ಬೆಂಡೆಕಾಯಿ ಬೋಳುಕೊದಿಲು

January 20, 2015 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೆಂಡೆಕಾಯಿ ಬೋಳುಕೊದಿಲು

ಬೇಕಪ್ಪ ಸಾಮಾನುಗೊ:

  • 10-12 ಸಣ್ಣ ಬೆಂಡೆಕಾಯಿ
  • 1-1.5 ಕಪ್(ಕುಡ್ತೆ) ಬೇಶಿದ ತೊಗರೀಬೇಳೆ
  • ಸಣ್ಣ ದ್ರಾಕ್ಷೆ ಗಾತ್ರದ ಹುಳಿ
  • ಚಿಟಿಕೆ ಅರುಶಿನ ಹೊಡಿ
  • ಸಣ್ಣ ನಿಂಬೆ ಗಾತ್ರದ ಬೆಲ್ಲ
  • 1/4 ಚಮ್ಚೆ ಮೆಣಸಿನ ಹೊಡಿ
  • 1/2 ಚಮ್ಚೆ ಸಾಂಬಾರು/ಸಾರಿನ ಹೊಡಿ
  • ರುಚಿಗೆ ತಕ್ಕಸ್ಟು ಉಪ್ಪು
  • 2-3 ಎಳೆ ಕೊತ್ತಂಬರಿ ಸೊಪ್ಪು
  • ಚಿಟಿಕೆ ಇಂಗು
  • 5-6 ಬೇನ್ಸೊಪ್ಪು
  • 1/2 ಚಮ್ಚೆ ಸಾಸಮೆ
  • 1 ಚಮ್ಚೆ ಎಣ್ಣೆ

ಮಾಡುವ ಕ್ರಮ:
ಬೆಂಡೆಕಾಯಿಯ ತೊಳದು, 1/2 ಇಂಚು ಉದ್ದಕೆ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ. ಇದರ ಒಂದು ಬಾಣಲೆಗೆ ಹಾಕಿ ಹದ ಕಿಚ್ಚಿಲ್ಲಿ 4-5 ನಿಮಿಷ ಬೆಂಡೆಕಾಯಿಯ ನ್ಯೋಳಿ ಹೋಪನ್ನಾರ ಹೊರಿರಿ.

ಇದರ ಒಂದು ಪಾತ್ರಕ್ಕೆ ಹಾಕಿ, ಅದಕ್ಕೆ ಹುಳಿ ನೀರು, ಉಪ್ಪು, ಬೆಲ್ಲ, ಮೆಣಸಿನ ಹೊಡಿ, ಅರುಶಿನ ಹೊಡಿ, ಬೇಕಪ್ಪಸ್ಟು ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ. ಇದಕ್ಕೆ ಬೇಶಿದ ತೊಗರೀಬೇಳೆ, ಸಾರಿನ/ಸಾಂಬಾರಿನ ಹೊಡಿ ಹಾಕಿ ಕೊದುಶಿ. ಬೋಳು ಕೊದಿಲಿನ ಸಣ್ಣ ಕಿಚ್ಚಿಲ್ಲಿ 3-4 ನಿಮಿಷ ಮಡುಗಿ. ಕೊಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ತೊಳಸಿ.
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ, ಇಂಗು, ಬೇನ್ಸೊಪ್ಪು ಹಾಕಿ ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಬೋಳುಕೊದಿಲಿಂಗೆ ಹಾಕಿ ತೊಳಸಿ. ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿಮಾಷ್ಟ್ರುಮಾವ°ದೊಡ್ಡಮಾವ°ಪುತ್ತೂರುಬಾವದೇವಸ್ಯ ಮಾಣಿಶಾಂತತ್ತೆಅನಿತಾ ನರೇಶ್, ಮಂಚಿಕೇಜಿಮಾವ°ಬಟ್ಟಮಾವ°ಬೋಸ ಬಾವಅಜ್ಜಕಾನ ಭಾವಚುಬ್ಬಣ್ಣಸುಭಗವೇಣೂರಣ್ಣಗಣೇಶ ಮಾವ°ಜಯಗೌರಿ ಅಕ್ಕ°ಪವನಜಮಾವಸರ್ಪಮಲೆ ಮಾವ°ಎರುಂಬು ಅಪ್ಪಚ್ಚಿvreddhiಉಡುಪುಮೂಲೆ ಅಪ್ಪಚ್ಚಿರಾಜಣ್ಣವಿಜಯತ್ತೆಅನು ಉಡುಪುಮೂಲೆಬಂಡಾಡಿ ಅಜ್ಜಿದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ