೊಡೆ ಮಾಡಿ ಮಡಗಿ. ಟೊಮೆಟ ಸಾರಿಂಗೆ, ಪುನರ್ಪುಳಿ ಸಾರಿಂಗೆ ಎಲ್ಲ ಕೂಡಿ ಉಂಬಲೆ ರುಚೀ ಆವುತ್ತು. ಬೇಕಾರೆ ಆನು ಮಾಡಿ ಮಡಗಿದ್ದದೂ ಇದ್ದು ಆತೊ. ಆನು ಹೊರಿವಲಿಲ್ಲೆ ಹೇಂಗೂ… ಈ ಸರ್ತಿ ಉಪ್ಪಾಕಲೆ ಮರದ್ದಿಲ್ಲೆ ಆತೊ… ಉಮ್ಮ ಇನ್ನು ಎರಡೆರಡು ಸರ್ತಿ ಹಾಕಿದ್ದನೋ ಗೊಂತಿಲ್ಲೆ… ಆರಾರು ಹೊರುದು ತಿಂದ ಮತ್ತೆ ಗೊಂತಾಯೆಕಷ್ಟೆ….

ಹಸಿಮೆಣಸಿನ ಒಡೆ..., 5.0 out of 10 based on 4 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಅಜ್ಜಕಾನ ರಾಮ

  ಅಜ್ಜಿ, ರುಚಿ ನೋಡದ್ದೆ ಆರಿಗೂ ಎಂತದೂ ಕೊಡ ಹೇಳಿ ಕೈರಂಗಳ ಕೂಸು ಹೇಳಿಯೊಂಡಿತ್ತು.
  ಯೆನಂಕೋಡ್ಲು ಅಣ್ಣಂಗೆ ಉಪ್ಪು ಕಡಮ್ಮೆ ಆದರೆ ತಲೆಬೆಶಿ ಇತ್ತಿಲ್ಲ, ಅವ ಅದರ ಶೇಡಿಗುಮ್ಮೆ ಬಾವಂಗು ಕೊಟ್ಟಿದ್ದನಡ. ಶೇಡಿಗುಮ್ಮೆ ಬಾವ ಅದರ ತಿಂದು ಹೊಗೆತ್ತ ತಡಿವಲೆ ಆಗದ್ದೆ ಬಿ.ಪಿ ಹೆಚ್ಚಾಗಿ ನಾಕು ಗಂಟೆ ಕೆರೆಲಿ ಕೂಯಿದನಡ. ಮೊನ್ನೆ ಒಪ್ಪಣ್ಣಂಗೆ ಕೊಡೆಯಾಲಲ್ಲಿ ಸಿಕ್ಕಿ ಈ ಕತೆ ಹೇಳುತ್ತ ನಾಕು ತುಂಡು ಬಚ್ಚಂಗಾಯಿ ತಿಂದಿನಡ..

  [Reply]

  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  ಬೇರೆ ಎಲ್ಲ ಆದರೆ ಹಾಂಗೆಯೇ ಮಾಡುದು… ಆದರೆ ಈ ಕಾರದ್ದದರ ಎಲ್ಲ ಈಗಈಗ ರುಚಿ ನೋಡ್ಳೂ ಹೋಪಲಿಲ್ಲೆ. ತಿಂದರೆ ಆವುತ್ತಿಲ್ಲೆ ಇದಾ.. ಎಂತರ ಮಾಡುದು…
  ಓ! ಅಪ್ಪೋ.. ಒಪ್ಪಣ್ಣ ಎಂತೂ ಹೇಳಿದ್ದಾಯಿಲ್ಲೆ…

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಅದಾ, ಪುನಾ ಒಪ್ಪಣ್ಣನ ತಲಗೆ ಹಾಕುದು!!
  ಆನು ಮೊನ್ನೆ ಹೇಳಿದ್ದಲ್ಲದಾ ಅಜ್ಜಿ – ಮೂರುಮೂರು ಸರ್ತಿ!
  ನಿಂಗೊಗೆ ಮರದರೆ ಆನೆಂತ ಮಾಡುದು!

  ಚೆ, ಉರಗೆ ತಂಬುಳಿ ಮಾಡಿರೆ ಸರೀ ಅಕ್ಕೋ ಏನೋ!! [;)]

  [Reply]

  VA:F [1.9.22_1171]
  Rating: 0 (from 0 votes)
 2. uppu hakade iddaru ruchi avuttille……..

  Uppu hakakkare raja gamana irakku alda?

  [Reply]

  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  ಓ ಇದಾರು… ನಡಳ್ಳಿ ಸುಮನೋ…
  ಹೇಂಗಿದ್ದೆ..ಸೌಕ್ಯವೋ….
  ಅಪ್ಪಪ್ಪಾ…ಉಪ್ಪಾಕುದರಲ್ಲೇ ಇಪ್ಪದು ಅಡಿಗೆಯ ರುಚಿ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣಎರುಂಬು ಅಪ್ಪಚ್ಚಿವೇಣಿಯಕ್ಕ°ಬೊಳುಂಬು ಮಾವ°ಸರ್ಪಮಲೆ ಮಾವ°ವಿದ್ವಾನಣ್ಣಕಾವಿನಮೂಲೆ ಮಾಣಿಅಕ್ಷರ°ಶಾ...ರೀಪೆಂಗಣ್ಣ°ಗೋಪಾಲಣ್ಣಪವನಜಮಾವಬಟ್ಟಮಾವ°vreddhiಶ್ರೀಅಕ್ಕ°ಸುಭಗಚೆನ್ನೈ ಬಾವ°ದೊಡ್ಡಮಾವ°ಪುತ್ತೂರುಬಾವಶೀಲಾಲಕ್ಷ್ಮೀ ಕಾಸರಗೋಡುಅಜ್ಜಕಾನ ಭಾವವಸಂತರಾಜ್ ಹಳೆಮನೆಕೊಳಚ್ಚಿಪ್ಪು ಬಾವಚೆನ್ನಬೆಟ್ಟಣ್ಣಅಡ್ಕತ್ತಿಮಾರುಮಾವ°ಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ