ಬದನೆಕಾಯಿ ಮೊಸರು ಗೊಜ್ಜಿ

March 18, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬದನೆಕಾಯಿ ಮೊಸರು ಗೊಜ್ಜಿ

ಬೇಕಪ್ಪ ಸಾಮಾನುಗೊ:

  • 2 ಸಾಧಾರಣ ಗಾತ್ರದ ಬದನೆಕಾಯಿ(ಗುಳ್ಳ ಆದರೆ ಒಳ್ಳೆದು)
  • 2-4 ಹಸಿಮೆಣಸು
  • 2-3 ಎಳೆ ಕೊತ್ತಂಬರಿ ಸೊಪ್ಪು
  • 1.5-2 ಕಪ್(ಕುಡ್ತೆ) ಮೊಸರು
  • 2-3 ಚಮ್ಚೆ ಕಾಯಿ ಸುಳಿ (ಬೇಕಾದರೆ ಮಾತ್ರ)
  • ರುಚಿಗೆ ತಕ್ಕಸ್ಟು ಉಪ್ಪು
  • 1 ಚಮ್ಚೆ ಸಾಸಮೆ
  • 1/2 ಚಮ್ಚೆ ಜೀರಿಗೆ
  • 3-4 ಬಾಳಕ್ಕು ಮೆಣಸು(ಬೇಕಾದರೆ ಮಾತ್ರ)
  • 5-6 ಬೇನ್ಸೊಪ್ಪು
  • ದೊಡ್ಡ ಚಿಟಿಕೆ ಇಂಗು
  • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಬದನೆಕಾಯಿಯ ಹೆರಾಂಗೆ ರೆಜ್ಜ ಎಣ್ಣೆ ಪಸೆ ಮಾಡಿ, ಪೀಶಕತ್ತಿ/ಫೊರ್ಕ್ ಲ್ಲಿ ಕುತ್ತಿ, ಅದರ ಕೆಂಡಲ್ಲಿ/ ಗ್ಯಾಸ್ ಒಲೆಲಿ/ ಮೈಕ್ರೋವೇವ್/ ಓವನ್ ಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸುಟ್ಟು ಹಾಕಿ.

ಬದನೆಕಾಯಿಯ ಹೆರಾಣ ಚೋಲಿ ತೆಗದು, ಒಂದು ಸೌಟಿಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊಚ್ಚಿ ಮಡುಗಿ. ಕೊತ್ತಂಬರಿ ಸೊಪ್ಪಿನ ಸಣ್ಣಕೆ ಕೊಚ್ಚಿ ಮಡುಗಿ.

ಕಾಯಿ ಸುಳಿಯ ಮಿಕ್ಸಿಗೆ ಹಾಕಿ, ರೆಜ್ಜ ನೀರು ಹಾಕಿ ಕೊಜಕ್ಕು ಮಾಡಿ ಮಡುಗಿ.

ಕೊಚ್ಚಿದ ಬದನೆಕಾಯಿ, ಕೊಜಕ್ಕಾದ ಕಾಯಿ, ಕೊತ್ತಂಬರಿ ಸೊಪ್ಪು, ಮೊಸರು, ಉಪ್ಪು,  ಬೇಕಪ್ಪಸ್ಟು ನೀರಿನ  ಒಂದು ಪಾತ್ರಕ್ಕೆ ಹಾಕಿ ತೊಳಸಿ. (ಮೊಸರು ಹುಳಿ ಇದ್ದರೆ ಬೇಕಪ್ಪಸ್ಟು ಹಾಲು ಹಾಕುಲಕ್ಕು.) ಹಸಿಮೆಣಸಿನ ಲಾಯಿಕಲಿ ನುರಿರಿ.

ಒಗ್ಗರಣೆ ಸಟ್ಟುಗಿಲ್ಲಿ ಬಾಳಕ್ಕು ಮೆಣಸು, ಎಣ್ಣೆ ಹಾಕಿ ಒಂದೆರಡು ನಿಮಿಷ ಸಣ್ಣ ಕಿಚ್ಚಿಲ್ಲಿ ಹೊರಿರಿ. ಅದು ಚಿನ್ನದ ಬಣ್ಣಕ್ಕೆ ಬಪ್ಪಗ, ಸಾಸಮೆ, ಜೀರಕ್ಕಿ ಹಾಕಿ. ಅದು ಹೊಟ್ಟಿ ಅಪ್ಪಗ, ಇಂಗು, ಬೇನ್ಸೊಪ್ಪು ಹಾಕಿ, ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಗೊಜ್ಜಿಗೆ ಹಾಕಿ ತೊಳಸಿ. ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೊಳುಂಬು ಮಾವ°ವೆಂಕಟ್ ಕೋಟೂರುಕೇಜಿಮಾವ°ಒಪ್ಪಕ್ಕವಿನಯ ಶಂಕರ, ಚೆಕ್ಕೆಮನೆಬೋಸ ಬಾವವಿಜಯತ್ತೆದೊಡ್ಮನೆ ಭಾವಪುತ್ತೂರುಬಾವಮಾಲಕ್ಕ°ಬಟ್ಟಮಾವ°ಸುವರ್ಣಿನೀ ಕೊಣಲೆದೊಡ್ಡಮಾವ°ರಾಜಣ್ಣಪುತ್ತೂರಿನ ಪುಟ್ಟಕ್ಕಪುಟ್ಟಬಾವ°ಚೆನ್ನಬೆಟ್ಟಣ್ಣಬಂಡಾಡಿ ಅಜ್ಜಿವಾಣಿ ಚಿಕ್ಕಮ್ಮಪಟಿಕಲ್ಲಪ್ಪಚ್ಚಿತೆಕ್ಕುಂಜ ಕುಮಾರ ಮಾವ°ಚೆನ್ನೈ ಬಾವ°ಕಾವಿನಮೂಲೆ ಮಾಣಿಶ್ಯಾಮಣ್ಣಮುಳಿಯ ಭಾವಸುಭಗ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ