ನೇಂದ್ರ ಬಾಳೆಕಾಯಿ ಚೋಲಿ ತಾಳು(ಪಲ್ಯ)

January 29, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನೇಂದ್ರ ಬಾಳೆಕಾಯಿ ಚೋಲಿ ತಾಳು(ಪಲ್ಯ)

ಬೇಕಪ್ಪ ಸಾಮಾನುಗೊ:

 • 1 ಕಟ್ಟು ನೇಂದ್ರ ಬಾಳೆಕಾಯಿ ಚೋಲಿ(ಸಾಧಾರಣ 5 ನೇಂದ್ರ ಬಾಳೆಕಾಯಿಯ ಚೋಲಿ)
 • 4-5 ಚಮ್ಚೆ ಕಾಯಿ ತುರಿ
 • 3/4 ಚಮ್ಚೆ  ಮೆಣಸಿನ ಹೊಡಿ
 • ರುಚಿಗೆ ತಕ್ಕಸ್ಟು ಉಪ್ಪು
 • ಚಿಟಿಕೆ ಅರುಶಿನ ಹೊಡಿ
 • ನಿಂಬೆ ಗಾತ್ರದ ಬೆಲ್ಲ
 • ದ್ರಾಕ್ಷೆ ಗಾತ್ರದ ಹುಳಿ
 • 5-6 ಬೇನ್ಸೊಪ್ಪು
 • 1 ಚಮ್ಚೆ ಉದ್ದಿನ ಬೇಳೆ
 • 1 ಚಮ್ಚೆ ಸಾಸಮೆ (1/4 ಚಮ್ಚೆ ಮಸಾಲೆಗೆ + 3/4 ಚಮ್ಚೆ ಒಗ್ಗರಣೆಗೆ)
 • 1/2 ಒಣಕ್ಕು ಮೆಣಸು
 • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಒಂದು ಪಾತ್ರಲ್ಲಿ ರೆಜ್ಜ ಮಜ್ಜಿಗೆ, ನೀರು ಹಾಕಿ ಮಡುಗಿ. ಬಾಳೆಕಾಯಿ ಚೋಲಿಯ ಸಣ್ಣಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರದು ಮಜ್ಜಿಗೆ ಹಾಕಿದ ನೀರಿಂಗೆ ಹಾಕಿ, ಒಂದು 5 ನಿಮಿಷ ಮಡುಗಿ.

ಬಾಳೆಕಾಯಿ ಚೋಲಿಯ ಮಜ್ಜಿಗೆ ನೀರಿಂದ ತೆಗದು, ಪ್ರೆಶರ್ ಕುಕ್ಕರ್ಲ್ಲಿ ಹಾಕಿ.
ಅದಕ್ಕೆ ಬೆಲ್ಲ, ಹುಳಿ ಪುರುಂಚಿದ ನೀರು, ಮೆಣಸಿನ ಹೊಡಿ, ಅರುಶಿನ ಹೊಡಿ, ಉಪ್ಪು, ರೆಜ್ಜ ನೀರು ಹಾಕಿ ಬೇಶಿ(3-4 ಸೀಟಿ).

ತೆಂಗಿನಕಾಯಿ, 1/4 ಚಮ್ಚೆ ಸಾಸಮೆಯ ಮಿಕ್ಸಿಲಿ ಹಾಕಿ, ರೆಜ್ಜ ನೀರು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊಜಕ್ಕು ಮಾಡಿ.

ಕುಕ್ಕರ್ನ ಪ್ರೆಶರ್ ಹೋದ ಮೇಲೆ, ತಾಳಿನ ನೀರು ಆರ್ಸಿ, ಕಾಯಿ ತುರಿ ಹಾಕಿ ತೊಳಸಿ. ತಾಳಿನ ಸಣ್ಣ ಕಿಚ್ಚಿಲ್ಲಿ ಒಂದೆರಡು ನಿಮಿಷ ಮಡುಗಿ.
ಒಗ್ಗರಣೆ ಸಟ್ಟುಗಿಲ್ಲಿ, ಉದ್ದಿನ ಬೇಳೆ, ಸಾಸಮೆ, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ.
ಒಗ್ಗರಣೆ ಹೊಟ್ಟುವಗ ಬೇನ್ಸೊಪ್ಪು ಹಾಕಿ, ಒಗ್ಗರಣೆಯ ತಾಳಿಂಗೆ ಹಾಕಿ ಬೆರುಸಿ. ಇದು ಅಶನ/ಚಪಾತಿ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ವೇಣಿ ಅಕ್ಕ ಮೊನ್ನೆ ಚಿಪ್ಸ್ ಮಾಡಿದ್ದರ ಚೋಲಯೋ??

  [Reply]

  ಬೋಸ ಬಾವ

  ಬೋಸ ಬಾವ Reply:

  ಅ೦ತೂ ಬಾಳೆಕಾಯಿ, ಚೋಲಿಯೂ ಬಿಡದ್ದೆ ಮನಾರಕ್ಕೆ ತಿ೦ದು ಮುಗಾತು… 😉
  ಒಳುದರೆ ಪೋಡಿ ಮಾಡಿರಾತು.. 😀

  [Reply]

  VN:F [1.9.22_1171]
  Rating: +2 (from 2 votes)
 2. ಶಿಲ್ಪಾ

  ಮನೆಯಲ್ಲಿ ಮಾಡಿ ತಿಂದು ನೊಡಿ ಹೆಳತಿನಿ, ಹೇಂಗೆ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವಪೆಂಗಣ್ಣ°ಶ್ಯಾಮಣ್ಣಶ್ರೀಅಕ್ಕ°ಬೊಳುಂಬು ಮಾವ°ಪುಟ್ಟಬಾವ°ವೇಣೂರಣ್ಣಗಣೇಶ ಮಾವ°ಮುಳಿಯ ಭಾವನೆಗೆಗಾರ°ಗೋಪಾಲಣ್ಣಚುಬ್ಬಣ್ಣಪುಣಚ ಡಾಕ್ಟ್ರುಕೆದೂರು ಡಾಕ್ಟ್ರುಬಾವ°ವಸಂತರಾಜ್ ಹಳೆಮನೆಶಾ...ರೀವಿನಯ ಶಂಕರ, ಚೆಕ್ಕೆಮನೆದೊಡ್ಮನೆ ಭಾವಚೆನ್ನಬೆಟ್ಟಣ್ಣದೊಡ್ಡಮಾವ°ಮಂಗ್ಳೂರ ಮಾಣಿನೀರ್ಕಜೆ ಮಹೇಶಒಪ್ಪಕ್ಕಜಯಗೌರಿ ಅಕ್ಕ°ಯೇನಂಕೂಡ್ಳು ಅಣ್ಣಡಾಗುಟ್ರಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ