ಬೇಳೆ ಸೌತೆ ತಾಳು(ಪಲ್ಯ)

June 18, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೇಳೆ ಸೌತೆ ತಾಳು(ಪಲ್ಯ)

ಬೇಕಪ್ಪ ಸಾಮಾನುಗೊ:

  • 1 ದೊಡ್ಡ ಬಣ್ಣದ ಸೌತೆ (ಮಂಗಳೂರು ಸೌತೆ)
  • 20-25 ಹಲಸಿನಕಾಯಿ ಬೇಳೆ
  • 1/2-3/4 ಕಪ್(ಕುಡ್ತೆ) ಕಾಯಿ ತುರಿ
  • ನಿಂಬೆ ಹುಳಿ ಗಾತ್ರದ ಬೆಲ್ಲ
  • ಚಿಟಿಕೆ ಅರುಶಿನ ಹೊಡಿ
  • ರುಚಿಗೆ ತಕ್ಕಸ್ಟು ಉಪ್ಪು
  • 1.5 ಚಮ್ಚೆ ಮೆಣಸಿನ ಹೊಡಿ
  • 1.5-2 ಚಮ್ಚೆ ಉದ್ದಿನ ಬೇಳೆ
  • 1 ಚಮ್ಚೆ ಸಾಸಮೆ
  • 5-6 ಬೇನ್ಸೊಪ್ಪು
  • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಬೇಳೆಯ ಕೇಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಗುಂಡುಕಲ್ಲು ಉಪಯೋಗ್ಸಿ ಗುದ್ದಿ.

ಬೇಳೆಯ ಹೆರಾಣ ಚೋಲಿಯ ತೆಗದು, ಬೆಶಿ ನೀರಿಲ್ಲಿ 5-10 ನಿಮಿಷ ಹಾಕಿ.  ಬೇಳೆಯ ಕೆರಸಿ/ಕಲ್ಲಿಂಗೆ ಹಾಕಿ ತಿಕ್ಕಿ, ಕಂದು ಬಣ್ಣದ ಚೋಲಿಯ ತೆಗೆರಿ.

ಬೆಳಿ ಮಾಡಿದ ಬೇಳೆಯ ಪ್ರೆಶರ್ ಕುಕ್ಕರ್ಂಗೆ ಹಾಕಿ, ಬೇಕಸ್ಟು ನೀರುದೆ, ಉಪ್ಪುದೆ ಹಾಕಿ ಬೇಶಿ. (2-3 ಸೀಟಿ ಸಾಕು)

ಸೌತೆಕಾಯಿಯ ಕೊರದು, ಬಿತ್ತು, ತಿರುಳಿನ ಮನಾರಕೆ ತೆಗದು ಒಂದು ಇಂಚು ಉದ್ದಕೆ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಕೊರೆರಿ.

ಕೊರದ ಸೌತೆಕಾಯಿಯ ಬಾಣಲೆಗೆ ಹಾಕಿ, ಉಪ್ಪು, ಬೆಲ್ಲ, ಮೆಣಸಿನ ಹೊಡಿ, ಅರುಶಿನ ಹೊಡಿ ಹಾಕಿ, ಬೇಕಾದಸ್ಟು ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ.
ಅದಕ್ಕೆ ಬೆಂದ ಬೇಳೆಯ ಹಾಕಿ ತೊಳಸಿ. ಪಲ್ಯವ ಸಾಧಾರಣ ನೀರು ಆರುವನ್ನಾರ ಹದ ಕಿಚ್ಚಿಲ್ಲಿ ಮಡುಗಿ.
ಕಾಯಿಯ ಮಿಕ್ಸಿಲಿ ಹಾಕಿ ರೆಜ್ಜ ನೀರು ಹಾಕಿ ಕೊಜಕ್ಕು ಮಾಡಿ, ಪಲ್ಯಕ್ಕೆ ಹಾಕಿ ಬೆರುಸಿ. ಪಲ್ಯವ 2-3 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.
ಒಗ್ಗರಣೆ ಸಟ್ಟುಗಿಲ್ಲಿ, ಉದ್ದಿನ ಬೇಳೆ, ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ.
ಅದು ಹೊಟ್ಟಿ ಅಪ್ಪಗ ಬೇನ್ಸೊಪ್ಪು ಹಾಕಿ, ಒಗ್ಗರಣೆಯ ತಾಳಿಂಗೆ ಹಾಕಿ ತೊಳಸಿ. ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

  1. ಸುಮನ ಭಟ್ ಸಂಕಹಿತ್ಲು.

    ಭಾರೀ ರುಚಿ ಅಪ್ಪ ತಾಳು ಇದು, ಈಗ ತಿನ್ನದ್ದೆ ಎಷ್ಟೋ ಸಮಯ ಆತು.

    [Reply]

    VA:F [1.9.22_1171]
    Rating: +2 (from 2 votes)
  2. SOURABHA Y NEERCHAL

    Enna favourite palya idu! Photo thumba chenda baindu.

    [Reply]

    VA:F [1.9.22_1171]
    Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣಬೊಳುಂಬು ಮಾವ°ಗಣೇಶ ಮಾವ°ಶ್ರೀಅಕ್ಕ°ವಿಜಯತ್ತೆನೀರ್ಕಜೆ ಮಹೇಶಅನಿತಾ ನರೇಶ್, ಮಂಚಿಬೋಸ ಬಾವಶೇಡಿಗುಮ್ಮೆ ಪುಳ್ಳಿಉಡುಪುಮೂಲೆ ಅಪ್ಪಚ್ಚಿಪಟಿಕಲ್ಲಪ್ಪಚ್ಚಿಅಕ್ಷರದಣ್ಣವೇಣಿಯಕ್ಕ°ಬಂಡಾಡಿ ಅಜ್ಜಿಕಳಾಯಿ ಗೀತತ್ತೆಕೆದೂರು ಡಾಕ್ಟ್ರುಬಾವ°ಶುದ್ದಿಕ್ಕಾರ°ಅಜ್ಜಕಾನ ಭಾವದೊಡ್ಡಮಾವ°ಪುತ್ತೂರುಬಾವಮಾಷ್ಟ್ರುಮಾವ°ಪುಣಚ ಡಾಕ್ಟ್ರುಕಾವಿನಮೂಲೆ ಮಾಣಿಮುಳಿಯ ಭಾವಶ್ಯಾಮಣ್ಣಅಕ್ಷರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ