ಆಟಿಲಿ ಬಪ್ಪ ಬಗೆ ಬಗೆ ಸೊಪ್ಪುಗೊ…

August 1, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಣಿಲೆ ಉಪ್ಪಿನಕಾಯಿ ಹಾಕಿಗೊಂಡು ಇದ್ದಾಂಗೇ ಆಟಿ ಬಂದು ಒಂದು ವಾರವೂ ಕಳುತ್ತದ.
ಒಪ್ಪಣ್ಣ ಕಣಿಲೆ ತತ್ತೇಳಿ ಹೋದೋನು ಪತ್ತೆಯೇ ಇಲ್ಲೆ. ಹೆಚ್ಚಿನಂಶ ಒಪ್ಪಕ್ಕಂಗೆ ಶ್ಟೇರಿಂಗು ಮಾಂತ್ರ ಇಪ್ಪ ಕಾರು ಸಿಕ್ಕುತ್ತೋಳಿ ಹುಡ್ಕಲೆ ಹೋಗಿರೇಕು, ಅದು ಬೊಬ್ಬೆ ಕೊಡುದರ ಕೇಳ್ಳಾಗದ್ದೆ.

ಇನ್ನು ನೆಗೆಗಾರನತ್ತರೆ ಹೇಳ್ತ ಒಯಿವಾಟು ಆಗ . ಒಪ್ಪಣ್ಣ ತಂದರೆ ಬೆಂದಿಯೋ ತಾಳ್ಳೋ ಮಾಡುವೊ. ಆಟಿಲಿ ಅದೊಂದೇ ಅಲ್ಲನ್ನೆ ಇಪ್ಪದು, ಇನ್ನುದೇ ಸುಮಾರು ಬಗೆಗೊ ಮಾಡ್ಳಿದ್ದು. ಅಲ್ಲದೋ?
ಕೆಲವು ಬಗೆಗಳ ಈಗ ಹೇಳುತ್ತೆ ಕರೆಂಟು ಇಪ್ಪಲ್ಲಿಯೊರೇಂಗೆ. ಈ ಮಳೆಕಾಲಲ್ಲಿ ಹಾಂಗೇ ಏವಾಗಳೂ ಸರಿಯಾಗಿ ಕರೆಂಟೇ ಇಪ್ಪಲಿಲ್ಲೆ. ಪೋನುದೇ ಅಂಬಗಂಬಗ ಹಾಳಪ್ಪದು. ಅದಿಲ್ಲದ್ದರೆ ಇಂಟರುನೆಟ್ಟುದೇ ಸಿಕ್ಕುತ್ತಿಲ್ಲೆನ್ನೆ… ಓನು ಮಾಡದ್ದೆ ಈ ಕರೆಂಟಿನ ಪುಸ್ತಕಕ್ಕೆ ಬೂಸರು ಬಾರದ್ದರೆ ಸಾಕು…
ಹ್ಮ್ ಈಗ ಕರೆಂಟು ಇಪ್ಪಲ್ಲಿಯೊರೇಂಗೆ ಹೇಳಿಕ್ಕಿ ಒಳುದ್ದದು ಇನ್ನೊಂದರಿ ಹೇಳುತ್ತೆ ಆತೊ…

ಸೊಪ್ಪಿನ ತೊಳದು ಮಡುಗಿದ್ದು

ಚೇಟ್ಳ:
ಆಟಿಲಿ ತೋಟಲ್ಲೆಲ್ಲ ಕೆಸವು ಏಳ್ತದ. ಹಾಂಗೆ ಬಪ್ಪ ಕೆಸವು ಏವದೂ ಆವುತ್ತು ನಮ್ಮ ಅಡಿಗೆಗೆ, ತೆಳೂ ಎಲೆ ಇಪ್ಪದು. ಕೆಲವು ರಜಾ ತೊರುಸುಲೂ ಸಾಕು. ಹಾಂಗಾಗಿ ಎಲ್ಲಾ ಕೆಸವುಗೊಕ್ಕೂ ಹುಳಿ ಒಳ್ಳೆತ ಹಾಕೆಕ್ಕು.
ಕಾಟು ಮುಂಡಿ ಕೆಸವು ಮಾಂತ್ರ ಆಗ. ಅದರ ಎಲೆ ದಪ್ಪ ನಮುನೆದು. ಅದರ ನೋಡುವಾಗಳೇ ಗೊಂತಾವುತ್ತು.
ಮತ್ತೆ ನೆಟ್ಟು ಮಾಡುವ ಕೆಸವಾದರೆ ವೈಶಾಕಲ್ಲೂ ಮಾಡ್ಳಾವುತ್ತು. ಅದರಷ್ಟಕೇ ಬಪ್ಪದಾದರೆ ಈಗ ಸಿಕ್ಕುದದ.
ಈ ಮಳೆಕಾಲಲ್ಲಿ ನರಕ್ಕದ ಹಿಸ್ಕು ಒಂದು ಎಲ್ಲಾ ದಿಕ್ಕೆಯೂ ಇದ್ದು. ಕೆಸವಿನ ಎಲೆ ಪೂರ ಕೆರೆತ್ತು. ಹ್ಮ್ ಅದಿರಳಿ… ಈಗ ಚೇಟ್ಳ ಮಾಡ್ತದು ಹೇಂಗೇಳಿ ಗೊಂತಿದ್ದೋ?

ಕೆಸವಿನ ಎಲೆಯ ತೊಳದು ಬಾಡುಸೆಕ್ಕು. ಮತ್ತೆ ಅದರ ನೆಣೆಯಾಂಗೆ ತಿರ್ಪಿ ಗೆಂಟು ಹಾಕುದು.
ಇದರದ್ದು ಬೆಂದಿ ಬಾರೀ ಲಾಯಿಕಾವುತ್ತು. ತಾಳ್ಳುದೇ ಮಾಡ್ಳಕ್ಕು. ಚೂರಿಬೈಲಿನ ದೀಪನೋ, ಭಾರದ್ವಾಜದ ದೇವಿಯೋ ಎಲ್ಲ ಬೇರೆ ಹೊಸ ನಮುನೆದು ಎಂತಾರು ಮಾಡುಗುದೇ.
ಬೆಂದಿಗೆ ಒಟ್ಟಿಂಗೆ ಬೇಳೆ ಹಾಕಿ ಮಾಡ್ತದು… ಚೇಟ್ಳದೊಟ್ಟಿಂಗೆ ಹುಳಿ, ಬೇಳೆ ಸೇರುಸಿ ಬೇವಲೆ ಮಡುಗೆಕ್ಕು. ಬೇಳೆಯ ಮೊದಲೇ ರಜ ಬೇಶಿರೂ ಅಕ್ಕು. ಅದು ರಜ ಗಟ್ಟಿ ಇದಾ… ‘ಗಟ್ಟಿ’ ಹೇಳುವಾಗ ಒಪ್ಪಕ್ಕನ ನೆಗೆ ನೆಂಪಾವುತ್ತು. ಓ ಮೊನ್ನೆ ಇತ್ಲಾಗಿ ಮಾಡಾವು ಬೇರ್ತಿಯ ಮನೆಗೆ ಆರೋ ಕಳುವ ನುಗ್ಗಿಯಪ್ಪಾಗ ಬೇರ್ತಿ ಅದರ ಕೈಗೆ ಕಚ್ಚಿತ್ತಡ. ಬೇರ್ತಿಯ ಹಲ್ಲೇ ತುಂಡಾಗಿ ಹೋತಡ. ಅದರ ಹಲ್ಲು ಅಂಬಗ ಎಷ್ಟು ಗಟ್ಟಿ ಇದ್ದಿಕ್ಕೂಳಿ ಹೇಳಿ ಒಪ್ಪಕ್ಕ ನೆಗೆ ಮಾಡುದು…
ಹ್ಮ್.. ಚೇಟ್ಳ ಬೆಂದತ್ತನ್ನೆ. ನಾಕು ಕೊತ್ತಂಬರಿ, ಜೀರಿಗೆ, ಮೆಣಸು, ಅರಿಶಿನ ಹೊಡಿ ಎಲ್ಲ ಹಾಕಿ ಮಸಾಲೆ ಮಾಡುದು. ಎಣ್ಣೆ ಹಾಕಿ ಹೊರಿವಲೂ ಅಕ್ಕು ಅತವಾ ಹಸಿಯೂ ಅಕ್ಕು. ಕಡದು ಅರಪ್ಪು ಸೇರುಸಿ ಕೊದಿಶಿ ಬೇನುಸೊಪ್ಪಿನ ಒಗ್ಗರಣೆ ಕೊಟ್ರೆ ಚೇಟ್ಳ ಬೆಂದಿ ತಯಾರಾತದ. ಹೇಳಿದಾಂಗೆ ಉಪ್ಪು, ಬೆಲ್ಲ ಹಾಕುಲೆ ಮರದಿಕ್ಕೆಡಿ ಆತೊ. ಹೇಳುಲೆ ಮರದತ್ತದ ಅಜ್ಜಿಗೆ…

ಕೆಸವಿನ ಸೊಪ್ಪಿನ ಚಟ್ನಿ:
ಅದರ ಲಾಯಿಕ ತೊಳದು ಹುಳಿ ಹಾಕಿ ಬೇಶೆಕ್ಕು. ಬೇಶುವಗ ತುಂಬ ನೀರು ಹಾಕುದು ಬೇಡ. ಆಚ ಒಲೆಲಿ ಬೆಂದೊಂಡಿಪ್ಪಗ ಈಚ ಒಲೆಲಿ  ಉದ್ದಿನಬೇಳೆ, ಮೆಣಸು ಹೊರಿವದು. ಬೆಂದಪ್ಪಗ ಅದಕ್ಕೆ ರಜ ಕಾಯಿಸುಳಿಯನ್ನುದೆ ಈ ಹೊರುದ್ದದರನ್ನುದೇ ಸೇರುಸಿ ಕಡದತ್ತು ಉಪ್ಪು ಹಾಕಿ. ನೀರು ಹಾಕುದು ಬೇಡ. ಗಟ್ಟಿಗೆ ಕಡವದು. ಇದು ಎರಡು ದಿನಕ್ಕೆ ಎಂತ ಆವುತ್ತಿಲ್ಲೆ. ಮಾಡಿದ್ದದಿದ್ದರೆ ಪುಳ್ಯಕ್ಕೊ ಬುತ್ತಿಗೆ ಇದನ್ನೇ ಕೊಂಡೋಕು. ಬೆಂದಿ ಆದರೆ ಚೆಲ್ಲುತ್ತದ. ಬರೇ ಹೋಳು ಮಾಂತ್ರ ಹಾಕಜ್ಜಿ ಬುತ್ತಿಗೆ ಹೇಳ್ತವು. ಹೊಡಿ ಹೊಡಿ ಅಶನ ಹೇಂಗೆ ಉಂಬದು ಪಾಪ ಹೇಳಿಗೊಂಡು ಸಮಾಕೆ ಬೆಂದಿ ಎಸರು ಹಾಕುದು. ಹೊತ್ತೊಪ್ಪಗ ಒಲೆಕ್ಕಟೆ ಮೇಲೆ ನಾಕು ನಾಕು ಪುಸ್ತಕಂಗೊ ಒಣಗುಸಲೆ..! ಈ ಚಟ್ನಿ ಆದರೆ ಸಮಸ್ಯೆಯೇ ಇಲ್ಲೆ ಇದಾ… ಬಾರೀ ಕೊಶಿ ಪುಳ್ಯಕ್ಕೊಗೆ. ಉಂಬಲೂ ರುಚೀ ಆವುತ್ತು.

ಕೆಸವಿನ ಸೊಪ್ಪಿನ ಪತ್ರೊಡೆ:
ಇದು ಸಾಮಾನ್ಯ ಗೊಂತಿಲ್ಲದ್ದೋರು ಇಲ್ಲೆ. ಆಗದ್ದೋರುದೇ ಕಮ್ಮಿ. ಎಲ್ಲೊರಿಂಗೂ ಪ್ರೀತಿಯೇ ಪತ್ರೊಡೆ ಹೇಳಿದರೆ….
ಸೊಪ್ಪಿನ ತೊಳದು, ಅದರ ತೊಟ್ಟು, ತೋರ ತೋರ ಇಪ್ಪ ನರಂಬು ಎಲ್ಲ ತೆಗದು ಸಣ್ಣಕ್ಕೆ ಕೊಚ್ಚುದು. ಮತ್ತೆ ಅದರ ಹಿಟ್ಟಿಂಗೆ ಬೆರುಸುದು.
ಹಿಟ್ಟು ಮಾಡ್ಳೆ, ಉದೀಯಪ್ಪಗಳೇ ಹೂ ಬೆಶಿನೀರಿಲಿ ಅಕ್ಕಿ ಬೊದುಲ್ಲೆ ಹಾಕೆಕ್ಕು. ಹೊತ್ತೊಪ್ಪಾಗ ಅದಕ್ಕೆ ಉಪ್ಪು, ಬೆಲ್ಲ, ಹುಳಿ, ಮೆಣಸು, ಕೊತ್ತಂಬರಿ – ರಜ ಜಾಸ್ತಿ, ನಾಕು ಜೀರಿಗೆ, ಅರಿಶಿನ ಹೊಡಿ ಎಲ್ಲ ಹಾಕಿ ಕಡವದು. ಅರಿಶಿನ ಹೊಡಿ ಎಲ್ಲಾ ಸೊಪ್ಪುಗೊಕ್ಕೂ ಹಾಕೆಕ್ಕು. ನಂಜಿಂದು ಎಂತಾರು ಇದ್ದರೇಳಿ… ಹ್ಮ್ ಕಡವಗ ಗಟ್ಟಿಗೆ ಕಡದರೂ ಅಕ್ಕು, ಒಂದು ರಜಾ ನೀರಾದರೂ ಸಾರ ಇಲ್ಲೆ.
ಮತ್ತೆ ಇದರ ಉಂಡೆ ಮಾಡಿ ಬೇಶುಲೂ ಅಕ್ಕು. ಇಲ್ಲದ್ದರೆ ಬಾಳೆಲೆಲಿ ಮಡುಸಿ ಮಡುಗಿ ಬೇಶುಲೂ ಅಕ್ಕು. ಬಾಳೆಲೆಲಿ ಕೊಟ್ಟಿಗೆಯಾಂಗೆ ಮಾಡಿರೆ ಅದಕ್ಕೆ ಎಣ್ಣೆ ಹಾಕಿ ತಿಂಬಲಕ್ಕು. ಬಾರೀ ರುಚಿ ತೆಂಗಿನೆಣ್ಣೆ ಸೇರುಸಿ ಬೆಶಿ ಬೆಶಿ ತಿಂಬಾಗ. ಒಪ್ಪಣ್ಣಂಗೆ ಹೊಟ್ಟೆ ತುಂಬಿರೂ ಮತ್ತೆರಡು ಹೋಕು ಹೊಟ್ಟೆಗೆ.
ಉಂಡೆ ಮಾಡಿದ್ದದಾದರೆ ಅದರ ಬೆಂದಿ ಮಾಡುಲಕ್ಕು. ಈ ಬೆಂದಿಗೆ ಕಾಲಿ ಜೀರಿಗೆದೆ ಮೆಣಸುದೇ ಕಡೆಯೆಕ್ಕು ಕಾಯಿಯೊಟ್ಟಿಂಗೆ. ಉಂಡೆಯ ಹೋಳಿನಾಂಗೆ ಕೊರದು ಈ ಅರಪ್ಪಿನ ಅದಕ್ಕೆ ಸೇರುಸಿ ಕೊದಿಶುದು. ಅರಪ್ಪು ರಜ ನೀರು ನೀರಿರಳಿ. ಮತ್ತೆ ಗಟ್ಟಿ ಆವುತ್ತು ಅದು. ಚೂರು ಕೊದಿವಲೆ ಸುರು ಅಪ್ಪಾಗ ಬೇನ್ಸೊಪ್ಪು ಹಾಕಿ ಎರಡು ಚಂಚ ಎಣ್ಣೆ ಹಾಕುದು. ಕೊದುದಪ್ಪಗ ಘಮ್ಮನೆ ಪತ್ರೊಡೆ ಬೆಂದಿ ತಯಾರಾತು.
ಪತ್ರೊಡೆ ಒಗ್ಗರಣೆಯೂ ಮಾಡ್ಳಕ್ಕು, ನೀರುಳ್ಳಿ, ಕಾಯಿ ಎಲ್ಲ ಹಾಕಿ. ಅದು ಗೊಂತಿಪ್ಪದೇನ್ನೆ.

ಪತ್ರೊಡೆ ಇನ್ನೊಂದು ನಮುನೆಲೂ ಮಾಡುಲಾವುತ್ತು. ಹದಾದ ಎಲೆಗಳ ತೆಕ್ಕೊಳ್ಳೆಕ್ಕು, ಒಳ್ಳೆತ ಬೆಳದ್ದೂ ಅಲ್ಲ, ಬರೇ ಎಳತ್ತೂ ಅಲ್ಲ. ಆಗ ಹೇಳಿದ ಕ್ರಮಲ್ಲೇ ಹಿಟ್ಟು ಮಾಡಿತ್ತು. ಒಂದು ಎಲೆಯ ಮೊಗಚ್ಚಿ ಮಡುಗಿ ತೆಳೂವಿಂಗೆ ಈ ಹಿಟ್ಟಿನ ಉದ್ದಿತ್ತು ಇಡೀಕ. ಅದರ ಮೇಲಂದ ಇನ್ನೊಂದು ಎಲೆ ಮಡುಗಿ ಅದಕ್ಕೂ ಹಿಟ್ಟಿನ ಉದ್ದಿತ್ತು. ಅದರ ಮೇಲೆ ಇನ್ನೊಂದು, ಮತ್ತೊಂದು – ಹೀಂಗೆ ನಾಕೈದು ಎಲೆ ಮೇಲಂದ ಮೇಲೆ ಮಡುಗಿ ಹಿಟ್ಟಿನ ಉದ್ದೆಕ್ಕು. ಅದರ ಮತ್ತೆ ಹಸೆ ಮಡುಸಿದ ಹಾಂಗೆ ಒಟ್ಟಿಂಗೆ ಮಡುಸಿ ಬೇಶುದು. ಮರದಿನ ಪೀಶಕತ್ತಿಲಿ ತುಂಡು ತುಂಡು ಮಾಡಿ ತಿಂದತ್ತು. ಬೆಲ್ಲದ ರವೆ ಕೂಡಿಯೋ, ಕೊದಿಲು, ಚಟ್ನಿ  ಕೂಡಿಯೋ ತಿಂಬಲಕ್ಕು. ಇದರದ್ದುದೇ ಬೆಂದಿ ಒಗ್ಗರಣೆ ಎಂತದೂ ಆವುತ್ತು.

ತಗತ್ತೆ ಸೊಪ್ಪು:
ಆಟಿಲಿ ತಗತ್ತೆ ಸೊಪ್ಪುದೇ ಕಾಂಗದ ಜಾಲ ಕೊಡೀಲಿ ಇಡೀಕ. ಇದರದ್ದುದೇ ಪತ್ರೊಡೆ ಮಾಡುಲಾವುತ್ತು. ಕೆಸವಿನ ಸೊಪ್ಪಿನ ಪತ್ರೊಡೆಯ ಹಾಂಗೆಯೇ. ಆದರೆ ಇದಕ್ಕೆ ಮೆಣಸು ಹುಳಿ ಎಲ್ಲ ಅದರಷ್ಟು ಬೇಡ. ಅದಕ್ಕೆ ಮಸಾಲೆ ಜಾಸ್ತಿ. ಕೆಸವು ತೊರುಸುತ್ತಲ್ಲ ಹಾಂಗೆ. ಇದಕ್ಕೆ ಕಮ್ಮಿ ಸಾಕು. ಮತ್ತೆ ಮಡುವ ಕ್ರಮ ಎಲ್ಲ ಒಂದೇ..
ಈ ಪತ್ರೊಡೆಯನ್ನೂ ಬೆಂದಿ ಮಾಡ್ಳಕ್ಕು. ಆಚದರ ಹಾಂಗೇ ಅರಪ್ಪು.
ಒಗ್ಗರಣೆಯೂ ಹಾಕಲಕ್ಕು. ಹಾಂಗೇ ತಿಂಬಲೂ ಅಕ್ಕು.

ತಗತ್ತೆ ತಾಳ್ಳು:
ತಗತ್ತೆ ಸೊಪ್ಪಿನೊಟ್ಟಿಂಗೆ ಬೇಳೆ ಹಾಕಿ ತಾಳ್ಳು ಮಾಡಿರೆ ಅಬ್ರಾಜೆ ಪುಟ್ಟಂಗೆ ಮತ್ತೆಂತೂ ಬೇಡ ಉಂಬಲೆ.
ಇದಕ್ಕೆ ಮೊದಾಲು ಒಗ್ಗರಣೆ ಮಡುಗುದು. ಎಣ್ಣೆ ಜಾಸ್ತಿ ಹಾಕೆಕ್ಕು. ಇಲ್ಲದ್ದರೆ ಕೈಕ್ಕುತ್ತದ ರಜ್ಜ. ಉದ್ದಿನ ಬೇಳೆ, ಮೆಣಸು, ಸಾಸಮೆ ಎಲ್ಲ ಹಾಕಿ ಒಗ್ಗರಣೆ ಮಾಡಿತ್ತು ಬಣಲೆಲಿ. ಸೊಪ್ಪಿನ ಲಾಯಿಕ ತೊಳದು ಇದಕ್ಕೆ ಹಾಕಿತ್ತು. ಅದು ರಜಾ ಹಸಿಮಾಸೆಕ್ಕು ಹೊರುದಾಂಗೆ. ಇದಕ್ಕೆ ಬೇಳೆಯ ಸಣ್ಣಕ್ಕೆ ಕೊಚ್ಚಿ ಹಾಕೆಕ್ಕು. ಹಿಂದಾಣ ದಿನ ಇರುಳೇ ಬೆಳೆಯ ಕೆರಸಿ ಮಡುಗಿರೆ ಸುಲಾಬ ಆವುತ್ತದ. ಬೇಳೆ ಸೇರುಸಿ, ಉಪ್ಪು, ಹುಳಿ, ಅರಿಶಿನ ಹೊಡಿ, ಮೆಣಸಿನ ಹೊಡಿ, ಬೆಲ್ಲ ಎಲ್ಲ ಹಾಕಿ ಲಾಯಿಕ ತೊಳಸಿ ರಜಾ ನೀರುದೇ ಹಾಕಿ ಮುಚ್ಚಿ ಮಡುಗುದು ಬೇವಲೆ. ನೀರು ಹದಾಕೆ ಸಾಕು. ಬೇವಲಪ್ಪಗ ಒಂದು ಮುಷ್ಟಿ ಕಾಯಿ ಹಾಕಿ ತೊಳಸಿತ್ತು. ರುಚಿ ರುಚಿ ತಗತ್ತೆ ತಾಳ್ಳು ಉಂಬದೊಂದೇ ಬಾಕಿ ಇನ್ನು…

ಕಾಟುಕೇನೆ:
ಕಾರಿಂಜದ ಆಶ ಕಾಟುಕೇನೆ ನೆಂಪು ಮಾಡಿತ್ತದ. ಅದು ಮಡಿಕೇರಿ ಹೊಡೆಲಿ ಜಾಸ್ತಿಯೋಳಿ ಕಾಣುತ್ತು. ನಮ್ಮ ಇತ್ಲಾಗಿ ಆನು ಕಂಡಿದಿಲ್ಲೆ ಸದ್ಯ. ಅಂದು ಮಡಿಕೇರಿ ಅಕ್ಕನಲ್ಲಿಂದ ತಂದಿತ್ತು ಒಂದರಿ.
ಇದರ ಕೊದಿಲು, ದೋಸೆ ಎಲ್ಲ ಮಾಡುಲಾವುತ್ತು.
ಕಾಟುಕೇನೆಯ ಕಡೆಕೊಡಿ ತೆಗದು, ಚೋಲಿ, ನಾರು ತೆಗದು ಸಣ್ಣ ಸಣ್ಣಕ್ಕೆ ಕೊರವದು. ಇದಕ್ಕೆ ಹುಳಿ, ಬೆಲ್ಲ ಹಾಕಿ ಬೇಶಿ ಕೊದಿಲು ಮಾಡುದು. ರಜ ತೊಗರಿ ಬೇಳೆ ಹಾಕಿರೆ ಲಾಯಿಕಾವುತ್ತು.
ದೋಸೆ ಮಾಡುಲೆ ನಮ್ಮ ಉದ್ದಿನ ದೋಸೆ ಹಿಟ್ಟು ಇದ್ದಲ್ಲದೋ, ಅದಕ್ಕೆ ಇದನ್ನೂ ಸೇರುಸಿ ಕಡವದು. ಮೆಸ್ತಂಗೆ ಮೆಸ್ತಂಗೆ ಆಗಿ ಭಾರೀ ಲಾಯಿಕಾವುತ್ತು ದೋಸೆ.

ಇನ್ನೊಂದು ಕಪ್ಪು ಕೆಸವು ಹೇಳಿ ಬತ್ತು ಆಟಿಲಿ. ಈಗ ಮಾಂತ್ರ ಅದು ಅಳುಕ್ಕೊಂಡು ಬಯಿಂದೋಳಿ ಕಾಣುತ್ತು. ಬಂಡಾಡಿ ಮಜಲಿಲೂ ಕಂಡಿದಿಲ್ಲೆ ಈ ಸರ್ತಿ. ಅದರ ದಂಟಿಂದು ಸಾರು ಮಾಡುಲಾವುತ್ತು. ಅದು ಹೆಮ್ಮಕ್ಕಳ ಆರೋಗ್ಯಕ್ಕೆ ಒಳ್ಳೆದಡ. ಮೊನ್ನೆ ಭಾರದ್ವಾಜದ ದೇವಿಯೂ ಹೇಳಿಗೊಂಡಿದ್ದತ್ತು. ಕಾನಾವು ತೋಟಲ್ಲಿ ಇದ್ದೋ ಏನೊ. ಕೇಳೆಕ್ಕು ಒಂದರಿ…

ಆಟಿಲಿ ಹೂಗುಗೊ ಕಮ್ಮಿ ಆದರೂ ಅಡಿಗೆ ವೈವಿದ್ಯಂಗೊ ತರಾವರಿ ಮಾಡುಲೆ ಸಿಕ್ಕುತ್ತು. ಹೂಗಿನ ಪರಿಮ್ಮಳ ಇಲ್ಲದ್ದದಕ್ಕೆ ನಮುನೆ ನಮುನೆ ಅಡಿಗೆ ಪರಿಮ್ಮಳ ಹೇಳುಗು ನೆಗೆಗಾರ…
ಇದರಲ್ಲಿ ನಿಂಗಳ ಮನೆ ಸುತ್ತಮುತ್ತ ಸಿಕ್ಕುದರ ಎಲ್ಲ ಮಾಡಿ ತಿನ್ನಿ ಆತೊ… ಮತ್ತೆ ಎಂತಾರು ಬೇಕಾದರೆ ಬಂಡಾಡಿಗೆ ಬಂದರಾತು…

ಆಟಿಲಿ ಬಪ್ಪ ಬಗೆ ಬಗೆ ಸೊಪ್ಪುಗೊ..., 4.7 out of 10 based on 12 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

 1. ಗಬ್ಬಲಡ್ಕ ಕೇಶವ

  ಲೇಖನ ಒಳ್ಳೆದಾಯಿದು….
  ಎನಗೆ ತಗತ್ತೆ-ಬೇಳೆ ತಾಳು ಹೇಳ್ರೆ ತುಂಬ ಇಷ್ಟ…
  ಇನ್ನು ಮನೆಲಿ ಕೆಸವಿನದ್ದು ಎಂತಾರು ಮಾಡಿರೆ ಅದು ತೊರುಸದ್ರೂ, ಮದಾಲು ಬಾಯಿಗೆ ಹಾಕಿದವ’ “ತೊರುಸುತ್ತೂ….!” ಹೇಳಿ ಬೊಬ್ಬೆ ಹಾಕಿದರೆ ಮುಗಾತು…… ಒಳುದವು ಅದರ ಮುಟ್ಟುಲೂ ಹೋಗವು….

  [Reply]

  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  ಅಪ್ಪು ಪುಳ್ಳೀ… ಆರಾದರು ಒಬ್ಬ ಲಾಯಿಕಿಲ್ಲೆ ಹೇಳಿದರೆ ಮತ್ತೆ ಅದು ಒಳುದ್ದೇ… ಸರಸೊತಿ ಅಕ್ಕ “ಆನೆಂತ ಅದರ ತಲಗೆ ಕಟ್ಟಿಗೊಳೆಕ್ಕೊ..” ಹೇಳಿ ಪರಂಚುಗು. ಮಾಡಿದ್ದೆಲ್ಲ ವೆರ್ತ ಆವುತ್ತನ್ನೇಳಿ. ಆ ಲೆಕ್ಕಲ್ಲಿ ನಮ್ಮ ಅಕ್ಷರದ ಮಾಣಿಯ ಮೆಚ್ಚೆಕ್ಕು. ಒಂದು ರೆಜವೂ ವೆರ್ತ ಅಪ್ಪಲೆ ಬಿಡ. ಅದು ಹೇಂಗೇ ಇರಳಿ ತಿಂಬಲೇಳಿ ಮಾಡಿದ್ದಲ್ಲದೋ ಹೇಳಿಗೊಂಡು ಪೂರ ಮುಗಿಶುಗು ಬೇಕಾರೆ. ಶಾಂತಕ್ಕನುದೇ ಹೇಳಿಗೊಂಡಿದ್ದತ್ತು.

  [Reply]

  VA:F [1.9.22_1171]
  Rating: +1 (from 1 vote)
 2. ಒಪ್ಪಣ್ಣ

  ಅಜ್ಜೀ..
  ಸೊಪ್ಪು, ಕೆಸವುಗಳ ಬಗ್ಗೆ ಲಾಯ್ಕ ಬರದ್ದಿ.
  ಚೇಟ್ಳ, ತಗತ್ತೆ, ಕೆಸವು, ಮರಕೆಸವು – ಎಲ್ಲವುದೇ ನಮ್ಮ ನಡುಕೆ ಇಪ್ಪಂತಾದ್ದು.
  ಈಗಾಣೋರಿಂಗೆ ಕೆಸವು ಕಸವಾಯಿದು!

  ಆದರೆ ಉರಗೆ ಎಂತ್ಸಕ್ಕೆ ಬಿಟ್ಟದು? ಮರವದಕ್ಕೆ ಒಳ್ಳೆದಡ, ನಿಂಗಳೇ ಹೇಳಿತ್ತಿದ್ದಿ..
  ಉರಗೆ ತಂಬುಳಿ ಮಾಡ್ಳೇ ಮರದತ್ತೋ? 😉

  [Reply]

  VA:F [1.9.22_1171]
  Rating: 0 (from 0 votes)
 3. ಡಾಗುಟ್ರಕ್ಕ°
  ಡಾ.ಸೌಮ್ಯ ಪ್ರಶಾಂತ

  ಅಜ್ಜಿ ಹೇಳಿದ ಸೊಪ್ಪುಗೊ ಮಳೆಗಾಲಲ್ಲಿ ಮಾತ್ರ ಸಿಕ್ಕುವ ಕಾರಣ ವರ್ಷಕ್ಕೊಂದು ಸರ್ತಿ ಮಾತ್ರ ಮಾಡ್ಲೆ ಎಡಿವದು.. ಮಳೆಗಾಲಲ್ಲಿ ಇದು ತಿಂಬಲೂ ರುಚಿ,ಆರೋಗ್ಯಕ್ಕೂ ಒಳ್ಳೆದು.. ಆಯುರ್ವೇದದ ಪ್ರಕಾರ ಮಳೆಗಾಲಲ್ಲಿ ವಾತ ದೋಷ ಹೆಚ್ಚಾವುತ್ತು,ಅದರ ಗುಣ ಶೀತ.. ಕೆಸವಿನ ಸೊಪ್ಪು ಉಷ್ಣ ಗುಣ ಇಪ್ಪಂತ್ತದ್ದು.. ಹಾಂಗಾಗಿ ಒಳ್ಳೆದು… ಮತ್ತೆ ಯಾವಾಗಳೂ ಆಯಾಯ ಕಾಲಲ್ಲಿ ಸಿಕ್ಕುವ ಸೊಪ್ಪು-ತರಕಾರಿಗಳಲ್ಲಿ ಅತೀ ಹೆಚ್ಚು ಪೌಷ್ಟಿಕಾಂಶಂಗೊ ಇಪ್ಪದು.. ಈಗಾಣ ಆಹಾರ ಪದ್ದತಿ ಪ್ರಕಾರ ಸೊಪ್ಪುಗಳಲ್ಲಿ ಅತೀ ಹೆಚ್ಚು ವಿಟಮಿನ್ ಗ ಇರ್ತು.. ಹಾಂಗಾಗಿ ಸೊಪ್ಪುಗೊ ಯಾವ ಕಾಲಕ್ಕೂ ಒಳ್ಳೆ ಆಹಾರ.. :)
  ಅಜ್ಜಿ ಇನ್ನೂ ಹೀಂಗೇ ಅಡಿಗೆಗೊ ಬರೆತ್ತಾ ಇರಿ… :)

  [Reply]

  ನೆಗೆಗಾರ°

  ನೆಗೆಗಾರ° Reply:

  { ಅಡಿಗೆಗೊ ಬರೆತ್ತಾ ಇರಿ }
  – ಬರೆತ್ತಾ ಇದ್ದರೆ ಮಾಡುದಾರಂಬಗ? ಎಂಗೊಗೆ ಹೊಟ್ಟೆ ಹಶು ಆವುತ್ತಾ ಇದ್ದು ಈ ಅಜ್ಜಿ ಬರವಲೆ ಸುರು ಮಾಡಿದ ಮತ್ತೆ! :-(

  [Reply]

  ಡಾಗುಟ್ರಕ್ಕ°

  ಡಾ.ಸೌಮ್ಯ ಪ್ರಶಾಂತ Reply:

  ಅಜ್ಜಿ ಹೇಳಿ ಕೊಡ್ತವನ್ನೇ!!! ಯಾವಗ ನೋಡಿದರೂ ಅಜ್ಜಿಯತ್ರೆ ತಿಂಬಲೆ ಮಾಡಿ ಮಡುಗಿ ಬತ್ತೆಯ ಹೇಳುದಲ್ಲದ್ದೆ ಒಂದು ಪುಳ್ಳಿಯೂ ಅಜ್ಜಿಗೆ ರಜ ಸಹಾಯ ಮಾಡ್ತೆ ಹೇಳಿ ಹೇಳಿದೋರು ಕಾಣ್ತವಿಲ್ಲೆಪ್ಪಾ… ಅಜ್ಜಿ ಅಸಬಡಿತ್ತಾ ಇದ್ದವು,ಪುಳ್ಳಿಯಕ್ಕೊ ಕಣಿಲೆ ತಂದು ಕೊಟ್ಟಿದವಿಲ್ಲೆ ಹೇಳಿ… ಈ ಸರ್ತಿ ಅಜ್ಜಿ ಹೇಳಿದಾಂಗೆ ಅಡಿಗೆ ಮಾಡಿ ಪುಳ್ಳಿಯಕ್ಕೊ ಅಜ್ಜಿಗೆ ತಿನ್ಸಿ ನೋಡಾ… ಎಡಿಗಾ??? 😉
  ಯಾವಾಗಳೂ ಅಮ್ಮ,ಅಜ್ಜಿಯತ್ರೆ ನಾನಾ ನಮೂನೆಯ ಅಡಿಗೆ ಮಾಡಿಕೊಡಿ ಹೇಳಿ ಹೇಳ್ತು,ಅವು ಮಾಡಿ ಕೊಟ್ಟಪ್ಪಗ ಬೆಶಿ ಬೆಶಿ ತಿಂತು.ಆದರೆ ಯಾವತ್ತಾದರೂ ಅವಕ್ಕೆ ಬೆಶಿ ಬೆಶಿ ಅಡಿಗೆ ಮಾಡಿ ಕೊಡುವೋರು ಆರಿದ್ದವು ಹೇಳಿ ಯೋಚನೆ ಮಾಡಿದ್ದಾ?? ಹಾಂಗಾಗಿ ಈ ಮಳೆಗಾಲಲ್ಲಿ ಯಾವಾಗಳೂ ಅಜ್ಜಿಯ ಅಡಿಗೆ ಉಂಬ ಪುಳ್ಳಿಯಕ್ಕೊ ಅಜ್ಜಿಯ ಉಸ್ತುವಾರಿಲಿ ಅಡಿಗೆ ಮಾಡಿ ಅಜ್ಜಿಗೆ ಬೆಶಿ ಬೆಶಿಯಾಗಿ ಉಂಬಲೆ ಬಳ್ಸಿ.. ಆಗದೋ???? :)

  [Reply]

  VA:F [1.9.22_1171]
  Rating: 0 (from 0 votes)
  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  ಅಪ್ಪೋ ನೆಗೆಗಾರೊ.. ನೀನು ಹೇಳುದು ಕೇಳಿರೆ ಈ ಅಜ್ಜಿ ಎಂತದೂ ಮಾಡಿಕೊಡ್ತೇ ಇಲ್ಲೆ ಪುಳ್ಯಕ್ಕೊಗೆ ಹೇಳಿ ಗ್ರೇಶೆಕ್ಕು ಆರಾರು. ಅಲ್ಲಿ ಅಟ್ಟುಂಬೊಳ ನೀನು ಅಯಿದು ಪತ್ರೊಡೆ ತಿಂದದು, ತಗತ್ತೆ ಸೊಪ್ಪಿನ ತಾಳ್ಳು ಮಾಡಿದ ಬಣಲೆ ಕಾಲಿ ಮಾಡಿದ್ದದು ಎಲ್ಲ ಆರಿಂಗೂ ಗೊಂತೇ ಇಲ್ಲೆ…

  [Reply]

  VA:F [1.9.22_1171]
  Rating: 0 (from 0 votes)
  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  ವೀಟಮೀನಿನ ಬಗ್ಗೆ ಎಲ್ಲ ನೀನೆ ಹೆಳೆಕಷ್ಟೆ ಸೌಮ್ಯೊ.. ಅಜ್ಜಿಗೆ ಗೊಂತಾಗ.

  [Reply]

  VA:F [1.9.22_1171]
  Rating: 0 (from 0 votes)
 4. ಚುಬ್ಬಣ್ಣ
  ಪೊಸವಣಿಕೆ ಚುಬ್ಬಣ್ಣ...

  ಬಾಯಿಲಿ ನೀರು ಬತ್ತಾ ಇದ್ದು.. ಕಣಿಲೆ ಉಪ್ಪಿನಕಾಯಿ, ತಗತೆ ತಾಳು,ಕಾಟುಕೇನೆ ಅಥವ ಕೇನೆ ಕೊದಿಲು, ಬೆಶಿ ಬೆಶಿ ಅಶನ ರಜ ತುಪ್ಪ ಒಂದು ಎರದು ಹಪ್ಪಳ ಎಲ್ಲ ಒಟ್ಟು ಹಾಕಿ ಈ ಮಳೆಗೆ ತಿಂದರೆ…..
  ಆ ಬಾರಿ ಲಾಯ್ಕ ಅವುತ್ತು..

  [Reply]

  ನೆಗೆಗಾರ°

  ನೆಗೆಗಾರ° Reply:

  { ಬಾಯಿಲಿ ನೀರು ಬತ್ತಾ ಇದ್ದು. }
  – ಓಹೋ! ಬಂಡಾಡಿ ಅಜ್ಜಿ ಹಾಕಿದ ಉಪ್ಪಿನಕಾಯಿ ತಿಂದು ನೋಡು – ಕಾರಕ್ಕೆ ಕಣ್ಣಿಲಿ ನೀರುಬಕ್ಕು, ಹಾಂ!!

  [Reply]

  ಚುಬ್ಬಣ್ಣ

  ಪೊಸವಣಿಕೆ ಚುಬ್ಬಣ್ಣ... Reply:

  ha ha.. 😛

  [Reply]

  VA:F [1.9.22_1171]
  Rating: 0 (from 0 votes)
 5. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಅಜ್ಜಿಯ ಆಟಿ ವೈವಿಧ್ಯಂಗ ಲಾಯಕಲ್ಲಿ ಬಯಿಂದು… ನಮ್ಮ ಡಾಗುಟ್ರಕ್ಕ° ಹೇಳಿದ ಹಾಂಗೆ ಸೊಪ್ಪುಗಳಲ್ಲಿ ವಿಟಮಿನ್ ಹೆಚ್ಚು ಹೇಳಿ ಅದರಲ್ಲೂ ಈ ಮಾಸಲ್ಲಿ ಸೊಪ್ಪುಗಳ ಆರೋಗ್ಯಕ್ಕೆ ಬೇಕಾಗಿ ತಿನ್ನೆಕ್ಕು ಹೇಳಿ ಎಂಗಳ ಮನೆಯ ಡಾಕ್ಟ್ರು ಹೇಳ್ತವು.. ಎಲ್ಲೋರೂ ಆಟಿಯ ಸಮಯ ಅಜ್ಜಿ ಹೇಳಿದ ಹಾಂಗೆ ಸೊಪ್ಪುಗಳ ಅಡಿಗೆ ಮಾಡಿ ಅರೋಗ್ಯ ವೃಧ್ಧಿ ಮಾಡುವ°.. ಇಲ್ಲದ್ದರೆ ಮತ್ತೆ ಒಂದು ವರ್ಷ ಕಾಯೇಕ್ಕನ್ನೇ!!!! ಅಲ್ಲದಾ ಅಜ್ಜೀ?

  [Reply]

  ನೆಗೆಗಾರ°

  ನೆಗೆಗಾರ° Reply:

  { ಒಂದು ವರ್ಷ ಕಾಯೇಕ್ಕನ್ನೇ!!!! }
  – ಒಂದೊರಿಶ ಕಾಯೆಕ್ಕೂಳಿ ಇಲ್ಲೆ. ರೂಪತ್ತಿ ಬ್ರಿಜ್ಜಿನ ಒಳದಿಕೆ ಸುಮಾರು ಸೊಪ್ಪುಗೊ ಇರ್ತು, ಹಟ್ಟಿ ಬೈಪ್ಪಾಣೆಯ ನಮುನೆಗೆ!! 😀

  [Reply]

  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  ಓ ನಿನಗೆ ಮೊನ್ನೆ ಶೀತ ಅಪ್ಪಲೆ ಕಾರಣ ಎಂತಾಳಿ ಈಗ ಗೊಂತಾತದ… ರೂಪನ ಬ್ರಿಜ್ಜಿನ ಒಳದಿಕಂದ ಎಂತದೋ ತಿಂದಿದ ಮಾಣಿ…
  ಗೆಣಮೆಣಸಿನ ಕಷಾಯ ಮಾಡಿ ಕಾದುಗೊಂಡಿತ್ತಿದ್ದೆ… ಮತ್ತೆ ಇತ್ಲಾಗಿ ಬಯಿಂದೇ ಇಲ್ಲೆ ಅಲ್ಲದೋ…

  [Reply]

  VA:F [1.9.22_1171]
  Rating: 0 (from 0 votes)
  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  ಅಪ್ಪು ದೇವೀ…

  [Reply]

  VA:F [1.9.22_1171]
  Rating: 0 (from 0 votes)
 6. ಮಂಗ್ಳೂರ ಮಾಣಿ
  ಮಂಗ್ಳೂರ ಮಾಣಿ...

  ಎಂತ ಅಜ್ಜಿ ಕಾಣ್ತಿಲ್ಲೆ ಹೇಳಿ ಹುಡುಕ್ಕಿಯೊಂದು ಇತ್ತಿದ್ದೆ… ಹಾಂ ಈಗ ಕಂದತ್ತದ .. ಲೈಕ ಆಯಿದಜ್ಜಿ ಬರದ್ದು..

  [Reply]

  VA:F [1.9.22_1171]
  Rating: 0 (from 0 votes)
 7. ಅಜ್ಜಕಾನ ಭಾವ

  ಓ ಬಟ್ಯಾ ಕಣಿಲೆ ಕೊಣ್ಯರ ಪೊಯಿನಾಯೆನ ಸುದ್ದಿನೇ ಇಜ್ಜಿ. ಕುಂಞಿ ದೆತ್ತಿ ಬಟ್ಯ ಇತ್ತೆ ಕೊಣರ್ವೆ ಪಂಡು ಕಾತೊಂದು ಉಲ್ಲೆರು..

  [Reply]

  ಬಂಡಾಡಿ ಅಜ್ಜಿ

  ಬಂಡಾಡಿ ಅಜ್ಜಿ Reply:

  ಇನ್ನು ಕಣಿಲೆ ಸಿಕ್ಕ ಅಬ್ಬೋ.. ಎಲ್ಲ ಬೆದುರಪ್ಪಲೆ ಆತು….

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ಜಯಗೌರಿ ಅಕ್ಕ°ಕಾವಿನಮೂಲೆ ಮಾಣಿಶೇಡಿಗುಮ್ಮೆ ಪುಳ್ಳಿಜಯಶ್ರೀ ನೀರಮೂಲೆಬಂಡಾಡಿ ಅಜ್ಜಿvreddhiನೀರ್ಕಜೆ ಮಹೇಶಅನುಶ್ರೀ ಬಂಡಾಡಿಅಕ್ಷರ°ಬೋಸ ಬಾವಮುಳಿಯ ಭಾವಅಡ್ಕತ್ತಿಮಾರುಮಾವ°ದೇವಸ್ಯ ಮಾಣಿಬೊಳುಂಬು ಮಾವ°ಮಾಲಕ್ಕ°ಪ್ರಕಾಶಪ್ಪಚ್ಚಿದೀಪಿಕಾತೆಕ್ಕುಂಜ ಕುಮಾರ ಮಾವ°ಮಂಗ್ಳೂರ ಮಾಣಿಎರುಂಬು ಅಪ್ಪಚ್ಚಿಮಾಷ್ಟ್ರುಮಾವ°ಚೆನ್ನಬೆಟ್ಟಣ್ಣದೊಡ್ಡಭಾವವಾಣಿ ಚಿಕ್ಕಮ್ಮಪುತ್ತೂರುಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ