Oppanna.com

ಬದನೆಕಾಯಿ ಕೂಟು

ಬರದೋರು :   ವೇಣಿಯಕ್ಕ°    on   15/01/2013    4 ಒಪ್ಪಂಗೊ

ವೇಣಿಯಕ್ಕ°

ಬದನೆಕಾಯಿ ಕೂಟು

ಬೇಕಪ್ಪ ಸಾಮಾನುಗೊ:

  • 2 ಸಾಧಾರಣ ಗಾತ್ರದ ಬದನೆ (ಗುಳ್ಳ ಬದನೆ ಆದರೆ ಒಳ್ಳೆದು)
  • 1-2 ಹಸಿಮೆಣಸು
  • 1.5-2 ಚಮ್ಚೆ ಸಾಂಬರಿನ ಹೊಡಿ
  • ಚಿಟಿಕೆ ಅರುಶಿನ ಹೊಡಿ
  • 3/4-1 ಕಪ್(ಕುಡ್ತೆ) ಬೇಶಿದ ತೊಗರೀಬೇಳೆ
  • 1/2 ಕಪ್(ಕುಡ್ತೆ) ಕಾಯಿ ತುರಿ (ಸಣ್ಣಕೆ ಕೆರದ್ದು)
  • ದ್ರಾಕ್ಷೆ ಗಾತ್ರದ ಹುಳಿ
  • ನಿಂಬೆ ಗಾತ್ರದ ಬೆಲ್ಲ
  • ರುಚಿಗೆ ತಕ್ಕಸ್ಟು ಉಪ್ಪು
  • ದೊಡ್ಡ ಚಿಟಿಕೆ ಇಂಗು
  • 5-6 ಬೇನ್ಸೊಪ್ಪು
  • 1 ಚಮ್ಚೆ ಸಾಸಮೆ
  • 1 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಒಂದು ಪಾತ್ರಲ್ಲಿ ರೆಜ್ಜ ಮಜ್ಜಿಗೆ, ನೀರು ಹಾಕಿ ಮಡುಗಿ. ಬದನೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರದು ಮಜ್ಜಿಗೆ ಹಾಕಿದ ನೀರಿಂಗೆ ಹಾಕಿ, ಒಂದು 5 ನಿಮಿಷ ಮಡುಗಿ. ಹಸಿಮೆಣಸಿನ ಉದ್ದಕೆ ಸಿಗಿರಿ.

ಹುಳಿಗೆ ರೆಜ್ಜ ನೀರು ಹಾಕಿ, ಪುರುಂಚಿ ಕರೆಲಿ ಮಡುಗಿ. ಕೊರದು ಮಡುಗಿದ ಬದನೆ, ಹಸಿಮೆಣಸು, ಅರುಶಿನ ಹೊಡಿ, ಹುಳಿ ನೀರು, ಉಪ್ಪು, ಬೆಲ್ಲ, ಸಾಂಬರಿನ ಹೊಡಿ, ಒಂದು ಪಾತ್ರಲ್ಲಿ ಹಾಕಿ, ಸಾಧಾರಣ ಭಾಗ ಮುಳುಗುವಸ್ಟು ನೀರು ಹಾಕಿ ಮುಚ್ಚ್ಲಲು ಮುಚ್ಚಿ ಬೇಶಿ. ಭಾಗ ಬೆಂದ ನಂತರ, ಬೇಶಿದ ತೊಗರೀಬೇಳೆಯ ಹಾಕಿ ಕೊದುಶಿ.

ಒಂದು ಬಾಣಲೆಲಿ, ಕಾಯಿ ಸುಳಿಯ ಹಾಕಿ, ಸಣ್ಣ ಕಿಚ್ಚಿಲ್ಲಿ ಚಿನ್ನದ ಬಣ್ಣ ಬಪ್ಪನ್ನಾರ ಹೊರಿರಿ. ಅದರ ಕೂಟಿಂಗೆ ಹಾಕಿ ತೊಳಸಿ.

ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ ಇಂಗು, ಬೇನ್ಸೊಪ್ಪು ಹಾಕಿ ರೆಜ್ಜ ಹೊತ್ತು ಮಡುಗಿ, ಕೂಟಿಂಗೆ ಹಾಕಿ ತೊಳಸಿ. ಇದು ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

4 thoughts on “ಬದನೆಕಾಯಿ ಕೂಟು

  1. ರುಚಿಯಾದ ಬದನೆ ಕೂಟಿನ ಘಮ್ಮನೆ ಪರಿಮಳ ಇಲ್ಲಿಗೇ ಬಂತನ್ನೆ ವೇಣೀ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×