Oppanna.com

"ಮಾವಿನ ಹಣ್ಣಿನ ಕೇಸರಿಬಾತ್"

ಬರದೋರು :   ಸುವರ್ಣಿನೀ ಕೊಣಲೆ    on   20/06/2010    21 ಒಪ್ಪಂಗೊ

ಸುವರ್ಣಿನೀ ಕೊಣಲೆ
ಆರೋಗ್ಯದ ಬಗ್ಗೆ ಇಪ್ಪದೇ, ಅದರೆ ಬೇರೆದೇ ರಜ್ಜ ಬರೆಂವ ಹೇಳಿ ಗ್ರೇಶಿದ್ದೆ. ನಿಂಗೊಗುದೇ ಇಷ್ಟ ಅಕ್ಕು. “ಮಾವಿನ ಹಣ್ಣಿನ ಕೇಸರಿಬಾತ್”, ಇದೆಂತ ಹೊಸತ್ತು ಹೇಳಿ ಕಾಂಗು ನಿಂಗೊಗೆ !! ಅಪ್ಪು, ಇಂದು ಹೊತ್ತೋಪಗ ಉದಾಸಿನ ಅವ್ತಾ ಇತ್ತು, ಕೇಸರಿಬಾತ್ ಮಾಡುಂವ ಹೇಳಿ ಆಲೋಚನೆ ಮಾಡಿದೆಂಯ, ಆದರೆ ಅನಾನಾಸು ಹಣ್ಣು ಇತ್ತಿಲ್ಲೆ 🙁 . ಮನೆಲಿ ಮಾವಿನ ಹಣ್ಣು ಇತ್ತಿದ್ದು, ಇದರ ಹಾಕಿ ಮಾಡಿರೆ ಹೇಂಗೆ ಹೇಳಿ ಕಂಡತ್ತು !! ಅನಾನಾಸಿನ ಕೇಸರಿಬಾತ್ ಮಾಡುವ ಹಾಂಗೆಯೇ ಮಾವಿನ ಹಣ್ಣು ಹಾಕಿ ಮಾಡಿದೆಂಯ !!! ಎಂತಾ ಲಾಯ್ಕ ಆತು ಗೊಂತಿದ್ದ? ನಿಂಗಳುದೇ ಮಾಡಿ ನೋಡಿ.
ಬೇಕಾದ ಸಾಮಾನು: ಒಂದು ಗ್ಲಾಸ್ ಸಜ್ಜಿಗೆ
ಎರಡು ಗ್ಲಾಸ್ ಸಕ್ಕರೆ
ಎರಡು ಗ್ಲಾಸ್ ತುಪ್ಪ
ಒಂದು ಸಣ್ಣ ಮಾವಿನ ಹಣ್ಣು
ಏಲಕ್ಕಿ, ಗೋಡಂಬಿ, ಒಣ ದ್ರಾಕ್ಷೆ
ಎರಡು ಗ್ಲಾಸ್ ನೀರು.
ಮಾಡ್ತ ಕ್ರಮ: ಸಜ್ಜಿಗೆಯ ರಜ್ಜ ತುಪ್ಪಲ್ಲಿ ಹೊರುದು ಕರೇಲಿ ಮಡುಗೆಕ್ಕು. ಒಂದು ಬಾಣಲೆಲಿ ಎರಡು ಗ್ಲಾಸ್ ನೀರು ಕೊದಿವಲೆ ಮಡುಗಿ, ನೀರು ಕೊದಿವಲೆ ಶುರು ಅಪ್ಪಗ ಹೊರುದು ಮಡುಗಿದ ಸಜ್ಜಿಗೆ ಹಾಕಿ ತೊಳಸೆಕ್ಕು, ಸಜ್ಜಿಗೆ ಉಂಡೆ ಕಟ್ಟದ್ದ ಹಾಂಗೆ ಸರೀ ತೊಳಸೆಕ್ಕು. ಸಜ್ಜಿಗೆ ಬೆಂದಮೇಲೆ ಅದಕ್ಕೆ ಸಕ್ಕರೆ ಹಾಕಿ ತೊಳಸೆಕ್ಕು, ಸಕ್ಕರೆ ಕರಗಿದಮೇಲೆ, ಮಾವಿನ ಹಣ್ಣಿನ ಗೊರತು,ಚೋಲಿ ತೆಗದು ಪುರುಂಚಿ ಬಾಣಲೆಗೆ ಹಾಕೆಕ್ಕು. ಸಜ್ಜಿಗೆ, ಸಕ್ಕರೆ, ಮಾವಿನಹಣ್ಣು ಎಲ್ಲ ಸರೀ ಮಿಕ್ಸ್ ಆದಮೇಲೆ ರಜ್ಜ ರಜ್ಜ ಆಗಿ ತುಪ್ಪ ಹಾಕಿ ತೊಳಸಿಗೊಂಡೇ ಇರೆಕ್ಕು, ಇದಕ್ಕೆ ಹೊಡಿ ಮಾಡಿದ ಏಲಕ್ಕಿ, Replica Rolex Watches ಹೊರುದ ಒಣ ದ್ರಾಕ್ಷೆ ಗೋಡಂಬಿ ಹಾಕಿ. ಕೇಸರಿಬಾತ್ ಅಡಿ ಬಿಡುವ ವರೇಗೆ ತೊಳಸಿ. ಮತ್ತೆ ಒಂದು ತಟ್ಟೆಗೆ ತುಪ್ಪ ಉದ್ದಿ ಅದರಲ್ಲಿ ಮಾವಿನಹಣ್ಣಿನ ಕೇಸರಿಬಾತ್ ಹಾಕಿ.
ಇಷ್ಟಾದಮೇಲೆ ಎಂತ ಮಾಡೆಕ್ಕು? ಎಲ್ಲರಿಂಗೂ ಕೊಟ್ಟುಗೊಂಡು ನಾವುದೇ ತಿಂಬದು !!!

21 thoughts on “"ಮಾವಿನ ಹಣ್ಣಿನ ಕೇಸರಿಬಾತ್"

  1. ತುಪ್ಪ ಜಾಸ್ತಿ ಆದರೆ ಎಂತ ತೊಂದರೆ ಇಲ್ಲೆಯ??

    1. ನೀನೆಂತ ಗ್ರೇಶಿದ್ದೆ ಅಣ್ಣೊ.. fat ಆವುತ್ತು ಹೇಳಿಯೊ?. ಹಾಂಗೆ ಆಗ. ಆನು ದಿನಾ ತಿಂತೆ. ಸ್ಲಿಮ್ ಆಗಿದ್ದೆ ಆತೋ!

  2. ಎರಡು glass ತುಪ್ಪ ಹಾಕೆಕ್ಕ??? ಹಂಗಾರೆ ಆನು ದೇವರಾಣೆ ಟ್ರೈ ಮಾಡ್ತಿಲ್ಲೇ
    ಪ್ರಶಾಂತ್ ಕುವೈತ್

  3. ಬೆಳ್ಳಂಗಿಪ್ಪ ಶಕ್ಕರೆ ವಿಶಕ್ಕೆ ಸಮ ಹೇಳಿ ಕೆಲವು ಜನರ ಅಭಿಪ್ರಾಯ – ನಿಂಗೊಗೆ ಹೇಂಗೆ ಕಾಣುತ್ತು?

    1. ಅಪ್ಪು, ಸಕ್ಕರೆ ಮತ್ತೆ ಮೈದಾ , ಇದೆರಡರ ಬೆಳಿ ವಿಷ(white poison) ಹೇಳಿ ಹೇಳ್ತವ್ವು. ಇದು ಆರೋಗ್ಯಕ್ಕೆ ಒಳ್ಳೆದಲ್ಲ.
      ಸಕ್ಕರೆಲಿ ಇಪ್ಪದು ಬರೀ ಶರ್ಕರಪಿಷ್ಠ, ಅದುದೆ refined, ಹೇಳಿರೆ ಅದರ್ಲಿ ಕಬ್ಬಿಲ್ಲಿ ಇಪ್ಪ ಖನಿಜಾಂಶ, ಪ್ರೊಟೀನ್, ವಿಟಮಿನ್ ಯಾವ್ದುದೇ ಇರ್ತಿಲ್ಲೆ, ಈ ಸಕ್ಕರೆಯ ಕರಗ್ಸುಲೆ ದೇಹಕ್ಕೆ ಕಷ್ಟ. , ಇದರಿಂದಾಗಿ ಸಕ್ಕರೆಯ metabolism ಸರಿಯಾಗಿ ಅಗದ್ದೆ ಪೈರುವಿಕ್ ಆಸಿಡ್ ಮುಂತಾದ ಆಮ್ಲಂಗಳ ಉಂಟುಮಾಡುತ್ತು. ಇದು ಮೆದುಳು ಮತ್ತೆ ರಕ್ತ ಕಣಂಗಳಲ್ಲಿ ಸೇರಿಗೊಳ್ತು. ಇದರಿಂದ ಆಮ್ಳಜನಕದ ಸಂಚಾರ ಸರಿಯಾಗಿ ಆಗದ್ದೆ ಜೀವಕೋಶ ಸಾಯ್ತು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾರೆ ಈ ಲಿಂಕ್ ಗೆ ಹೋಗಿ.
      http://www.karlloren.com/Diabetes/p82.htm

  4. ಬಟಾಟೆ ಭಾತ್ ಹೇಳಿರೆ ನಮ್ಮ ಚಿತ್ರಾನ್ನದ ಹಾಂಗೆ, ಉಪ್ಪು ಹುಳಿ ಸೇರ್ಸಿ ಬೆಂದ ಬಟಾಟೆಯ ಮತ್ತೆ ಮಸಾಲೆಯ ಒಗ್ಗರಣೆ ಹಾಕಿ ಅನ್ನ ದೊಟ್ಟಿಂಗೆ ಕಲಸಿ ತಿಂಬದು.
    ಉತ್ತರ ಭಾರತ ಶೈಲಿಯ ಆಡಿಗೆ , ಮನೆಲೆ ಬೇರೆಂತದೂ ಇಲ್ಲದ್ದೇ ಇಪ್ಪಾಗ ಆನು ಮನೆಲಿ ಮಾಡಿತ್ತಿದ್ದೆ ಕಳದವಾರ !.
    ಅಜ್ಜಿ ಇದರ ಬಗ್ಗೆಯೇ ಮಾತಾಡಿಯೊಂಡು ಇದ್ದದ್ದ ?

    1. ಓಹೋ…ಇದೊಂದು ಹೊಸ ಪ್ರಯೋಗ ಮಾಡಿ ನೋಡ್ತೆ ಆನು!! ಸುಲಾಭ ಕಾಣ್ತು ಮಾಡ್ಲೆ, ಉದಿಯಪ್ಪಗ ಹೆರಡುವ ಗೌಜಿಗೆ ಬೇಗ ಮಾಡಿ ತಿಂದಿಕ್ಕಿ ಹೋಪಲಕ್ಕು 🙂
      ಹೊಸ ತಿಂಡಿ ಕಲ್ತಷ್ಟೂ ಒಳ್ಳೆದು 🙂 ದಿನಕ್ಕೊಂದು ಬಗೆ ಮಾಡ್ಲಕ್ಕದ, ಅಲ್ಲದ್ದರೆ ತೆಳ್ಳವು, ದೋಸೆ, ಚಿತ್ರಾನ್ನ, ಪೂರಿ, ಚಪಾತಿ..ಇದನ್ನೇ ತಿಂದು ತಿಂದು ಬೊಡಿತ್ತು 🙂

  5. ಅಕ್ಕೋ..
    ಪಾಕ ಭಾರಿ ಲಾಯಿಕಾಯಿದು. ಒಂದರಿಯಾಣದ್ದು ರಜಾ ಎಳಮ್ಮೆ ಆದರೂ, ಎರಡ್ಣೇ ಸರ್ತಿಯಾಣದ್ದು ಸಮಾ ಆಯಿದು!
    ಅದೆಲ್ಲ ಅಪ್ಪು, ಈ ಒರಿಶ ತಿಂಬಲೆ ಬಿಡಿ – ನೋಡ್ಳೂ ಮಾವಿನಹಣ್ಣು ಇಲ್ಲೆ.
    ಬಂಡಾಡಿಅಜ್ಜಿಗಂತೂ ಈ ನಮುನೆದು ಬಪ್ಪೊರಿಶಕ್ಕೆ ನೆಂಪೂ ಒಳಿಯ! ಹಾಂಗಾಗಿ ಬಪ್ಪೊರಿಶ ಪುನಾ ಒಂದರಿ ಹೇಳಿಕ್ಕಿ, ಆತೋ?
    ಏ°?

    1. ಇನ್ನಾಣ ವರ್ಷ ಇನ್ನೊಂದರಿ ಹೇಳುಂವ, ಈ ವರ್ಷ ಮಾವಿನ ಹಣ್ಣು ಕಮ್ಮಿಯೇ 🙁

  6. ಆರು ಬೇಕಾರು ಎಂತ ಬೇಕಾರು ಮಾಡಿ , ಎಂಗಗೆ ತಿಂಬಲೆ ಸಿಕ್ಕಿರೆ ಸಾಕು ಹೇಳಿ ಅಜ್ಜಕಾನ ಭಾವಂದೂ ,ಎನ್ನದೂ ಜಂಟಿ ಅಭಿಪ್ರಾಯ.

    1. ಯೇ ಬಾವ ಒಪ್ಪಣ್ಣನ ಬಿಟ್ಟದ್ದು ಎಂತಕೋ.. ಅವನ ಬಟಾಟೆ ಬಾತ್ ಇದ್ದರೆ ಕರೆಯೆಕ್ಕೂಳಿ ಇಲ್ಲೆ.. ಇಲ್ಲದ್ರೆ ಅವನೂ ಇರಲಿ

      1. @ಅಜ್ಜಕಾನ ಭಾವ, ಬಟಾಟೆ ಬಾತ್ !! ಇದೆಂತರ?
        @ಕೊಳಚಿಪ್ಪು ಭಾವ , ಒಳ್ಳೆದು. ರುಚಿ ನೊಡಿ, ಹೇಂಗಾಯ್ದು ಹೇಳಿ ತಿಳುಶಿ ಆತ 🙂

        1. ಎಂತದೋ ಎನಗೂ ಸರಿ ಗೊಂತಿಲ್ಲೆ.. ಸುವರ್ಣಿನೀ ಅಕ್ಕ ಅಜ್ಜಿಯತ್ರೆ ಹೇಳಿಯೊಂಡಿತ್ತು.. ಹೊಸ ರುಚಿ ಅಡಾ.. ಅಜ್ಜಿ ಹೇಂಗಿದ್ದು ಹೇಳಿದ ಮತ್ತೆ ನೋಡೆಕ್ಕಷ್ಟೆ..

  7. @ಕೆಪ್ಪಣ್ಣ, thank u!!
    @ಶ್ರೀ ಕೃಷ್ಣ ಶರ್ಮ. ಹಳೆಮನೆ, ohh…ಅಪ್ಪಾ? ಆನುದೇ ಒಂದರಿ try ಮಾಡ್ತೆ 🙂

  8. ಮಾವಿನ ಹಣ್ಣಿನ ಸೀಸನಿಂಗೆ ಒಂದು ಹೊಸ ತಿಂಡಿ ಸೇರ್ಪಡೆ. ಒಳ್ಳೆದು ಆತು.
    ಪಪ್ಪಾಯಿ ಹಣ್ಣಿನ ಒಂದು ಸರ್ತಿ ಹೀಂಗೆ ಮಾಡೆದ್ದೆಯೊ. ಲಾಯಿಕ್ ಆವುತ್ತು.

  9. ಹೀಂಗೆ ಹೇಳುವಗ ರಜಾ ಸಾಂಪಲ್ ನೋಡೆಕ್ಕು ಹೇಳಿ ಆದರೆ ಕೊಣಲೆಯ ಅಟ್ಟುಮ್ಬಳಕ್ಕೆ ಹೋಯೇಕ್ಕೋ ಏನೋ??

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×