ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಅಕ್ಷರ°ಪೆರ್ಲದಣ್ಣಕೊಳಚ್ಚಿಪ್ಪು ಬಾವನೀರ್ಕಜೆ ಮಹೇಶಮಂಗ್ಳೂರ ಮಾಣಿಸರ್ಪಮಲೆ ಮಾವ°ಶ್ರೀಅಕ್ಕ°ಪೆಂಗಣ್ಣ°ಶಾಂತತ್ತೆಪುತ್ತೂರಿನ ಪುಟ್ಟಕ್ಕಗಣೇಶ ಮಾವ°ತೆಕ್ಕುಂಜ ಕುಮಾರ ಮಾವ°ಅನು ಉಡುಪುಮೂಲೆದೇವಸ್ಯ ಮಾಣಿಅನುಶ್ರೀ ಬಂಡಾಡಿಬಟ್ಟಮಾವ°ಶೇಡಿಗುಮ್ಮೆ ಪುಳ್ಳಿಶುದ್ದಿಕ್ಕಾರ°ಕಳಾಯಿ ಗೀತತ್ತೆಕೆದೂರು ಡಾಕ್ಟ್ರುಬಾವ°ಅಡ್ಕತ್ತಿಮಾರುಮಾವ°ಅಕ್ಷರದಣ್ಣಸಂಪಾದಕ° (editor)ನೆಗೆಗಾರ°ಬಲ್ನಾಡುಮಾಣಿಒಪ್ಪಕ್ಕದೊಡ್ಡಭಾವವಸಂತರಾಜ್ ಹಳೆಮನೆಚೆನ್ನೈ ಭಾವ°ಡಾಮಹೇಶಣ್ಣವೇಣೂರಣ್ಣಹಳೆಮನೆ ಅಣ್ಣವೇಣಿಯಕ್ಕ°ಬೊಳುಂಬು ಮಾವ°ದೀಪಿಕಾಚೆನ್ನಬೆಟ್ಟಣ್ಣಅಜ್ಜಕಾನ ಭಾವಮುಳಿಯ ಭಾವಬಂಡಾಡಿ ಅಜ್ಜಿಸುಭಗಚುಬ್ಬಣ್ಣಮಾಷ್ಟ್ರುಮಾವ°ಶ್ಯಾಮಣ್ಣಕೇಜಿಮಾವ°ದೊಡ್ಡಮಾವ°ಪುತ್ತೂರುಬಾವಎರುಂಬು ಅಪ್ಪಚ್ಚಿಯೇನಂಕೂಡ್ಳು ಅಣ್ಣಡೈಮಂಡು ಭಾವಶರ್ಮಪ್ಪಚ್ಚಿವಿದ್ವಾನಣ್ಣಕಾವಿನಮೂಲೆ ಮಾಣಿಗೋಪಾಲಣ್ಣಪವನಜಮಾವಪುಟ್ಟಬಾವ°ಜಯಶ್ರೀ ನೀರಮೂಲೆಸುವರ್ಣಿನೀ ಕೊಣಲೆಚೂರಿಬೈಲು ದೀಪಕ್ಕಡಾಗುಟ್ರಕ್ಕ°


ಆಟಿಯ ಕಾಲಕ್ಕೆ ಕಣಿಲೆಯ ವೈವಿದ್ಯಂಗೊ…

July 10, 2010 ರ 9:30 pmಗೆ ನಮ್ಮ ಬಂಡಾಡಿ ಅಜ್ಜಿ ಬರದ್ದು, ಇದುವರೆಗೆ 64 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಪ್ಪ ವಾರದ ಶುದ್ದಿಶುಕ್ರವಾರ ಆಟಿ ಸುರು ಆವುತ್ತದ. ಆಟಿ ಸುರು ಅಪ್ಪಲಪ್ಪಗ ಕಣಿಲೆಯೂ ಏಳುತ್ತು. ಕಣಿಲೆಯ ವೈವಿದ್ಯಂಗೊ ಆಟಿಯ ಒಂದು ವಿಶೇಷ. ತೋಡಕರೆಯ ಒಳಚ್ಚಿಲಿಲಿಪ್ಪ ಬಾಬು ಪ್ರತೀ ವರುಷವುದೇ ಕಣಿಲೆ ತಂದು ಕೊಡುಗದ. ಕೆಲಸದ ಕಾಳಪ್ಪು ಸೊಪ್ಪು ತಪ್ಪಲೆ ಓ ಅತ್ಲಾಗಿ ಕಾಡಿನ ಗುಡ್ಡೆಗೆ ಹೋಗಿಪ್ಪಗ ಎಲ್ಲಿಯಾದರೂ ಕಣಿಲೆ ಕಣ್ಣಿಂಗೆ ಬಿದ್ದರೆ ತಾರದ್ದೆ ಇರ. ಹಾಂಗೆ ಈ ಸಮಯಲ್ಲಿ ಕಣಿಲೆದೇ ಕಾರುಬಾರ ಅಟ್ಟುಂಬೊಳ.
ಕಣಿಲೆದು ತಾಳ್ಳು, ಸಾಂಬಾರು, ಬೆಂದಿ, ಉಪ್ಪಿನಕಾಯಿ, ಪತ್ರೊಡೆ ಎಲ್ಲ ಮಾಡ್ಳಾವುತ್ತು.
ಎಂತ ಮಾಡೆಕ್ಕಾರುದೇ ಮದಾಲಿಂಗೆ ಅದರ ಚೋಲಿ ತೆಗೆಯೇಕು. ಅದರ ಒಳದಿಕೆ ಗೆಂಟುಗಳಲ್ಲಿ ಒಂದು ಸಣ್ಣ ಮುಂಗೆಯ ಹಾಂಗಿರ್ತದು ಇರ್ತು. ಅದರ ತೆಗೆಯಲೇ ಬೇಕು. ಅದು ವಿಷ – ಹೇಳಿರೆ ಒಳ್ಳೆದಲ್ಲ ಹೇಳಿ ಲೆಕ್ಕ.

ಹೀಂಗೆ ಚೋಲಿ ತೆಗದ್ದದರ ಮತ್ತೆ ಸಣ್ಣ ಸಣ್ಣಕೆ ಕೊರವದು. ಎರಡು ಮೂರು ಸರ್ತಿ ನೀರಿಂಗೆ ಹಾಕಿ ತೆಗೆಯೆಕ್ಕು. ಮುನ್ನಾದಿನ ಕೊರದು ನೀರಿಂಗೆ ಹಾಕೊದು. ಅಂಬಗಂಬಗ ನೀರು ತೆಗದು ಹಾಕಿಗೊಂಡು ಇದ್ದರಾತು.

ತಾಳ್ಳು ಮಾಡ್ಳೆ ಸುಲಾಬ. ಈ ಬಾಗವ ಒಂದು ತಪಲೆಗೆ ಹಾಕಿ ಕೊದಿಶೆಕ್ಕು. ಅದರ ನೀರು ತೆಗದು, ಒಂದು ಬಣಲೆಲಿ ಉದ್ದಿನ ಬೇಳೆ, ಎಣ್ಣೆ (ರಜಾ ಜಾಸ್ತಿಯೇ ಬೇಕು) ಎಲ್ಲ ಹಾಕಿ ತಾಳ್ಳಿಂಗೆ ಒಗ್ಗರಣೆ ಮಾಡಿ, ಅದಕ್ಕೆ ಇದರ ಹಾಕಿತ್ತು. ಮತ್ತೆ ನೀರು, ಉಪ್ಪು, ಹುಳಿ, ಬೆಲ್ಲ, ಅರಿಶಿನಹೊಡಿ, ಮೆಣಸಿನ ಹೊಡಿ ಎಲ್ಲ ಹಾಕಿ ಮುಚ್ಚಿಮಡುಗಿತ್ತು. ನೀರು ಹದಾಕೆ ಹಾಕಿರೆ ಸಾಕು. ತಾಳ್ಳು ಆಗಿಯೊಂಡು ಬಪ್ಪಾಗ ಕಾಯಿ ಹಾಕಿತ್ತು. ಬೆಶಿ ಬೆಶಿ, ಗರುಗುರು ಕಣಿಲೆ ತಾಳ್ಳು ಉಂಬಲೆ ರುಚಿ ರುಚಿ. ಒಪ್ಪಣ್ಣ ಕೊಡಿಯಂದ ಕಡೆಂಗೊರೆಗೆ ಅದರಲ್ಲೇ ಉಂಗಡ.

ಉಪ್ಪಿನಕಾಯಿ : ಈ ಸರ್ತಿ ಮಾವಿನ ಮೆಡಿ ಸಿಕ್ಕಿದ್ದೇ ಇಲ್ಲೆ ಅದ. ಶಾಂತಕ್ಕನಲ್ಲಿಂದ ಒಂದು ಕರಡಿಗೆ ಸಿಕ್ಕಿದ್ದು ಮಾಂತ್ರ. ಬೇರೆ ಎಲ್ಲಿಯೂ ಸಿಕ್ಕಿದ್ದಿಲ್ಲೆ. ಹಾಂಗೆ ಇನ್ನು ಕಣಿಲೆ ಉಪ್ಪಿನಕಾಯಿಯೇ ಆಯೆಕಷ್ಟೆ. ಉಪ್ಪಿನಕಾಯಿಗೆ ಆದರೆ ರಜಾ ದೊಡ್ಡಕೆ ಕೊರೆಯೆಕ್ಕು ಬಾಗ. ಅದರ ಎರಡು ಮೂರು ಸರ್ತಿ ತೊಳದು ಅದಕ್ಕೆ ಉಪ್ಪುದೆ, ರಜ ಹುಳಿಯನ್ನುದೆ ಹಾಕಿ ಬೇಶುದು. ನೀರು ದಣಿಯ ಬೇಡ, ರಜ್ಜ. ಬೇಶಿ ಆದ ಮತ್ತೆ ಅದರ ತಣಿವಲೆ ಮಡುಗಿತ್ತು. ಒಳ್ಳೆತ ತಣಿಯೆಕ್ಕು ಅದು. ಮತ್ತೆ ಅದಕ್ಕೆ ಹಸಿ ಹೊರಡಿ ಕೂಡಿರೆ ಉಪ್ಪಿನಕಾಯಿ ಆತದ. ಹಸಿ ಹೊರಡಿ ಮಾಡ್ತ ಕ್ರಮ ಗೊಂತಿದ್ದನ್ನೇ. ಸಾಸಮೆಯ ಹೊಡಿ ಮಾಡಿ ಅದಕ್ಕೆ ಅರಿಶಿನ ಹೊಡಿ, ಮೆಣಸಿನ ಹೊಡಿ ಬೆರುಸುದು. ಮತ್ತೆ ಅದಕ್ಕೆ ಉಪ್ಪು ನೀರು ಕೊದಿಶಿ ಅದರ ತಣಿಶಿ ಹದಾ ನೀರಪ್ಪಷ್ಟು ಎರದು ಕಲಸುದು.

ಸಾಂಬಾರು : ನೀರಿಲಿ ಹಾಕಿದ್ದ ಕಣಿಲೆಯ ತೆಗದು ಬೇರೆ ನೀರು ಹಾಕಿ ಕೊದಿಶಿ ನೀರು ಬಳಿಶುದು. ಮತ್ತೆ ತೊಗರಿಬೇಳೆ ಬೇಶಿ ಅದಕ್ಕೆ ಈ ನೀರು ತೆಗದ ಬಾಗವ ಹಾಕಿತ್ತು. ಉಪ್ಪು, ಹುಳಿ, ಬೆಲ್ಲ, ನೀರು ಹಾಕಿ ಕೊದಿಶುದು. ಮತ್ತೆ ಅರಪ್ಪು ಕೂಡಿರೆ ಆತು. ಅರಪ್ಪು ಕಡವಲೆ ಗೊಂತಿದ್ದನ್ನೆ, ಉದ್ದಿನ ಬೇಳೆ, ಕೊತ್ತಂಬರಿ, ಜೀರಿಗೆ, ಮೆಣಸು, ಎಣ್ಣೆ – ಹೊರಿವದು, ಹೊರುದು ಅಪ್ಪಲಪ್ಪಗ ರಜ ಅರಿಶಿನ ಹೊಡಿ ಹಾಕುದು. ಮತ್ತೆ ಕಡವಕಲ್ಲು ತೊಳದು, ಇದರ ಕಾಯಿಯೊಟ್ಟಿಂಗೆ ಕಡದತ್ತು. ಅರಪ್ಪು ಹಾಕಿ ಕೊದಿಶಿಕ್ಕಿ ಜೊಯಿಂಕ ಒಗ್ಗರಣೆ ಕೊಟ್ಟರೆ ಘಮ ಘಮ ಸಾಂಬಾರು ತಯಾರಾತದ.

ಬೆಂದಿ : ಬೆಂದಿಗೆ ಹಸರುಬೇಳೆ ಬೇಶಿ ಹಾಕುದು. ಬೆಂದಿಗಪ್ಪಗ ನಾಕು ಕೊತ್ತಂಬರಿ, ಜೀರಿಗೆ, ಮೆಣಸು, ಅರಿಶಿನ ಹೊಡಿ ಎಲ್ಲ ಒಂದೋ ಹಸಿಯೇ ಹಾಕುದು ಕಡವಾಗ ಅತವಾ ಎಣ್ಣೆ ಹಾಕದ್ದೆ ಹೊರುದು ಹಾಕುದು. ಮತ್ತೆ ಎಲ್ಲ ಸಾಂಬಾರಿನ ಹಾಂಗೆಯೇ. ಬೆಂದಿದು ಒಂದು ರೀತಿ ಪರಿಮ್ಮಳ ಸಾಂಬಾರಿಂದು ಮತ್ತೊಂದು ರೀತಿ. ನಾವು ನಿತ್ಯ ಮಾಡುದೇ ಅಲ್ಲದೋ? ಹೇಳಿದಾಂಗೆ ಎರಡಕ್ಕೂ ಹುಳಿ ಹಾಕೆಕ್ಕು ಆತೊ. ಹೇಳುಲೆ ಮರದತ್ತದ.

ಪತ್ರೊಡೆ : ಕಣಿಲೆಯ ತೆಳೂವಿಂಗೆ ಕೊಚ್ಚಿ, ನೀರಿಲಿ ಹಾಕಿ ಮಡುಗುದು. ಆಗ ಹೇಳಿದಾಂಗೆ ಮುನ್ನಾಣ ದಿನವೇ ಹಾಕಿ ಮಡುಗುದು. ಎಡಕ್ಕಿಲಿ ಎರಡು ಮೂರು ಸರ್ತಿ ನೀರು ಬದಲುಸುದು. ಪತ್ರೊಡೆ ಮಾಡ್ಳೆ ಉದೀಯಪ್ಪಗಳೇ ಕೊಯಿಶಕ್ಕಿ ಬೊದುಲುಲೆ ಹಾಕೆಕ್ಕು. ಅದಕ್ಕೆ ಕೊತ್ತಂಬರಿ, ಜೀರಿಗೆ, ಹುಳಿ, ಮೆಣಸು, ಬೆಲ್ಲ ಎಲ್ಲ ಹಾಕಿ ಕಡವದು ಹೊತ್ತೊಪ್ಪಗ. ಆ ಹಿಟ್ಟಿಂಗೆ ಕಣಿಲೆ ಕೊಚ್ಚಿ ಮಡಿಗಿದ್ದರ ನೀರು ಬಳಿಶಿ ತೆಗದು ಬೆರುಸಿತ್ತು. ಮತ್ತೆ ಬಾಳೆಲಿ ಮಡುಸಿ ಬೇವಲೆ ಮಡುಗಿತ್ತು.  ಈಗ ಮಳೆ ರಜ ಕಮ್ಮಿ ಆಯಿದು. ಹಾಂಗಾಗಿ ಬಾಳೆಲೆ ತಪ್ಪಲೆ ನೆಮ್ಮದಿಲಿ ಹೋಪಲಕ್ಕು. ಹಿಸ್ಕಿನ ಉಪದ್ರವೂ ಕಮ್ಮಿ ಇದಾ.

ಹ್ಮ್… ಕಣಿಲೆ ಆರೋಗ್ಯಕ್ಕುದೇ ಒಳ್ಳೆದಡ. ಹಾಂಗೇಳಿ ದಣಿಯ ತಿಂಬಲೂ ಆಗ. ಒಂದು ರಜ ಉಷ್ಣವುದೇ. ಅದು ಹೊಟ್ಟೆಲಿದ್ದ ತಲೆಕಸವನ್ನುದೇ ಕರಗುಸುತ್ತಡ! ಓ ಮೊನ್ನೆ ಪೇಪರಿಲಿ ಬಂದಿತ್ತಡ ಒಪ್ಪಕ್ಕ ಹೇಳಿತ್ತು.
ಈಗ ಕಣಿಲೆಯ ಕಾಲ. ಎಲ್ಲೊರುದೇ ಒಂದರಿ ಆದರೂ ಕಣಿಲೆದು ಎಂತಾರು ಮಾಡಿ ತಿನ್ನೆಕ್ಕು. ಅತ್ಲಾಗಿ ಎಲ್ಲಿಯೂ ಸಿಕ್ಕದ್ದರೆ ಇತ್ತೆ ಬನ್ನಿ. ಕಾಳಪ್ಪುವಿನತ್ತರೆ ತಂದು ಕೊಡುಲೆ ಹೇಳ್ತೆ ಎಂತ? ಒಂದು ರೆಜ ಕಣಿಲೆ ಉಪ್ಪಿನಕಾಯಿಯೂ ಕೊಂಡೋಪಲಕ್ಕದ.

ಆಟಿಯ ಕಾಲಕ್ಕೆ ಕಣಿಲೆಯ ವೈವಿದ್ಯಂಗೊ..., 5.0 out of 5 based on 3 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಬಂಡಾಡಿ ಅಜ್ಜಿ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 64 ಒಪ್ಪಂಗೊ

  1. raamajja
    VA:F [1.9.3_1094]
    Rating: 0 (from 0 votes)

    adaa.laayka aayidu.. aanu monne sose hatre maDule hELittidde.. taallude patrodede laayka maaDiddu.. ajji maaDidaSTu laayka aagira….

    [ಉತ್ತರುಸಿ]

    ಬಂಡಾಡಿ ಅಜ್ಜಿ ಉತ್ತರ ಕೊಟ್ಟದು:
    ಬಂಡಾಡಿ ಅಜ್ಜಿ

    VA:F [1.9.3_1094]
    Rating: +1 (from 1 vote)

    ಅಪ್ಪೋ.. ಒಳ್ಳೆದಾತು. ಇನ್ನೊಂದರಿ ಮಾಡಿದರೆ ಎನಗೂ ಕಳುಸಿಕ್ಕಿ ಅಣ್ಣೋ ರುಚಿ ನೂಡುಲೆ.. ಏ°?

    [ಉತ್ತರುಸಿ]

  2. ಡಾ.ಕೆ.ಜಿ.ಭಟ್.
    ಕೇಜಿಮಾವ°
    VA:F [1.9.3_1094]
    Rating: +1 (from 1 vote)

    ಕಣಿಲೆ ಉಪ್ಪಿನಕಾಯಿಗೆ ನಿಂಬೆ ಹುಳಿ ಹಾಕಿ ಮಾಡಿರೆ ಲಾಯಕ ಆವುತ್ತು.ನಮ್ಮ ಊರಿಲ್ಲಿ ಹುಳಿ ಉಪ್ಪಿನಕಾಯಿಗೆ ಮೆಣಸು ಹಾಕಿ ಮಾಡುದು ರಜಾ ಕಮ್ಮಿ ಅಲ್ಲದೋ,ಆದರೆ ಕಣಿಲೆ ನಿಂಬೆ ಉಪ್ಪಿನಕಾಯಿ ಬಾರೀ ರುಚಿ.
    ಸರಿಯಾದ ಸಮಯಕ್ಕೆ ಕಣಿಲೆ ರೆಸಿಪಿ ಸಿಕ್ಕಿದ್ದು ಒಳ್ಳೇದೆ.

    [ಉತ್ತರುಸಿ]

    ಬಂಡಾಡಿ ಅಜ್ಜಿ ಉತ್ತರ ಕೊಟ್ಟದು:
    ಬಂಡಾಡಿ ಅಜ್ಜಿ

    VA:F [1.9.3_1094]
    Rating: 0 (from 0 votes)

    ಹ್ಮ್ ಮಾಡ್ಳಕ್ಕು.. ಕೆಲಾವು ನಿಂಬೆಯೊಳಿ ಕೈಕ್ಕೆ ಬತ್ತದಾ.. ಹಾಂಗಿದ್ದರೆ ಅಷ್ಟು ಲಾಯಿಕಾಗದೋಳಿ.
    ಮತ್ತೆ ನಿಂಬೆಯೊಳಿದು ಹಸಿಹೊರಡಿ ಲಾಯಿಕಕ್ಕೊ ಗೊಂತಿಲ್ಲೆ. ಹೊರುದು ಕೂಡಿ ಮಾಡ್ಳಕ್ಕು.

    ಹೇಳಿದಾಂಗೆ ಕಣಿಲೆಯೊಟ್ಟಿಂಗೆ ಅಂಬಟೆ ಕೆತ್ತೆ ಕೆತ್ತಿ ಹಾಕಲಕ್ಕು. ಅದು ಲಾಯಿಕಾವುತ್ತು. ಬೆಳಗಜೆ ಗೌರಕ್ಕ ಹಾಂಗೇ ಮಾಡೊದು ಏವಾಗಳುದೇ.

    [ಉತ್ತರುಸಿ]

    ಡಾ.ಕೆ.ಜಿ.ಭಟ್. ಉತ್ತರ ಕೊಟ್ಟದು:
    ಕೇಜಿಮಾವ°

    VA:F [1.9.3_1094]
    Rating: 0 (from 0 votes)

    ನಿಂಬೆ ಹುಳಿಯ ರುಚಿ ರಜಾ ಕೈಕ್ಕೆಯೇ ಅಲ್ಲದೋ?ಮಾಡಿ ನೋಡಿ,ತುಂಬಾ ರುಚಿ ಆವುತ್ತು,ಹಸಿ ಕಡದು ಹಾಕಲಕ್ಕು,ಹೊರುದು ಹಾಕಿರೂ ಲಾಯಕಾವುತ್ತು.ಮಡಿಕೇರಿ ಕಡೇಲಿ ಹಾಂಗೆ ಮಾಡ್ತವು,ಈಗ ಆನುದೇ ಹಾಂಗೆ ಮಾಡ್ತೆ.
    ಅಂಬಟೆ ಹೆಂಗೂ ಗೊಂತಿಪ್ಪದೆ.

    [ಉತ್ತರುಸಿ]

  3. ನೀರ್ಕಜೆ ಚಿಕ್ಕಮ್ಮ
    ನೀರ್ಕಜೆ ಚಿಕ್ಕಮ್ಮ
    VA:F [1.9.3_1094]
    Rating: 0 (from 0 votes)

    ತುಂಬಾ ಒಳ್ಳೆದಾತು ನೆಂಪು ಮಾಡಿದ್ದಕ್ಕೆ, ಊರಿಂದ ಬಪ್ಪಾಗ ಕಣಿಲೆ ತಪ್ಪಲೆ ಹೇಳಿದೆ…. ಇದರ ಓದಿ ಅಪ್ಪಾಗ ಬಾಯಿಲ್ಲಿ ನೀರು ಅರುದತ್ತು….. ಎನ್ನ ಭಾರೀ ಪ್ರೀತಿಯ ವಿಶ್ಯ………… ಅಭಿವಂದನೆಗೊ.

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +1 (from 1 vote)

    { ಬಾಯಿಲ್ಲಿ ನೀರು ಅರುದತ್ತು }
    ಕೀಬೋರ್ಡು ಚೆಂಡಿ ಆದ್ದಕ್ಕೆ ಅಪ್ಪಚ್ಚಿ ಬೈದವೋ? ;-)

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.3_1094]
    Rating: 0 (from 0 votes)

    ಚೆಂಡಿ ಆದರೆ ತೊಂದರಿಲ್ಲೆ ,, ಕರಂಚಿದ ಪರಿಮ್ಮಳ ಬಂದರೆ ಕಷ್ಟ,, :D

    [ಉತ್ತರುಸಿ]

    ನೀರ್ಕಜೆ ಚಿಕ್ಕಮ್ಮ ಉತ್ತರ ಕೊಟ್ಟದು:
    ನೀರ್ಕಜೆ ಚಿಕ್ಕಮ್ಮ

    VA:F [1.9.3_1094]
    Rating: 0 (from 0 votes)

    ಇದಾ.. ನೆಗೆಗಾರ ಭಾವ, ಲೇಪುಟೋಪು ಡೆಸ್ಕ್ ಮೇಲೆ ಅಪ್ಪಚ್ಚಿ ಮಡುಗಿದ್ದು ಎಂತಕ್ಕೆ ಹೇಳಿ ಈಗ ಗೊಂತಾತು…… ಅದೊಂದು ಪುಣ್ಯ…..

    [ಉತ್ತರುಸಿ]

    ಅಜ್ಜಕಾನ ಭಾವ ಉತ್ತರ ಕೊಟ್ಟದು:
    ಅಜ್ಜಕಾನ ಭಾವ

    VN:F [1.9.3_1094]
    Rating: +1 (from 1 vote)

    ಅದಾ ಚಿಕ್ಕಮ್ಮಂಗೆ ಕೋಪ ಬಪ್ಪದು..
    @ಊರಿಂದ ಬಪ್ಪಾಗ ಕಣಿಲೆ ತಪ್ಪಲೆ ಹೇಳಿದೆ
    ಇಂದು ಇರುಲಿಂಗೊ ನಾಳಾಂಗೊ… ಹೇಳಿಕ್ಕಿ ಎಂಗಳೂ ಬತ್ತೆಯೋ….

    [ಉತ್ತರುಸಿ]

    ನೀರ್ಕಜೆ ಚಿಕ್ಕಮ್ಮ ಉತ್ತರ ಕೊಟ್ಟದು:
    ನೀರ್ಕಜೆ ಚಿಕ್ಕಮ್ಮ

    VA:F [1.9.3_1094]
    Rating: 0 (from 0 votes)

    ಇಂದು ಬಂದದಟ್ಟೇ ಅಜಕ್ಕಾನ ಭಾವಯ್ಯಾ, ಈಗ ನೀರ್ಲಿ ಹಾಕಿ ಮಡುಗಿದ್ದೆ…. ಎಲ್ಲೋರೂ ನಾಳಂಗೆ ಮಧ್ಯಾಹ್ನಕ್ಕೆ ಬನ್ನಿ…… ತಾಳಿಂಗೆ ಸಾಸಮ್ಮೆ – ಕಾಯಿ- ಅರಶಿನ ಕಡದು ಹಾಕಿ ಮಾಡ್ತೆಯ,…….

    [ಉತ್ತರುಸಿ]

    ಬಂಡಾಡಿ ಅಜ್ಜಿ ಉತ್ತರ ಕೊಟ್ಟದು:
    ಬಂಡಾಡಿ ಅಜ್ಜಿ

    VA:F [1.9.3_1094]
    Rating: +1 (from 1 vote)

    ಅಪ್ಪೋ ಪುಳ್ಳಿ.. ಹೊತ್ತಿಂಗಪ್ಪಗ ಹೋಪದೋ… ರಜ ಮೊದಲೇ ಹೋಗಿ ಕಡವಲೋ ಮಣ್ಣ ಸೇರುಲಾಗದೋ..? ಎಲ್ಲೊರಿಂಗೂ ಮಾಡಿ ಕೊಡೆಡದೋ ಅದು ಪಾಪ…

    [ಉತ್ತರುಸಿ]

  4. ಶ್ರೀಕೃಷ್ಣ ಶರ್ಮ. ಹಳೆಮನೆ
    ಶರ್ಮಪ್ಪಚ್ಚಿ
    VA:F [1.9.3_1094]
    Rating: +1 (from 1 vote)

    ಕಣಿಲೆಯ ಎಲ್ಲಾ ಅಡಿಗೆಗಳೂ ತಿಂಬಲೆ ಲಾಯಿಕ್ ಆವುತ್ತು. ಆದರೆ ಉಪಯೋಗಿಸುವವು ಜಾಗ್ರತೆ ಮಾಡೆಕಾದ್ದು ಅದರ ವಿಷದ ಅಂಶದ ಬಗ್ಗೆ. ಇದರಲ್ಲಿ ಇಪ್ಪ ವಿಷ “ಸಯನೈಡ್” ಹೇಳುವದು ತುಂಬಾ ಅಪಾಯಕಾರಿ. ಕಣಿಲೆಯ ಸರಿಯಾಗಿ ನೆನೆಸಿ (ಒಂದು ದಿನ ಆದರೂ ನೀರಿಲ್ಲಿ ಮಡುಗಿ) ನೀರು ತೆಗದು, ಪುನಃ ಬೇಯಿಸಿದ ನೀರನ್ನೂ ಚೆಲ್ಲಿ ಅಡಿಗೆ ಮಾಡುವದು ಸೂಕ್ತ. ಅಂಬ್ರೆಪ್ಪಿಲ್ಲಿ ಕಣಿಲೆ ಅಡಿಗೆ ಆಯೆಕ್ಕು ಹೇಳಿ, ಸೀದಾ ತಂದು ಕೊರದು ಮುಂದುವರಿಸಲೆ ಆಗ ಹೇಳುವದು ಆನು ಜಾಗ್ರತೆಗೆ ಬೇಕಾಗಿ ಹೇಳುವದು.
    ಇನ್ನೊಂದು ವಿಷಯ ಎಂತ ಹೇಳಿರೆ, ಕಣಿಲೆ ಕಡಿವಲೆ ಹೆರಟರೆ, ಹಲವಾರು ಉಪಯೋಗ ಇಪ್ಪ ಬಿದಿರಿನ ನಾಶ ಅಕ್ಕು

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +1 (from 1 vote)

    { ನೀರನ್ನೂ ಚೆಲ್ಲಿ ಅಡಿಗೆ ಮಾಡುವದು }
    ನೀರು ಚೆಲ್ಲಿದಲ್ಲಿ ಅಡಿಗೆ ಮಾಡುದು ಬಯಂಕರ ಕಷ್ಟ ಶರ್ಮಪ್ಪಚ್ಚಿ! :-(
    ಮತ್ತೊಂದರಿ ಇಡೀ ಅಟ್ಟುಂಬೊಳ ಉದ್ದಿಗೊಳೆಕ್ಕು! ;-)

    [ಉತ್ತರುಸಿ]

    ಶರ್ಮಪ್ಪಚ್ಚಿ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VN:F [1.9.3_1094]
    Rating: +1 (from 1 vote)

    ಆಪ್ಪಪ್ಪಾ ನಗೆಗಾರ.
    ಆ ಲೆಕ್ಕಲ್ಲಿ ಆದರೂ ಅಟ್ಟೊಂಬಳ ಒಂದರಿ ಶುದ್ಧ ಆಗಲಿ.

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.3_1094]
    Rating: +1 (from 1 vote)

    ನೀರು ಚೆಲ್ಲಿದಲ್ಲಿ ಅಡಿಗೆ ಮಾಡುದು ಹೇಂಗೆ??? ಒಲೆ ಬೇಡದ ಅಂಬಗ?? :) ಅಲ್ಲ ನೀರಿನ ಅಟ್ಟುಂಬಳವೇ ಚೆಲ್ಲೆಕ್ಕಾ?? ಎನಗೆ ಎಲ್ಲ ಕಂಪ್ಯೂಸಾತೀಗ!! :)

    [ಉತ್ತರುಸಿ]

    ಡಾ.ಕೆ.ಜಿ.ಭಟ್. ಉತ್ತರ ಕೊಟ್ಟದು:
    ಕೇಜಿಮಾವ°

    VA:F [1.9.3_1094]
    Rating: 0 (from 0 votes)

    ಆನು ಕಣಿಲೆ ನೀರು ತೆಗೆಯದ್ದೆ ಮಾಡ್ತೆ,ಇಷ್ಟರ ವರೆಗೆ ಏನೂ ಆಯಿದಿಲ್ಲೆ,

    [ಉತ್ತರುಸಿ]

  5. ಮಂಗ್ಳೂರ ಮಾಣಿ...
    ಮಂಗ್ಳೂರ ಮಾಣಿ
    VA:F [1.9.3_1094]
    Rating: 0 (from 0 votes)

    ಅಜ್ಜೀ ಬರದ್ದು ಲೈಕ ಆಯಿದು… ಆನುದೇ ಅಬ್ಬೆ ಹತ್ತ್ರೆ ಮಾಡ್ಲೆ ಹೇಳ್ತೆ.

    [ಉತ್ತರುಸಿ]

  6. ಶ್ರೀದೇವಿ ವಿಶ್ವನಾಥ್
    ಶ್ರೀಅಕ್ಕ°
    VA:F [1.9.3_1094]
    Rating: +1 (from 1 vote)

    ಅಜ್ಜೀ, ಕಣಿಲೆಯ ವೈವಿಧ್ಯಂಗ ಲಾಯಕ ಆಯಿದು… ಎಂಗೊಗೂ ತಂಗೆ ಕಣಿಲೆ ಕಳಿಸಿ ಕೊಟ್ಟಿದು… ಎಂಗೊ ಕಣಿಲೆ ರೈಸ್ ಹೇಳಿ ಮಾಡಿದೆಯಾ°…. ಹೇಳಿರೆ ಪಲಾವಿನ ಹಾಂಗೆ ಮಾಡುದು.. ಕುಕ್ಕರಿಲಿ, ಎಣ್ಣೆಯೋ , ತುಪ್ಪವೋ ಬೆಶಿ ಮಾಡಿ ಅದಕ್ಕೆ, ನೀರುಳ್ಳಿ, ಟೊಮೇಟೊ ಬೇರೆ ಬೇರೆ ಹಾಕಿ ಫ್ರೈ ಮಾಡಿ, ಕೇರೆಟ್ ಹಾಕಿ, ಕಣಿಲೆ (ಅಜ್ಜಿ ಹೇಳಿದ ಹಾಂಗೆ ಸಂಸ್ಕಾರ ಆದ್ದದು..) , ಅರಿಶಿನ, ಉಪ್ಪು, ಗರಂ ಮಸಾಲೆ ಹೊಡಿ(ಬಿರಿಯಾಣಿ ಮಸಾಲೆ ಹೊಡಿ ಆದರೆ ಲಾಯಕ ) , ಅಕ್ಕಿ ಹಾಕಿ, ನೀರು (1:2) ಹಾಕಿ 2-3 ವಿಸಿಲ್ ಬೇಷೆಕ್ಕು…. ಲಾಯಕ ಆವುತ್ತು… ಯಾವಾಗಲೂ ಮಾಡ್ಲೆ ಆವುತ್ತಿಲ್ಲೆನ್ನೇ!!! ವರ್ಷಲ್ಲಿ ಒಂದರಿಯೋ, ಎರಡು ಸರ್ತಿಯೋ ಮಾಡ್ಲೆ ಅಪ್ಪದಲ್ಲದಾ? ಕೇಬೇಜು ಬೋಂಡ ಮಾಡಿದ ಹಾಂಗೆ ಕಣಿಲೆ ಬೋಂಡವೂ ಲಾಯಕ ಆವುತ್ತು… ಶರ್ಮಪ್ಪಚ್ಚಿ ಹೇಳಿದ್ದೂ ಸರಿಯೇ! ತಾರಮಾರ ಕಣಿಲೆ ಕಡುದರೆ ಬಿದಿರು ಬೆಳೆಯ… ಜಾಗ್ರತೆ ಉಪಯೋಗಿಸಿದರೆ ಎಲ್ಲೋರಿಂಗೂ ಹಿತ… ಅಲ್ಲದಾ?

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +3 (from 3 votes)

    ಎಣ್ಣೆ, ತುಪ್ಪ, ಕೇರೆಟು, ಟೊಮೆಟೊ, ನೀರುಳ್ಳಿ – ಯಬ್ಬ!
    ಇಷ್ಟರ ಹಾಕಿರೆ ಕಣಿಲೆ ಹಾಕದ್ರೂ ಲಾಯಿಕಾವುತ್ತು ಶ್ರೀದೇವಿಅಕ್ಕೋ.. :-D :-)

    [ಉತ್ತರುಸಿ]

    ಶ್ರೀದೇವಿ ವಿಶ್ವನಾಥ್ ಉತ್ತರ ಕೊಟ್ಟದು:
    ಶ್ರೀಅಕ್ಕ°

    VA:F [1.9.3_1094]
    Rating: +2 (from 2 votes)

    ಕಣಿಲೆ ಸಿಕ್ಕದ್ದಿಪ್ಪಗ, ಕಣಿಲೆ ಮುಗುದ ಮೇಲೆ ಹಾಂಗೆ ಮಾಡೆಕ್ಕಷ್ಟೇ ನೆಗೆಗಾರಅಣ್ಣೋ…..;-)

    [ಉತ್ತರುಸಿ]

    ಬಂಡಾಡಿ ಅಜ್ಜಿ ಉತ್ತರ ಕೊಟ್ಟದು:
    ಬಂಡಾಡಿ ಅಜ್ಜಿ

    VA:F [1.9.3_1094]
    Rating: +1 (from 1 vote)

    ಅದೆಂತರ ರಯಿಸುದು..? ಆ ಬಿಗಿಲು ಹಾಕುತ್ತ ಕುಕ್ಕುರು ಪಾತ್ರ ಎಲ್ಲ ನವಗಾಗಪ್ಪ.. ನೀನು ಇತ್ಲಾಗಿ ಬಪ್ಪಾಗ ಒಂದು ರೆಜಾ ತೆಕ್ಕೊಂಡು ಬಾ ದೇವೀ… ಆನುದೇ ರಯಿಸುತ್ತೆ.. ಎಂತ?

    [ಉತ್ತರುಸಿ]

  7. Venkatesh
    ವೆಂಕಟೇಶ
    VA:F [1.9.3_1094]
    Rating: 0 (from 0 votes)

    ಬೆಂದಿ, ಕೊದಿಲು ಮಾಡುವಾಗ ಮುಂಗೆ ಬರುಸಿದ ಹಸರುಕಲು ಹಾಕಿದರೆ ಬಾರಿ ಲಾಯ್ಕ ಆವುತ್ತು

    [ಉತ್ತರುಸಿ]

    Venkatesh ಉತ್ತರ ಕೊಟ್ಟದು:
    ವೆಂಕಟೇಶ

    VA:F [1.9.3_1094]
    Rating: +2 (from 2 votes)

    ಹಸರು ಕಾಳು

    [ಉತ್ತರುಸಿ]

    ಬಂಡಾಡಿ ಅಜ್ಜಿ ಉತ್ತರ ಕೊಟ್ಟದು:
    ಬಂಡಾಡಿ ಅಜ್ಜಿ

    VA:F [1.9.3_1094]
    Rating: +1 (from 1 vote)

    ಹ್ಮ್ ಅದುದೇ ಒಳ್ಳೆದೇ. ಆರೋಗ್ಯಕ್ಕೂ ಒಳ್ಳೆದು.
    ಹೊಸಾ ಪ್ರಯೋಗಂಗೊ ಎಲ್ಲ ಭಾರದ್ವಾಜದ ದೇವಿಗೆ ಗೊಂತಿದ್ದು ಸುಮಾರು…

    [ಉತ್ತರುಸಿ]

  8. ಪಿ ಎಸ್ ಶಂಕರ್,ಮಂಗಳೂರು
    VA:F [1.9.3_1094]
    Rating: 0 (from 0 votes)

    ಕಣಿಲೆಯ ತುಂಬ ಜಾಗ್ರತೆಂದ ಉಪಯೋಗಿಸಕು.ಶರ್ಮಣ್ಣ ಹೇಳಿದ ಹಾಂಗೆ ಸಯನೆಯ್ಡ್ ಸಂಗತಿ ಎನಗೆ ಗೊಂತಿಲ್ಲೆ,ಆದರೆ ನಾಲ್ಕೈದು ವರ್ಷದ ಹಿಂದೆ ಕಣಿಲೆ ಪಲ್ಲ್ಯ ಮಾಡಿ ತಿಂದು ಎನ್ನ ಮಕ್ಕೊಗೆ ಮೈಲಿ ಉಷ್ಣಂದ ಬೊಕ್ಕೆ ಬಿದ್ದದು ನೆಂಪಿದ್ದು!!!

    [ಉತ್ತರುಸಿ]

    ಬಂಡಾಡಿ ಅಜ್ಜಿ ಉತ್ತರ ಕೊಟ್ಟದು:
    ಬಂಡಾಡಿ ಅಜ್ಜಿ

    VA:F [1.9.3_1094]
    Rating: 0 (from 0 votes)

    ರಜ ರಜ ತಿಂದರೆ ಎಂತಾಗಬ್ಬೊ… ದಣಿಯ ತಿಂಬಲಾಗ. ಮತ್ತೆ ನಾವು ಅಪುರೂಪಕ್ಕೆ ಮಾಡ್ತದನ್ನೆ. ಹಾಂಗೆಂತ ಆಗ.
    ಕೆಲವು ಜನರ ಶರೀರಕ್ಕೆ ಆಗದ್ದೆ ಬಪ್ಪಲೂ ಸಾಕು…

    [ಉತ್ತರುಸಿ]

  9. ಒಪ್ಪಣ್ಣ
    ಒಪ್ಪಣ್ಣ
    VA:F [1.9.3_1094]
    Rating: +2 (from 2 votes)

    ಅಜ್ಜೀ!
    ಶುದ್ದಿ ಅಂತೂ ನಿಂಗೊ ಮೊನ್ನೆ ಮಾಡಿದ ಕಣಿಲೆ ತಾಳಿನಷ್ಟೇ ಲಾಯಿಕಾಯಿದು. ಪ್ರತಿ ವೈವಿಧ್ಯವೂ ಪಷ್ಟ್ಳಾಸಾಯಿದು.
    ಶರ್ಮಪ್ಪಚ್ಚಿ ಕಣಿಲೆಮುರಿವದಕ್ಕೆ ಪರಂಚುತ್ತವು ಹೇಳಿ ನಿಂಗೊ ಮಾಡದ್ದೆ ಕೂರೆಡಿ ಆತೋ!
    ಅವಕ್ಕೆ ಗೊಂತಾಗದ್ದ ಹಾಂಗೆ ಎಂಗೊ ತಂದು ಕೊಡ್ತೆಯೊ°. :-)

    [ಉತ್ತರುಸಿ]

    ಬಂಡಾಡಿ ಅಜ್ಜಿ ಉತ್ತರ ಕೊಟ್ಟದು:
    ಬಂಡಾಡಿ ಅಜ್ಜಿ

    VA:F [1.9.3_1094]
    Rating: +1 (from 1 vote)

    ಪುಳ್ಯಕ್ಕೊ ಹೇಳಿದರೆ ಹೀಂಗೆ ಇರೇಕದಾ…
    ಅಜ್ಜಿಯ ಮಂಕಡ್ಸಿ ಪಾತ್ರ ಪೂರ ಬರಗುವ ವಯಿವಾಟುದೇ ಇಕ್ಕು.. ನಂಬಿಕ್ಕಲೆಡಿಯ ಮಾಂತ್ರ…

    [ಉತ್ತರುಸಿ]

  10. ಕೆಪ್ಪಣ್ಣ
    ಡೈಮಂಡು ಭಾವ
    VA:F [1.9.3_1094]
    Rating: 0 (from 0 votes)

    ಅಜ್ಜೀ ಬರದ್ದು ಲಾಯ್ಕಾ ಆಯ್ದು.. ಫಾಸ್ಟ್‌ ಫುಡ್ಡಿನ ಹಾಂಗೆ.. ಎಲ್ಲ ಸಂಕ್ಷಿಪ್ತವಾಗಿ ರೆಸಿಪಿಯ ವಿವರವಾಗಿ ಕೊಟ್ಟಿದಿ… ಧನ್ಯವಾದ…

    [ಉತ್ತರುಸಿ]

    ಬಂಡಾಡಿ ಅಜ್ಜಿ ಉತ್ತರ ಕೊಟ್ಟದು:
    ಬಂಡಾಡಿ ಅಜ್ಜಿ

    VA:F [1.9.3_1094]
    Rating: 0 (from 0 votes)

    ಅದೆಂತರ ಮಾಣೀ….?
    ಹಾಂಗಿದ್ದ ಹಾಳು ಕಾಟಂಕೋಟಿ ಎಲ್ಲ ತಿಂದಿಕ್ಕೆಡ… ಅದರ ಹೆಸರೇ ವಿಚಿತ್ರ ಇದ್ದಪ್ಪ… ಹೊಟ್ಟಗೆ ಆಗದ್ದೆ ಬಕ್ಕು.

    [ಉತ್ತರುಸಿ]

  11. ಅಡ್ಕತ್ತಿಮಾರುಮಾವ°
    ಅಡ್ಕತ್ತಿಮಾರುಮಾವ°
    VN:F [1.9.3_1094]
    Rating: 0 (from 2 votes)

    ಕೆಲವು ಕಣಿಲೆ ಕಡುದರೆ ಮುಂದಕ್ಕೆ ಹೆಚ್ಹು ಹೆಚ್ಹು ಕಣಿಲೆ ಬಿಡುತ್ತು.ಕಡಿಯದ್ದರೆ ಮತ್ತೆ ಕಣಿಲೆಯೆ ಅಪ್ಪದು ಕಮ್ಮಿ.ಹಾಂಗಾಗಿ ರಜ್ಜ ಕಣಿಲೆ ಕಡಿವದು ಬೆದಿರಿನ ವಂಶ ವ್ರುದ್ದಿಗೆ ಒಳ್ಲೆದು..

    [ಉತ್ತರುಸಿ]

    ನೀರ್ಕಜೆ ಚಿಕ್ಕಮ್ಮ ಉತ್ತರ ಕೊಟ್ಟದು:
    ನೀರ್ಕಜೆ ಚಿಕ್ಕಮ್ಮ

    VA:F [1.9.3_1094]
    Rating: 0 (from 0 votes)

    ಅದಾ ಅಡಕತ್ತಿಮಾರು ಮಾವ, ಸಪ್ರೋಟು ಮಾಡಿದ್ದಕ್ಕೆ ಧನ್ಯವಾದಂಗೊ……… ಇಷ್ಟ ಇಪ್ಪ ವಿಶ್ಯಕ್ಕಪ್ಪಾಗ ಹೀಂಗಿಪ್ಪ ಬೆನ್ನು ತಟ್ಟುವವು ಬೇಕಾವುತ್ತು.

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: 0 (from 0 votes)

    ಬೆನ್ನು ಎಲ್ಲೊರೂ ತಟ್ಟುತ್ತವು ಚಿಕ್ಕಮ್ಮ.
    ಕೆಲವು ಜೆನ ಜೋರು, ಕೆಲವು ಜೆನ ಮೆಲ್ಲಂಗೆ – ಅಷ್ಟೇ ವಿತ್ಯಾಸ!!!!

    [ಉತ್ತರುಸಿ]

    ಬಂಡಾಡಿ ಅಜ್ಜಿ ಉತ್ತರ ಕೊಟ್ಟದು:
    ಬಂಡಾಡಿ ಅಜ್ಜಿ

    VA:F [1.9.3_1094]
    Rating: 0 (from 0 votes)

    ಸರಿಯಾಗಿ ಹೇಳಿದೆ ಕೂಸೆ…
    ಹ್ಮ್ ಆ ಲೆಕ್ಕ ಲ್ಲಿ ಅಡ್ಕತ್ತಿಮಾರಿಂಗೆ ಒಂದು ಕರಡಿಗೆ ಉಪ್ಪಿನಕಾಯಿ ಜಾಸ್ತಿ ಕಳುಸುವೊ ಅಲ್ದೊ…?

    [ಉತ್ತರುಸಿ]

    ನೀರ್ಕಜೆ ಚಿಕ್ಕಮ್ಮ ಉತ್ತರ ಕೊಟ್ಟದು:
    ನೀರ್ಕಜೆ ಚಿಕ್ಕಮ್ಮ

    VA:F [1.9.3_1094]
    Rating: 0 (from 0 votes)

    ಅಪ್ಪಜ್ಜೀ,…..ಅಕ್ಕು ಕಳ್ಸಿಕ್ಕಿ….. ಎನಗುದೆ ಬೇಕಜ್ಜೀ ಹೊಸಾ ಮೆಡಿ ಉಪ್ಪಿನಕಾಯಿ…ಎನಗೆ ಮಾವಿನ ಮೆಡಿ ಸಿಕ್ಕಿದ್ದಿಲ್ಲೆ, ಊರಿಂದ ಮಾವನೋರು ಕಳ್ಸಿದ್ದ ಕಣಿಲೆ, ತಾಳು ಮಾಡಿ ಅಪ್ಪಗ ೧ ಕುಪ್ಪಿಗೆ ಬಂದತ್ತಷ್ಟೆ…..

    [ಉತ್ತರುಸಿ]

  12. ಹರೀಶ್ ಹಳೆಮನೆ
    VA:F [1.9.3_1094]
    Rating: +1 (from 1 vote)

    ಮನೆಯ ಮೇಲಾಣ ಗೆದ್ದೆಲಿ ಒಳ್ಳೆ ಕಣಿಲೆ ಬೆಳೆತ್ತಾ ಇದ್ದು. ಹೋಗಿ ತಂದು ಬೆಂದಿ ಮಾಡಿರೆಂತ? ಅಜ್ಜಿ ಕೊಟ್ಟ ರೆಸಿಪಿ ಎಲ್ಲರಿಂಗೂ ಉಪಯೋಗ ಅಕ್ಕು. ಶರ್ಮಣ್ಣ ಹೇಳಿದ್ದು ನೆನಪಿರಲಿ… ಆ ವಿಷಯಲ್ಲಿ ಗೋಶುಬಾರಿ ಮಾಡುದು ಬೇಡ.

    [ಉತ್ತರುಸಿ]

    ಬಂಡಾಡಿ ಅಜ್ಜಿ ಉತ್ತರ ಕೊಟ್ಟದು:
    ಬಂಡಾಡಿ ಅಜ್ಜಿ

    VA:F [1.9.3_1094]
    Rating: 0 (from 0 votes)

    ಹ್ಮ್ ಜಾಗ್ರತೆ ಹರೀಶೊ… ಹಿಂದಾಣ ದಿನವೇ ನೀರಿಲಿ ಹಾಕಿ ಮಡಗುಲೆ ಮರೇಡ. ಮತ್ತೆ ಒಂದರಿ ಬೇಶಿ ನೀರು ತೆಗೇಕು.. ಎಂತ?

    [ಉತ್ತರುಸಿ]

  13. ಶ್ರೀಕೃಷ್ಣ ಶರ್ಮ. ಹಳೆಮನೆ
    ಶರ್ಮಪ್ಪಚ್ಚಿ
    VA:F [1.9.3_1094]
    Rating: +2 (from 2 votes)

    ಕಣಿಲೆ ತೊಳದ ನೀರಿನ ದನಗಳ ಅಕ್ಕಚ್ಚಿಂಗೆ ಹಾಕಿಕ್ಕೆಡಿ.

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +5 (from 5 votes)

    { ದನಗಳ ಅಕ್ಕಚ್ಚಿಂಗೆ ಹಾಕಿಕ್ಕೆಡಿ }
    ಇಲ್ಲೆಪ್ಪ, ಹಾಂಗೆಲ್ಲ ಹಾಕವು ದನಗಳ!
    ಅಕ್ಕಚ್ಚು ಇಪ್ಪದು ಬಾಲ್ದಿಲಿ, ದನಗಳ ಬಾಲ್ದಿಗೆ ಹಾಕುಲೆ ಕಷ್ಟ ಇಲ್ಲೆಯೋ! ;-)

    [ಉತ್ತರುಸಿ]

    ಬಂಡಾಡಿ ಅಜ್ಜಿ ಉತ್ತರ ಕೊಟ್ಟದು:
    ಬಂಡಾಡಿ ಅಜ್ಜಿ

    VA:F [1.9.3_1094]
    Rating: +3 (from 3 votes)

    ನೀ ಎಂತ ಮಾಣೀ… ಎಂತ ಹೇಳಿದರೂ ಬಿಂಗಿಯೇ ಅರ್ತ ಮಾಡ್ತದು…
    ಮೊನ್ನೆ ಮಾಡಡಿಲಿ ಗಾಳಿ ಅಡರು ಮಾಡಿ ಮಡಗಿದ್ದದರ ನೋಡಿದ್ದೆನ್ನೆ..?

    ಎಂತ ಮುಟ್ಟಾಟ ಆಡ್ತ ಚೆಂಙಾಯಿಗೊ ಸಿಕ್ಕಿದ್ದವಿಲ್ಲೆಯೋ.. ತಳೀಯದ್ದೆ ಹೋಗಿ ಆಡುದು ಬಿಟ್ಟು ಇಲ್ಲಿ ಬಂದು ಎಡಕ್ಕಿಲಿ ಬಾಯಿ ಹಾಕುತ್ತ…
    ಉಂಬಲಪ್ಪಗ ದಿನಿಗೇಳ್ತೆ… ಎಂತ?
    ಮೆಲ್ಲಂಗೆ.. ಅಂಬೆರ್ಪಿಲಿ ಬಿದ್ದಿಕ್ಕೆಡ ಇನ್ನು…

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +2 (from 4 votes)

    ಅದಾ, ಅಜ್ಜಿ ಪರಂಚುದೂ………….. :-(

    ಅಂಬಗ ಕಣಿಲೆ ತಾರೆ! ಶರ್ಮಪ್ಪಚ್ಚಿ ಹೇಳಿದ್ದು ಸರೀ ಇದ್ದು.
    ಕಣಿಲೆ ಕಡಿವಲಾಗ, ಬೆದುರು ಆವುತ್ತಿಲ್ಲೆ.. :-( :-( ;-)

    [ಉತ್ತರುಸಿ]

    ಬಂಡಾಡಿ ಅಜ್ಜಿ ಉತ್ತರ ಕೊಟ್ಟದು:
    ಬಂಡಾಡಿ ಅಜ್ಜಿ

    VA:F [1.9.3_1094]
    Rating: +2 (from 2 votes)

    ಒಪ್ಪಣ್ಣ ಹೋಯಿದ ತಪ್ಪಲೆ.. ನೀನು ಹೋಗಿ ಬೇರೆ ಏವದೋ ಕುತ್ತಿಯ ಕಣಿಲೇಳಿ ಕಡುಕ್ಕೊಂಡು ಬರೇಕೂಳಿಲ್ಲೆ..
    ಅರಡಿಯದ್ದ ಮಕ್ಕೊ ಅಂತೆ ಹಾರದ್ದೆ ಒಪ್ಪಣ್ಣನಾಂಗೆ ಕೂರೆಕ್ಕು…ಕೇಳಿತ್ತೊ?

    [ಉತ್ತರುಸಿ]

    ಶ್ರೀಶ. ಹೊಸಬೆಟ್ಟು ಉತ್ತರ ಕೊಟ್ಟದು:
    ಶ್ರೀಶಣ್ಣ

    VA:F [1.9.3_1094]
    Rating: 0 (from 0 votes)

    ಎಂತ ನಗೆಗಾರ. ಒಂದು ದೋಸೆ ಕೊಟ್ಟರೆ ಸೊಸೆ ಹತ್ರಂಗೆ, ಮೂರು ದೋಸೆ ಕೊಟ್ಟರೆ ಅತ್ತೆ ಹತ್ರಂಗೆ ಹೇಳ್ತೆ !!!

    [ಉತ್ತರುಸಿ]

    ನೀರ್ಕಜೆ ಚಿಕ್ಕಮ್ಮ ಉತ್ತರ ಕೊಟ್ಟದು:
    ನೀರ್ಕಜೆ ಚಿಕ್ಕಮ್ಮ

    VA:F [1.9.3_1094]
    Rating: +3 (from 3 votes)

    ಸದಾ ಕುಟ್ಟಿ ಬದನೆ…… ನೆಗೆಗಾರ ಭಾವಂಗೆ ಹಾಂಗೆ ಅಯೆಕ್ಕು….. ಲಲಾಲ್ಲ…..

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: 0 (from 2 votes)

    ;-) :-( :-(

    [ಉತ್ತರುಸಿ]

    ಶ್ರೀಶ. ಹೊಸಬೆಟ್ಟು ಉತ್ತರ ಕೊಟ್ಟದು:
    ಶ್ರೀಶಣ್ಣ

    VA:F [1.9.3_1094]
    Rating: +1 (from 1 vote)

    ಇದಾ ಅಜ್ಜಿ. ಈ ಬಿಂಗಿ ಮಾಣಿಯಂಗಳ ಬಾಯಿಗೆ ಕೋಲು ಹಾಕೆಡಿ. ಒಂದು ಬಿಂಗಿಯನ್ನೇ ಸುದಾರಿಸಲೆ ಕಷ್ಟ ಆವುತ್ತು. ಇನ್ನು ಆ ಮುಟ್ಟಾಟದ ಪಟ್ಲಾಂಗೊ ಎಲ್ಲ ಬಂದರೆ ಹೇಂಗೆ ಸುದಾರಿಸುವಿ? ಮತ್ತೆ ಒಪ್ಪ…ಣ್ಣ ನೇ ಬಂದೇ ಸುದರಿಸೆಕ್ಕಕ್ಕು.:) :)
    ಹೊತ್ತೋಪಗಾಣ ಕಾಪಿ ತಿಂಡಿ ಕೊಟ್ಟು, ಗಿಸೆಲಿ ನಾಲ್ಕು ಶಾಂತಾಣಿ ಹಾಕಿ ಕಳಿಸಿ. ಮುಟ್ಟಾಟವೋ ತಟ್ಟಾಟವೋ ಎಲ್ಲಾ ಆಡಿಕ್ಕಿ ಕತ್ತಲೆ ಅಪ್ಪಗ ಬಕ್ಕು. ಅಷ್ಟಪ್ಪಗ ಕಣಿಲೆ ಬೆಂದಿ, ತಾಳು ಮಾಡಿರೆ ಗಮ್ಮತ್ತು ಉಂಡಿಕ್ಕಿ ಒರಗ್ಗಿದ :)

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.3_1094]
    Rating: 0 (from 0 votes)

    ಬಿಂಗಿ ಮಾಣಿಯಂಗಳ ಪಟ್ಟಿಲಿ ಎನ್ನ ಹೆಸರಿಲ್ಲೆ ಅಲ್ಲದ ಅಜ್ಜಿ? ಆನು ಒಪ್ಪಣ್ಣ ಅಡ, ಮನೆಲಿ ಎಲ್ಲರು ಹೇಳ್ತವು.. ನಗೆಗಾರಣ್ಣಂದೆ ಒಪ್ಪಣ್ಣನೆ ;) (ರಜ ಸೀಂತ್ರಿ ಬಿಟ್ಟರೆ)..
    ಶ್ರೀಶಣ್ಣ ಒಂದು ಸಣ್ಣ ಸಂಶಯ!?? ಈ ,, ಬಾಯಿಗೆ ಕೋಲು ಹಾಕುದು, ಕೋಲು ಅಷ್ಟೂ ಸಣ್ಣ ಇದ್ದು ಹೇಳಿಯಾ ಅಲ್ಲ ಬಾಯಿ ಅಷ್ಟು ದೊಡ್ಡ ಇದ್ದು ಹೇಳೀಯಾ?

    [ಉತ್ತರುಸಿ]

    ಶ್ರೀಶ. ಹೊಸಬೆಟ್ಟು ಉತ್ತರ ಕೊಟ್ಟದು:
    ಶ್ರೀಶಣ್ಣ

    VA:F [1.9.3_1094]
    Rating: 0 (from 0 votes)

    ಶಾಂತಂ ಪಾಪಂ. ಆಗಪ್ಪಾ ಆಗ. ದನಗಳ ಬಾಲ್ದಿಗೆ ಹಾಕುವದೋ?

    [ಉತ್ತರುಸಿ]

  14. ಶ್ರೀಶ. ಹೊಸಬೆಟ್ಟು
    ಶ್ರೀಶಣ್ಣ
    VA:F [1.9.3_1094]
    Rating: +1 (from 1 vote)

    @ಆದರ್ಶ್
    ಮಂಗಣ್ಣ. ನೀನೇ ಅಲ್ಲದಾ ಎಂಗೊಗೆ ಎಲ್ಲಾ ಲೀಡರ್ ಆಗಿ ಇತ್ತಿದ್ದು. ಈಗ ಹೀಂಗೆ ಅಜ್ಜಿ ಹತ್ರ ಪೂಸಿ ಹೊಡದು ತಪ್ಪಿಸುವದಾ? :) :)

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.3_1094]
    Rating: 0 (from 0 votes)

    ಹಿ ಹಿ ಹಿ.. :) ಲೀಡರ್ ನ ವಿಷೇಶತೆ ಅಲ್ಲದೊ ಅದು ;)

    [ಉತ್ತರುಸಿ]

    ಶ್ರೀಶ. ಹೊಸಬೆಟ್ಟು ಉತ್ತರ ಕೊಟ್ಟದು:
    ಶ್ರೀಶಣ್ಣ

    VA:F [1.9.3_1094]
    Rating: 0 (from 0 votes)

    ಈಗ ನಿಘಂಟು ಆತು ಮಾಣಿ. ನಿನ್ನ ಬಾಯಿ ದೊಡ್ಡದು. ಕೋಲು ಸಣ್ಣದೇ :) :) :)

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.3_1094]
    Rating: 0 (from 0 votes)

    :) ಉಮ್ಮಪ್ಪ :) ಆನು ಸಣ್ಣ ಮಾಣಿ, ಎನಗೆ ನಿಂಗ ಹೇಳಿದ ಕೋಲು ಎಂತರ ಹೇಳಿಯೆ ಅರ್ಥಆಯ್ದಿಲ್ಲೆ! ನಿಘಂಟು ಹೇಳಿರೆ ಗೊಂತಿದ್ದು. ಶಾಲೆಲಿ ಇಂಗ್ಲಿಷ್ ಕನ್ನಡ ನಿಘಂಟು ಎಲ್ಲ ಕೊಟ್ಟಿತ್ತಿದ್ದವು ಮೊದಲು :)

    [ಉತ್ತರುಸಿ]

    ಅಜ್ಜಕಾನ ಭಾವ ಉತ್ತರ ಕೊಟ್ಟದು:
    ಅಜ್ಜಕಾನ ಭಾವ

    VA:F [1.9.3_1094]
    Rating: 0 (from 0 votes)

    ಯೇ ಆದರ್ಶ ಬಾವ ನೀನು ಎಂತೆಲ್ಲ ನಿಘಂಟು ಮಾಡಿದ್ದೆಯೋ ಎಲ್ಲರಿಂಗು ಗೊಂತಿಲ್ಲೆ.. ಹೇಳಿಕ್ಕಿ ಬಿಡು ಆತೋ..

    [ಉತ್ತರುಸಿ]

  15. ಶ್ರೀಶ. ಹೊಸಬೆಟ್ಟು
    ಶ್ರೀಶಣ್ಣ
    VA:F [1.9.3_1094]
    Rating: 0 (from 0 votes)

    ಗೊಂತಾಗದ್ದರೆ ಅಜ್ಜಿ ಹಿಡ್ಕಂಡು ಬಪ್ಪಗ ಗೊಂತಕ್ಕು. ಬೆನ್ನಿಂಗೆ ಹಾಳೆ ಕಟ್ಟಿಗೊ.

    [ಉತ್ತರುಸಿ]

    ಆಶಾ ಕಾರಿಂಜ ಹಳೆಮನೆ ಉತ್ತರ ಕೊಟ್ಟದು:

    VA:F [1.9.3_1094]
    Rating: +1 (from 1 vote)

    ಆನು ಹೇಳುವದು ಎಂತರ ಹೇಳಿರೆ, ಈ ಕಣಿಲೆ ಪುರಾಣವ ಬ್ಲೋಗಿಲ್ಲಿ ಹಾಕಿ, ಮುಂದಕ್ಕೆ ನಾಲ್ಕು ಒಡ್ಡಿ ಬೀಜವೋ, ಒಂದು ಮುಷ್ಟಿ ಗೆಣಮೆಣಸೋ ಇದ್ದರೆ ಕೊಯಿವಲೆ ಕೊಕ್ಕಗೂ, ಏಣಿಗೂ ತತ್ವಾರ ಅಕ್ಕು ಹೇಳಿ ಶರ್ಮ ಬಾವ ಹೇಳಿದ್ದದರ ಪುನರುವಾಚ ಖಂಡಿತಾ ಮಾಡೆಕ್ಕು. ಇದರ ಹಿಂದೆಯೇ ಬೆದುರಿನ ಬಹು ಉಪಯೋಗದ ಬಗ್ಗೆಯೂ ಬರೆಯಿ ಒಪ್ಪಣ್ಣಾ.

    [ಉತ್ತರುಸಿ]

  16. ಶ್ರೀಶ. ಹೊಸಬೆಟ್ಟು.
    ಶ್ರೀಶಣ್ಣ
    VA:F [1.9.3_1094]
    Rating: +1 (from 1 vote)

    ಕಣಿಲೆ ರುಚಿ ಕಂಡ ಮಾಣಿ
    ಹಿಡ್ಕೊಂಡ್ ಹೆರಟ ಗೋಣಿ
    ಮಾಣಿಯ ಅಮ್ಮ ವಾಣಿ
    ಕೊಟ್ಟತ್ತೆರಡು ಶಾಂತಾಣಿ

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.3_1094]
    Rating: 0 (from 0 votes)

    ವ್ಹಾ ವ್ಹಾ!! ಶ್ರೀಶಣ್ಣ, ನಿಂಗಳ ನಾಲ್ಕುಕಾಲಿನ ಪಧ್ಯ ಲಾಯ್ಕಾಯಿದಾತ!

    [ಉತ್ತರುಸಿ]

  17. ನೀರ್ಕಜೆ ಚಿಕ್ಕಮ್ಮ
    ನೀರ್ಕಜೆ ಚಿಕ್ಕಮ್ಮ
    VA:F [1.9.3_1094]
    Rating: 0 (from 0 votes)

    ಅರೇ ಈಗ ಒಪ್ಪಣ್ಣನ ಬೈಲಿಲ್ಲಿ ಪೂರಾ ಹರವದೇ ಆತನ್ನೇ….. ಏ ಒಪ್ಪಣ್ಣಾ ,,,, ಪೂರಾ ಕಚ್ಚುಲೆ ಗಿಚ್ಚುಲೆ ಸುರು ಮಾಡಿರೆ ಎಂತ ಮಾಡುದು?

    [ಉತ್ತರುಸಿ]

    ಆಶಾ ಕಾರಿಂಜ ಹಳೆಮನೆ ಉತ್ತರ ಕೊಟ್ಟದು:

    VA:F [1.9.3_1094]
    Rating: 0 (from 0 votes)

    ನಾಳೆಂದ ಆಟಿ ಸುರು ಆವುತ್ತು, ಹಾಂಗಾಗಿ ಕಣಿಲೆಯ ಹೊಯಿಮಾಲೆ ಇಲ್ಲಿಗೇ ಮುಗುಶಿ, ಶಾಂತಾಣಿ, ಬೇಳೆ ಹೋಳಿಗೆ, ಕೆಸುವಿನ ಪತ್ರೊಡೆ, ಬೇವಿನ ಚಟ್ನಿ ಇವುಗಳ ಬಗ್ಗೆ ಆಲೋಚನೆ ಮಾಡ್ಲಕ್ಕು.

    [ಉತ್ತರುಸಿ]

    ಆಶಾ ಕಾರಿಂಜ ಹಳೆಮನೆ ಉತ್ತರ ಕೊಟ್ಟದು:

    VA:F [1.9.3_1094]
    Rating: 0 (from 0 votes)

    ತಗತ್ತೆ ತಾಳ್ಳು, ಕೊಡಿ ತಂಬ್ಳಿ, ಕಾಟು ಕೇನೆ, ಎಲ್ಲಾ ಮರತ್ತೇ ಹೋತಾ.

    [ಉತ್ತರುಸಿ]

  18. ಅಡ್ಕತ್ತಿಮಾರುಮಾವ°
    ಅಡ್ಕತ್ತಿಮಾರುಮಾವ°
    VN:F [1.9.3_1094]
    Rating: 0 (from 0 votes)

    ಚೇಟ್ಳ ತಾಳ್ಳು ,ಅಂಬಟೆ ಕಾಯಿ ಗೊಜ್ಜಿ, ಹಂಜೆ ಸವ್ತ್ತೆಗೆ ಬೇಳೆ ಹಾಕಿ ತಾಳ್ಳು…ನೀರ್ ಸೊಳೆ ವಿಧ ವಿಧದ ಅಡಿಗೆ……

    [ಉತ್ತರುಸಿ]

  19. ಅಜ್ಜಕಾನ ಭಾವ
    ಅಜ್ಜಕಾನ ಭಾವ
    VA:F [1.9.3_1094]
    Rating: 0 (from 0 votes)

    ಆಶಕ್ಕೋ, ಅಡ್ಕತ್ತಿಮಾರುಮಾವ.. ನಿಂಗೊಗೆ ಅಜ್ಜಿಗೆ ಮರವದು ನೆಂಪಿಲ್ಲೆಯೋ.. ಅಜ್ಜಿಗೆ ಹೀಂಗೆ ನೆಂಪು ಮಾಡಿರೆ ಹೇಂಗೆ ಮಾಡುದು ಹೇಳಿ ಬರೆಗು.. ಒಟ್ಟಿಂಗೆ ಒಪ್ಪಣ್ಣ ಬಾವಂಗೆ ಕೆಲಸ ಕೊಟ್ಟಿ..

    [ಉತ್ತರುಸಿ]

  20. TARANI
    VA:F [1.9.3_1094]
    Rating: 0 (from 0 votes)

    ಮಾಡಿ ನೋಡಬೇಕು. ಆದರೆ ಓದಿದಷ್ತು ಸುಲಭದಲ್ಲಿ ರುಚಿ ಬರುವುದು ಕಷ್ಟ. ಅದಕ್ಕೆ ಅನುಭವವೂ ಬೇಕು. ಅಲ್ವಾ ಅಜ್ಜಿ?

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME