ಬದನೆಕಾಯಿ ಮಸಾಲೆ ಪಲ್ಯ

December 18, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬದನೆಕಾಯಿ ಮಸಾಲೆ ಪಲ್ಯ

ಬೇಕಪ್ಪ ಸಾಮಾನುಗೊ:

  • 4-5 ಸಾಧಾರಣ ಗಾತ್ರದ ಬದನೆ (ನಾಳಿ ಬದನೆ ಆದರೆ ಒಳ್ಳೆದು)
  • 1/2 – 3/4  ಕಪ್(ಕುಡ್ತೆ) ಕಾಯಿ ತುರಿ
  • 3-4 ಒಣಕ್ಕು ಮೆಣಸು
  • 3/4 ಚಮ್ಚೆ ಕೊತ್ತಂಬರಿ
  • 1/8 ಚಮ್ಚೆ ಜೀರಿಗೆ
  • 1/8 ಚಮ್ಚೆ ಮೆಂತೆ
  • ಚಿಟಿಕೆ ಇಂಗು
  • ದೊಡ್ಡ ದ್ರಾಕ್ಷೆ ಗಾತ್ರದ ಹುಳಿ
  • ದೊಡ್ಡ ನಿಂಬೆ ಗಾತ್ರದ ಬೆಲ್ಲ
  • ರುಚಿಗೆ ತಕ್ಕಸ್ಟು ಉಪ್ಪು
  • ಚಿಟಿಕೆ ಅರುಶಿನ ಹೊಡಿ
  • 10-12 ಬೇನ್ಸೊಪ್ಪು
  • 1 1/4 ಚಮ್ಚೆ ಉದ್ದಿನ ಬೇಳೆ (1/4 ಚಮ್ಚೆ ಮಸಾಲೆಗೆ + 1 ಚಮ್ಚೆ ಒಗ್ಗರಣೆಗೆ)
  • 1 ಚಮ್ಚೆ ಸಾಸಮೆ
  • 3 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಒಂದು ಪಾತ್ರಲ್ಲಿ ರೆಜ್ಜ ಮಜ್ಜಿಗೆ, ನೀರು ಹಾಕಿ ಮಡುಗಿ. ಬದನೆಯ ಒಂದು ಇಂಚು ಉದ್ದಕ್ಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರದು ಮಜ್ಜಿಗೆ ಹಾಕಿದ ನೀರಿಂಗೆ ಹಾಕಿ, ಒಂದು 5 ನಿಮಿಷ ಮಡುಗಿ.

ಒಂದು ಬಾಣಲೆಲಿ ಅಥವಾ ಒಗ್ಗರಣೆ ಸಟ್ಟುಗಿಲ್ಲಿ 1 ಚಮ್ಚೆ ಎಣ್ಣೆ, 1/4 ಚಮ್ಚೆ ಉದ್ದಿನ ಬೇಳೆ, ಒಣಕ್ಕು ಮೆಣಸು, ಕೊತ್ತಂಬರಿ, ಜೀರಿಗೆ, ಮೆಂತೆ ಹಾಕಿ ಸಣ್ಣ ಕಿಚ್ಚಿಲ್ಲಿ ಪರಿಮ್ಮಳ ಬಪ್ಪನ್ನಾರ ಹೊರಿರಿ. ಅದಕ್ಕೆ ಇಂಗು,  5-6 ಬೇನ್ಸೊಪ್ಪು ಹಾಕಿ ಸಣ್ಣ ಕಿಚ್ಚಿಲ್ಲಿ 1 ನಿಮಿಷ ಹೊರಿರಿ.

ಹೊರುದ ಮಸಾಲೆಯ ಮಿಕ್ಸಿಗೆ ಹಾಕಿ ಕ್ರಶ್ ಮಾಡಿ.
ಅದಕ್ಕೆ ಕಾಯಿ ತುರಿ, ಬೆಲ್ಲ, ಹುಳಿ, ಉಪ್ಪು ಹಾಕಿ, ರೆಜ್ಜ ನೀರು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹದ ನೊಂಪಿಂಗೆ ಕಡೆರಿ.

ಒಂದು ಬಾಣಲೆಲಿ, 2 ಚಮ್ಚೆ ಎಣ್ಣೆ, ಸಾಸಮೆ, ಉದ್ದಿನ ಬೇಳೆ ಹಾಕಿ ಬೆಶಿ ಮಾಡಿ.
ಒಗ್ಗರಣೆ ಹೊಟ್ಟುವಗ ಒಳುದ ಬೇನ್ಸೊಪ್ಪು, ಕೊರದ ಬದನೆ ಹಾಕಿ ಲಾಯಿಕಲಿ ತೊಳಸಿ.
ಅರುಶಿನ ಹೊಡಿ, ಚಿಟಿಕೆ ಉಪ್ಪು ಹಾಕಿ 2-3 ನಿಮಿಷ ತೊಳಸಿ. ಇದಕ್ಕೆ ಕಡದ ಮಸಾಲೆ ಹಾಕಿ ಮುಚ್ಚಿ ಹದ ಕಿಚ್ಚಿಲ್ಲಿ ಬೇಶಿ.
ಇದು ಅಶನ/ಚಪಾತಿ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

  1. ಮುಳಿಯ ಭಾವ
    ರಘು ಮುಳಿಯ

    ಹಾಗಲಕಾಯಿ ಮಸಾಲೆ ಪಲ್ಯಕ್ಕೂ ಇದೇ ಪಾಕವಾ ಅಕ್ಕ?ಎನಗೆ ಭಾರೀ ಇಷ್ಟದ್ದು,ಈ ಸೀವು,ಖಾರಮಿಶ್ರಿತ ರುಚಿ !

    [Reply]

    ಬೋಸ ಬಾವ

    ಬೋಸ ಬಾವ Reply:

    ಏ ಭಾವ.. ಹಾಗಲಕಾಯಿ ಕೈಕ್ಕೆ ಅಲ್ಲದೊ?? 😛
    ನಮ್ಮ ನೆಗೆ ಮಾಣಿಗೆ ಕೈಕ್ಕೆ ಭಾರೀ ಇಷ್ಟ ಅಡ.. ನಿoಗೊಗುದೆಯೋ?? 😉
    ನಮ್ಮ ಚೆನ್ನೈ ಭಾವ ಹಾಗಲಕಾಯಿಯ ಜೂಸು ಕುಡಿಗಡ…
    ಹಾ೦ಗೆ ನಮ್ಮ ಪೆ೦ಗಣ್ಣ ಅದರ ಬೋಳುತಿ೦ಗಡ…

    ನವಗೆ ಇದು ಯಾವದು ಬೇಡ…
    ಲಾಯಕೆ ಸೀವಿನ ಪಾಚ ಸಾಕು.. 😉

    [Reply]

    ತೆಕ್ಕುಂಜ ಕುಮಾರ ಮಾವ°

    ತೆಕ್ಕುಂಜ ಕುಮಾರ ಮಾವ° Reply:

    ಹಾಗಲಕಾಯಿ ಪಾಚ ಮಾಡಿಕೊಟ್ರೆ ಅಕ್ಕೋ..?

    [Reply]

    ಪೆಂಗಣ್ಣ° Reply:

    ಯೇ ಟೀಕೆ ಮಾವಾ..
    ಅವಂಗೆ ದಾರ್ಲೆಪಾಚ ಹೇದು ಕೊಟ್ಟರೆ ಸಮಾ ಹೊಡೆಗು

    VA:F [1.9.22_1171]
    Rating: +3 (from 3 votes)
    ವೇಣಿಯಕ್ಕ°

    ವೇಣಿಯಕ್ಕ° Reply:

    ಹಾ… ಇದೇ ಪಾಕ ಉಪಯೋಗ್ಸುಲೆ ಅಕ್ಕು. ಇನ್ನುದೆ ಹೆಚ್ಚು ಹುಳಿ, ಬೆಲ್ಲ, ಉಪ್ಪು, ಮೆಣಸು, ಮಸಾಲೆ ಹಾಯೆಕ್ಕು..

    [Reply]

    VN:F [1.9.22_1171]
    Rating: +1 (from 1 vote)
  2. ಅಜ್ಜಕಾನ ಭಾವ

    ಇದರ ಓದಿ ಬದನೆ ಆಸೆ ಆಗಿ ಐಗಳ ಹೋಟ್ಲಿಂಗೆ ಹೋಗಿ ಗುೞ ಪೋಡಿ ತಿಂದಿದನಡ ಇಂದು ಮಾಮಸಮ.

    ಅಕ್ಕಾ ಇದರ ಒಂದರಿ ಮಾಡ್ಲೆ ಹೇಳೆಕ್ಕು ಮನೆಲಿ.. ಬಾರಿ ಪಸ್ಟು ಆದಾಂಗಿದ್ದು..

    [Reply]

    VN:F [1.9.22_1171]
    Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೆಗೆಗಾರ°ವಾಣಿ ಚಿಕ್ಕಮ್ಮವೇಣೂರಣ್ಣಬೋಸ ಬಾವಪ್ರಕಾಶಪ್ಪಚ್ಚಿವಿದ್ವಾನಣ್ಣಅನಿತಾ ನರೇಶ್, ಮಂಚಿಜಯಶ್ರೀ ನೀರಮೂಲೆದೇವಸ್ಯ ಮಾಣಿಅನುಶ್ರೀ ಬಂಡಾಡಿಶೇಡಿಗುಮ್ಮೆ ಪುಳ್ಳಿಕೆದೂರು ಡಾಕ್ಟ್ರುಬಾವ°ದೀಪಿಕಾಪಟಿಕಲ್ಲಪ್ಪಚ್ಚಿಪುತ್ತೂರಿನ ಪುಟ್ಟಕ್ಕಶ್ರೀಅಕ್ಕ°ವಸಂತರಾಜ್ ಹಳೆಮನೆಮಂಗ್ಳೂರ ಮಾಣಿಕಳಾಯಿ ಗೀತತ್ತೆಪೆಂಗಣ್ಣ°ಡಾಮಹೇಶಣ್ಣಒಪ್ಪಕ್ಕಹಳೆಮನೆ ಅಣ್ಣವೇಣಿಯಕ್ಕ°ಶೀಲಾಲಕ್ಷ್ಮೀ ಕಾಸರಗೋಡುಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ