ಬೆಂಡೆಕಾಯಿ ಟೊಮೇಟೋ ಸಾರು

February 3, 2015 ರ 8:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೆಂಡೆಕಾಯಿ ಟೊಮೇಟೋ ಸಾರು

ಬೇಕಪ್ಪ ಸಾಮಾನುಗೊ:

  • 4-5 ಸಾಧಾರಣ ಗಾತ್ರದ ಬೆಂಡೆಕಾಯಿ
  • 2 ಸಾಧಾರಣ ಗಾತ್ರದ ಟೊಮೇಟೋ
  • 1-2 ಹಸಿಮೆಣಸು
  • ಚಿಟಿಕೆ ಅರುಶಿನ ಹೊಡಿ
  • ನಿಂಬೆ ಗಾತ್ರದ ಬೆಲ್ಲ
  • ರುಚಿಗೆ ತಕ್ಕಸ್ಟು ಉಪ್ಪು
  • ಚಿಟಿಕೆ ಇಂಗು
  • 5-6 ಬೇನ್ಸೊಪ್ಪು
  • 1 ಚಮ್ಚೆ ಸಾಸಮೆ
  • 1 ಚಮ್ಚೆ ಎಣ್ಣೆ

ಮಾಡುವ ಕ್ರಮ:
ಬೆಂಡೆಕಾಯಿಯ ತೆಳ್ಳಂಗೆ ಉರುಟಿಂಗೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ. ಟೊಮೇಟೋವನ್ನೂ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ. ಹಸಿಮೆಣಸಿನ ಸಿಗುದು ಮಡುಗಿ.

ಇದರ ಒಂದು ಪಾತ್ರಕ್ಕೆ ಹಾಕಿ, ಅದಕ್ಕೆ ಉಪ್ಪು, ಬೆಲ್ಲ, ಅರುಶಿನ ಹೊಡಿ, ಬೇಕಪ್ಪಸ್ಟು(5-6 ಕುಡ್ತೆ) ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ.

ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ, ಇಂಗು, ಬೇನ್ಸೊಪ್ಪು ಹಾಕಿ ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಸಾರಿಂಗೆ ಹಾಕಿ ತೊಳಸಿ. ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವುತ್ತು. ಇದರ ಅಂತೆ ಸೂಪಿನ ಹಾಂಗೆ ಕುಡಿವಲುದೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

  1. ಸುಭಗ

    ಅತಿ ಸುಲಭಲ್ಲಿ – ಒತ್ತೆಪೋಕನಾಂಗೆ ಬಿಡಾರ ಮಾಡಿಂಡಿಪ್ಪ ಜೆವ್ವನಿಗರು ಸಾನು – ಎಳುಪ್ಪಲ್ಲಿ ಮಾಡ್ಲೆಡಿಗಪ್ಪ ರುಚಿಯಾದ ಅಡುಗೆ ಇದು. ಇದರ ಒಗ್ಗರಣೆಗೆ ಎರಡೆಸಳು ಬೆಳ್ಳುಳ್ಳಿ ಗುದ್ದಿ ಹಾಕಿರೆ ಮತ್ತೂ ಲಾಯ್ಕ ಅಲ್ಲದೋ ವೇಣಿಯಕ್ಕಾ?

    [Reply]

    ವೇಣಿಯಕ್ಕ°

    ವೇಣಿಯಕ್ಕ° Reply:

    ಹುಂ… ಆದರೆ ಟೊಮೇಟೊ ಹಾಕಿದ ಹೀಂಗಿದ್ದ ಬೋಳು ಸಾರುಗೊಕ್ಕೆ ಬೆಳ್ಳುಳ್ಳಿ ಒಗ್ಗರಣೆ ಸಾಮಾನ್ಯ ಅಕ್ಕಸ್ಟೆ. ಇಂಗಿನ ಒಗ್ಗರಣೆ ಒಳ್ಳೆ ಪರಿಮ್ಮಳ ಆವುತ್ತು.

    [Reply]

    VN:F [1.9.22_1171]
    Rating: 0 (from 0 votes)
  2. ತೆಕ್ಕುಂಜ ಕುಮಾರ ಮಾವ°
    ತೆಕ್ಕುಂಜ ಕುಮಾರ ಮಾವ°

    ಅದೇ ಆಯೆಕ್ಕಪ್ಪದು, ಬೆಳ್ಳುಳ್ಳಿ ಒಗ್ಗರಣೆಂದ ಇಂಗು ಒಗ್ಗರಣೆಯೇ ಒಳ್ಳೆದು

    [Reply]

    ಮುಳಿಯ ಭಾವ

    ರಘು ಮುಳಿಯ Reply:

    ಈ ಟೀಕೆ ಮಾವ೦ಗೆ ಬೆಳ್ಳುಳ್ಳಿ ಕ೦ಡ್ರೆ ಎ೦ತಪ್ಪೊದಪ್ಪಾ ??

    [Reply]

    ಸುಭಗ

    ಸುಭಗ Reply:

    ಟೀಕೆಮಾವ ಕಾಶಿಗೋದರೆ ಬಿಟ್ಟಿಕ್ಕಿ ಬಪ್ಪ ಸಾಮಾನಡ ಅದು.

    ಅಲ್ಲ; ಬೆಳ್ಳುಳ್ಳಿ ಆಗದ್ರೆ ಹೋಗಲಿ, ಹಾಂಗೇಳಿ ಬೆಳ್ಳುಳ್ಳಿ ತಿಂಬವರನ್ನೂ ಟೀಕೆಮಾವ ಟೀಕೆ ಮಾಡುದು ಸಮವೋ ಮುಳಿಯ ಭಾವಾ?

    [Reply]

    ಶ್ಯಾಮಣ್ಣ

    ಶ್ಯಾಮಣ್ಣ Reply:

    ಹಾಂಗೇಳಿ ಬೆಳ್ಳುಳ್ಳಿ ತಿಂಬೋರ ಟೀಕೆ ಮಾಡಿರೂ, ಬೇಳೆ ಹುಳಿ (ಹಲಸಿನ ಬೇಳೆ ಮೇಲಾರ) ತಿಂಬೋರ ಟೀಕೆ ಮಾಡವು.

    VA:F [1.9.22_1171]
    Rating: 0 (from 0 votes)
  3. ಶ್ಯಾಮಣ್ಣ
    ಶ್ಯಾಮಣ್ಣ

    ಎಂಗಳ ಮನೇಲಿ ಒಂದೊಂದರಿ, ವಾರಲ್ಲಿ ಎಂಟತ್ತು ದಿನ ಈ ಸಾರು ಇರ್ತು.

    [Reply]

    ಸುಭಗ

    ಸುಭಗ Reply:

    ಹ್ಹ ಹ್ಹ ಹ್ಹಾ…!
    ವಾರಲ್ಲಿ ಎಂಟತ್ತು ದಿನವೋ..?! ರೈಸಿತ್ತು ಶ್ಯಾಮಣ್ಣ..!!

    [Reply]

    ವೇಣಿಯಕ್ಕ°

    ವೇಣಿಯಕ್ಕ° Reply:

    ಹಹ್ಹ ಅದಪ್ಪು ..:)

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪ್ರಕಾಶಪ್ಪಚ್ಚಿಕಾವಿನಮೂಲೆ ಮಾಣಿಅಕ್ಷರದಣ್ಣಪುತ್ತೂರಿನ ಪುಟ್ಟಕ್ಕವಿದ್ವಾನಣ್ಣಪುಣಚ ಡಾಕ್ಟ್ರುಶಾ...ರೀಬೊಳುಂಬು ಮಾವ°ಅಡ್ಕತ್ತಿಮಾರುಮಾವ°ಸುಭಗವಿಜಯತ್ತೆದೀಪಿಕಾಜಯಗೌರಿ ಅಕ್ಕ°ಅಕ್ಷರ°ಪೆರ್ಲದಣ್ಣವೇಣಿಯಕ್ಕ°ಚೂರಿಬೈಲು ದೀಪಕ್ಕಚೆನ್ನಬೆಟ್ಟಣ್ಣಶುದ್ದಿಕ್ಕಾರ°ದೇವಸ್ಯ ಮಾಣಿವಾಣಿ ಚಿಕ್ಕಮ್ಮಶೀಲಾಲಕ್ಷ್ಮೀ ಕಾಸರಗೋಡುಪುತ್ತೂರುಬಾವಹಳೆಮನೆ ಅಣ್ಣಮಂಗ್ಳೂರ ಮಾಣಿಬಂಡಾಡಿ ಅಜ್ಜಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ