ಅಮೃತ ಫಲ

March 5, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಮೃತ ಫಲ

ಬೇಕಪ್ಪ ಸಾಮಾನುಗೊ:

 • 1.5 ಕಪ್(ಕುಡ್ತೆ) ದಪ್ಪ ಕಾಯಿ ಹಾಲು
 • 1.5 ಕಪ್(ಕುಡ್ತೆ) ಹಾಲು
 • 1.25-1.5 ಕಪ್(ಕುಡ್ತೆ) ಸಕ್ಕರೆ
 • 2-3  ಏಲಕ್ಕಿ

ಮಾಡುವ ಕ್ರಮ:

ಕಾಯಿಯ ಮಿಕ್ಸಿ/ಗ್ರೈಂಡರಿಲ್ಲಿ ರೆಜ್ಜ ನೀರು ಹಾಕಿ ನೊಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ ಮಡುಗಿ.

ಒಂದು ಬಾಣಲೆಗೆ ಹಾಲು, ಕಾಯಿ ಹಾಲಿನ ಹಾಕಿ ಕೊದುಶಿ.

ಅದಕ್ಕೆ ಸಕ್ಕರೆ ಹಾಕಿ, ಅದು ಗಟ್ಟಿ ಅಪ್ಪಲೆ ಸುರು ಅಪ್ಪನ್ನಾರ ಹದ ಕಿಚ್ಚಿಲ್ಲಿ 2-3 ನಿಮಿಷಕ್ಕೊಂದರಿ ತೊಳಸಿ. ಹೊಡಿ ಮಾಡಿದ ಏಲಕ್ಕಿ ಹಾಕಿ/ಸಣ್ಣ ಕಿಚ್ಚಿಲ್ಲಿ ಅಮೃತ ಫಲ ಬಾಣಲೆಯ ತಳಂದ ಬಿಡುವನ್ನಾರ ತೊಳಸಿ.

ಒಂದು ತಟ್ಟೆಗೆ ರೆಜ್ಜ ತುಪ್ಪ ಉದ್ದಿ, ಅಮೃತ ಫಲವ ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಒಂದು ಚೆಟ್ಟೆ ಸೌಟಿಲ್ಲಿ ಹರಡಿ.

ಕೂಡ್ಲೆ ಒಂದು ಪೀಶಕತ್ತಿಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೌಕಾಕಾರಕ್ಕೆ ತುಂಡು ಮಾಡಿ.

ತುಂಡಿನ ಬೇರೆ ಬೇರೆ ಮಾಡಿ ಕರಡಿಗೆಲಿ ತೆಗದು ಮಡುಗಿ / ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ಫಲ ನವಗೆ ಸಿಕ್ಕುಗೋ? ಮಾಡಿ ಮಡಗಿದ್ದು ಇದ್ದೋ?

  [Reply]

  VN:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಈ ಹೆಸರು- ” ಅಮೃತ ಫಲ” ಮಡುಗುಲೆ ಕಾರಣ ಏನಾರು ಇದ್ದೋ ವೇಣಿಯಕ್ಕ.

  [Reply]

  ಮುಣ್ಚಿಕಾನ ಭಾವ

  ಮುಣ್ಚಿಕಾನ ಭಾವ Reply:

  ಇದು ಹಾಲಿಂದ ಮಾಡುದು. ಹಾಲು ಅಮೃತಕ್ಕೆ ಸಮ ಅಡ. ಮತ್ತೆ ಫಲ ಹೇಳಿರೆ ಸಿಕ್ಕಿದ್ದು.
  ಹಾಂಗೆ ಹಾಲಿಂದ ಸಿಕ್ಕಿದ್ದು = ಅಮೃತ ಫಲ :)

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘು ಮುಳಿಯ

  ಇದರ ರುಚಿ ಅಮೃತವೇ ಆತೊ,ಹಳಬ್ಬರು ಅ೦ತೆ ನಾಮಕರಣ ಮಾಡಿದ್ದವಿಲ್ಲೆ !

  [Reply]

  VA:F [1.9.22_1171]
  Rating: 0 (from 0 votes)
 4. ಶೈಲಜಾ ಕೇಕಣಾಜೆ

  ಹಾ಼ ಎನ್ನಮ್ಮ ಮಾಡುತ್ತು. ಭಾರೀ ಇಷ್ಟ…. ಈ ಪೇಟೆಲಿ ಸಿಕ್ಕುವ ಒಣಕ್ಕ಼ಟೆ ಕಾಯಿಲಿ ಮಾಡ್ಲೆ ಪೂರೈಸ…….. ಲಾಯ್ಕವೂ ಆವುತ್ತಿಲ್ಲೆನ್ನೇ… ಹಳ್ಳಿಗೆ ಹಳ್ಳಿಯೇ ಸಾಟಿ

  [Reply]

  VA:F [1.9.22_1171]
  Rating: 0 (from 0 votes)
 5. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಅಂಬಗ ತುಪ್ಪ ಬೇಡದೊ ಇದಕ್ಕೆ ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡೈಮಂಡು ಭಾವಅಡ್ಕತ್ತಿಮಾರುಮಾವ°ಅನು ಉಡುಪುಮೂಲೆಸಂಪಾದಕ°vreddhiಜಯಶ್ರೀ ನೀರಮೂಲೆಗೋಪಾಲಣ್ಣಶ್ರೀಅಕ್ಕ°ವೇಣೂರಣ್ಣಸುಭಗಸರ್ಪಮಲೆ ಮಾವ°ವಸಂತರಾಜ್ ಹಳೆಮನೆಪೆಂಗಣ್ಣ°ಚೂರಿಬೈಲು ದೀಪಕ್ಕಬೊಳುಂಬು ಮಾವ°ಶೀಲಾಲಕ್ಷ್ಮೀ ಕಾಸರಗೋಡುಶುದ್ದಿಕ್ಕಾರ°ಚುಬ್ಬಣ್ಣಮಾಲಕ್ಕ°ಶ್ಯಾಮಣ್ಣದೀಪಿಕಾಪಟಿಕಲ್ಲಪ್ಪಚ್ಚಿನೆಗೆಗಾರ°ಬಟ್ಟಮಾವ°ದೇವಸ್ಯ ಮಾಣಿಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ