ಅಷ್ಟಮಿಯ ಮೂಡೆ-ಕೊಟ್ಟಿಗೆ ಮಾಡಿದಿರೋ?

August 22, 2011 ರ 12:00 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆಂದ ನೆಗೆಮಾಣಿದು ಒಂದೇ ರಾಗ.. ಕ್ರಿಷ್ಣ ವೇಷ ಸ್ಪರ್ಧೆಗೆ ಹೋಯೆಕ್ಕು ಹೇಳಿಗೊಂಡು.. ಅದಕ್ಕೆ ಒಂದು ವಾರಂದ ತೆಯಾರಿ ಆಗಿಂಡಿದ್ದತ್ತು..
ಒಪ್ಪಕ್ಕ ಪುಸ್ತಕದೆಡೇಲಿ ಮಡಗಿದ ನವಿಲುಗರಿ ತಂದು, ಚೂರಿಬೈಲು ದೀಪನ ಹತ್ತರೆ ಚೆಂದದೊಂದು ಕಿರೀಟ ಎಲ್ಲ ಮಾಡುಸಿ, ಭಾರದ್ವಾಜದ ದೇವಿಯತ್ತರೆ ಜಿಗಿಬಿಗಿ ಕಚ್ಚೆ ತೆಕ್ಕೊಂಡು, ಎಲ್ಲಾ ಏರ್ಪಾಡುಗಳನ್ನೂ ಮಾಡಿಕ್ಕಿ ಇದ್ದ ಮೊಸರಿನ ಪೂರ ಬಗ್ಗುಸಿ ತೆಕ್ಕೊಂಡು ಹೋಯಿದ°.. ಎಂತ ವೇಷ ಹಾಕಿದನೋ.. ಉಮ್ಮಪ್ಪ ಅಲ್ಲಿ ಕಿಟಿಕಿಲಿ ಒಸ್ತ್ರಕ್ಕೆ ಹಾಕುತ್ತ ನೀಲಿ ಕಾಣ್ತಿಲ್ಲೆ.. ಇನ್ನು ಅದನ್ನೇ ಮೈಗೆ ಉದ್ದಿಗೊಂಬಲೆ ಕೊಂಡೋಯಿದನೋ ಎಂತ್ಸೊ…  ಅಂತೂ ಇಂತೂ ಮುಗಾತದ ಕ್ರಿಷ್ಣ ವೇಷ ಸ್ಪರ್ಧೆ.. ಅಲ್ಲ ಅವ ಪ್ರಯಿಸು ಬಾರದ್ದರೂ ಆನೇ ಪಷ್ಟು ಹೇಳಿಕ್ಕುಗು ನಂಬಿಕ್ಕೆಡಿ ಆತೊ..

ಹೇಳಿದಾಂಗೆ ಅಷ್ಟಮಿಗೆ ನಿಂಗೊ ಎಂತ ಮಾಡಿದಿ..?
ಮಕ್ಕೊ ವೇಷ ಹಾಕಲೆ ಹೋಯಿದಿರೋ? ಗೆಂಡುಮಕ್ಕೊ ಮೊಸರಿನ ಅಳಗೆ ಒಡವಲೆ ಹೋಯಿದಿರೋ?
ಹೆಮ್ಮಕ್ಕೊ ಅಡಿಗೆ ಮಾಡಿದಿರೋ?
ಅದರ್ಲಿಯೂ, ಕೊಟ್ಟೆ (ಮೂಡೆ) ಕೊಟ್ಟಿಗೆ ಮಾಡಿದಿರೋ…
ಮಾಡದ್ದರೆ ಆ ಲೆಕ್ಕಲ್ಲಿ ಒಂದರಿ ಮಾಡಿಕ್ಕಿ, ಆತೋ? ನೆಂಪು ಹೇಳಿಕ್ಕಲೆ ಬಂದದು ಈಗ.
ಕೊಟ್ಟೆ ಕೊಟ್ಟಿಗೆಗೆ ಬಾಳೆಕೀತು ಕಟ್ಟಿದ್ದು...

ಮಾಡ್ತ ಕ್ರಮ ನೆಂಪಿದ್ದನ್ನೇ.. ಹಿಂದಾಣ ದಿನ ಹೊತ್ತೊಪ್ಪಾಗಳೇ ಅಕ್ಕಿ, ಉದ್ದು ಎಲ್ಲ ಬೊದುಲುಲೆ ಹಾಕಿ ಉದಿಯಪ್ಪಗ ಕಡದು ಮಡುಗುದು ಹುಳಿ ಬಪ್ಪಲೆ.. ಮತ್ತೆ ಹೊತ್ತೊಪ್ಪಾಗ ಬೇಶುದು..

ಬೇಶುದು ಅಂತೆ ಕೊಟ್ಟಿಗೆಯಾಂಗಲ್ಲ ಅದುವೇ ವಿಶೇಷ ಇದಾ.. ರೆಜ ಅಗಲ ಅಗಲ ಇಪ್ಪ ಬಾಳೆಕೀತುಗೊ ಆಯೇಕು..
ಬಾಳೆಕೀತು ಮಾಡೊಗ ದಂಟಿಂದ ಬಾಳೆಬಳ್ಳಿಯನ್ನೂ ತೆಗದು ಮಡಿಕ್ಕೊಳೇಕು..
ಸುರುವಿಂಗೆ ಬಾಳೆಯ ಉರುಟಿಂಗೆ ಮಡುಸಿ ಒಂದು ಹೊಡೆ ಬಾಳೆಬಳ್ಳಿಲಿ ಕಟ್ಟುದು..
ಮತ್ತೆ ಒಂದು ಗ್ಳಾಸಿನ ಒಳವೋ ಪಾಟೆಯ ಒಳವೋ ಮಣ್ಣ ಮಡುಗಿ ಹಿಟ್ಟೆರವದು ನಿದಾನಕ್ಕೆ.. ದಣಿಯ ಎರವಲಾಗ, ಹದಾಕೆ.. ಎರದಾದಿಕ್ಕಿ ಇನ್ನೊಂದು ಹೊಡೆಯನ್ನೂ ಕಟ್ಟಿತ್ತು.. ಹೀಂಗೇ ಮಾಡಿಕ್ಕಿ ಅಟ್ಟಿನಳಗೆಲಿ ಮಡುಗಿ ಬೇಶಿದರಾತದ..
ಇದರೊಟ್ಟಿಂಗೆ ಸೀವು ಅವಲಕ್ಕಿಯುದೇ ಮಾಡ್ತ ಕ್ರಮ ಇದ್ದು… ಕಾಯಿಗೆ ಬೆಲ್ಲ ಕೆರಸಿ ಹಾಕಿ, ಎಳ್ಳೊ ಏಲಕ್ಕಿಯೊ ಎಂತಾರು ಹಾಕಿ ಮಾಡ್ತದು… ಬೆಲ್ಲವ ರವೆಯ ಹಾಂಗೆ ಮಾಡಿರೆ ರಜ ದಿನ ಒಳಿತ್ತಿದ ಅವಲಕ್ಕಿ…
ರವೆ ಹೇಳೊಗ ನೆಂಪಾತದ.. ಉದಿಯಪ್ಪಗಣ ಕಾಪಿಗೆ ದೋಸೆಯೊ, ಉಂಡೆಯೊ ಮಾಡಿರೆ ಕೂಡುಲೆ ಎಂತ ಇಲ್ಲದ್ದರೆ ರವೆ ಮಾಡುದು ಕ್ರಮ ಅಲ್ಲದೋ.. ಏವಗಳೂ ಮಾಡುಲೆ ಪುರುಸೊತ್ತಾವುತ್ತಿಲ್ಲೆ ಹೇಳಿಗೊಂಡು ರಜ ಮಾಡಿಮಡುಗುದಿದಾ..
ಓ ಮೊನ್ನೆ ನೆಗೆಮಾಣಿ ಬಂದಿಪ್ಪಗ ಅವಂಗೆ ನಾಕು ತೆಳ್ಳವು ಕೊಟ್ಟದು.. ರವೆ ಕರಡಿಗೆಯನ್ನೂ ಹತ್ತರೆ ಮಡಿಗಿತ್ತಿದೆ ಬೇಕಾದಷ್ಟು ಹಾಕಿಗೊಳ್ಳಲಿ ಹೇಳಿಗೊಂಡು.. ಚೆಲಾ ಮಾಣಿಯೇ, ನಾಕು ದೋಸೆಗೆ ನಾಕು ಕುಡ್ತೆ ರವೆ ಕಾಲಿ… ರಾಮ ರಾಮಾ.. ಇವ° ಎಂತ ಬೆಲ್ಲ ಬೇನ್ಸೊಪ್ಪಿನ ಸೆಸಿಲಿ ಸುಲಬಲ್ಲಿ ಸಿಕ್ಕುತ್ತೂಳಿ ಗ್ರೇಶಿದ್ದನೋ ಹೇಂಗೆ.. ಇನ್ನು ಎಣ್ಣೆಯುದೇ ಉಪ್ಪಿನಕಾಇ ಎಸರುದೇ ಮಾಂತ್ರ ಕೊಡುದು ಹೇಳಿ ಆಲೋಚನೆ ಮಾಡಿದ್ದೆ.. ನೋಡೊ ಎಂತ ಮಾಡ್ತಾ°ಳಿ…
ಹ್ಮ್ ಅದಿರಳಿ ಅಷ್ಟೆಮಿಗೆ ಕೊಟ್ಟೆ ಕೊಟ್ಟಿಗೆಯೂ ಸೀವವಲಕ್ಕಿಯೂ ಮಾಡಿ ದೇವರಿಂಗೆ ನೈವೇದ್ಯ ಮಾಡಿಕ್ಕಿ ತಿಂಬದದ… ಮೂಡೆಗೆ ಒಟ್ಟಿಂಗೆ ಕೂಡಿಗೊಂಬಲೆ ಕಾಯಿಹಾಲು ಲಾಯಿಕಾವುತ್ತು.. ಹಾಂಗೆ ಮತ್ತೆ ಪುರುಸೊತ್ತಿದ್ದರೆ ಪಾಯಿಸವೊ ಹಸರ ಸೀವೋ ಮಾಡುಲಕ್ಕು ಹೇಳುವ.. ವಿಶೇಷ ಅಡಿಗೆಗಳ ಮಾಡಿಗೊಂಡು, ಒಳ್ಳೆ ಆಚಾರ-ವಿಚಾರಲ್ಲಿ ದೇವರ ಬೇಡಿಗೊಂಡು ಮನಸ್ಸಿಂಗೆ ನೆಮ್ಮದಿ ತಂದುಗೊಂಬದೇ ಅಲ್ದೊ ಹಬ್ಬದ ಆಚರಣೆ ಹೇಳಿರೆ…
ಅಷ್ಟಮಿಯ ಮೂಡೆ-ಕೊಟ್ಟಿಗೆ ಮಾಡಿದಿರೋ?, 5.0 out of 10 based on 3 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಬಂಡಾಡಿ ಅಜ್ಜಿಯ ಕೊಟ್ಟಿಗೆಂದಾಗಿ ಬೈಲಿಲೂ ಅಷ್ಟಮಿ ಜೋರಾಗಿ ನಡವಾಂಗಾತನ್ನೆ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗೋಪಾಲಣ್ಣಅನುಶ್ರೀ ಬಂಡಾಡಿಶೀಲಾಲಕ್ಷ್ಮೀ ಕಾಸರಗೋಡುಸುಭಗಶ್ಯಾಮಣ್ಣಶೇಡಿಗುಮ್ಮೆ ಪುಳ್ಳಿಶಾಂತತ್ತೆಬೊಳುಂಬು ಮಾವ°vreddhiಬಟ್ಟಮಾವ°ಅನು ಉಡುಪುಮೂಲೆನೀರ್ಕಜೆ ಮಹೇಶಮುಳಿಯ ಭಾವಡಾಗುಟ್ರಕ್ಕ°ಪುತ್ತೂರುಬಾವಮಾಷ್ಟ್ರುಮಾವ°ಯೇನಂಕೂಡ್ಳು ಅಣ್ಣಪವನಜಮಾವಬಂಡಾಡಿ ಅಜ್ಜಿಶಾ...ರೀಮಾಲಕ್ಕ°ಪ್ರಕಾಶಪ್ಪಚ್ಚಿಒಪ್ಪಕ್ಕವಿನಯ ಶಂಕರ, ಚೆಕ್ಕೆಮನೆಜಯಗೌರಿ ಅಕ್ಕ°ಕೊಳಚ್ಚಿಪ್ಪು ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ