Oppanna.com

ನೇಂದ್ರ ಬಾಳೆಕಾಯಿ ಚಿಪ್ಸ್

ಬರದೋರು :   ವೇಣಿಯಕ್ಕ°    on   22/01/2013    3 ಒಪ್ಪಂಗೊ

ವೇಣಿಯಕ್ಕ°

ನೇಂದ್ರ ಬಾಳೆಕಾಯಿ ಚಿಪ್ಸ್

ಬೇಕಪ್ಪ ಸಾಮಾನುಗೊ:

  • 5 ನೇಂದ್ರ ಬಾಳೆಕಾಯಿ
  • ರುಚಿಗೆ ತಕ್ಕಸ್ಟು ಉಪ್ಪು
  • ಎಣ್ಣೆ

ಮಾಡುವ ಕ್ರಮ:

ಬಾಳೆಕಾಯಿಯ ಹೆರಾಣ ಚೋಲಿ ತೆಗದು, ನೀರಿಲ್ಲಿ 3-4 ನಿಮಿಷ ಮಡುಗಿ. ನೀರಿಂದ ತೆಗದು ಒಂದು ತಟ್ಟೆಲಿ ನೀರು ಬಳಿವಲೆ 4-5 ನಿಮಿಷ ಮಡುಗಿ.

ಒಂದು ಗಿಣ್ಣಾಲಿಲ್ಲಿ 1-2 ಚಮ್ಚೆ ಉಪ್ಪುದೆ, 3-4 ಚಮ್ಚೆ ನೀರುದೆ ಹಾಕಿ ಉಪ್ಪಿನ ಕರಗ್ಸಿ ಮಡುಗಿ.
ಬಾಣಲೆಲಿ ಎಣ್ಣೆ ಮಡುಗಿ ಬೆಶಿ ಮಾಡಿ. ಎಣ್ಣೆ ಬೆಶಿ ಆದಪ್ಪಗ, ಚಿಪ್ಸ್ ಮಾಡುವ ಮಣೆಲಿ, ಬಾಳೆಕಾಯಿಯ ಎಣ್ಣೆಗೆ ತುರಿರಿ.
ಅದು ಆಯ್ಕೊಂಡು ಬಪ್ಪಗ ರೆಜ್ಜ ಉಪ್ಪು ನೀರು ಹಾಕಿ ತೊಳಸಿ. ಚಿನ್ನದ ಬಣ್ಣ/ಕರು ಕುರು ಅಪ್ಪನ್ನಾರ ಹೊರಿರಿ.

ತಣುದ ಮೇಲೆ ಕರಡಿಗೆಲಿ ತೆಗದು ಮಡುಗಿ, ಚಾ, ಕಾಫಿ ಒಟ್ಟಿಂಗೆ ತಿಂಬಲೆ ಕೊಡಿ.
ಸೂಚನೆಃ ಖಾರ ಇಸ್ಟ ಇಪ್ಪವಕ್ಕೆ, ಎಣ್ಣೆಗೆ ಉಪ್ಪು ನೀರು ಹಾಕುವ ಬದಲು, ಚಿಪ್ಸಿನ ತೆಗದಿಕ್ಕಿ, ಅದಕ್ಕೆ ಉಪ್ಪು, ಮೆಣಸಿನ ಹೊಡಿಯ ಹಾಕಿ ತೊಳಸುಲೆ ಅಕ್ಕು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

3 thoughts on “ನೇಂದ್ರ ಬಾಳೆಕಾಯಿ ಚಿಪ್ಸ್

  1. ಕಾಂಬಗಳೆ ಆಸೆ ಆವ್ತು..ಭಾರೀ ಲಯ್ಕ ಕಲರ್ ಬೈಂದದ..ರಜ್ಜ ತೆಗದು ಮಡಿಗಿ ಬತ್ತೆ ತಿಂಬಲೆ.

  2. ಅಖೇರಿಯಾಣ ಎರಡು ಫೋಟೋ ನೋಡುವಗ ಬಾಯಿಲಿ ನೀರೇ ಬಂತು.
    ಆಶೆ ಆವ್ತು ವೇಣಿ.

  3. ಹ್ಮ್.. ಚಳಿ ಅಪ್ಪಗ, ಈ ಚಿಪ್ಸುದೆ, ಬೆಶಿ ಬೆಶಿ ಚಾಯವು ಇದ್ದರೆ ಮತ್ತೆ ಕೇಳೆಕೊ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×