ಬದನೆಕಾಯಿ ದೋಸೆ

January 1, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬದನೆಕಾಯಿ ದೋಸೆ

ಬೇಕಪ್ಪ ಸಾಮಾನುಗೊ:

 • 1 ಕಪ್(ಕುಡ್ತೆ) ಬೆಣ್ತಕ್ಕಿ
 • 2 ಸಾಧಾರಣ ಗಾತ್ರದ ಬದನೆಕಾಯಿ (ಗುಳ್ಳ ಬದನೆ ಆದರೆ ಒಳ್ಳೆದು)
 • 3-4 ಒಣಕ್ಕು ಮೆಣಸು
 • 2 ಚಮ್ಚೆ ಕಾಯಿ ತುರಿ
 • 8-10 ಕೊತ್ತಂಬರಿ
 • 5-6 ಜೀರಿಗೆ
 • ದ್ರಾಕ್ಷೆ ಗಾತ್ರದ ಹುಳಿ
 • ದೊಡ್ಡ ಚಿಟಿಕೆ ಇಂಗು
 • 5-6 ಬೇನ್ಸೊಪ್ಪು
 • ರುಚಿಗೆ ತಕ್ಕಸ್ಟು ಉಪ್ಪು
 • ಎಣ್ಣೆ / ತುಪ್ಪ

ಮಾಡುವ ಕ್ರಮ:

ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. ಅಕ್ಕಿಯ ಮಿಕ್ಸಿ/ಗ್ರೈಂಡರಿಲ್ಲಿ  ಹಾಕಿ, ಕಾಯಿ ತುರಿ, ಬೇನ್ಸೊಪ್ಪು, ಒಣಕ್ಕು ಮೆಣಸು, ಜೀರಿಗೆ, ಕೊತ್ತಂಬರಿ, ಇಂಗು, ಉಪ್ಪು, ಹುಳಿ, ಬೇಕಾದಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ. ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ.

ಒಂದು ಪಾತ್ರಲ್ಲಿ ರೆಜ್ಜ ಮಜ್ಜಿಗೆ, ನೀರು ಹಾಕಿ ಮಡುಗಿ. ಬದನೆಕಾಯಿಯ ತೆಳ್ಳಂಗೆ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರದು ಮಜ್ಜಿಗೆ ಹಾಕಿದ ನೀರಿಂಗೆ ಹಾಕಿ, ಒಂದು 5 ನಿಮಿಷ ಮಡುಗಿ.

ಅದರ ನೀರಿಂದ ತೆಗದು ಒಂದು ವಸ್ತ್ರಲ್ಲಿ/ಪ್ಲೇಟಿಲ್ಲಿ ನೀರು ಬಳುಶುಲೆ ಮಡುಗಿ.

ಕಾವಲಿಗೆಯ ಬೆಶಿ ಮಾಡಿ, ಕೊರದ ಬದನೆಕಾಯಿಯ ಹಿಟ್ಟಿಲ್ಲಿ ಅದ್ದಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಾವಲಿಗೆಲಿ ಜೋಡ್ಸಿ. ಮುಚ್ಚಲು ಮುಚ್ಚಿ ಸಾಧಾರಣ ಒಂದು ನಿಮಿಷ ಹದ ಕಿಚ್ಚಿಲ್ಲಿ ಬೇಶಿ. ಒಂದು ಸಕ್ಕಣ ತುಪ್ಪ/ಎಣ್ಣೆಯ ದೋಸೆಯ ಮೇಲಂಗೆ ಉದ್ದಿ, ದೋಸೆಯ ಕವುಂಚಿ ಹಾಕಿ.

ಪುನಃ ಅದರ ಮೇಲಂಗೆ ರೆಜ್ಜ ತುಪ್ಪ/ಎಣ್ಣೆಯ ಉದ್ದಿ ಮುಚ್ಚ್ಲಲು ಮುಚ್ಚಿ ಸಾಧಾರಣ ಒಂದು ನಿಮಿಷ ಬೇಶಿ. ಕವುಂಚಿ-ಮೊಗಚ್ಚಿ ಹಾಕಿ ಸಣ್ಣ ಕಿಚ್ಚಿಲ್ಲಿ ದೋಸೆಯ ಬೇಶಿ.

ತುಪ್ಪ ಹಾಕಿ, ಬೆಶಿ ಬೆಶಿ ದೋಸೆಯ, ಚಟ್ನಿ ಅಥವಾ ಸಾಂಬಾರಿನ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 4-5 ದೋಸೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. parvathi marakini

  Ide reethi daralekaidude dose madlavthu.

  [Reply]

  VA:F [1.9.22_1171]
  Rating: +1 (from 1 vote)
 2. ಸುಮನ ಭಟ್ ಸಂಕಹಿತ್ಲು.

  ಬದನೆ ದೋಸೆ ಹೀಂಗೆ ಮಾಡುದರ ಸುರು ಕೇಳಿದ್ದು ಆನು.
  ಆದರೆ ಹೀಂಗೆ ಹಿಟ್ಟಿಂಗೆ ಆದ್ದಿ, ಕಾವಲಿಗೆಲಿ ಜೋಡಿಸಿ ಮಾಡುವ ದೀಗುಜ್ಜೆ ದೋಸೆ ಭಾರೀ ಲಾಯಿಕ ಆವ್ತು…ಅಜ್ಜಿ, ಅಬ್ಬೆ ಮಾಡಿದ್ದರ ತಿಂದ ನೆಂಪು…
  ದಾರಳೆಕಾಯಿಲಿ ಆವ್ತು ಕೇಳಿದ್ದೆ.

  [Reply]

  VA:F [1.9.22_1171]
  Rating: 0 (from 0 votes)
 3. ಪ್ರದೀಪ ಶರ್ಮ
  ಪ್ರದೀಪ ಶರ್ಮ

  ಈ ವಾರಾಂತ್ಯಕ್ಕೆ ಇದರ ಪ್ರಯೋಗ ಮಾಡಲೇ ಬೇಕು …………………

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿಅನಿತಾ ನರೇಶ್, ಮಂಚಿಬೊಳುಂಬು ಮಾವ°ಸಂಪಾದಕ°ಪಟಿಕಲ್ಲಪ್ಪಚ್ಚಿಕೇಜಿಮಾವ°ತೆಕ್ಕುಂಜ ಕುಮಾರ ಮಾವ°ಹಳೆಮನೆ ಅಣ್ಣಕಳಾಯಿ ಗೀತತ್ತೆನೆಗೆಗಾರ°ಸರ್ಪಮಲೆ ಮಾವ°ಎರುಂಬು ಅಪ್ಪಚ್ಚಿಅಕ್ಷರದಣ್ಣಸುವರ್ಣಿನೀ ಕೊಣಲೆಪವನಜಮಾವಶೀಲಾಲಕ್ಷ್ಮೀ ಕಾಸರಗೋಡುಪೆರ್ಲದಣ್ಣಬಟ್ಟಮಾವ°ವಾಣಿ ಚಿಕ್ಕಮ್ಮವಿನಯ ಶಂಕರ, ಚೆಕ್ಕೆಮನೆನೀರ್ಕಜೆ ಮಹೇಶಚೆನ್ನೈ ಬಾವ°ಶಾ...ರೀಗೋಪಾಲಣ್ಣಮುಳಿಯ ಭಾವಅಜ್ಜಕಾನ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ