Oppanna.com

ಬೇಳೆಚೆಕ್ಕೆ ಬೆಂದಿ

ಬರದೋರು :   ವೇಣಿಯಕ್ಕ°    on   10/04/2012    7 ಒಪ್ಪಂಗೊ

ವೇಣಿಯಕ್ಕ°

ಬೇಳೆಚೆಕ್ಕೆ ಬೆಂದಿ

ಬೇಕಪ್ಪ ಸಾಮಾನುಗೊ:

  • 1/2 ಸಾಧಾರಣ ಗಾತ್ರದ ಬೇಳೆಚೆಕ್ಕೆ
  • 1-1.25 ಕಪ್(ಕುಡ್ತೆ) ಕಾಯಿ ತುರಿ
  • 4-5 ಒಣಕ್ಕು ಮೆಣಸು
  • 1.5 ಚಮ್ಚೆ ಕೊತ್ತಂಬರಿ
  • 1/2-3/4 ಚಮ್ಚೆ ಜೀರಿಗೆ
  • 1/4 ಚಮ್ಚೆ ಮೆಣಸಿನ ಹೊಡಿ
  • ದ್ರಾಕ್ಷೆ ಗಾತ್ರದ ಬೆಲ್ಲ
  • ಸಣ್ಣ ದ್ರಾಕ್ಷೆ ಗಾತ್ರದ ಹುಳಿ
  • ಚಿಟಿಕೆ ಅರುಶಿನ ಹೊಡಿ
  • ಚಿಟಿಕೆ ಇಂಗು
  • ರುಚಿಗೆ ತಕ್ಕಸ್ಟು ಉಪ್ಪು
  • 1 ಚಮ್ಚೆ ಸಾಸಮೆ
  • 4-5 ಎಸಳು ಬೆಳ್ಳುಳ್ಳಿ
  • 10-15 ಬೇನ್ಸೊಪ್ಪು
  • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಬೇಳೆಚೆಕ್ಕೆಯ ಅರ್ಧ ಭಾಗ ಮಾಡಿ, ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿ ಮಾಡಿ, ಗೂಂಜಿನ ತೆಗೆರಿ.

ಕಡಿಂದ ಸೊಳೆಯ ತೆಗೆರಿ.

ಪ್ರತಿ ಸೊಳೆಯನ್ನೂ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉದ್ದಕೆ 4 ಭಾಗ ಮಾಡಿ.

ಒಂದು ಪಾತ್ರಲ್ಲಿ ರೆಜ್ಜ ನೀರು ತೆಕ್ಕೊಂಡು ಅದಕ್ಕೆ ಈ ಕೊರದ ಬೇಳೆಚೆಕ್ಕೆಯ ಹಾಕಿ.

ಪೊದುಂಕುಳು, ಹೂಸಾರೆ ಎಲ್ಲ ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸೊಳೆ, ಬೇಳೆಯ ಬೇರೆ ಬೇರೆ ಮಾಡಿ.

ಬೇಳೆಯ ಪ್ರೆಶರ್ ಕುಕ್ಕರ್ಲ್ಲಿ ಹಾಕಿ, ರೆಜ್ಜ ಉಪ್ಪು, ನೀರು ಹಾಕಿ ಬೇಶಿ.(1-2 ಸೀಟಿ ಸಾಕು).
ಇನ್ನೊಂದು ಪಾತ್ರಲ್ಲಿ ಸೊಳೆ, ಉಪ್ಪು, ಮೆಣಸಿನ ಹೊಡಿ, ಬೆಲ್ಲ, ಅರುಶಿನ ಹೊಡಿ, ರೆಜ್ಜ ನೀರು ಹಾಕಿ ಬೇಶಿ. ಇದಕ್ಕೆ ಬೇಶಿದ ಬೇಳೆಯನ್ನೂ ಹಾಕಿ ತೊಳಸಿ.
ಬಾಣಲೆಗೆ ಒಣಕ್ಕು ಮೆಣಸು, ಕೊತ್ತಂಬರಿ, ಜೀರಿಗೆಯ ಹಾಕಿ, ಎಣ್ಣೆ ಹಾಕದ್ದೆ ಪರಿಮ್ಮಳ ಬಪ್ಪನ್ನಾರ ಸಣ್ಣ ಕಿಚ್ಚಿಲ್ಲಿ ಹೊರಿರಿ. ಇದಕ್ಕೆ ಇಂಗು ಹಾಕಿ 30 ಸೆಕೆಂಡ್ ಹೊರಿರಿ.

ಮಿಕ್ಸಿಗೆ ಹೊರುದ ಮಸಾಲೆ, ಕಾಯಿ, ಹುಳಿ ಹಾಕಿ, ಬೇಕಾದಸ್ಟು ನೀರುದೆ ಹಾಕಿ ನೊಂಪು ಕಡೆರಿ. ಇದರ ಬೆಂದ ಬಾಗಕ್ಕೆ ಹಾಕಿ ತೊಳಸಿ, ಕೊದುಶಿ. (ಉಪ್ಪು, ನೀರು ಬೇಕಾದರೆ ಹಾಕಿ.)
ಬೆಳ್ಳುಳ್ಳಿಯ ಸೊಲುದು, ಜಜ್ಜಿ, ಒಗ್ಗರಣೆ ಸಟ್ಟುಗಿಲ್ಲಿ ಎಣ್ಣೆದೆ, ಬೆಳ್ಳುಳ್ಳಿದೆ ಹಾಕಿ ಹೊರಿಯೆಕ್ಕು. ಅದು ಚಿನ್ನದ ಬಣ್ಣ ಬಪ್ಪಗ, ಅದಕ್ಕೆ ಸಾಸಮೆ ಹಾಕೆಕ್ಕು. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ಬೆಂದಿಗೆ ಹಾಕಿ. ಇದು ಅಶನ, ದೋಸೆ, ರೊಟ್ಟಿ, ಚಪಾತಿಯ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

7 thoughts on “ಬೇಳೆಚೆಕ್ಕೆ ಬೆಂದಿ

  1. ಅಪ್ಪು..ಚಪಾತಿ,ರೊಟ್ಟಿಯೊಟ್ಟಿಂಗೆ ಪಷ್ಟಕ್ಕು.

  2. ಹಲಸಿನ ಬಗ್ಗೆ ಬರದ ಎಲ್ಲಾ ಅಡಿಗೆಗೊ (ಇದೂ ಸೇರಿ), ಹಾಂಗೆ ನೀನು ಯಾವಗಲೂ ಬರವ ಎಲ್ಲಾ ಅಡಿಗೆಗೊ ಪಟ ಸಮೇತ ತುಂಬಾ ಖುಷಿ ಕೊಡ್ತು. ಲಾಯಿಕಾಯಿದು, ಬೆಂದಿ ನೋಡಿಯೇ ಬಾಯಿಲಿ ನೀರು ಬಂತು.
    ~ಸುಮನಕ್ಕ…

  3. ಎನಗೆ ಇಷ್ಟವಾದ ಬೆಂದಿಯ ಪಾಕ ವಿಧಾನ (ಪಟ ಸಮೇತ) ನೋಡಿ ಕೊಶೀ ಆತು.

  4. ಇ೦ದು ಗುಜ್ಜೆ ಬೆ೦ದಿ ಉ೦ಡಿಕ್ಕಿ ಬೈಲಿ೦ಗೆ ಇಳುದರೆ ಇಲ್ಲಿ ಬೇಳೆ ಚೆಕ್ಕೆದು,ಚೆಲ..
    ಹ೦ತ ಹ೦ತದ ಪಟ ತೆಗದು,ತಯಾರು ಮಾಡಿದ ಈ ಬೆ೦ದಿಯೂ ರೈಸಿದ್ದು.
    ಅಕ್ಕನ ಪ್ರಯತ್ನಕ್ಕೆ ನಮಸ್ಕಾರ.

  5. ಇಷ್ತು ಚಂದಕ್ಕೆ ಫಟ ಎಲ್ಲಿಂದ ತಯಾರು ಮಾಡಿ ಮಡಿಗಿದ್ದಪ್ಪ ನಿಂಗೊ! ಪ್ರತಿವಾರವೂ ಎನಗೆ ಅದೇ ಕಣ್ಣಿಂಗೆ ಕುತ್ತುವದು.

    ಮತ್ತೆ ಈ ಕಜಿಪ್ಪು ಪಷ್ತ್ಕ್ಲಾಸು.

  6. ಬೆಂದಿ ಲಾಯಿಕಾತು ,
    ಬೇಳೆಯ ಹಾಂಗೆ ಬಾಗ ಮಾಡ್ತರಿಂದ ಇಡೀ ಹಾಕೀರೇ ನವಗೆ ಲಾಯಿಕಪ್ಪದು . ಹೇಳುದೂ ಕಶ್ಟ ಇನ್ನು ತೆಂಕ್ಲಾಗಿಯಾಣವು ನವಗೆ ಗುಜ್ಜೆಯ ಇಡೀ ಬೇಶೀರೇ ಇಷ್ಟ ಹೇಳಿ ಹೇಳುಗು ಎಂತ ಮಾಡುದಪ್ಪಾ, ಅಕ್ಕಾ ನಿಂಗೊ ಇದಕ್ಕೆಲ್ಲಾ ತಲೆ ಕೆಡುಸಿ ಗೊಳೆಡಿ ನಾವು ನಮ್ಮೊಳವೇ ಇದರ ಸರಿ ಮಾಡ್ಯೊಂಗು ಆತೋ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×