Oppanna.com

ಆಟಿಯ ಕಾಲಕ್ಕೆ ಕಣಿಲೆಯ ವೈವಿದ್ಯಂಗೊ…

ಬರದೋರು :   ಬಂಡಾಡಿ ಅಜ್ಜಿ    on   10/07/2010    64 ಒಪ್ಪಂಗೊ

ಬಪ್ಪ ವಾರದ ಶುದ್ದಿಶುಕ್ರವಾರ ಆಟಿ ಸುರು ಆವುತ್ತದ. ಆಟಿ ಸುರು ಅಪ್ಪಲಪ್ಪಗ ಕಣಿಲೆಯೂ ಏಳುತ್ತು. ಕಣಿಲೆಯ ವೈವಿದ್ಯಂಗೊ ಆಟಿಯ ಒಂದು ವಿಶೇಷ. ತೋಡಕರೆಯ ಒಳಚ್ಚಿಲಿಲಿಪ್ಪ ಬಾಬು ಪ್ರತೀ ವರುಷವುದೇ ಕಣಿಲೆ ತಂದು ಕೊಡುಗದ. ಕೆಲಸದ ಕಾಳಪ್ಪು ಸೊಪ್ಪು ತಪ್ಪಲೆ ಓ ಅತ್ಲಾಗಿ ಕಾಡಿನ ಗುಡ್ಡೆಗೆ ಹೋಗಿಪ್ಪಗ ಎಲ್ಲಿಯಾದರೂ ಕಣಿಲೆ ಕಣ್ಣಿಂಗೆ ಬಿದ್ದರೆ ತಾರದ್ದೆ ಇರ. ಹಾಂಗೆ ಈ ಸಮಯಲ್ಲಿ ಕಣಿಲೆದೇ ಕಾರುಬಾರ ಅಟ್ಟುಂಬೊಳ.
ಕಣಿಲೆದು ತಾಳ್ಳು, ಸಾಂಬಾರು, ಬೆಂದಿ, ಉಪ್ಪಿನಕಾಯಿ, ಪತ್ರೊಡೆ ಎಲ್ಲ ಮಾಡ್ಳಾವುತ್ತು.
ಎಂತ ಮಾಡೆಕ್ಕಾರುದೇ ಮದಾಲಿಂಗೆ ಅದರ ಚೋಲಿ ತೆಗೆಯೇಕು. ಅದರ ಒಳದಿಕೆ ಗೆಂಟುಗಳಲ್ಲಿ ಒಂದು ಸಣ್ಣ ಮುಂಗೆಯ ಹಾಂಗಿರ್ತದು ಇರ್ತು. ಅದರ ತೆಗೆಯಲೇ ಬೇಕು. ಅದು ವಿಷ – ಹೇಳಿರೆ ಒಳ್ಳೆದಲ್ಲ ಹೇಳಿ ಲೆಕ್ಕ.
ಹೀಂಗೆ ಚೋಲಿ ತೆಗದ್ದದರ ಮತ್ತೆ ಸಣ್ಣ ಸಣ್ಣಕೆ ಕೊರವದು. ಎರಡು ಮೂರು ಸರ್ತಿ ನೀರಿಂಗೆ ಹಾಕಿ ತೆಗೆಯೆಕ್ಕು. ಮುನ್ನಾದಿನ ಕೊರದು ನೀರಿಂಗೆ ಹಾಕೊದು. ಅಂಬಗಂಬಗ ನೀರು ತೆಗದು ಹಾಕಿಗೊಂಡು ಇದ್ದರಾತು.
ತಾಳ್ಳು ಮಾಡ್ಳೆ ಸುಲಾಬ. ಈ ಬಾಗವ ಒಂದು ತಪಲೆಗೆ ಹಾಕಿ ಕೊದಿಶೆಕ್ಕು. ಅದರ ನೀರು ತೆಗದು, ಒಂದು ಬಣಲೆಲಿ ಉದ್ದಿನ ಬೇಳೆ, ಎಣ್ಣೆ (ರಜಾ ಜಾಸ್ತಿಯೇ ಬೇಕು) ಎಲ್ಲ ಹಾಕಿ ತಾಳ್ಳಿಂಗೆ ಒಗ್ಗರಣೆ ಮಾಡಿ, ಅದಕ್ಕೆ ಇದರ ಹಾಕಿತ್ತು. ಮತ್ತೆ ನೀರು, ಉಪ್ಪು, ಹುಳಿ, ಬೆಲ್ಲ, ಅರಿಶಿನಹೊಡಿ, ಮೆಣಸಿನ ಹೊಡಿ ಎಲ್ಲ ಹಾಕಿ ಮುಚ್ಚಿಮಡುಗಿತ್ತು. ನೀರು ಹದಾಕೆ ಹಾಕಿರೆ ಸಾಕು. ತಾಳ್ಳು ಆಗಿಯೊಂಡು ಬಪ್ಪಾಗ ಕಾಯಿ ಹಾಕಿತ್ತು. ಬೆಶಿ ಬೆಶಿ, ಗರುಗುರು ಕಣಿಲೆ ತಾಳ್ಳು ಉಂಬಲೆ ರುಚಿ ರುಚಿ. ಒಪ್ಪಣ್ಣ ಕೊಡಿಯಂದ ಕಡೆಂಗೊರೆಗೆ ಅದರಲ್ಲೇ ಉಂಗಡ.
ಉಪ್ಪಿನಕಾಯಿ : ಈ ಸರ್ತಿ ಮಾವಿನ ಮೆಡಿ ಸಿಕ್ಕಿದ್ದೇ ಇಲ್ಲೆ ಅದ. ಶಾಂತಕ್ಕನಲ್ಲಿಂದ ಒಂದು ಕರಡಿಗೆ ಸಿಕ್ಕಿದ್ದು ಮಾಂತ್ರ. ಬೇರೆ ಎಲ್ಲಿಯೂ ಸಿಕ್ಕಿದ್ದಿಲ್ಲೆ. ಹಾಂಗೆ ಇನ್ನು ಕಣಿಲೆ ಉಪ್ಪಿನಕಾಯಿಯೇ ಆಯೆಕಷ್ಟೆ. ಉಪ್ಪಿನಕಾಯಿಗೆ ಆದರೆ ರಜಾ ದೊಡ್ಡಕೆ ಕೊರೆಯೆಕ್ಕು ಬಾಗ. ಅದರ ಎರಡು ಮೂರು ಸರ್ತಿ ತೊಳದು ಅದಕ್ಕೆ ಉಪ್ಪುದೆ, ರಜ ಹುಳಿಯನ್ನುದೆ ಹಾಕಿ ಬೇಶುದು. ನೀರು ದಣಿಯ ಬೇಡ, ರಜ್ಜ. ಬೇಶಿ ಆದ ಮತ್ತೆ ಅದರ ತಣಿವಲೆ ಮಡುಗಿತ್ತು. ಒಳ್ಳೆತ ತಣಿಯೆಕ್ಕು ಅದು. ಮತ್ತೆ ಅದಕ್ಕೆ ಹಸಿ ಹೊರಡಿ ಕೂಡಿರೆ ಉಪ್ಪಿನಕಾಯಿ ಆತದ. ಹಸಿ ಹೊರಡಿ ಮಾಡ್ತ ಕ್ರಮ ಗೊಂತಿದ್ದನ್ನೇ. ಸಾಸಮೆಯ ಹೊಡಿ ಮಾಡಿ ಅದಕ್ಕೆ ಅರಿಶಿನ ಹೊಡಿ, ಮೆಣಸಿನ ಹೊಡಿ ಬೆರುಸುದು. ಮತ್ತೆ ಅದಕ್ಕೆ ಉಪ್ಪು ನೀರು ಕೊದಿಶಿ ಅದರ ತಣಿಶಿ ಹದಾ ನೀರಪ್ಪಷ್ಟು ಎರದು ಕಲಸುದು.
ಸಾಂಬಾರು : ನೀರಿಲಿ ಹಾಕಿದ್ದ ಕಣಿಲೆಯ ತೆಗದು ಬೇರೆ ನೀರು ಹಾಕಿ ಕೊದಿಶಿ ನೀರು ಬಳಿಶುದು. ಮತ್ತೆ ತೊಗರಿಬೇಳೆ ಬೇಶಿ ಅದಕ್ಕೆ ಈ ನೀರು ತೆಗದ ಬಾಗವ ಹಾಕಿತ್ತು. ಉಪ್ಪು, ಹುಳಿ, ಬೆಲ್ಲ, ನೀರು ಹಾಕಿ ಕೊದಿಶುದು. ಮತ್ತೆ ಅರಪ್ಪು ಕೂಡಿರೆ ಆತು. ಅರಪ್ಪು ಕಡವಲೆ ಗೊಂತಿದ್ದನ್ನೆ, ಉದ್ದಿನ ಬೇಳೆ, ಕೊತ್ತಂಬರಿ, ಜೀರಿಗೆ, ಮೆಣಸು, ಎಣ್ಣೆ – ಹೊರಿವದು, ಹೊರುದು ಅಪ್ಪಲಪ್ಪಗ ರಜ ಅರಿಶಿನ ಹೊಡಿ ಹಾಕುದು. ಮತ್ತೆ ಕಡವಕಲ್ಲು ತೊಳದು, ಇದರ ಕಾಯಿಯೊಟ್ಟಿಂಗೆ ಕಡದತ್ತು. ಅರಪ್ಪು ಹಾಕಿ ಕೊದಿಶಿಕ್ಕಿ ಜೊಯಿಂಕ ಒಗ್ಗರಣೆ ಕೊಟ್ಟರೆ ಘಮ ಘಮ ಸಾಂಬಾರು ತಯಾರಾತದ.
ಬೆಂದಿ : ಬೆಂದಿಗೆ ಹಸರುಬೇಳೆ ಬೇಶಿ ಹಾಕುದು. ಬೆಂದಿಗಪ್ಪಗ ನಾಕು ಕೊತ್ತಂಬರಿ, ಜೀರಿಗೆ, ಮೆಣಸು, ಅರಿಶಿನ ಹೊಡಿ ಎಲ್ಲ ಒಂದೋ ಹಸಿಯೇ ಹಾಕುದು ಕಡವಾಗ ಅತವಾ ಎಣ್ಣೆ ಹಾಕದ್ದೆ ಹೊರುದು ಹಾಕುದು. ಮತ್ತೆ ಎಲ್ಲ ಸಾಂಬಾರಿನ ಹಾಂಗೆಯೇ. ಬೆಂದಿದು ಒಂದು ರೀತಿ ಪರಿಮ್ಮಳ ಸಾಂಬಾರಿಂದು ಮತ್ತೊಂದು ರೀತಿ. ನಾವು ನಿತ್ಯ ಮಾಡುದೇ ಅಲ್ಲದೋ? ಹೇಳಿದಾಂಗೆ ಎರಡಕ್ಕೂ ಹುಳಿ ಹಾಕೆಕ್ಕು ಆತೊ. ಹೇಳುಲೆ ಮರದತ್ತದ.
ಪತ್ರೊಡೆ : ಕಣಿಲೆಯ ತೆಳೂವಿಂಗೆ ಕೊಚ್ಚಿ, ನೀರಿಲಿ ಹಾಕಿ ಮಡುಗುದು. ಆಗ ಹೇಳಿದಾಂಗೆ ಮುನ್ನಾಣ ದಿನವೇ ಹಾಕಿ ಮಡುಗುದು. ಎಡಕ್ಕಿಲಿ ಎರಡು ಮೂರು ಸರ್ತಿ ನೀರು ಬದಲುಸುದು. ಪತ್ರೊಡೆ ಮಾಡ್ಳೆ ಉದೀಯಪ್ಪಗಳೇ ಕೊಯಿಶಕ್ಕಿ ಬೊದುಲುಲೆ ಹಾಕೆಕ್ಕು. ಅದಕ್ಕೆ ಕೊತ್ತಂಬರಿ, ಜೀರಿಗೆ, ಹುಳಿ, ಮೆಣಸು, ಬೆಲ್ಲ ಎಲ್ಲ ಹಾಕಿ ಕಡವದು ಹೊತ್ತೊಪ್ಪಗ. ಆ ಹಿಟ್ಟಿಂಗೆ ಕಣಿಲೆ ಕೊಚ್ಚಿ ಮಡಿಗಿದ್ದರ ನೀರು ಬಳಿಶಿ ತೆಗದು ಬೆರುಸಿತ್ತು. ಮತ್ತೆ ಬಾಳೆಲಿ ಮಡುಸಿ ಬೇವಲೆ ಮಡುಗಿತ್ತು.  ಈಗ ಮಳೆ ರಜ ಕಮ್ಮಿ ಆಯಿದು. ಹಾಂಗಾಗಿ ಬಾಳೆಲೆ ತಪ್ಪಲೆ ನೆಮ್ಮದಿಲಿ ಹೋಪಲಕ್ಕು. ಹಿಸ್ಕಿನ ಉಪದ್ರವೂ ಕಮ್ಮಿ ಇದಾ.
ಹ್ಮ್… ಕಣಿಲೆ ಆರೋಗ್ಯಕ್ಕುದೇ ಒಳ್ಳೆದಡ. ಹಾಂಗೇಳಿ ದಣಿಯ ತಿಂಬಲೂ ಆಗ. ಒಂದು ರಜ ಉಷ್ಣವುದೇ. ಅದು ಹೊಟ್ಟೆಲಿದ್ದ ತಲೆಕಸವನ್ನುದೇ ಕರಗುಸುತ್ತಡ! ಓ ಮೊನ್ನೆ ಪೇಪರಿಲಿ ಬಂದಿತ್ತಡ ಒಪ್ಪಕ್ಕ ಹೇಳಿತ್ತು.
ಈಗ ಕಣಿಲೆಯ ಕಾಲ. ಎಲ್ಲೊರುದೇ ಒಂದರಿ ಆದರೂ ಕಣಿಲೆದು ಎಂತಾರು ಮಾಡಿ ತಿನ್ನೆಕ್ಕು. ಅತ್ಲಾಗಿ ಎಲ್ಲಿಯೂ ಸಿಕ್ಕದ್ದರೆ ಇತ್ತೆ ಬನ್ನಿ. ಕಾಳಪ್ಪುವಿನತ್ತರೆ ತಂದು ಕೊಡುಲೆ ಹೇಳ್ತೆ ಎಂತ? ಒಂದು ರೆಜ ಕಣಿಲೆ ಉಪ್ಪಿನಕಾಯಿಯೂ ಕೊಂಡೋಪಲಕ್ಕದ.

64 thoughts on “ಆಟಿಯ ಕಾಲಕ್ಕೆ ಕಣಿಲೆಯ ವೈವಿದ್ಯಂಗೊ…

  1. ಮಾಡಿ ನೋಡಬೇಕು. ಆದರೆ ಓದಿದಷ್ತು ಸುಲಭದಲ್ಲಿ ರುಚಿ ಬರುವುದು ಕಷ್ಟ. ಅದಕ್ಕೆ ಅನುಭವವೂ ಬೇಕು. ಅಲ್ವಾ ಅಜ್ಜಿ?

  2. ಆಶಕ್ಕೋ, ಅಡ್ಕತ್ತಿಮಾರುಮಾವ.. ನಿಂಗೊಗೆ ಅಜ್ಜಿಗೆ ಮರವದು ನೆಂಪಿಲ್ಲೆಯೋ.. ಅಜ್ಜಿಗೆ ಹೀಂಗೆ ನೆಂಪು ಮಾಡಿರೆ ಹೇಂಗೆ ಮಾಡುದು ಹೇಳಿ ಬರೆಗು.. ಒಟ್ಟಿಂಗೆ ಒಪ್ಪಣ್ಣ ಬಾವಂಗೆ ಕೆಲಸ ಕೊಟ್ಟಿ..

  3. ಅರೇ ಈಗ ಒಪ್ಪಣ್ಣನ ಬೈಲಿಲ್ಲಿ ಪೂರಾ ಹರವದೇ ಆತನ್ನೇ….. ಏ ಒಪ್ಪಣ್ಣಾ ,,,, ಪೂರಾ ಕಚ್ಚುಲೆ ಗಿಚ್ಚುಲೆ ಸುರು ಮಾಡಿರೆ ಎಂತ ಮಾಡುದು?

    1. ನಾಳೆಂದ ಆಟಿ ಸುರು ಆವುತ್ತು, ಹಾಂಗಾಗಿ ಕಣಿಲೆಯ ಹೊಯಿಮಾಲೆ ಇಲ್ಲಿಗೇ ಮುಗುಶಿ, ಶಾಂತಾಣಿ, ಬೇಳೆ ಹೋಳಿಗೆ, ಕೆಸುವಿನ ಪತ್ರೊಡೆ, ಬೇವಿನ ಚಟ್ನಿ ಇವುಗಳ ಬಗ್ಗೆ ಆಲೋಚನೆ ಮಾಡ್ಲಕ್ಕು.

      1. ತಗತ್ತೆ ತಾಳ್ಳು, ಕೊಡಿ ತಂಬ್ಳಿ, ಕಾಟು ಕೇನೆ, ಎಲ್ಲಾ ಮರತ್ತೇ ಹೋತಾ.

  4. ಕಣಿಲೆ ರುಚಿ ಕಂಡ ಮಾಣಿ
    ಹಿಡ್ಕೊಂಡ್ ಹೆರಟ ಗೋಣಿ
    ಮಾಣಿಯ ಅಮ್ಮ ವಾಣಿ
    ಕೊಟ್ಟತ್ತೆರಡು ಶಾಂತಾಣಿ

    1. ವ್ಹಾ ವ್ಹಾ!! ಶ್ರೀಶಣ್ಣ, ನಿಂಗಳ ನಾಲ್ಕುಕಾಲಿನ ಪಧ್ಯ ಲಾಯ್ಕಾಯಿದಾತ!

  5. ಗೊಂತಾಗದ್ದರೆ ಅಜ್ಜಿ ಹಿಡ್ಕಂಡು ಬಪ್ಪಗ ಗೊಂತಕ್ಕು. ಬೆನ್ನಿಂಗೆ ಹಾಳೆ ಕಟ್ಟಿಗೊ.

    1. ಆನು ಹೇಳುವದು ಎಂತರ ಹೇಳಿರೆ, ಈ ಕಣಿಲೆ ಪುರಾಣವ ಬ್ಲೋಗಿಲ್ಲಿ ಹಾಕಿ, ಮುಂದಕ್ಕೆ ನಾಲ್ಕು ಒಡ್ಡಿ ಬೀಜವೋ, ಒಂದು ಮುಷ್ಟಿ ಗೆಣಮೆಣಸೋ ಇದ್ದರೆ ಕೊಯಿವಲೆ ಕೊಕ್ಕಗೂ, ಏಣಿಗೂ ತತ್ವಾರ ಅಕ್ಕು ಹೇಳಿ ಶರ್ಮ ಬಾವ ಹೇಳಿದ್ದದರ ಪುನರುವಾಚ ಖಂಡಿತಾ ಮಾಡೆಕ್ಕು. ಇದರ ಹಿಂದೆಯೇ ಬೆದುರಿನ ಬಹು ಉಪಯೋಗದ ಬಗ್ಗೆಯೂ ಬರೆಯಿ ಒಪ್ಪಣ್ಣಾ.

  6. @ಆದರ್ಶ್
    ಮಂಗಣ್ಣ. ನೀನೇ ಅಲ್ಲದಾ ಎಂಗೊಗೆ ಎಲ್ಲಾ ಲೀಡರ್ ಆಗಿ ಇತ್ತಿದ್ದು. ಈಗ ಹೀಂಗೆ ಅಜ್ಜಿ ಹತ್ರ ಪೂಸಿ ಹೊಡದು ತಪ್ಪಿಸುವದಾ? :):)

      1. ಈಗ ನಿಘಂಟು ಆತು ಮಾಣಿ. ನಿನ್ನ ಬಾಯಿ ದೊಡ್ಡದು. ಕೋಲು ಸಣ್ಣದೇ 🙂 🙂 🙂

        1. 🙂 ಉಮ್ಮಪ್ಪ 🙂 ಆನು ಸಣ್ಣ ಮಾಣಿ, ಎನಗೆ ನಿಂಗ ಹೇಳಿದ ಕೋಲು ಎಂತರ ಹೇಳಿಯೆ ಅರ್ಥಆಯ್ದಿಲ್ಲೆ! ನಿಘಂಟು ಹೇಳಿರೆ ಗೊಂತಿದ್ದು. ಶಾಲೆಲಿ ಇಂಗ್ಲಿಷ್ ಕನ್ನಡ ನಿಘಂಟು ಎಲ್ಲ ಕೊಟ್ಟಿತ್ತಿದ್ದವು ಮೊದಲು 🙂

          1. ಯೇ ಆದರ್ಶ ಬಾವ ನೀನು ಎಂತೆಲ್ಲ ನಿಘಂಟು ಮಾಡಿದ್ದೆಯೋ ಎಲ್ಲರಿಂಗು ಗೊಂತಿಲ್ಲೆ.. ಹೇಳಿಕ್ಕಿ ಬಿಡು ಆತೋ..

  7. ಕಣಿಲೆ ತೊಳದ ನೀರಿನ ದನಗಳ ಅಕ್ಕಚ್ಚಿಂಗೆ ಹಾಕಿಕ್ಕೆಡಿ.

    1. { ದನಗಳ ಅಕ್ಕಚ್ಚಿಂಗೆ ಹಾಕಿಕ್ಕೆಡಿ }
      ಇಲ್ಲೆಪ್ಪ, ಹಾಂಗೆಲ್ಲ ಹಾಕವು ದನಗಳ!
      ಅಕ್ಕಚ್ಚು ಇಪ್ಪದು ಬಾಲ್ದಿಲಿ, ದನಗಳ ಬಾಲ್ದಿಗೆ ಹಾಕುಲೆ ಕಷ್ಟ ಇಲ್ಲೆಯೋ! 😉

      1. ನೀ ಎಂತ ಮಾಣೀ… ಎಂತ ಹೇಳಿದರೂ ಬಿಂಗಿಯೇ ಅರ್ತ ಮಾಡ್ತದು…
        ಮೊನ್ನೆ ಮಾಡಡಿಲಿ ಗಾಳಿ ಅಡರು ಮಾಡಿ ಮಡಗಿದ್ದದರ ನೋಡಿದ್ದೆನ್ನೆ..?
        ಎಂತ ಮುಟ್ಟಾಟ ಆಡ್ತ ಚೆಂಙಾಯಿಗೊ ಸಿಕ್ಕಿದ್ದವಿಲ್ಲೆಯೋ.. ತಳೀಯದ್ದೆ ಹೋಗಿ ಆಡುದು ಬಿಟ್ಟು ಇಲ್ಲಿ ಬಂದು ಎಡಕ್ಕಿಲಿ ಬಾಯಿ ಹಾಕುತ್ತ…
        ಉಂಬಲಪ್ಪಗ ದಿನಿಗೇಳ್ತೆ… ಎಂತ?
        ಮೆಲ್ಲಂಗೆ.. ಅಂಬೆರ್ಪಿಲಿ ಬಿದ್ದಿಕ್ಕೆಡ ಇನ್ನು…

        1. ಅದಾ, ಅಜ್ಜಿ ಪರಂಚುದೂ………….. 🙁
          ಅಂಬಗ ಕಣಿಲೆ ತಾರೆ! ಶರ್ಮಪ್ಪಚ್ಚಿ ಹೇಳಿದ್ದು ಸರೀ ಇದ್ದು.
          ಕಣಿಲೆ ಕಡಿವಲಾಗ, ಬೆದುರು ಆವುತ್ತಿಲ್ಲೆ.. 🙁 🙁 😉

          1. ಒಪ್ಪಣ್ಣ ಹೋಯಿದ ತಪ್ಪಲೆ.. ನೀನು ಹೋಗಿ ಬೇರೆ ಏವದೋ ಕುತ್ತಿಯ ಕಣಿಲೇಳಿ ಕಡುಕ್ಕೊಂಡು ಬರೇಕೂಳಿಲ್ಲೆ..
            ಅರಡಿಯದ್ದ ಮಕ್ಕೊ ಅಂತೆ ಹಾರದ್ದೆ ಒಪ್ಪಣ್ಣನಾಂಗೆ ಕೂರೆಕ್ಕು…ಕೇಳಿತ್ತೊ?

          2. ಎಂತ ನಗೆಗಾರ. ಒಂದು ದೋಸೆ ಕೊಟ್ಟರೆ ಸೊಸೆ ಹತ್ರಂಗೆ, ಮೂರು ದೋಸೆ ಕೊಟ್ಟರೆ ಅತ್ತೆ ಹತ್ರಂಗೆ ಹೇಳ್ತೆ !!!

        2. ಸದಾ ಕುಟ್ಟಿ ಬದನೆ…… ನೆಗೆಗಾರ ಭಾವಂಗೆ ಹಾಂಗೆ ಅಯೆಕ್ಕು….. ಲಲಾಲ್ಲ…..

        3. ಇದಾ ಅಜ್ಜಿ. ಈ ಬಿಂಗಿ ಮಾಣಿಯಂಗಳ ಬಾಯಿಗೆ ಕೋಲು ಹಾಕೆಡಿ. ಒಂದು ಬಿಂಗಿಯನ್ನೇ ಸುದಾರಿಸಲೆ ಕಷ್ಟ ಆವುತ್ತು. ಇನ್ನು ಆ ಮುಟ್ಟಾಟದ ಪಟ್ಲಾಂಗೊ ಎಲ್ಲ ಬಂದರೆ ಹೇಂಗೆ ಸುದಾರಿಸುವಿ? ಮತ್ತೆ ಒಪ್ಪ…ಣ್ಣ ನೇ ಬಂದೇ ಸುದರಿಸೆಕ್ಕಕ್ಕು.:) 🙂
          ಹೊತ್ತೋಪಗಾಣ ಕಾಪಿ ತಿಂಡಿ ಕೊಟ್ಟು, ಗಿಸೆಲಿ ನಾಲ್ಕು ಶಾಂತಾಣಿ ಹಾಕಿ ಕಳಿಸಿ. ಮುಟ್ಟಾಟವೋ ತಟ್ಟಾಟವೋ ಎಲ್ಲಾ ಆಡಿಕ್ಕಿ ಕತ್ತಲೆ ಅಪ್ಪಗ ಬಕ್ಕು. ಅಷ್ಟಪ್ಪಗ ಕಣಿಲೆ ಬೆಂದಿ, ತಾಳು ಮಾಡಿರೆ ಗಮ್ಮತ್ತು ಉಂಡಿಕ್ಕಿ ಒರಗ್ಗಿದ 🙂

          1. ಬಿಂಗಿ ಮಾಣಿಯಂಗಳ ಪಟ್ಟಿಲಿ ಎನ್ನ ಹೆಸರಿಲ್ಲೆ ಅಲ್ಲದ ಅಜ್ಜಿ? ಆನು ಒಪ್ಪಣ್ಣ ಅಡ, ಮನೆಲಿ ಎಲ್ಲರು ಹೇಳ್ತವು.. ನಗೆಗಾರಣ್ಣಂದೆ ಒಪ್ಪಣ್ಣನೆ 😉 (ರಜ ಸೀಂತ್ರಿ ಬಿಟ್ಟರೆ)..
            ಶ್ರೀಶಣ್ಣ ಒಂದು ಸಣ್ಣ ಸಂಶಯ!?? ಈ ,, ಬಾಯಿಗೆ ಕೋಲು ಹಾಕುದು, ಕೋಲು ಅಷ್ಟೂ ಸಣ್ಣ ಇದ್ದು ಹೇಳಿಯಾ ಅಲ್ಲ ಬಾಯಿ ಅಷ್ಟು ದೊಡ್ಡ ಇದ್ದು ಹೇಳೀಯಾ?

      2. ಶಾಂತಂ ಪಾಪಂ. ಆಗಪ್ಪಾ ಆಗ. ದನಗಳ ಬಾಲ್ದಿಗೆ ಹಾಕುವದೋ?

  8. ಮನೆಯ ಮೇಲಾಣ ಗೆದ್ದೆಲಿ ಒಳ್ಳೆ ಕಣಿಲೆ ಬೆಳೆತ್ತಾ ಇದ್ದು. ಹೋಗಿ ತಂದು ಬೆಂದಿ ಮಾಡಿರೆಂತ? ಅಜ್ಜಿ ಕೊಟ್ಟ ರೆಸಿಪಿ ಎಲ್ಲರಿಂಗೂ ಉಪಯೋಗ ಅಕ್ಕು. ಶರ್ಮಣ್ಣ ಹೇಳಿದ್ದು ನೆನಪಿರಲಿ… ಆ ವಿಷಯಲ್ಲಿ ಗೋಶುಬಾರಿ ಮಾಡುದು ಬೇಡ.

    1. ಹ್ಮ್ ಜಾಗ್ರತೆ ಹರೀಶೊ… ಹಿಂದಾಣ ದಿನವೇ ನೀರಿಲಿ ಹಾಕಿ ಮಡಗುಲೆ ಮರೇಡ. ಮತ್ತೆ ಒಂದರಿ ಬೇಶಿ ನೀರು ತೆಗೇಕು.. ಎಂತ?

  9. ಕೆಲವು ಕಣಿಲೆ ಕಡುದರೆ ಮುಂದಕ್ಕೆ ಹೆಚ್ಹು ಹೆಚ್ಹು ಕಣಿಲೆ ಬಿಡುತ್ತು.ಕಡಿಯದ್ದರೆ ಮತ್ತೆ ಕಣಿಲೆಯೆ ಅಪ್ಪದು ಕಮ್ಮಿ.ಹಾಂಗಾಗಿ ರಜ್ಜ ಕಣಿಲೆ ಕಡಿವದು ಬೆದಿರಿನ ವಂಶ ವ್ರುದ್ದಿಗೆ ಒಳ್ಲೆದು..

    1. ಅದಾ ಅಡಕತ್ತಿಮಾರು ಮಾವ, ಸಪ್ರೋಟು ಮಾಡಿದ್ದಕ್ಕೆ ಧನ್ಯವಾದಂಗೊ……… ಇಷ್ಟ ಇಪ್ಪ ವಿಶ್ಯಕ್ಕಪ್ಪಾಗ ಹೀಂಗಿಪ್ಪ ಬೆನ್ನು ತಟ್ಟುವವು ಬೇಕಾವುತ್ತು.

      1. ಬೆನ್ನು ಎಲ್ಲೊರೂ ತಟ್ಟುತ್ತವು ಚಿಕ್ಕಮ್ಮ.
        ಕೆಲವು ಜೆನ ಜೋರು, ಕೆಲವು ಜೆನ ಮೆಲ್ಲಂಗೆ – ಅಷ್ಟೇ ವಿತ್ಯಾಸ!!!!

      2. ಸರಿಯಾಗಿ ಹೇಳಿದೆ ಕೂಸೆ…
        ಹ್ಮ್ ಆ ಲೆಕ್ಕ ಲ್ಲಿ ಅಡ್ಕತ್ತಿಮಾರಿಂಗೆ ಒಂದು ಕರಡಿಗೆ ಉಪ್ಪಿನಕಾಯಿ ಜಾಸ್ತಿ ಕಳುಸುವೊ ಅಲ್ದೊ…?

        1. ಅಪ್ಪಜ್ಜೀ,…..ಅಕ್ಕು ಕಳ್ಸಿಕ್ಕಿ….. ಎನಗುದೆ ಬೇಕಜ್ಜೀ ಹೊಸಾ ಮೆಡಿ ಉಪ್ಪಿನಕಾಯಿ…ಎನಗೆ ಮಾವಿನ ಮೆಡಿ ಸಿಕ್ಕಿದ್ದಿಲ್ಲೆ, ಊರಿಂದ ಮಾವನೋರು ಕಳ್ಸಿದ್ದ ಕಣಿಲೆ, ತಾಳು ಮಾಡಿ ಅಪ್ಪಗ ೧ ಕುಪ್ಪಿಗೆ ಬಂದತ್ತಷ್ಟೆ…..

  10. ಅಜ್ಜೀ ಬರದ್ದು ಲಾಯ್ಕಾ ಆಯ್ದು.. ಫಾಸ್ಟ್‌ ಫುಡ್ಡಿನ ಹಾಂಗೆ.. ಎಲ್ಲ ಸಂಕ್ಷಿಪ್ತವಾಗಿ ರೆಸಿಪಿಯ ವಿವರವಾಗಿ ಕೊಟ್ಟಿದಿ… ಧನ್ಯವಾದ…

    1. ಅದೆಂತರ ಮಾಣೀ….?
      ಹಾಂಗಿದ್ದ ಹಾಳು ಕಾಟಂಕೋಟಿ ಎಲ್ಲ ತಿಂದಿಕ್ಕೆಡ… ಅದರ ಹೆಸರೇ ವಿಚಿತ್ರ ಇದ್ದಪ್ಪ… ಹೊಟ್ಟಗೆ ಆಗದ್ದೆ ಬಕ್ಕು.

  11. ಅಜ್ಜೀ!
    ಶುದ್ದಿ ಅಂತೂ ನಿಂಗೊ ಮೊನ್ನೆ ಮಾಡಿದ ಕಣಿಲೆ ತಾಳಿನಷ್ಟೇ ಲಾಯಿಕಾಯಿದು. ಪ್ರತಿ ವೈವಿಧ್ಯವೂ ಪಷ್ಟ್ಳಾಸಾಯಿದು.
    ಶರ್ಮಪ್ಪಚ್ಚಿ ಕಣಿಲೆಮುರಿವದಕ್ಕೆ ಪರಂಚುತ್ತವು ಹೇಳಿ ನಿಂಗೊ ಮಾಡದ್ದೆ ಕೂರೆಡಿ ಆತೋ!
    ಅವಕ್ಕೆ ಗೊಂತಾಗದ್ದ ಹಾಂಗೆ ಎಂಗೊ ತಂದು ಕೊಡ್ತೆಯೊ°. 🙂

    1. ಪುಳ್ಯಕ್ಕೊ ಹೇಳಿದರೆ ಹೀಂಗೆ ಇರೇಕದಾ…
      ಅಜ್ಜಿಯ ಮಂಕಡ್ಸಿ ಪಾತ್ರ ಪೂರ ಬರಗುವ ವಯಿವಾಟುದೇ ಇಕ್ಕು.. ನಂಬಿಕ್ಕಲೆಡಿಯ ಮಾಂತ್ರ…

  12. ಕಣಿಲೆಯ ತುಂಬ ಜಾಗ್ರತೆಂದ ಉಪಯೋಗಿಸಕು.ಶರ್ಮಣ್ಣ ಹೇಳಿದ ಹಾಂಗೆ ಸಯನೆಯ್ಡ್ ಸಂಗತಿ ಎನಗೆ ಗೊಂತಿಲ್ಲೆ,ಆದರೆ ನಾಲ್ಕೈದು ವರ್ಷದ ಹಿಂದೆ ಕಣಿಲೆ ಪಲ್ಲ್ಯ ಮಾಡಿ ತಿಂದು ಎನ್ನ ಮಕ್ಕೊಗೆ ಮೈಲಿ ಉಷ್ಣಂದ ಬೊಕ್ಕೆ ಬಿದ್ದದು ನೆಂಪಿದ್ದು!!!

    1. ರಜ ರಜ ತಿಂದರೆ ಎಂತಾಗಬ್ಬೊ… ದಣಿಯ ತಿಂಬಲಾಗ. ಮತ್ತೆ ನಾವು ಅಪುರೂಪಕ್ಕೆ ಮಾಡ್ತದನ್ನೆ. ಹಾಂಗೆಂತ ಆಗ.
      ಕೆಲವು ಜನರ ಶರೀರಕ್ಕೆ ಆಗದ್ದೆ ಬಪ್ಪಲೂ ಸಾಕು…

  13. ಬೆಂದಿ, ಕೊದಿಲು ಮಾಡುವಾಗ ಮುಂಗೆ ಬರುಸಿದ ಹಸರುಕಲು ಹಾಕಿದರೆ ಬಾರಿ ಲಾಯ್ಕ ಆವುತ್ತು

      1. ಹ್ಮ್ ಅದುದೇ ಒಳ್ಳೆದೇ. ಆರೋಗ್ಯಕ್ಕೂ ಒಳ್ಳೆದು.
        ಹೊಸಾ ಪ್ರಯೋಗಂಗೊ ಎಲ್ಲ ಭಾರದ್ವಾಜದ ದೇವಿಗೆ ಗೊಂತಿದ್ದು ಸುಮಾರು…

  14. ಅಜ್ಜೀ, ಕಣಿಲೆಯ ವೈವಿಧ್ಯಂಗ ಲಾಯಕ ಆಯಿದು… ಎಂಗೊಗೂ ತಂಗೆ ಕಣಿಲೆ ಕಳಿಸಿ ಕೊಟ್ಟಿದು… ಎಂಗೊ ಕಣಿಲೆ ರೈಸ್ ಹೇಳಿ ಮಾಡಿದೆಯಾ°…. ಹೇಳಿರೆ ಪಲಾವಿನ ಹಾಂಗೆ ಮಾಡುದು.. ಕುಕ್ಕರಿಲಿ, ಎಣ್ಣೆಯೋ , ತುಪ್ಪವೋ ಬೆಶಿ ಮಾಡಿ ಅದಕ್ಕೆ, ನೀರುಳ್ಳಿ, ಟೊಮೇಟೊ ಬೇರೆ ಬೇರೆ ಹಾಕಿ ಫ್ರೈ ಮಾಡಿ, ಕೇರೆಟ್ ಹಾಕಿ, ಕಣಿಲೆ (ಅಜ್ಜಿ ಹೇಳಿದ ಹಾಂಗೆ ಸಂಸ್ಕಾರ ಆದ್ದದು..) , ಅರಿಶಿನ, ಉಪ್ಪು, ಗರಂ ಮಸಾಲೆ ಹೊಡಿ(ಬಿರಿಯಾಣಿ ಮಸಾಲೆ ಹೊಡಿ ಆದರೆ ಲಾಯಕ ) , ಅಕ್ಕಿ ಹಾಕಿ, ನೀರು (1:2) ಹಾಕಿ 2-3 ವಿಸಿಲ್ ಬೇಷೆಕ್ಕು…. ಲಾಯಕ ಆವುತ್ತು… ಯಾವಾಗಲೂ ಮಾಡ್ಲೆ ಆವುತ್ತಿಲ್ಲೆನ್ನೇ!!! ವರ್ಷಲ್ಲಿ ಒಂದರಿಯೋ, ಎರಡು ಸರ್ತಿಯೋ ಮಾಡ್ಲೆ ಅಪ್ಪದಲ್ಲದಾ? ಕೇಬೇಜು ಬೋಂಡ ಮಾಡಿದ ಹಾಂಗೆ ಕಣಿಲೆ ಬೋಂಡವೂ ಲಾಯಕ ಆವುತ್ತು… ಶರ್ಮಪ್ಪಚ್ಚಿ ಹೇಳಿದ್ದೂ ಸರಿಯೇ! ತಾರಮಾರ ಕಣಿಲೆ ಕಡುದರೆ ಬಿದಿರು ಬೆಳೆಯ… ಜಾಗ್ರತೆ ಉಪಯೋಗಿಸಿದರೆ ಎಲ್ಲೋರಿಂಗೂ ಹಿತ… ಅಲ್ಲದಾ?

    1. ಎಣ್ಣೆ, ತುಪ್ಪ, ಕೇರೆಟು, ಟೊಮೆಟೊ, ನೀರುಳ್ಳಿ – ಯಬ್ಬ!
      ಇಷ್ಟರ ಹಾಕಿರೆ ಕಣಿಲೆ ಹಾಕದ್ರೂ ಲಾಯಿಕಾವುತ್ತು ಶ್ರೀದೇವಿಅಕ್ಕೋ.. 😀 🙂

      1. ಕಣಿಲೆ ಸಿಕ್ಕದ್ದಿಪ್ಪಗ, ಕಣಿಲೆ ಮುಗುದ ಮೇಲೆ ಹಾಂಗೆ ಮಾಡೆಕ್ಕಷ್ಟೇ ನೆಗೆಗಾರಅಣ್ಣೋ…..;-)

    2. ಅದೆಂತರ ರಯಿಸುದು..? ಆ ಬಿಗಿಲು ಹಾಕುತ್ತ ಕುಕ್ಕುರು ಪಾತ್ರ ಎಲ್ಲ ನವಗಾಗಪ್ಪ.. ನೀನು ಇತ್ಲಾಗಿ ಬಪ್ಪಾಗ ಒಂದು ರೆಜಾ ತೆಕ್ಕೊಂಡು ಬಾ ದೇವೀ… ಆನುದೇ ರಯಿಸುತ್ತೆ.. ಎಂತ?

  15. ಅಜ್ಜೀ ಬರದ್ದು ಲೈಕ ಆಯಿದು… ಆನುದೇ ಅಬ್ಬೆ ಹತ್ತ್ರೆ ಮಾಡ್ಲೆ ಹೇಳ್ತೆ.

  16. ಕಣಿಲೆಯ ಎಲ್ಲಾ ಅಡಿಗೆಗಳೂ ತಿಂಬಲೆ ಲಾಯಿಕ್ ಆವುತ್ತು. ಆದರೆ ಉಪಯೋಗಿಸುವವು ಜಾಗ್ರತೆ ಮಾಡೆಕಾದ್ದು ಅದರ ವಿಷದ ಅಂಶದ ಬಗ್ಗೆ. ಇದರಲ್ಲಿ ಇಪ್ಪ ವಿಷ “ಸಯನೈಡ್” ಹೇಳುವದು ತುಂಬಾ ಅಪಾಯಕಾರಿ. ಕಣಿಲೆಯ ಸರಿಯಾಗಿ ನೆನೆಸಿ (ಒಂದು ದಿನ ಆದರೂ ನೀರಿಲ್ಲಿ ಮಡುಗಿ) ನೀರು ತೆಗದು, ಪುನಃ ಬೇಯಿಸಿದ ನೀರನ್ನೂ ಚೆಲ್ಲಿ ಅಡಿಗೆ ಮಾಡುವದು ಸೂಕ್ತ. ಅಂಬ್ರೆಪ್ಪಿಲ್ಲಿ ಕಣಿಲೆ ಅಡಿಗೆ ಆಯೆಕ್ಕು ಹೇಳಿ, ಸೀದಾ ತಂದು ಕೊರದು ಮುಂದುವರಿಸಲೆ ಆಗ ಹೇಳುವದು ಆನು ಜಾಗ್ರತೆಗೆ ಬೇಕಾಗಿ ಹೇಳುವದು.
    ಇನ್ನೊಂದು ವಿಷಯ ಎಂತ ಹೇಳಿರೆ, ಕಣಿಲೆ ಕಡಿವಲೆ ಹೆರಟರೆ, ಹಲವಾರು ಉಪಯೋಗ ಇಪ್ಪ ಬಿದಿರಿನ ನಾಶ ಅಕ್ಕು

    1. { ನೀರನ್ನೂ ಚೆಲ್ಲಿ ಅಡಿಗೆ ಮಾಡುವದು }
      ನೀರು ಚೆಲ್ಲಿದಲ್ಲಿ ಅಡಿಗೆ ಮಾಡುದು ಬಯಂಕರ ಕಷ್ಟ ಶರ್ಮಪ್ಪಚ್ಚಿ! 🙁
      ಮತ್ತೊಂದರಿ ಇಡೀ ಅಟ್ಟುಂಬೊಳ ಉದ್ದಿಗೊಳೆಕ್ಕು! 😉

      1. ನೀರು ಚೆಲ್ಲಿದಲ್ಲಿ ಅಡಿಗೆ ಮಾಡುದು ಹೇಂಗೆ??? ಒಲೆ ಬೇಡದ ಅಂಬಗ?? 🙂 ಅಲ್ಲ ನೀರಿನ ಅಟ್ಟುಂಬಳವೇ ಚೆಲ್ಲೆಕ್ಕಾ?? ಎನಗೆ ಎಲ್ಲ ಕಂಪ್ಯೂಸಾತೀಗ!! 🙂

  17. ತುಂಬಾ ಒಳ್ಳೆದಾತು ನೆಂಪು ಮಾಡಿದ್ದಕ್ಕೆ, ಊರಿಂದ ಬಪ್ಪಾಗ ಕಣಿಲೆ ತಪ್ಪಲೆ ಹೇಳಿದೆ…. ಇದರ ಓದಿ ಅಪ್ಪಾಗ ಬಾಯಿಲ್ಲಿ ನೀರು ಅರುದತ್ತು….. ಎನ್ನ ಭಾರೀ ಪ್ರೀತಿಯ ವಿಶ್ಯ………… ಅಭಿವಂದನೆಗೊ.

    1. { ಬಾಯಿಲ್ಲಿ ನೀರು ಅರುದತ್ತು }
      ಕೀಬೋರ್ಡು ಚೆಂಡಿ ಆದ್ದಕ್ಕೆ ಅಪ್ಪಚ್ಚಿ ಬೈದವೋ? 😉

      1. ಇದಾ.. ನೆಗೆಗಾರ ಭಾವ, ಲೇಪುಟೋಪು ಡೆಸ್ಕ್ ಮೇಲೆ ಅಪ್ಪಚ್ಚಿ ಮಡುಗಿದ್ದು ಎಂತಕ್ಕೆ ಹೇಳಿ ಈಗ ಗೊಂತಾತು…… ಅದೊಂದು ಪುಣ್ಯ…..

        1. ಅದಾ ಚಿಕ್ಕಮ್ಮಂಗೆ ಕೋಪ ಬಪ್ಪದು..
          @ಊರಿಂದ ಬಪ್ಪಾಗ ಕಣಿಲೆ ತಪ್ಪಲೆ ಹೇಳಿದೆ
          ಇಂದು ಇರುಲಿಂಗೊ ನಾಳಾಂಗೊ… ಹೇಳಿಕ್ಕಿ ಎಂಗಳೂ ಬತ್ತೆಯೋ….

          1. ಇಂದು ಬಂದದಟ್ಟೇ ಅಜಕ್ಕಾನ ಭಾವಯ್ಯಾ, ಈಗ ನೀರ್ಲಿ ಹಾಕಿ ಮಡುಗಿದ್ದೆ…. ಎಲ್ಲೋರೂ ನಾಳಂಗೆ ಮಧ್ಯಾಹ್ನಕ್ಕೆ ಬನ್ನಿ…… ತಾಳಿಂಗೆ ಸಾಸಮ್ಮೆ – ಕಾಯಿ- ಅರಶಿನ ಕಡದು ಹಾಕಿ ಮಾಡ್ತೆಯ,…….

          2. ಅಪ್ಪೋ ಪುಳ್ಳಿ.. ಹೊತ್ತಿಂಗಪ್ಪಗ ಹೋಪದೋ… ರಜ ಮೊದಲೇ ಹೋಗಿ ಕಡವಲೋ ಮಣ್ಣ ಸೇರುಲಾಗದೋ..? ಎಲ್ಲೊರಿಂಗೂ ಮಾಡಿ ಕೊಡೆಡದೋ ಅದು ಪಾಪ…

  18. ಕಣಿಲೆ ಉಪ್ಪಿನಕಾಯಿಗೆ ನಿಂಬೆ ಹುಳಿ ಹಾಕಿ ಮಾಡಿರೆ ಲಾಯಕ ಆವುತ್ತು.ನಮ್ಮ ಊರಿಲ್ಲಿ ಹುಳಿ ಉಪ್ಪಿನಕಾಯಿಗೆ ಮೆಣಸು ಹಾಕಿ ಮಾಡುದು ರಜಾ ಕಮ್ಮಿ ಅಲ್ಲದೋ,ಆದರೆ ಕಣಿಲೆ ನಿಂಬೆ ಉಪ್ಪಿನಕಾಯಿ ಬಾರೀ ರುಚಿ.
    ಸರಿಯಾದ ಸಮಯಕ್ಕೆ ಕಣಿಲೆ ರೆಸಿಪಿ ಸಿಕ್ಕಿದ್ದು ಒಳ್ಳೇದೆ.

    1. ಹ್ಮ್ ಮಾಡ್ಳಕ್ಕು.. ಕೆಲಾವು ನಿಂಬೆಯೊಳಿ ಕೈಕ್ಕೆ ಬತ್ತದಾ.. ಹಾಂಗಿದ್ದರೆ ಅಷ್ಟು ಲಾಯಿಕಾಗದೋಳಿ.
      ಮತ್ತೆ ನಿಂಬೆಯೊಳಿದು ಹಸಿಹೊರಡಿ ಲಾಯಿಕಕ್ಕೊ ಗೊಂತಿಲ್ಲೆ. ಹೊರುದು ಕೂಡಿ ಮಾಡ್ಳಕ್ಕು.
      ಹೇಳಿದಾಂಗೆ ಕಣಿಲೆಯೊಟ್ಟಿಂಗೆ ಅಂಬಟೆ ಕೆತ್ತೆ ಕೆತ್ತಿ ಹಾಕಲಕ್ಕು. ಅದು ಲಾಯಿಕಾವುತ್ತು. ಬೆಳಗಜೆ ಗೌರಕ್ಕ ಹಾಂಗೇ ಮಾಡೊದು ಏವಾಗಳುದೇ.

      1. ನಿಂಬೆ ಹುಳಿಯ ರುಚಿ ರಜಾ ಕೈಕ್ಕೆಯೇ ಅಲ್ಲದೋ?ಮಾಡಿ ನೋಡಿ,ತುಂಬಾ ರುಚಿ ಆವುತ್ತು,ಹಸಿ ಕಡದು ಹಾಕಲಕ್ಕು,ಹೊರುದು ಹಾಕಿರೂ ಲಾಯಕಾವುತ್ತು.ಮಡಿಕೇರಿ ಕಡೇಲಿ ಹಾಂಗೆ ಮಾಡ್ತವು,ಈಗ ಆನುದೇ ಹಾಂಗೆ ಮಾಡ್ತೆ.
        ಅಂಬಟೆ ಹೆಂಗೂ ಗೊಂತಿಪ್ಪದೆ.

  19. adaa.laayka aayidu.. aanu monne sose hatre maDule hELittidde.. taallude patrodede laayka maaDiddu.. ajji maaDidaSTu laayka aagira….

    1. ಅಪ್ಪೋ.. ಒಳ್ಳೆದಾತು. ಇನ್ನೊಂದರಿ ಮಾಡಿದರೆ ಎನಗೂ ಕಳುಸಿಕ್ಕಿ ಅಣ್ಣೋ ರುಚಿ ನೂಡುಲೆ.. ಏ°?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×