ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು)

ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು)

ಬೇಕಪ್ಪ ಸಾಮಾನುಗೊ:

  • 4-5 ಊರ ಬೆಂಡೆ
  • 1 ದೊಡ್ಡ ಟೊಮೇಟೊ
  • ಸಣ್ಣ ದ್ರಾಕ್ಷೆ ಗಾತ್ರದ ಬೆಲ್ಲ
  • 1/2 ಕಪ್(ಕುಡ್ತೆ) ಕಾಯಿತುರಿ
  • 3/4-1 ಕಪ್(ಕುಡ್ತೆ) ಬೇಶಿದ ತೊಗರಿಬೇಳೆ
  • 1/4 ಚಮ್ಚೆ ಅರುಶಿನ ಹೊಡಿ(ಚಿಟಿಕೆ ಭಾಗ ಬೇಶುಲೆ+ ಒಳುದ್ದು(ಸಣ್ಣ ತುಂಡು ಅರುಶಿನ ಕೊಂಬು) ಮಸಾಲೆಗೆ)
  • 1/4 ಚಮ್ಚೆ ಮೆಣಸಿನ ಹೊಡಿ
  • ಸಣ್ಣ ದ್ರಾಕ್ಷೆ ಗಾತ್ರದ ಓಟೆ ಹುಳಿ (ಬೇಕಾದರೆ ಮಾತ್ರ)
  • 5-6 ಒಣಕ್ಕು ಮೆಣಸು
  • 1-1.5 ಚಮ್ಚೆ ಕೊತ್ತಂಬರಿ
  • 1/4 ಚಮ್ಚೆ ಜೀರಿಗೆ
  • 1/2 ಚಮ್ಚೆ ಉದ್ದಿನಬೇಳೆ
  • 3-4 ಮೆಂತೆ ಕಾಳು
  • 1 ಚಮ್ಚೆ ಸಾಸಮೆ(1/2 ಚಮ್ಚೆ ಮಸಾಲೆಗೆ + 1/2 ಚಮ್ಚೆ ಒಗ್ಗರಣೆಗೆ)
  • ದೊಡ್ಡ ಚಿಟಿಕೆ ಇಂಗು
  • ರುಚಿಗೆ ತಕ್ಕಸ್ಟು ಉಪ್ಪು
  • 10-12 ಬೇನ್ಸೊಪ್ಪು(5-6 ಮಸಾಲೆಗೆ + ಒಳುದ್ದು ಒಗ್ಗರಣೆಗೆ)
  • 2-3 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಬೆಂಡೆಕಾಯಿ, ಟೊಮೇಟೋವ ತೊಳದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ.

ಬೆಂಡೆಕಾಯಿಯ ಒಂದು ಬಾಣಲೆಗೆ ಹಾಕಿ 5 ನಿಮಿಷ ಹದ ಕಿಚ್ಚಿಲ್ಲಿ ನ್ಯೋಳಿ ಹೋಪನ್ನಾರ ಬಾಡ್ಸಿ. ಇದರ ಒಂದು ಪಾತ್ರಕ್ಕೆ ಹಾಕಿ, ಅದಕ್ಕೆ ಉಪ್ಪು, ಮೆಣಸಿನ ಹೊಡಿ, ಚಿಟಿಕೆ ಅರುಶಿನ ಹೊಡಿ, ಬೆಲ್ಲ, ರೆಜ್ಜ ನೀರು ಹಾಕಿ ಬೇಶಿ. ಬೆಂಡೆಕಾಯಿ ಬೆಂದುಗೊಂಡು ಬಪ್ಪಗ ಟೊಮೇಟೋ ಹಾಕಿ ಕೊದುಶಿ. ಇದಕ್ಕೆ ಬೆಂದ ತೊಗರಿಬೇಳೆ ಹಾಕಿ ಕೊದುಶಿ.

ಒಂದು ಬಾಣಲೆಗೆ ಒಣಕ್ಕು ಮೆಣಸು, ಕೊತ್ತಂಬರಿ, ಜೀರಿಗೆ, ಮೆಂತೆ, ತೊಗರಿಬೇಳೆ, ಉದ್ದಿನಬೇಳೆ, 1/2 ಚಮ್ಚೆ ಸಾಸಮೆ, ಅರುಶಿನ ಕೊಂಬು(ಅರುಶಿನ ಹೊಡಿ ಆದರೆ ಲಾಸ್ಟಿಂಗೆ ಇಂಗಿನ ಒಟ್ಟಿಂಗೆ ಹಾಕಿ), 5-6 ಬೇನ್ಸೊಪ್ಪು, 1-2 ಚಮ್ಚೆ ಎಣ್ಣೆ ಹಾಕಿ ಸಣ್ಣ ಕಿಚ್ಚಿಲ್ಲಿ ಲಾಯಿಕ ಪರಿಮ್ಮಳ ಬಪ್ಪನ್ನಾರ ಹೊರಿರಿ. ಇದಕ್ಕೆ ಇಂಗು ಹಾಕಿ ಒಂದು ನಿಮಿಷ ಸಣ್ಣ ಕಿಚ್ಚಿಲ್ಲಿ ಹೊರಿರಿ.

ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿ, ಹೊರುದ ಮಸಾಲೆ, ಹುಳಿ(ಬೇಕಾದರೆ ಮಾತ್ರ), ಬೇಕಾಸ್ಟು ನೀರು ಹಾಕಿ ನೊಂಪು ಕಡೆರಿ. ಇದರ ಬೇಶಿದ ಬಾಗಕ್ಕೆ ಹಾಕಿ ತೊಳಸಿ, ಕೊದುಶೆಕ್ಕು.(ಉಪ್ಪು, ನೀರು ಬೇಕಾದಸ್ಟು ಹಾಕಿ.) ಸಣ್ಣ ಕಿಚಿಲ್ಲಿ ಒಂದು 2 ನಿಮಿಷ ಮಡುಗಿ.
ಒಗ್ಗರಣೆ ಸಟ್ಟುಗಿಲ್ಲಿ 1/2 ಚಮ್ಚೆ ಸಾಸಮೆ, 1 ಸಕ್ಕಣ ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು(3-4) ಹಾಕಿ, ಒಗ್ಗರಣೆಯ ಕೊದಿಲಿಂಗೆ ಹಾಕಿ. ಇದು ಅಶನ, ದೋಸೆ, ರೊಟ್ಟಿ, ಕೊಟ್ಟಿಗೆ, ಉಂಡೆ, ಚಪಾತಿ, ಇತ್ಯಾದಿಗಳ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~ ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ವೇಣಿಯಕ್ಕ°

   

You may also like...

2 Responses

  1. ಶ್ಯಾಮಣ್ಣ says:

    ಬೆಂಡೆಕಾಯಿ ಟೊಮೇಟೋ ಕೊದಿಲು ಮಾಡಿದ ಮತ್ತೆ ವೇಣಿಯಕ್ಕನ ಅಡಿಗೆ ಸುದ್ದಿ ಇಲ್ಲೇ. ಎಂತ?

    • ಮಕ್ಕೊ, ಆಫೀಸು ಕೆಲಸ ಹೇಳಿ, ಅಡಿಗೆ ಬರವಲೆ ಸಮಯ ಹೊಂದುಸುಲೆ ರೆಜ್ಜ ಕಸ್ಟ ಆವುತ್ತು. ನಿಧಾನಕ್ಕೆ ಪುರುಸೊತ್ತು ಇಪ್ಪಗ ಅಡುಗೆ ಬರದು ಅಪ್ಲೋಡು ಮಾಡ್ತೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *