ಬದನೆಕಾಯಿ ಚಕ್ರ

December 25, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬದನೆಕಾಯಿ ಚಕ್ರ

ಬೇಕಪ್ಪ ಸಾಮಾನುಗೊ:

 • 2  ಸಾಧಾರಣ ಗಾತ್ರದ ಗುಳ್ಳ ಬದನೆ
 • 2-3 ಚಮ್ಚೆ ಅಕ್ಕಿ ಹೊಡಿ
 • 1/4 – 1/2 ಚಮ್ಚೆ ಮೆಣಸಿನ ಹೊಡಿ
 • ಚಿಟಿಕೆ ಅರುಶಿನ ಹೊಡಿ
 • ರುಚಿಗೆ ತಕ್ಕಸ್ಟು ಉಪ್ಪು
 • 4-5 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಒಂದು ಪಾತ್ರಲ್ಲಿ ರೆಜ್ಜ ಮಜ್ಜಿಗೆ, ನೀರು ಹಾಕಿ ಮಡುಗಿ. ಬದನೆಯ 1/4 ಇಂಚು ದಪ್ಪಕೆ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉರುಟಿಂಗೆ ಕೊರದು ಮಜ್ಜಿಗೆ ಹಾಕಿದ ನೀರಿಂಗೆ ಹಾಕಿ, ಒಂದು 5 ನಿಮಿಷ ಮಡುಗಿ. ಅದರ ನೀರಿಂದ ತೆಗದು ಒಂದು ವಸ್ತ್ರಲ್ಲಿ/ಪ್ಲೇಟಿಲ್ಲಿ ನೀರು ಬಳುಶುಲೆ ಮಡುಗಿ.

ಒಂದು ಪ್ಲೇಟಿಲ್ಲಿ ಅಕ್ಕಿ ಹೊಡಿ, ಅರುಶಿನ ಹೊಡಿ, ಮೆಣಸಿನ ಹೊಡಿ, ಉಪ್ಪು ಹಾಕಿ ಲಾಯಿಕಲಿ ಬೆರುಸಿ.

ಅದರ್ಲ್ಲಿ ಈ ಕೊರದ ಬದನೆಯ ಹೊರಳುಸಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಒಂದು ಪ್ಲೇಟಿಲ್ಲಿ ಕರೆಲಿ ಮಡುಗಿ.

ಕಾವಲಿಗೆಗೆ 2 ಚಮ್ಚೆ ಎಣ್ಣೆ ಹಾಕಿ ಹಸರ್ಸಿ. ಅದು ಬೆಶಿ ಅಪ್ಪಗ, ಮಸಾಲೆ ಉದ್ದಿದ ಬದನೆಕಾಯಿಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಾವಲಿಗೆಲಿ ಜೋಡ್ಸಿ.

ಅತ್ತೆ-ಇತ್ತೆ ತಿರುಗುಸಿ ಹಾಕಿ, ರೆಜ್ಜ ರೆಜ್ಜ ಎಣ್ಣೆ ಪಸೆ ಮಾಡಿಗೊಂಡು ಲಾಯಿಕ ಆರುವನ್ನಾರ ಸಾಧಾರಣ 8-10 ನಿಮಿಷ ಸಣ್ಣ/ಹದ ಕಿಚ್ಚಿಲ್ಲಿ ಬೇಶಿ.

ಇದರ ಬೆಶಿ-ಬೆಶಿ, ಅಶನ – ತೋವೆ ಅಥವಾ ಚಪಾತಿ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಚಕ್ರ ಚೆಂದ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 2. ಪ್ರದೀಪ ಶರ್ಮ
  ಪ್ರದೀಪ ಶರ್ಮ

  ಹೇಂಗೆ ಚಕ್ರ ಕರುಕುರು ಅಕ್ಕಲ್ಲದ? ವೇಣಿಯಕ್ಕ ………………..

  [Reply]

  VN:F [1.9.22_1171]
  Rating: +1 (from 1 vote)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಆಹ..! ಇದು ಭಾರೀ ರುಚಿ ಅಕ್ಕು.

  [Reply]

  VN:F [1.9.22_1171]
  Rating: -1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿಚುಬ್ಬಣ್ಣಕಾವಿನಮೂಲೆ ಮಾಣಿಮುಳಿಯ ಭಾವvreddhiಅಕ್ಷರ°ಉಡುಪುಮೂಲೆ ಅಪ್ಪಚ್ಚಿಪವನಜಮಾವವಸಂತರಾಜ್ ಹಳೆಮನೆಬಟ್ಟಮಾವ°ಡಾಮಹೇಶಣ್ಣಜಯಶ್ರೀ ನೀರಮೂಲೆಡೈಮಂಡು ಭಾವದೊಡ್ಡಮಾವ°ಅಜ್ಜಕಾನ ಭಾವಕೊಳಚ್ಚಿಪ್ಪು ಬಾವಶೀಲಾಲಕ್ಷ್ಮೀ ಕಾಸರಗೋಡುವಿನಯ ಶಂಕರ, ಚೆಕ್ಕೆಮನೆನೆಗೆಗಾರ°ಶ್ರೀಅಕ್ಕ°ಪುತ್ತೂರಿನ ಪುಟ್ಟಕ್ಕಅನು ಉಡುಪುಮೂಲೆಬೋಸ ಬಾವವೇಣಿಯಕ್ಕ°ಸುಭಗಸುವರ್ಣಿನೀ ಕೊಣಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
"ಆನು ಕಂಡುಂಡ ಕಾಶೀಯಾತ್ರೆ"
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಬೆಣಚ್ಚಿಪ್ಪಲ್ಲಿ ಹುಡ್ಕಲೆ