ಅಂಬಟೆ ಗೊಜ್ಜಿ

December 24, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಂಬಟೆ ಗೊಜ್ಜಿ

ಬೇಕಪ್ಪ ಸಾಮಾನುಗೊ:

  • 6 ಬೆಳದ/ಹಣ್ಣಾದ ಅಂಬಟೆ
  • 1-2 ಹಸಿಮೆಣಸು
  • 2 ನಿಂಬೆ ಗಾತ್ರದ ಬೆಲ್ಲ
  • 1 ಸಣ್ಣ ನೀರುಳ್ಳಿ(ಬೇಕಾದರೆ ಮಾತ್ರ)
  • 4-5 ಎಳೆ ಕೊತ್ತಂಬರಿ ಸೊಪ್ಪು
  • 5-6 ಬೇನ್ಸೊಪ್ಪು
  • 1/2 ಚಮ್ಚೆ ಸಾಸಮೆ
  • 1/4 ಚಮ್ಚೆ ಜೀರಿಗೆ
  • ಚಿಟಿಕೆ ಇಂಗು
  • ರುಚಿಗೆ ತಕ್ಕಸ್ಟು ಉಪ್ಪು
  • 1-2 ಮುರುದ ಒಣಕ್ಕು ಮೆಣಸು
  • 1 ಚಮ್ಚೆ ಎಣ್ಣೆ
  • 1 ಚಮ್ಚೆ ತುಪ್ಪ

ಮಾಡುವ ಕ್ರಮ:

ಅಂಬಟೆಯ ಲಾಯಿಕಲಿ ತೊಳದು ರೆಜ್ಜ ಉಪ್ಪು ನೀರು ಹಾಕಿ, ಕುಕ್ಕರಿಲ್ಲಿ ಬೇಶಿ.

ಕುಕ್ಕರಿನ ಪ್ರೆಶರ್ ಹೋದ ಮೇಲೆ, ಅದರ ಲಾಯಿಕಲಿ ಪುರುಂಚಿ. (ಪುರುಂಚಿದ ಚೋಲಿಯ ಬೇಕಾದರೆ ಮಿಕ್ಸಿಗೆ ಹಾಕಿ ತಿರುಗುಸುಲೆ ಅಕ್ಕು.)
ಬೆಲ್ಲವ ಕೆರಸಿ ಹಾಕಿ, ಉಪ್ಪು, ರೆಜ್ಜ/ಬೇಕಪ್ಪಸ್ಟು ನೀರುದೆ ಹಾಕಿ ತೊಳಸಿ.

ನೀರುಳ್ಳಿಯ ಚೋಲಿ ತೆಗದು, ಸಣ್ಣಕೆ ಕೊಚ್ಚಿ. ಕೊತ್ತಂಬರಿ ಸೊಪ್ಪನ್ನೂ ಸಣ್ಣಕೆ ಕೊಚ್ಚಿ. ಹಸಿಮೆಣಸಿನ ಸಿಗುದು ಹಾಕಿ ಅಥವಾ ಗೊಜ್ಜಿಗೆ ನುರಿರಿ.

ಒಂದು ಬಾಣಲೆಲಿ ತುಪ್ಪ ಹಾಕಿ ಬೆಶಿ ಮಾಡಿ, ಕೊಚ್ಚಿದ ನೀರುಳ್ಳಿ ಹಾಕಿ ಸಣ್ಣ ಕಿಚ್ಚಿಲ್ಲಿ ನೀರುಳ್ಳಿ ಬೇವನ್ನಾರ ಬಾಡ್ಸಿ.
ಇದರ ಗೊಜ್ಜಿಗೆ ಹಾಕಿ ತೊಳಸಿ. ಕೊಚ್ಚಿದ ಕೊತ್ತಂಬರಿ ಸೊಪ್ಪನ್ನೂ ಹಾಕಿ ತೊಳಸಿ.
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಜೀರಿಗೆ, ಮುರುದ ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ.
ಅದು ಹೊಟ್ಟಿ ಅಪ್ಪಗ, ಇಂಗು, ಬೇನ್ಸೊಪ್ಪು ಹಾಕಿ, ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಗೊಜ್ಜಿಗೆ ಹಾಕಿ ತೊಳಸಿ.
ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಉಂಡೆಮನೆ ಕುಮಾರ°
    ಉಂಡೆಮನೆ ಕುಮಾರ°

    ಎರಡು ಮುಷ್ಟಿ ಅಶನ ಹೆಚ್ಚು ಉಂಡತ್ತು..ಗೊಜ್ಜಿಂದಾಗಿ

    [Reply]

    VA:F [1.9.22_1171]
    Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಶೀಲಾಲಕ್ಷ್ಮೀ ಕಾಸರಗೋಡುರಾಜಣ್ಣಚೂರಿಬೈಲು ದೀಪಕ್ಕದೊಡ್ಡಮಾವ°ಚೆನ್ನಬೆಟ್ಟಣ್ಣಪ್ರಕಾಶಪ್ಪಚ್ಚಿಜಯಶ್ರೀ ನೀರಮೂಲೆಕೇಜಿಮಾವ°ಗೋಪಾಲಣ್ಣಶಾ...ರೀನೆಗೆಗಾರ°ಕೊಳಚ್ಚಿಪ್ಪು ಬಾವಮಂಗ್ಳೂರ ಮಾಣಿವಿದ್ವಾನಣ್ಣಕೆದೂರು ಡಾಕ್ಟ್ರುಬಾವ°ನೀರ್ಕಜೆ ಮಹೇಶಸುಭಗಅನಿತಾ ನರೇಶ್, ಮಂಚಿvreddhiಮಾಲಕ್ಕ°ಪವನಜಮಾವವೆಂಕಟ್ ಕೋಟೂರುಮಾಷ್ಟ್ರುಮಾವ°ಅಕ್ಷರ°ಶುದ್ದಿಕ್ಕಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ