ಬದನೆಕಾಯಿ ತಾಳು(ಪಲ್ಯ)

ಬದನೆಕಾಯಿ ತಾಳು(ಪಲ್ಯ)

ಬೇಕಪ್ಪ ಸಾಮಾನುಗೊ:

 • 4-5 ಸಾಧಾರಣ ಗಾತ್ರದ ಬದನೆ (ನಾಳಿ ಬದನೆ ಆದರೆ ಒಳ್ಳೆದು)
 • 4-5 ಚಮ್ಚೆ ಕಾಯಿ ತುರಿ
 • 3-4 ಹಸಿಮೆಣಸು
 • 3/4 – 1 ಚಮ್ಚೆ  ಹುಳಿ ಹೊಡಿ (ಉಂಡೆ ಹುಳಿ ಹೊಡಿ ಆದರೆ ಒಳ್ಳೆದು)
 • ರುಚಿಗೆ ತಕ್ಕಸ್ಟು ಉಪ್ಪು
 • ಚಿಟಿಕೆ ಅರುಶಿನ ಹೊಡಿ
 • 5-6 ಬೇನ್ಸೊಪ್ಪು
 • 1/2 ಚಮ್ಚೆ ಉದ್ದಿನ ಬೇಳೆ
 • 1 ಚಮ್ಚೆ ಸಾಸಮೆ
 • 3-4 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಒಂದು ಪಾತ್ರಲ್ಲಿ ರೆಜ್ಜ ಮಜ್ಜಿಗೆ, ನೀರು ಹಾಕಿ ಮಡುಗಿ. ಬದನೆಯ ಒಂದು ಇಂಚು ಉದ್ದಕ್ಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರದು ಮಜ್ಜಿಗೆ ಹಾಕಿದ ನೀರಿಂಗೆ ಹಾಕಿ, ಒಂದು 5 ನಿಮಿಷ ಮಡುಗಿ.

ಒಂದು ಬಾಣಲೆಲಿ ಸಾಸಮೆ, ಉದ್ದಿನ ಬೇಳೆ, ಎಣ್ಣೆ ಹಾಕಿ ಬೆಶಿ ಮಾಡಿ.
ಒಗ್ಗರಣೆ ಹೊಟ್ಟುವಗ ಬೇನ್ಸೊಪ್ಪು, ಕೊರದ ಬದನೆ ಹಾಕಿ ಲಾಯಿಕಲಿ ತೊಳಸಿ. ಅರುಶಿನ ಹೊಡಿ, ಉಪ್ಪು, ಹುಳಿ ಹಾಕಿ 2-3 ನಿಮಿಷ ತೊಳಸಿ.

ಮುಚ್ಚಿ ಮಡುಗಿ ನೀರು ಹಾಕದ್ದೆ ಹದ ಕಿಚ್ಚಿಲ್ಲಿ ಬೇಶಿ (2-3 ನಿಮಿಷಕ್ಕೊಂದರಿ ತೊಳಸಿ).
ಬದನೆ ಬೆಂದ ಕೂಡ್ಲೆ, ಕಾಯಿ ತುರಿ ಹಾಕಿ ತೊಳಸಿ, ತಾಳಿನ ಸಣ್ಣ ಕಿಚ್ಚಿಲ್ಲಿ ಒಂದೆರಡು ನಿಮಿಷ ಮಡುಗಿ.
ಇದು ಅಶನ/ಚಪಾತಿ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ವೇಣಿಯಕ್ಕ°

   

You may also like...

6 Responses

 1. ಗಣೇಶ ಪೆರ್ವ says:

  ಧನ್ಯವಾದ೦ಗೊ.
  ಎನಗೆ ಇಲ್ಲಿ ಉ೦ಡೆಹುಳಿ / ಹುಳಿ ಹೊಡಿ ಸಿಕ್ಕುತ್ತಿಲ್ಲೆ, ಸಾಮಾನ್ಯವಾಗಿ ನಮ್ಮ ಊರಿಲ್ಲಿ ಸಿಕ್ಕುವ ಓಟೆ ಹುಳಿ ಸಿಕ್ಕುವದು. ಅದುದೆ, ಕ್ಲೀನ್ ಮಾಡಿ ಉಪ್ಪು ಹಾಕಿ ಹುಳಿ ಉ೦ಡೆ ಮಾಡಿ ಹೇಮಾರ್ಸುತ್ತವಲ್ಲದಾ ಊರಿಲ್ಲಿ, ಹಾ೦ಗೆ, ಶೇಪ್ ಮಾ೦ತ್ರ ಬೇರೆ ಅಷ್ಟೆ.
  ಇದಕ್ಕೆ ಎ೦ತಾರು ಪರಿಹಾರ ಇದ್ದೊ?

  • ಉಂಡೆ ಹುಳಿ / ಹುಳಿ ಹೊಡಿ ಇಲ್ಲದ್ದರೆ ಹುಳಿ ಎಸರು ಹಾಕುಲೆ ಅಕ್ಕು. ಆದರೆ ಬದನೆಕಾಯಿ ತಾಳಿಂಗೆ ಉಂಡೆ ಹೊಳಿ ಹೊಡಿ ಹಾಕಿದ ರುಚಿ ಬಾಕಿದ್ದ ಹುಳಿ ಎಸರು/ಹೊಡಿ ಹಾಕಿದರೆ ಬತ್ತಿಲ್ಲೆ. ಮಾವಿನಕಾಯಿ ಸಿಕ್ಕುವ ಸಮಯಲ್ಲಿ ಮಾವಿನಕಾಯಿ ಹಾಕಿ ಮಾಡ್ಲಕ್ಕು, ಅದರ ರುಚಿ ಬೇರೆಯೆ.

 2. Venugopal kambaru says:

  ಲಾಯಕ ಇದ್ದು . ಗರಮ್ ಮಸಾಲೆ ಹಾಕಿರೆ ಎನ್ತ ?

 3. ಪ್ರಸನ್ನತ್ತೆ says:

  ಇದು ಹೊಸ ನಮುನೆದು. ಮಾಡಿ ನೋಡೆಕ್ಕು.

 4. kalpanaarun says:

  ಉಂದೆ ಹೊಹೊಡಿ ಯೆಂತರಿಂದ ಮಾಡ್ತ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *