ಬೈಲಿಂಗೆ ಲಾಗ ಹಾಕಲೆ

ಎನ್ನ ನೆಂಪು ಮಡಿಕ್ಕೊ

ಗುಟ್ಟುಶಬ್ದ ಮರದತ್ತೋ!

ಚೋಲು - ಡಬ್ಬಲ್ ಚೋಲು

ಹಳತ್ತಿಂಗೆ ಮಡಗಿದ್ದು:

ಮಿಂಚಂಚೆಗೆ ಶುದ್ದಿ ಬರೆಕ್ಕೋ?

ನೀರ್ಪುಂಡಿ - ನೀರುಂಡೆ.., 4.8 out of 5 based on 5 ratings

ಬೆಶಿ ಬೆಶಿ ಒಪ್ಪಂಗೊ..

  • raghumuliya: ಕೊಚ್ಚಿಸಳ್ಳಿ,ಪಾಯಸ,ಸುಟ್ಟವು,ಸಾಸಮೆ …ಆಹಾ..ಬಾಯಿಲಿ ನೀರು ಅರಿತ್ತು.. ಅಜ್ಜಿ,ಬಂಡಾಡಿಂದ...
  • sreedhara h.g.: ಒಪ್ಪಣ್ಣ ನಿನ್ನ ಬ್ಲಾಗ್ ನೋಡಿ ಖುಷಿ ಆತು. ಎಂಗಳ ಮಾಣಿ ಈ ನಮೂನೆ ಬರೆತ್ತ ಹೇಳಿ ಸಂತೋಷ ಆತು.....
  • ನೆಗೆಗಾರ°: { ಆಟ ಉದಿವರೆಗೆ ಅಕ್ಕನ್ನೇ..} ಅಪ್ಪೋ! ಚೆನ್ನಬೆಟ್ಟಣ್ಣನತ್ರೆ ಕೇಳೆಕ್ಕಷ್ಟೆ!! ;-)
  • raghumuliya: But-True ಓ ಹೀಂಗೂ ಒಂದು ಅರ್ಥ ಇದ್ದೋ? ಆನು ಬಟ್ ಇಂದ ಟುರೂ ಹೇಳಿ ಶಬ್ದ ಬಪ್ಪೊದಕ್ಕೆ ಬಟ್ರು...
  • raghumuliya: ಈ ಡೇ ಯ ಆಚರಣೆಗೆ ಆರದ್ದೂ ಆಕ್ಷೇಪ ಇರ . ತನ್ನ ಜೀವನವ ಗಂಧದ ಕೊರಡಿನ ಹಾಂಗೆ ತೇದು, ಸುತ್ತಲೂ...
  • ಚುಬ್ಬಣ್ಣ: :P :D
  • raghumuliya: ದಾಗುಟ್ರಕ್ಕಾ..ಒಳ್ಳೆ ಲೇಖನ. ಇಪ್ಪತ್ತು ವರುಷದ ಮೇಗಾಣ ಮಕ್ಕಳ(?)ಸಮಸ್ಯೆ ಗೊಂತಿದ್ದೋ? ಅವಕ್ಕೆ...
  • ಇಮ್ಮಡಿ ಬಟ್ಯೆ: ಎಂಕುಳು ಹಳ್ಳಿಟ್ ಬೆನ್ಪುನೆಡ್ದ್ ನಿಕುಲು ಪೇಂತೆದಾಕುಲು ತಿನ್ಯೆರೆ ಆಪುಂಡು. { … }....
  • ಡಾ.ತಿರುಮಲ ಪ್ರಸಾದ: ಈಗೀಗ ನಮ್ಮ ಪ್ರಾಮುಖ್ಯತಗೊ ಹೇಂಗೆ ಬದಲಾವುತ್ತಾ ಇದ್ದು ಹೇಳುದರ ತುಂಬಾ ಲಾಯಿಕಿಲಿ ಹೇಳಿದ್ದ...
  • raghumuliya: ಆನು ಮದುವೆ ದಿನವೇ ಎಂಗಳ ಮನಗೆತ್ತಿದ್ದು.ಸಟ್ಟುಮುಡಿ ದಿನ ಉದೆಕಾಲಕ್ಕೆ ಹೋದ್ದು..
  • raghumuliya: ಒಂದೇ ಆಟಲ್ಲಿ ಇಷ್ಟು ಮಾತಾಡಿದರೆ ಉದಿವರೆಗೆ ಅಕ್ಕನ್ನೇ?ಈಗ ಇರುಳಿಡೀ ಆಟ ಮಾಡಿರೆ ನೋಡುಲೆ ವೇಷ...
  • ಆದರ್ಶ: {ಮವುನಮ್ ಸಮ್ಮತಿ ಲಕ್ಷಣಮ್ – ಅಡ,} ಓ ಮಾರಾಯ, ಅದು ವಧುಪರೀಕ್ಷೆ ಆದ ಮತ್ತೆ ಕೂಸಿಂಗೆ ಮಾಣಿ ಇಷ್ಟ ಆತಾ...
  • raghumuliya: ರ೦ಭೇ… ಊರ್ವಶಿ… ತಿಲೋತ್ತಮೆ…. ಎಲ್ಲಾ ಬೆಂಗಳೂರಿಲಿ ಹತ್ತಿದವು,ಗೊರಕೆ ಶಬ್ದ ತಡವಲೆಡಿಯದ್ದೆ ಹಾರಿ...
  • raghumuliya: ಚೆಂದದ ಪಟನ್ಗೋ.ಗೆಣವತಿ ಹೋಮದ ಹೊಗೆ ಆಡೊದರ ನೋಡೋದೇ ಚೆಂದ.ಮೋಡದ ನರ್ತನವೂ ಅದ್ಭುತ.ಆಕಾಶಕ್ಕೆ ಎಂಚು...
  • raghumuliya: ಚೆಂದದ ಪಟ೦ಗೋ. ಆ ವಿಮಾನಂಗೋ ರೇಸು ಮಾಡಿದ್ದೆಂತಗೆ?ಏವದಾರು ಕಟ್ಟೋಣ ಹೊಡಿ ತೆಗವಲೆಯೋ?? ಒಂದರಿ...
  • Y V Bhat: Oppanna, Baraddadu layakkaidu.Kalaya tasmai namaha. Indu oorillappa hange onduvare...
  • Krishnamohana Bhat: iraavathada kate keliyappaga enagu ondari hindana prayaanada...
  • Krishnamohana Bhat: batta mavange sastanga pranama madidde allindale ondu aashirvaada...
  • Krishnamohana Bhat: ayyayayyo ee nagarabethavu eddo.ambaga englishu kalitha aalochaneye...
  • ಗಣೇಶ ಮಾವ°: ಇವರನ್ನೂ ಶಿಕ್ಷಕರ ದಿನ ವಂದನೆ ಮಾಡ್ಲೆ ಅಕ್ಕಲ್ದಾ? ಸಣ್ಣ ಪ್ರಾಯಲ್ಲಿ ಬೆಳೆಶಿ ಪ್ರತಿಯೊಂದನ್ನೂ ಹೇಳಿ...
  • ಗಣೇಶ ಮಾವ°: ನಮ್ಮ ಜೀವನಲ್ಲಿ ಶಿಕ್ಷಣ ಹೇಳುದು ಬರೇ ಶಾಲೆಲಿ ಮಾತ್ರ ಅಲ್ಲ.. ಈ ಜೀವನವೇ ಒಂದು ಪಾಠಶಾಲೆ ಇದ್ದ...
  • ಗಣೇಶ ಮಾವ°: ತಿಳುವಳಿಕೆಗೆ ಒಂದು ಹೆದ್ದಾರಿಯಾಗಿ ಇಪ್ಪಂತಹ ಶಿಕ್ಷಣ ಪಾಠ ಕಲಿವದರ್ಲಿ , ಕಲಿಸಿಕೊಡುವದರ್ಲಿ...
  • ಶರ್ಮಪ್ಪಚ್ಚಿ: ಧನ್ಯವಾದ ಗುರಿಕ್ಕಾರ್ರೇ. ಪೋಸ್ಟ್ ಮಾಡಿ ಅಪ್ಪಗ ಎಂತಾರೂ ತಪ್ಪು ಹೇಳಿ ಕಂಡರೆ ಸರಿಪಡುಸಲೆ ಒಂದು...
  • ನೆಗೆಗಾರ°: { pakkasina edeliyo devarakoneliyo huggusi madagire aanu englishu kalivale battadu }...
  • ಗುರಿಕ್ಕಾರ°: ಶರ್ಮಪ್ಪಚ್ಚಿಗೆ ನಮಸ್ಕಾರ ಇದ್ದು. ಅತ್ಯಪೂರ್ವ ಸಲಹೆ ಒಂದರ ಕಂಡು ತುಂಬಾ ಕೊಶಿ ಆತು, ಬೈಲಿನ...
  • ಒಪ್ಪಣ್ಣ: ಕಾಂತಣ್ಣಾ.. ಸತ್ಯವಾದ ಮಾತು..! ಮಸಣಕ್ಕೆ ಹತ್ತರೆ ಅಪ್ಪ ವಿಚಾರಕ್ಕೆ ಸಂತೋಷದ ಆಚರಣೆ ಎಂತಕೆ?...
  • ಒಪ್ಪಣ್ಣ: ಮಾವಾ°.. ಪ್ಲೇಷ್ಟಿಕಿನ ತೊಂದರೆಗಳ ವಾಕ್ಯ ವಾಕ್ಯಲ್ಲಿ ಸೇರುಸೆಂಡು, ಚೆಂದಕೆ ವಿವರುಸಿದ್ದಿ....
  • ಬೆಣಚ್ಚಿಪ್ಪಲ್ಲಿ ಹುಡ್ಕಲೆ

    ನೀರ್ಪುಂಡಿ – ನೀರುಂಡೆ..

    March 6, 2010 ರ 12:00 pmಗೆ ನಮ್ಮ ಬಂಡಾಡಿ ಅಜ್ಜಿ ಬರದ್ದು, ಇದುವರೆಗೆ 16 ಒಪ್ಪಂಗೊ.

    ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

    ಎಲ್ಲಿಗಾದರೂ ನೆಂಟ್ರು ಕಟ್ಟುಲೋ ಮಣ್ಣ ಇದ್ದರೆ ಆ ದಿನ ಕಾಪಿಗೆ ಉಂಡೆ ಮಾಡುದೂಳಿಯೇ ಲೆಕ್ಕ. ಮಾಡ್ಳೆ ಸುಲಾಬ ಇದಾ. ಆದರೆ ಹಿಟ್ಟು ಕಾಸುದು ಒಂದು ಮಾಂತ್ರ ರೆಜಾ ಬಂಙದ ಕೆಲಸ ಅಜ್ಜಿಗೆ. ಹಿಟ್ಟಿನ ಮೊಗಚ್ಚಲೆ ಎಡಿತ್ತಿಲ್ಲೆ, ಈ ಕೈ ಬೇನೆಲಿ. ಹಾಂಗೆ ಒಪ್ಪಣ್ಣನೋ, ಅಜ್ಜಕಾನ ರಾಮನೋ ಬಂದಿದ್ದರೆ ಅವರತ್ತರೆ ಒಂದರಿ ಕಾಸುಲೆ ಹೇಳುದು. ಮನೆಲಿ ಅಮ್ಮನತ್ತರೆ ಪರಂಚಿರೂ, ಅಜ್ಜಿ ಹೇಳ್ಯಪ್ಪಗ ಮಾಡ್ತಿಲ್ಲೇಳಿ ಹೇಳ್ತವಿಲ್ಲೆಪ್ಪ.

    ಹಾಂಗೆ ಅಂಬೆರ್ಪಿಂಗೆ ಹೆರಡ್ಳೆ ಎಲ್ಲ ಇಪ್ಪಾಗ ಹೆಚ್ಚಿನ ಕಡೆಲಿ ಕಾಪಿಗೆ ಉಂಡೆ ಮಾಡುದು ಅಲ್ಲದೋ. ಕಾಸಲೆ ಬಂಙ ಅಪ್ಪ ಕಾರಣ ಅಜ್ಜಿದು ಇನ್ನೊಂದು ತಿಂಡಿ ಇದ್ದು. ಎಂತರ ಹೇಳಿರೆ, ನೀರ್ಪುಂಡಿ ಅತವಾ ನೀರುಂಡೆ (ನೀರು ಉಂಡೆ). ನಿಂಗೊಗೆ ತಿಂದು ಗೊಂತಿದ್ದೋ.. ಈಗ ಇದರ ಮಾಡೊದು ಕಮ್ಮಿ ಆಯಿದು ಮಾಂತ್ರ.

    ಮಾಡುದು ಹೇಂಗೇಳಿರೆ, ಅಕ್ಕಿಯ ಗಟ್ಟಿಗೆ ಕಡೆಯೆಕ್ಕು. ಉಂಡಗೆ ಕಡದಾಂಗಲ್ಲ, ಅದರ್ಲಿ ಕಾಸುಲಿದ್ದನ್ನೆ. ಇದರಲ್ಲಿ ಇಲ್ಲೆ. ಬೆಶಿನೀರ ಕೊಟ್ಟಿಗೆಗೆಲ್ಲ ಕಡೆತ್ತಲ್ಲದೋ. ಹಾಂಗೆ ಕಡದು ಮಡುಗೆಕ್ಕು. ಉದಿಯಪ್ಪಗ ಒಂದು ಪಾತ್ರಲ್ಲಿ ಒಂದ್ರಜ ನೀರು ಕೊದಿವಲೆ ಮಡುಗೆಕ್ಕು (ಉಂಡೆ ಮುಳುಗುತ್ತಷ್ಟು..ಅದರಿಂದ ರಜ್ಜ ಜಾಸ್ತಿಯೇ ಮಡಗಲಕ್ಕು). ಕೊದಿವಲೆ ಸುರು ಅಪ್ಪಾಗ ಈ ಹಿಟ್ಟಿನ ಉಂಡೆ ಮಾಡಿ ಮಾಡಿ ಅದಕ್ಕೆ ಹಾಕೆಕ್ಕು. ಸರೀ ಕೊದಿಯೆಕ್ಕು ಅದು. ರಜ ಬೇವನ್ನಾರ ಸೌಟು ಹಾಕಲಾಗ ಆತೊ. ಒಡೆತ್ತು ಉಂಡೆ. ರಜ ಹೊತ್ತಪ್ಪಗ ಸೌಟು ಹಾಕಿ ತೊಳಸಿತ್ತು ಒಂದರಿ. ಸರೀ ಬೆಂದಪ್ಪಗ ಇಳುಗಿತ್ತು. ಅದರ ಮತ್ತೆ ಆ ತೆಳಿಯ ಒಟ್ಟಿಂಗೇ ಸೇರುಸಿ ತಿಂಬದು. ಭಾರೀ ಲಾಯ್ಕಾವುತ್ತು. ಮೇಲಾರವೊ ಮಣ್ಣ ಇದ್ದರೆ ಅದರ ಎಸರು ಸೇರುಸಿ ತಿಂಬಲೂ ಲಾಯ್ಕಾವುತ್ತು. ಇಲ್ಲದ್ರೆ, ಕಾರ ಬೇಕಾರೆ ಉಪ್ಪಿನಕಾಯಿ ಎಸರು ಹಾಯ್ಕೊಂಡು ತಿಂಬಲಕ್ಕು. ಮೊಸರು ಹಾಕಿಯೂ ತಿಂಬಲಕ್ಕು.

    ಆನು ಮಾಡದ್ದೆ ಸುಮಾರು ದಿನ ಆತು ಮಾಂತ್ರ. ಓ ಮೊನ್ನೆ ಕೈರಂಗಳ ಅಕ್ಕನತ್ತರೆ ಕಾಪಿಗೆಂತರಾಳಿ ಕೇಳಿಯಪ್ಪಗ ನೀರ್ಪುಂಡಿ ಹೇಳಿತ್ತು. ಅಂಬಗ ನೆಂಪಾತಿದ. ಬೈಲಿನವಕ್ಕೆಲ್ಲ ಇದರ ಬಗ್ಗೆ ಹೇಳೆಕ್ಕೂಳಿ ಕಂಡತ್ತು. ಹಾಂಗೆ ಹೇಳ್ತಾ ಇದ್ದೆ ಇದ.
    ಎನಗೆ ನಾಕು ದಿನಂದ ವಿಪರೀತ ಬೆನ್ನುಬೇನೆ. ಕಡಂಜದೆಣ್ಣೆಲಿ ಕಮ್ಮಿ ಆವುತ್ತಿಲ್ಲೆಯೋಳಿ.. ಕಿದೂರು ಮಾಣಿಯತ್ತರೆ ಕೇಳೆಕೊ ಕಡೆಗೆ… ಉಮ್ಮ ಎಂತದೊ ಗೊಂತಿಲ್ಲೆ..
    ತುಂಬ ಹೊತ್ತು ಕೂಪಲೆ ಬಂಙ ಆವುತ್ತು. ನಾಳ್ತು ಕಾಂಬ ಆತೊ…
    ನೀರ್ಪುಂಡಿ ಮಾಡಿ ನೋಡಿ, ತಿಂದು ಹೇಳಿಕ್ಕಿ. ರುಚಿ ನೋಡ್ಳೆ ಅಜ್ಜಿಗೂ ತಂದುಕೊಡಿ ಆತೊ….

    ನೀರ್ಪುಂಡಿ - ನೀರುಂಡೆ.., 4.8 out of 5 based on 5 ratings

    ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

    VN:F [1.9.3_1094]
    ರೇಟೆಷ್ಟು :
    Rating: 4.8/5 (5 votes cast)

    ನೀರ್ಪುಂಡಿ – ನೀರುಂಡೆ.. - ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

    1. ಅಜ್ಜಕಾನ ರಾಮ

      )

      ಅಜ್ಜಿಗೆ ಕೈಬೇನೆ, ಬೆನ್ನು ಬೇನೆ ಕಮ್ಮಿಯೆ ಅವುತ್ತಿಲ್ಲೆ ಹೇಳಿ ಕಾಣುತ್ತು.. ಶೇಡಿಗುಮ್ಮೆ ಇಂದಿರತ್ತೆಯತ್ರ ಹೇಳಿ ಮಜಲ್ಕರೆಗೆ ಕರ್ಕೊಂಡು ಹೋಪ ವ್ಯವಸ್ಥೆ ಮಾಡೆಕ್ಕೋ ಕಾಣ್ತು..

      [ಉತ್ತರುಸಿ]

      ಬಂಡಾಡಿ ಅಜ್ಜಿ

      ಬಂಡಾಡಿ ಅಜ್ಜಿ ಉತ್ತರ ಕೊಟ್ಟದು:

      VN:F [1.9.3_1094]
      Rating: 0 (from 0 votes)

      ಅಲ್ಲಿಗೆ ಹೋಗಿ ಆಯಿದಪ್ಪಾ… ಪ್ರಾಯ ಆದ ಮತ್ತೆ ಹೀಂಗೇ ಅಲ್ಲದೋ.. ಒಂದಲ್ಲದ್ದರೆ ಒಂದು ಮುಗಿವಲಿಲ್ಲೆ… ಎಂತರ ಮಾಡುದು…

      [ಉತ್ತರುಸಿ]

    2. ಕೆದೂರುಡಾಕ್ಟ್ರು
      ಕೆದೂರು ಡಾಕ್ಟ್ರುಬಾವ°

      )

      ಅಜ್ಜೀ, ನೀರು೦ಡೆ ಮಾಡುದರ ಓದಿಯಪ್ಪಗ ಬಾಯಿಲಿ ನೀರು ಬ೦ತು.
      ಒ೦ದೆರಡು ಉ೦ಡೆ ಸೇ೦ಪುಲು ನೋಡ್ಲೆ ಇತ್ಲಾಗಿ ಕಳುಸಿರೆ ಬೆನ್ನು ಬೇನೆಗೆ ಇಪ್ಪ ಮದ್ದು ಹೇಳುವ°…

      [ಉತ್ತರುಸಿ]

      ಬಂಡಾಡಿ ಅಜ್ಜಿ

      ಬಂಡಾಡಿ ಅಜ್ಜಿ ಉತ್ತರ ಕೊಟ್ಟದು:

      VN:F [1.9.3_1094]
      Rating: 0 (from 0 votes)

      ಮದ್ದು ಹೇಳದ್ರೂ ತೊಂದರಿಲ್ಲೆಪ್ಪ… ನೀರುಂಡೆ ಮಾಡಿಕೊಡುವೊ..

      [ಉತ್ತರುಸಿ]

    3. ಸನತ್
      ಕೊಳಚ್ಚಿಪ್ಪು ಬಾವ

      )

      ಎಂಗೊಗೆ ಸೇಂಪುಲು ನೋಡ್ಲೆ ಹೇಳಿ ಒಪ್ಪಣ್ಣನ ಹತ್ರ ಕೊಟ್ಟು ..ಎಲ್ಲರಿಂಗು ಹಂಚು ಹೇಳಿರೆ ಎಂಗೊಗೆ ತಿಂಡಿ ಸಿಕ್ಕ. ಅವನೇ ಎಲ್ಲ ತಿಂದು ಮುಗುಶಿರೆ ಕಷ್ಟ.

      [ಉತ್ತರುಸಿ]

      ಒಪ್ಪಣ್ಣ

      ಒಪ್ಪಣ್ಣ ಉತ್ತರ ಕೊಟ್ಟದು:

      ಏ ಬಾವ..
      ಇದಾ, ಮೊದಲೇ ಬಂಡಾಡಿ ಅಜ್ಜಿ ಎನ್ನ ಕೈಲಿ ಕೊಡ್ಳೆ ಹಿಂದೆಮುಂದೆ ನೋಡ್ತು.
      ಇನ್ನು ನೀನು ಹೀಂಗೆಲ್ಲ ಹೇಳಿ ಕೆಮಿಗೆ ಗಾಳಿ ಹಾಕಿರೆ ಕೊಡ್ಳೇ ಕೊಡ.!
      ನೀನು ಬಾರಿ ಹಂಚುತ್ತೆ ಆಯಿಕ್ಕು – ಮೊನ್ನೆ ಕಲ್ಮಡ್ಕ ಅತ್ತೆ ಕೊಟ್ಟ ನೇರಳೆಹಣ್ಣಿನ ನೀನೊಬ್ಬನೇ ತಿಂದು ಮುಗುಶಿದ್ದು ಬೈಲಿನವಕ್ಕೆ ಮರದ್ದಿಲ್ಲೆ ಆತಾ..?!

      [ಉತ್ತರುಸಿ]

      ಅಜ್ಜಕಾನ ಭಾವ

      ಅಜ್ಜಕಾನ ಭಾವ ಉತ್ತರ ಕೊಟ್ಟದು:

      VA:F [1.9.3_1094]
      Rating: 0 (from 0 votes)

      ಏ ಭಾವ
      ಸನತನಣ್ಣ ನೇರಳೆಹಣ್ಣಿನ ಸುದ್ದಿಯೆ ಹೇಳಿದ್ದನಿಲ್ಲೆ ಎನಗೆ..

      [ಉತ್ತರುಸಿ]

      ಕೊಳಚ್ಚಿಪ್ಪು ಬಾವ

      ಸನತ್ ಉತ್ತರ ಕೊಟ್ಟದು:

      ಕೊಟ್ಟ ಎರಡು-ಮೂರು ನೇರಳೆ ಹಣ್ಣಿನ ಎಂತರಪ್ಪ ಹಂಚುದು.

      [ಉತ್ತರುಸಿ]

      ಅಜ್ಜಕಾನ ಭಾವ

      ಅಜ್ಜಕಾನ ಭಾವ ಉತ್ತರ ಕೊಟ್ಟದು:

      ಒಂದೇ ಇದ್ದರು ಹಂಚಿ ತಿಂದರೆ ಸುಖವೇ ಬೇರೆ ಹೇಳಿ ಎಡಪ್ಪಾಡಿ ಅಣ್ಣ ಹೇಳುಗು..

      [ಉತ್ತರುಸಿ]

      ಕೊಳಚ್ಚಿಪ್ಪು ಬಾವ

      ಸನತ್ ಉತ್ತರ ಕೊಟ್ಟದು:

      VA:F [1.9.3_1094]
      Rating: 0 (from 0 votes)

      ಎಂತಾರು ತಿಂಬದು ಇಪ್ಪಾಗ ಯಾರಿಂಗೂ ಕೊಡದ್ದೇ ಒಬ್ಬನೇ ತಿಂದರೆ ಇನ್ನೂ ಸುಖ ಹೇಳಿ ಎನ್ನ ಭಾವ ಒಬ್ಬ ಹೇಳುಗು.

      [ಉತ್ತರುಸಿ]

      ಬಂಡಾಡಿ ಅಜ್ಜಿ

      ಬಂಡಾಡಿ ಅಜ್ಜಿ ಉತ್ತರ ಕೊಟ್ಟದು:

      VN:F [1.9.3_1094]
      Rating: 0 (from 0 votes)

      ಎಂತ ಪುಳ್ಯಕ್ಕೊ ಎಲ್ಲ ಅಜ್ಜಿ ಜಾಲಿಂಗೆ ಬಂದು ಜಗಳ ಮಾಡುದೋ… ಏ°… ಅದಾ ಎಂತಾರು ತಿಂಬಗ ಎಲ್ಲೊರಿಂಗೂ ಕೊಟ್ಟು ತಿನ್ನೇಕೂಳಿ ಹೇಳಿದ್ದಲ್ಲದೋ… ಎಂತ ಪುಳ್ಳೀ…

      [ಉತ್ತರುಸಿ]

      ಬಂಡಾಡಿ ಅಜ್ಜಿ

      ಬಂಡಾಡಿ ಅಜ್ಜಿ ಉತ್ತರ ಕೊಟ್ಟದು:

      ಆತಾತು.. ಕೊಡುವೊ ಆತೊ.. ಏ ಇಲ್ಲೆಪ್ಪ… ಅವ° ಒಪ್ಪಣ್ಣ ಅಲ್ಲದೋ… ಕೊಟ್ಟದರ ಒಂದರನ್ನಾದರೂ ಎತ್ತುಸುಗಪ್ಪ…

      [ಉತ್ತರುಸಿ]

      ಅಜ್ಜಕಾನ ಭಾವ

      ಅಜ್ಜಕಾನ ಭಾವ ಉತ್ತರ ಕೊಟ್ಟದು:

      VN:F [1.9.3_1094]
      Rating: 0 (from 0 votes)

      ಒಪ್ಪಣ್ಣ ಒಳ್ಳೆಯವನೆ ಅಪ್ಪ.. ಮೊನ್ನೆ ಕಲ್ಮಡ್ಕ ಅನಂತ ಗಣೇಶ ಬಾವಂಗೆ ಕಳುಸಿದ್ದ ಕಟ್ಟಿನ ಒಪ್ಪಣ್ಣ ಹಾಂಗೆ ತಂದು ಕೊಟ್ಟಿದನಡ

      [ಉತ್ತರುಸಿ]

    4. ಗಣೇಶ ಮಾಡಾವು
      ಗಣೇಶ ಮಾವ°

      )
      VA:F [1.9.3_1094]
      Rating: 0 (from 0 votes)

      ದೊಡ್ದರ್ಧ ಎನಗೆ ಸಣ್ಣರ್ಧ?????????

      [ಉತ್ತರುಸಿ]

    5. ಅಜ್ಜಕಾನ ರಾಮ

      )

      ಅಜ್ಜಿ ಇತ್ತ ಹೊಡೆ ಸುದ್ದಿಯೆ ಇಲ್ಲೆ.. ಕೈಬೇನೆ ಜಾಸ್ತಿ ಆತೋ ಹೇಂಗೆ.. ಯೋಚಿಸಿಯೊಂಡಿಪ್ಪಗ ಕೆದೂರು ಡಾಕ್ಟ್ರು ಹೇಳಿದವು ಆನು ಮದ್ದು ಕೊಟ್ಟಿದೆ ಕಮ್ಮಿ ಆಯಿದೀಗ ಹೇಳಿ.. ಮತ್ತೆ ಗೊಂತಾತು ಅಜ್ಜಿಗೆ ಏಕೆ ಪುರುಸೋತ್ತಿಲ್ಲೆ ಹೇಳಿ.. “ಕೈರಂಗಳ ಕೂಸಿನ ಮದುವೆ ಅಲ್ದೊ ಹಾಂಗೆ ಬ್ಯುಸಿ ಅಡಾ”.. ಆಚೆಕರೆ ಮಾಣಿ ಮೊನ್ನೆ ಬೆಂಗ್ಳೂರಿಂಗೆ ಹೆರಟಪ್ಪಗ ಅಜ್ಜಿ ಸಿಕ್ಕಿ ಹೇಳಿದ ಸುದ್ದಿ ಬಂತು ಪುಟ್ಟಕ್ಕಂದ.. ಅಪ್ಪೋ ಹೇಂಗೆ???

      [ಉತ್ತರುಸಿ]

      ಬಂಡಾಡಿ ಅಜ್ಜಿ

      ಬಂಡಾಡಿ ಅಜ್ಜಿ ಉತ್ತರ ಕೊಟ್ಟದು:

      VN:F [1.9.3_1094]
      Rating: 0 (from 0 votes)

      ಅಪ್ಪು. ರೆಜ ಗಡಿಬಿಡಿ ಇದಾ. ಜವುಳಿ ತೆಗವದು ಅದು ಇದು ಹೇಳಿಯೊಂಡು ಕೆಲಸಂಗೊ ಇರ್ತನ್ನೆ ಸುಮಾರು… ಕೈಬೇನೆ ಕಮ್ಮಿ ಇದ್ದಪ್ಪಾ..

      [ಉತ್ತರುಸಿ]

    ಒಪ್ಪ ಕೊಡ್ಳೆ ಇಲ್ಲಿ ಬರೆಯಿ: