ಬಸಳೆ ಬೆಂದಿ

December 6, 2011 ರ 8:00 amಗೆ ನಮ್ಮ ಬರದ್ದು, ಇದುವರೆಗೆ 22 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಸಳೆ ಬೆಂದಿ

ಬೇಕಪ್ಪ ಸಾಮಾನುಗೊ:

  • 1 ಕಟ್ಟು ಬಸಳೆ
  • 1-2 ಸಾಧಾರಣ ಗಾತ್ರದ ನೀರುಳ್ಳಿ
  • ಚಿಟಿಕೆ ಅರುಶಿನ ಹೊಡಿ
  • 1/4 ಚಮ್ಚೆ ಮೆಣಸಿನ ಹೊಡಿ
  • ದ್ರಾಕ್ಷೆ ಗಾತ್ರದ ಓಟೆ ಹುಳಿ
  • ದ್ರಾಕ್ಷೆ – ನಿಂಬೆ ಹಣ್ಣಿನ ಗಾತ್ರದ ಬೆಲ್ಲ (ಬೇಕಾದರೆ ಮಾತ್ರ)
  • 3/4 -1 ಕಪ್ ಬೇಶಿದ ತೊಗರೀಬೇಳೆ
  • 3/4 -1 ಕಪ್ ಕಾಯಿತುರಿ
  • ರುಚಿಗೆ ತಕ್ಕಸ್ಟು ಉಪ್ಪು
  • 1/2 ಚಮ್ಚೆ ಸಾಸಮೆ
  • 5-6 ಬೇನ್ಸೊಪ್ಪು
  • 1  ಚಮ್ಚೆ ಎಣ್ಣೆ

ಮಾಡುವ ಕ್ರಮ:

ಬಸಳೆಯ ಲಾಯಿಕಲಿ ತೊಳದು, ದಂಟನ್ನೂ, ಸೊಪ್ಪನ್ನೂ ಬೇರೆ ಬೇರೆ ಮಾಡೆಕ್ಕು. ದಂಟಿನ ಒಂದು ಇಂಚು ಉದ್ದಕೆ, ಸೊಪ್ಪಿನ ಸಣ್ಣಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊಚ್ಚೆಕ್ಕು. ನೀರುಳ್ಳಿಯನ್ನೂ ಚೋಲಿ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉದ್ದ ಉದ್ದಕೆ ಕೊರೆಯೆಕ್ಕು.

ಹುಳಿಯನ್ನೂ, ಒಂದು ರೆಜ್ಜ ನೀರನ್ನೂ ಒಂದು ಪಾತ್ರಲ್ಲಿ ಹಾಕಿ ಪುರುಂಚಿ, ಕರೇಲಿ ಮಡುಗಿ.
ಪ್ರೆಶರ್ ಕುಕ್ಕರಿಲ್ಲಿ ದಂಟು, ಸೊಪ್ಪು, ಅರುಶಿನ ಹೊಡಿ, ಮೆಣಸಿನ ಹೊಡಿ, ಉಪ್ಪು, ಬೆಲ್ಲ,  ಹುಳಿ ಪುರುಂಚಿದ ನೀರು, ರೆಜ್ಜ ನೀರುದೆ, ಹಾಕಿ 2 ವಿಸಿಲ್ ಬಪ್ಪನ್ನಾರ ಬೇಶಿ. ಕುಕ್ಕರಿನ ಪ್ರೆಶರ್ ಹೋದ ಕೂಡ್ಲೆ, ನೀರುಳ್ಳಿಯನ್ನೂ ಅದಕ್ಕೆ ಹಾಕಿ 3-4 ನಿಮಿಷ ಬೇಶಿ. ಮತ್ತೆ ಅದಕ್ಕೆ ಬೇಶಿದ ತೊಗರೀಬೇಳೆಯನ್ನೂ ಹಾಕಿ ಲಾಯಿಕಲಿ ತೊಳಸಿ.

ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿಯ ಹಾಕಿ, ಬೇಕಾಸ್ಟು ನೀರು ಹಾಕಿ ನೊಂಪು ಕಡೆರಿ. ಇದರ ಬೇಶಿದ ಬಸಳೆ ಬಾಗಕ್ಕೆ ಹಾಕಿ ತೊಳಸಿ, ಕೊದುಶೆಕ್ಕು. (ಉಪ್ಪು, ನೀರು ಬೇಕಾದರೆ ಹಾಕಿ.)
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡೆಕ್ಕು. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಬೆಂದಿಗೆ ಹಾಕಿ. ಇದು ಉಬ್ಬು ರೊಟ್ಟಿಯ ಒಟ್ಟಿಂಗೆ, ಚಪಾತಿಯ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಬಸಳೆ ಬೆಂದಿ, 5.0 out of 10 based on 2 ratings
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 22 ಒಪ್ಪಂಗೊ

  1. ಕೇಜಿಮಾವ°
    K G Bhat

    ನಮ್ಮಲ್ಲಿ ಬೇಳೆ ಹಾಕದ್ದೆ ಕುಡು ಬಸಳೆ ಬೆಂದಿ ಮಾಡ್ತವು. ಗೊಂತಿದ್ದರೆ ಬರದರೆ ಉಪಕಾರ ಆವ್ತಿತು.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ಅಕ್ಷರದಣ್ಣಪ್ರಕಾಶಪ್ಪಚ್ಚಿವೇಣೂರಣ್ಣಕಾವಿನಮೂಲೆ ಮಾಣಿಶರ್ಮಪ್ಪಚ್ಚಿಬೊಳುಂಬು ಮಾವ°ವೇಣಿಯಕ್ಕ°ದೊಡ್ಡಮಾವ°ವಿನಯ ಶಂಕರ, ಚೆಕ್ಕೆಮನೆಒಪ್ಪಕ್ಕಗಣೇಶ ಮಾವ°ಜಯಶ್ರೀ ನೀರಮೂಲೆಉಡುಪುಮೂಲೆ ಅಪ್ಪಚ್ಚಿಮುಳಿಯ ಭಾವಅನಿತಾ ನರೇಶ್, ಮಂಚಿಪಟಿಕಲ್ಲಪ್ಪಚ್ಚಿಸುಭಗಪುತ್ತೂರಿನ ಪುಟ್ಟಕ್ಕದೊಡ್ಮನೆ ಭಾವವೆಂಕಟ್ ಕೋಟೂರುಕಜೆವಸಂತ°ಪುಟ್ಟಬಾವ°ಅನುಶ್ರೀ ಬಂಡಾಡಿಕೆದೂರು ಡಾಕ್ಟ್ರುಬಾವ°ಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ