ಬಾಳೆಕಾಯಿ ಸೆಂಡಗೆ

November 20, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಾಳೆಕಾಯಿ ಸೆಂಡಗೆ

ಬೇಕಪ್ಪ ಸಾಮಾನುಗೊ:

 • 20-25 ಸಾಧಾರಣ ಗಾತ್ರದ ಬಾಳೆಕಾಯಿ (ಅಮುಂಡ/ಮಂಗ ಬಾಳೆ ಆದರೆ ಒಳ್ಳೆದು)
 • 30-40 ಹಸಿಮೆಣಸು (ಗಾಂಧಾರಿ ಹಸಿ ಮೆಣಸು ಆದರೆ ಒಳ್ಳೆದು)
 • 2 ಚಮ್ಚೆ ಎಳ್ಳು
 • 1 ಚಮ್ಚೆ ಇಂಗಿನ ಹೊಡಿ / ದ್ರಾಕ್ಷೆ ಗಾತ್ರದ ಇಂಗು
 • 1 ಚಮ್ಚೆ ಓಮ
 • 3.5 – 4 ಕಪ್(ಕುಡ್ತೆ) ಹುಳಿ ಮಜ್ಜಿಗೆ
 • ರುಚಿಗೆ ತಕ್ಕಸ್ಟು ಉಪ್ಪು

ಮಾಡುವ ಕ್ರಮ:

ಹಸಿಮೆಣಸು, ಇಂಗು, 1/2 ಕುಡ್ತೆ ಮಜ್ಜಿಗೆ, ಉಪ್ಪು ಹಾಕಿ ಮಿಕ್ಸಿಲಿ ಸಾಧಾರಣ ನೊಂಪಿಂಗೆ ಕಡೆರಿ. ಅದಕ್ಕೆ ಓಮವ ಹಾಕಿ ಒಂದರಿ ಮಿಕ್ಸಿಯ ತಿರುಗ್ಸಿ.

ಬಾಳೆಕಾಯಿಯ ನೀರು ಹಾಕಿ ಅಟ್ಟಿನಳಗೆ/ಪ್ರೆಶರ್ ಕುಕ್ಕರ್ಲ್ಲಿ(3 ಸೀಟಿ)  ಬೇಶಿ.

ಬೆಶಿ ಬೆಶಿ ಬಾಳೆಕಾಯಿಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿ ತೆಗದು ಒಂದು ಗುಂಡು ಕಲ್ಲಿಲ್ಲಿ ಗುದ್ದಿ.

ಗುದ್ದಿದ ಬಾಳೆಕಾಯಿ, ಕಡದ ಮಸಾಲೆ, ಒಳುದ ಮಜ್ಜಿಗೆಯ ಮಿಕ್ಸಿ/ಗ್ರೈಂಡರಿಲ್ಲಿ ಹಾಕಿ ಬೇಕಾದಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ. ಎಳ್ಳು, ಉಪ್ಪು, ನೀರು(ಬೇಕಾದರೆ) ಹಾಕಿ ಲಾಯಿಕಲಿ ತೊಳಸಿ.
ಹಿಟ್ಟು ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ಹದ ಇರಲಿ.

ರೆಜ್ಜ ರೆಜ್ಜವೆ ಹಿಟ್ಟಿನ ತೆಗದು ಒಂದು ಪ್ಲಾಸ್ಟೀಕು ಶೀಟ್ / ಬಾಳೆ ಎಲೆ / ಮುಂಡಿ ಎಲೆಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹಾಕಿ.

ಇದರ ಒಂದು ಚೆಟ್ಟೆ ಸೌಟಿಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹಸರ್ಸಿ.

ಇದರ 5-6 ದಿನ ಬೆಶಿಲಿಲ್ಲಿ ಒಣಗ್ಸಿ ಒಂದು ಕರಡಿಗೆಲಿ ಹಾಕಿ ಮಡುಗಿ.

ಇದರ ಎಣ್ಣೆಲಿ ಹೊರುದು ಊಟಕ್ಕೆ ಬಳುಸಿ. ಇದು ಸಾರು, ಮೇಲಾರ, ತಂಬ್ಳಿ, ಮಜ್ಜಿಗೆ, ಮೊಸರು ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 150 ಸೆಂಡಗೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

 1. ಸುಮನ ಭಟ್ ಸಂಕಹಿತ್ಲು.

  ಹ್ಮ್! ಇದು ಒಂದು ಹೊಸ ಬಗೆ ಆನು ಕೇಳಿದ್ದು. ರುಚಿ ಅಪ್ಪ ಹಾಂಗೆ ಕಾಣ್ತನ್ನೆ?
  ಎಂತದೇ ಆಗಲಿ ಹಂತ ಹಂತವಾಗಿ ಫೋಟೋ ಸಹಿತ ಬರವ ನಿನ್ನ ಶೈಲಿ ಮೆಚ್ಚೆಕ್ಕಾದ್ದೇ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಡೈಮಂಡು ಭಾವಕಾವಿನಮೂಲೆ ಮಾಣಿಶಾ...ರೀಮಂಗ್ಳೂರ ಮಾಣಿಅನಿತಾ ನರೇಶ್, ಮಂಚಿಕಳಾಯಿ ಗೀತತ್ತೆಬಟ್ಟಮಾವ°ಕಜೆವಸಂತ°ಗಣೇಶ ಮಾವ°ದೊಡ್ಡಭಾವಶೇಡಿಗುಮ್ಮೆ ಪುಳ್ಳಿಮಾಲಕ್ಕ°ಬಂಡಾಡಿ ಅಜ್ಜಿಚೂರಿಬೈಲು ದೀಪಕ್ಕವೇಣೂರಣ್ಣಪುಣಚ ಡಾಕ್ಟ್ರುವಿನಯ ಶಂಕರ, ಚೆಕ್ಕೆಮನೆತೆಕ್ಕುಂಜ ಕುಮಾರ ಮಾವ°ಶ್ಯಾಮಣ್ಣರಾಜಣ್ಣಅಕ್ಷರದಣ್ಣಪವನಜಮಾವಸುವರ್ಣಿನೀ ಕೊಣಲೆಶರ್ಮಪ್ಪಚ್ಚಿಅಕ್ಷರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
"ಆನು ಕಂಡುಂಡ ಕಾಶೀಯಾತ್ರೆ"
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಬೆಣಚ್ಚಿಪ್ಪಲ್ಲಿ ಹುಡ್ಕಲೆ