ಅಕ್ಕಿ ಹಲಸಿನ ಹಣ್ಣು ಪಾಯಸ

June 11, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಕ್ಕಿ ಹಲಸಿನ ಹಣ್ಣು ಪಾಯಸ

ಬೇಕಪ್ಪ ಸಾಮಾನುಗೊ:

  • 1/2 ಕಪ್(ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಅಥವಾ ಬಾಸ್ಮತಿ ಒಳ್ಳೆದು)
  • 4 ಕಪ್(ಕುಡ್ತೆ) ಸಣ್ಣಕೆ ಕೊಚ್ಚಿದ(ಕ್ರಶ್ ಮಾಡಿದ) ಹಲಸಿನ ಹಣ್ಣು
  • 2 ಕಪ್(ಕುಡ್ತೆ) ಬೆಲ್ಲ
  • 3 ಕಪ್(ಕುಡ್ತೆ) ಕಾಯಿ ತುರಿ ಅಥವಾ 2.5-3 ಕಪ್(ಕುಡ್ತೆ) ಕಾಯಿ ಹಾಲು
  • ಚಿಟಿಕೆ ಉಪ್ಪು (ಬೇಕಾದರೆ ಮಾತ್ರ)
  • 3-4 ಏಲಕ್ಕಿ

ಮಾಡುವ ಕ್ರಮ:

ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ.

ಉಳಿಲಿ ಅಥವಾ ಮಿಕ್ಸಿಲಿ ಹಲಸಿನ ಹಣ್ಣಿನ ಸಣ್ಣಕೆ ಕೊಚ್ಚಿ/ಕ್ರಶ್ ಮಾಡಿ.

ಬೆಣ್ತಕ್ಕಿಯ ನೀರಿಲ್ಲಿ ಲಾಯಿಕ 2-3 ಸರ್ತಿ ತೊಳದು, ಪ್ರೆಶರ್ ಕುಕ್ಕರಿಂಗೆ ಹಾಕಿ. ಕೊಚ್ಚಿದ ಹಲಸಿನ ಹಣ್ಣು, ಸಾಧರಣ 3 ಕುಡ್ತೆ ಅಪ್ಪಸ್ಟು ನೀರು ಹಾಕಿ ಬೇಶಿ.(2 ಸೀಟಿ)

ಕಾಯಿಯ ರೆಜ್ಜ ನೀರು ಹಾಕಿ ನೊಂಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ.

ಹಿಂಡಿದ ಪುಂಟೆಗೆ 1 ಕುಡ್ತೆ ನೀರು ಹಾಕಿ, ಲಾಯಿಕಲಿ ಬೆರುಸಿ ವಸ್ತ್ರಲ್ಲಿ ಪುನಃ ಹಿಂಡಿ.
ಈ ನೀರು ಕಾಯಿಹಾಲಿನ ಬೇಶಿದ ಅಕ್ಕಿ, ಹಲಸಿನ ಹಣ್ಣಿನ ಪಾತ್ರಕ್ಕೆ ಹಾಕಿ, ಬೆಲ್ಲ, ಚಿಟಿಕೆ ಉಪ್ಪನ್ನೂ ಹಾಕಿ ಕೊದುಶಿ.
ಬೆಲ್ಲ ಕರಗುವನ್ನಾರ ಸಣ್ಣ ಕಿಚ್ಚಿಲ್ಲಿ ಸಾಧಾರಣ 5 ನಿಮಿಷ ಮಡುಗಿ.
ಕಾಯಿ ಹಾಲಿನ ಹಾಕಿ ಕೊದುಶಿ. ಗುದ್ದಿ ಹೊಡಿ ಮಾಡಿದ ಏಲಕ್ಕಿಯನ್ನೂ ಹಾಕಿ ತೊಳಸಿ ಪಾಯಸವ 1-2 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.

ಬೆಶಿ-ಬೆಶಿ ಅಥವಾ ತಣ್ಣಂಗೆ(ಫ್ರಿಜ್ ಲ್ಲಿ ಮಡುಗಿ) ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

  1. ಸಂದೇಶ

    ಪಾಯಸ ಒಳ್ಳೆದಾಯಿದು

    [Reply]

    VA:F [1.9.22_1171]
    Rating: 0 (from 0 votes)
  2. ಸುಮನ ಭಟ್ ಸಂಕಹಿತ್ಲು.

    ಹಲಸಿನ ಹಣ್ಣು ಫೋಟೋ ದೆ, ಪಾಯಸ ಫೋಟೋದೆ ನೋಡುವಗ ಬಾಯಿಲಿ ನೀರು ಬತ್ತಾ ಇದ್ದು ವೇಣೀ…

    [Reply]

    VA:F [1.9.22_1171]
    Rating: 0 (from 0 votes)
  3. ಸಂದೇಶ

    ಸುಮನಕ್ಕಾ ಇನ್ನು ಹಲಸಿನಹಣ್ಣಿಲಿಯೂ ನೀರು ಬಕ್ಕು ಅಲ್ಲದಾ!!

    [Reply]

    VA:F [1.9.22_1171]
    Rating: 0 (from 0 votes)
  4. ಸುಮನ ಭಟ್ ಸಂಕಹಿತ್ಲು.

    ಓಹ್! ಮಳೆ ಸುರು ಆದ ಕಾರಣವಾ ಸಂದೇಶಣ್ಣಾ?

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ಜಯಶ್ರೀ ನೀರಮೂಲೆದೊಡ್ಡಮಾವ°ಡಾಗುಟ್ರಕ್ಕ°ಸುಭಗಪುಣಚ ಡಾಕ್ಟ್ರುಗಣೇಶ ಮಾವ°ವಸಂತರಾಜ್ ಹಳೆಮನೆಅನಿತಾ ನರೇಶ್, ಮಂಚಿಪುತ್ತೂರಿನ ಪುಟ್ಟಕ್ಕದೀಪಿಕಾಮಾಷ್ಟ್ರುಮಾವ°ವೇಣಿಯಕ್ಕ°ಗೋಪಾಲಣ್ಣಬೊಳುಂಬು ಮಾವ°ಹಳೆಮನೆ ಅಣ್ಣವೆಂಕಟ್ ಕೋಟೂರುಒಪ್ಪಕ್ಕಅನು ಉಡುಪುಮೂಲೆಎರುಂಬು ಅಪ್ಪಚ್ಚಿವಿದ್ವಾನಣ್ಣಶ್ರೀಅಕ್ಕ°ರಾಜಣ್ಣಮಂಗ್ಳೂರ ಮಾಣಿಚೂರಿಬೈಲು ದೀಪಕ್ಕಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ