Oppanna.com

ಬದನೆಕಾಯಿ ಪೋಡಿ

ಬರದೋರು :   ವೇಣಿಯಕ್ಕ°    on   25/02/2014    1 ಒಪ್ಪಂಗೊ

ವೇಣಿಯಕ್ಕ°

ಬದನೆಕಾಯಿ ಪೋಡಿ

ಬೇಕಪ್ಪ ಸಾಮಾನುಗೊ:

  • 2 ಸಾಧಾರಣ ಗಾತ್ರದ ಬದನೆಕಾಯಿ
  • 1.5-2 ಕಪ್(ಕುಡ್ತೆ) ಕಡ್ಲೆ ಹೊಡಿ
  • 1/4 ಕಪ್(ಕುಡ್ತೆ) ಅಕ್ಕಿ ಹೊಡಿ
  • 1/2 ಚಮ್ಚೆ ಗರಂ ಮಸಾಲೆ
  • 1.5-2 ಚಮ್ಚೆ ಮೆಣಸಿನ ಹೊಡಿ
  • ದೊಡ್ಡ ಚಿಟಿಕೆ ಇಂಗು
  • ಚಿಟಿಕೆ ಅಡುಗೆ ಸೋಡ
  • ರುಚಿಗೆ ತಕ್ಕಸ್ಟು ಉಪ್ಪು
  • 1/4 ಚಮ್ಚೆ ಜೀರಿಗೆ
  • 15-20 ಓಮ
  • ಎಣ್ಣೆ ಹೊರಿವಲೆ

ಮಾಡುವ ಕ್ರಮ:

ಒಂದು ಪಾತ್ರಲ್ಲಿ ರೆಜ್ಜ ಹುಳಿ ಮಜ್ಜಿಗೆ, 4 ಕುಡ್ತೆ ನೀರು, ರೆಜ್ಜ ಉಪ್ಪು ಹಾಕಿ ಮಡುಗಿ. ಬದನೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಉರುಟಿಂಗೆ ಕೊರದು, ಒಂದು 5 ನಿಮಿಷ ಮಜ್ಜಿಗೆ ನೀರಿಲ್ಲಿ ಹಾಕಿ ತೆಗದು ಮಡುಗಿ.

ಒಂದು ಪಾತ್ರಲ್ಲಿ ಅಕ್ಕಿ ಹೊಡಿ, ಕಡ್ಲೆ ಹೊಡಿ, ಅಡುಗೆ ಸೋಡ, ಗರಂ ಮಸಾಲೆ, ಇಂಗು, ಮೆಣಸಿನ ಹೊಡಿ, ಉಪ್ಪು, ಜೀರಿಗೆ, ಓಮವ ಹಾಕಿ, ಅದಕ್ಕೆ ಬೇಕಾದಸ್ಟು ನೀರುದೆ ಹಾಕಿ ಲಾಯಿಕಲಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಸ್ಟು ಹದ ಇರಲಿ.

ಒಂದು ಬಾಣಲೆಲಿ ಎಣ್ಣೆ ಮಡುಗಿ ಬೆಶಿ ಮಾಡಿ.
ಅದು ಬೆಶಿ ಆದಪ್ಪಗ, ಬದನೆಕಾಯಿಯ ಹಿಟ್ಟಿಲ್ಲಿ ಅದ್ದಿ ಎಣ್ಣೆಗೆ ಹಾಕಿ ಬೇಶಿ(ಎಣ್ಣೆಯ ಗುಜು ಗುಜು ಅಜನೆ ನಿಂದರೆ ಆತು ಹೇಳಿ ಲೆಕ್ಕ.)

ಬೆಶಿ ಬೆಶಿ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

One thought on “ಬದನೆಕಾಯಿ ಪೋಡಿ

  1. ಪೋಡಿ ನೋಡಿರೆ, ಹಿಟ್ಟು ರಜಾ ನೀರಾದ ಹಾಂಗೆ ಇದ್ದನ್ನೇ…. ಬಾಯಿಲ್ಲಿ ನೀರ್ ಬಂದೆ ಬಿಟ್ಟತ್ತು.. yummy

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×