Oppanna.com

ಅಮೃತ ಫಲ

ಬರದೋರು :   ವೇಣಿಯಕ್ಕ°    on   05/03/2013    6 ಒಪ್ಪಂಗೊ

ವೇಣಿಯಕ್ಕ°

ಅಮೃತ ಫಲ

ಬೇಕಪ್ಪ ಸಾಮಾನುಗೊ:

  • 1.5 ಕಪ್(ಕುಡ್ತೆ) ದಪ್ಪ ಕಾಯಿ ಹಾಲು
  • 1.5 ಕಪ್(ಕುಡ್ತೆ) ಹಾಲು
  • 1.25-1.5 ಕಪ್(ಕುಡ್ತೆ) ಸಕ್ಕರೆ
  • 2-3  ಏಲಕ್ಕಿ

ಮಾಡುವ ಕ್ರಮ:

ಕಾಯಿಯ ಮಿಕ್ಸಿ/ಗ್ರೈಂಡರಿಲ್ಲಿ ರೆಜ್ಜ ನೀರು ಹಾಕಿ ನೊಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ ಮಡುಗಿ.

ಒಂದು ಬಾಣಲೆಗೆ ಹಾಲು, ಕಾಯಿ ಹಾಲಿನ ಹಾಕಿ ಕೊದುಶಿ.

ಅದಕ್ಕೆ ಸಕ್ಕರೆ ಹಾಕಿ, ಅದು ಗಟ್ಟಿ ಅಪ್ಪಲೆ ಸುರು ಅಪ್ಪನ್ನಾರ ಹದ ಕಿಚ್ಚಿಲ್ಲಿ 2-3 ನಿಮಿಷಕ್ಕೊಂದರಿ ತೊಳಸಿ. ಹೊಡಿ ಮಾಡಿದ ಏಲಕ್ಕಿ ಹಾಕಿ/ಸಣ್ಣ ಕಿಚ್ಚಿಲ್ಲಿ ಅಮೃತ ಫಲ ಬಾಣಲೆಯ ತಳಂದ ಬಿಡುವನ್ನಾರ ತೊಳಸಿ.

ಒಂದು ತಟ್ಟೆಗೆ ರೆಜ್ಜ ತುಪ್ಪ ಉದ್ದಿ, ಅಮೃತ ಫಲವ ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಒಂದು ಚೆಟ್ಟೆ ಸೌಟಿಲ್ಲಿ ಹರಡಿ.

ಕೂಡ್ಲೆ ಒಂದು ಪೀಶಕತ್ತಿಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೌಕಾಕಾರಕ್ಕೆ ತುಂಡು ಮಾಡಿ.

ತುಂಡಿನ ಬೇರೆ ಬೇರೆ ಮಾಡಿ ಕರಡಿಗೆಲಿ ತೆಗದು ಮಡುಗಿ / ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

6 thoughts on “ಅಮೃತ ಫಲ

  1. ಅಂಬಗ ತುಪ್ಪ ಬೇಡದೊ ಇದಕ್ಕೆ ?

  2. ಹಾ಼ ಎನ್ನಮ್ಮ ಮಾಡುತ್ತು. ಭಾರೀ ಇಷ್ಟ…. ಈ ಪೇಟೆಲಿ ಸಿಕ್ಕುವ ಒಣಕ್ಕ಼ಟೆ ಕಾಯಿಲಿ ಮಾಡ್ಲೆ ಪೂರೈಸ…….. ಲಾಯ್ಕವೂ ಆವುತ್ತಿಲ್ಲೆನ್ನೇ… ಹಳ್ಳಿಗೆ ಹಳ್ಳಿಯೇ ಸಾಟಿ

  3. ಇದರ ರುಚಿ ಅಮೃತವೇ ಆತೊ,ಹಳಬ್ಬರು ಅ೦ತೆ ನಾಮಕರಣ ಮಾಡಿದ್ದವಿಲ್ಲೆ !

  4. ಈ ಹೆಸರು- ” ಅಮೃತ ಫಲ” ಮಡುಗುಲೆ ಕಾರಣ ಏನಾರು ಇದ್ದೋ ವೇಣಿಯಕ್ಕ.

    1. ಇದು ಹಾಲಿಂದ ಮಾಡುದು. ಹಾಲು ಅಮೃತಕ್ಕೆ ಸಮ ಅಡ. ಮತ್ತೆ ಫಲ ಹೇಳಿರೆ ಸಿಕ್ಕಿದ್ದು.
      ಹಾಂಗೆ ಹಾಲಿಂದ ಸಿಕ್ಕಿದ್ದು = ಅಮೃತ ಫಲ 🙂

  5. ಫಲ ನವಗೆ ಸಿಕ್ಕುಗೋ? ಮಾಡಿ ಮಡಗಿದ್ದು ಇದ್ದೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×