ಬೇಳೆಚೆಕ್ಕೆ ತಾಳು(ಪಲ್ಯ)

April 2, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೇಳೆಚೆಕ್ಕೆ ತಾಳು(ಪಲ್ಯ)

ಬೇಕಪ್ಪ ಸಾಮಾನುಗೊ:

  • 1/2 ಸಾಧಾರಣ ಗಾತ್ರದ ಬೇಳೆಚೆಕ್ಕೆ
  • 1/4 ಕಪ್(ಕುಡ್ತೆ) ಕಾಯಿ ತುರಿ
  • 1.5-2 ಚಮ್ಚೆ ಮೆಣಸಿನ ಹೊಡಿ
  • ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ
  • 1/4 ಚಮ್ಚೆ ಅರುಶಿನ ಹೊಡಿ
  • ರುಚಿಗೆ ತಕ್ಕಸ್ಟು ಉಪ್ಪು
  • 1-2 ಮುರುದ ಒಣಕ್ಕು ಮೆಣಸು
  • 1.5 ಚಮ್ಚೆ ಉದ್ದಿನ ಬೇಳೆ
  • 3/4 ಚಮ್ಚೆ ಸಾಸಮೆ
  • 10-15 ಬೇನ್ಸೊಪ್ಪು
  • 3-4 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಬೇಳೆಚೆಕ್ಕೆಯ ಅರ್ಧ ಭಾಗ ಮಾಡಿ, ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿ ಮಾಡಿ, ಗೂಂಜಿನ ತೆಗೆರಿ.

ಕಡಿಂದ ಸೊಳೆಯ ತೆಗೆರಿ.

ಪ್ರತಿ ಸೊಳೆಯನ್ನೂ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉದ್ದಕೆ 4 ಭಾಗ ಮಾಡಿ.

ಒಂದು ಪಾತ್ರಲ್ಲಿ ರೆಜ್ಜ ನೀರು ತೆಕ್ಕೊಂಡು ಅದಕ್ಕೆ ಈ ಕೊರದ ಬೇಳೆಚೆಕ್ಕೆಯ ಹಾಕಿ.

ಪೊದುಂಕುಳು, ಹೂಸಾರೆ ಎಲ್ಲ ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸೊಳೆ, ಬೇಳೆಯ ಬೇರೆ ಬೇರೆ ಮಾಡಿ.

ಬೇಳೆಯ ಪ್ರೆಶರ್ ಕುಕ್ಕರ್ಲ್ಲಿ ಹಾಕಿ, ರೆಜ್ಜ ಉಪ್ಪು, ನೀರು ಹಾಕಿ ಬೇಶಿ.(1-2 ಸೀಟಿ ಸಾಕು).
ಒಂದು ಬಾಣಲೆಲಿ ಸೊಳೆ, ಉಪ್ಪು, ಮೆಣಸಿನ ಹೊಡಿ, ಬೆಲ್ಲ, ಅರುಶಿನ ಹೊಡಿ, ರೆಜ್ಜ ನೀರು ಹಾಕಿ ಬೇಶಿ.
ಇದಕ್ಕೆ ಬೇಶಿದ ಬೇಳೆಯನ್ನೂ ಹಾಕಿ ತೊಳಸಿ. ನೀರು ಆರಿಗೊಂಡು ಬಪ್ಪಲಪ್ಪಗ ಕಾಯಿ ಸುಳಿ ಹಾಕಿ ತೊಳಸಿ. ತಾಳಿನ 4-5 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.
ಒಗ್ಗರಣೆ ಸಟ್ಟುಗಿಲ್ಲಿ, ಉದ್ದಿನ ಬೇಳೆ, ಸಾಸಮೆ, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಒಗ್ಗರಣೆಯ ತಾಳಿಂಗೆ ಹಾಕಿ.
ಇದು ಅಶನ, ರೊಟ್ಟಿ, ಚಪಾತಿಯ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವಶೀಲಾಲಕ್ಷ್ಮೀ ಕಾಸರಗೋಡುವಸಂತರಾಜ್ ಹಳೆಮನೆಹಳೆಮನೆ ಅಣ್ಣಅನು ಉಡುಪುಮೂಲೆಮಾಷ್ಟ್ರುಮಾವ°ಶಾ...ರೀಚೆನ್ನೈ ಬಾವ°ಅನುಶ್ರೀ ಬಂಡಾಡಿಶಾಂತತ್ತೆಅಡ್ಕತ್ತಿಮಾರುಮಾವ°ಶ್ರೀಅಕ್ಕ°ಜಯಶ್ರೀ ನೀರಮೂಲೆಅಕ್ಷರದಣ್ಣತೆಕ್ಕುಂಜ ಕುಮಾರ ಮಾವ°ಡೈಮಂಡು ಭಾವಸರ್ಪಮಲೆ ಮಾವ°ಕಳಾಯಿ ಗೀತತ್ತೆವಿನಯ ಶಂಕರ, ಚೆಕ್ಕೆಮನೆದೀಪಿಕಾಜಯಗೌರಿ ಅಕ್ಕ°ಬಟ್ಟಮಾವ°ಕೆದೂರು ಡಾಕ್ಟ್ರುಬಾವ°ಎರುಂಬು ಅಪ್ಪಚ್ಚಿಅಕ್ಷರ°ವಿದ್ವಾನಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ