ಬೆರಟಿ ಪಾಯ್ಸ

ಹಲಸಿನಹಣ್ಣಿನ ಬೆರಟಿ ಹೇಳಿರೆ ಕೊಡೆಯಾಲಲ್ಲಿಪ್ಪ ಪುಳ್ಯಕ್ಕೊ ಕಣ್ಣು ಪಿಳಿಪಿಳಿ ಮಾಡಿ ನೋಡುಗು.. ಅದೆಂತರಪ್ಪಾ ಹೇಳಿ.
ಈಗ ಅದರ ಮಾಡುವೋರು ಕಮ್ಮಿ ಅಲ್ಲದೋ.. ಪೇಟೆಲಿಪ್ಪವಕ್ಕೆ ಪುರುಸೊತ್ತುದೇ ಇಲ್ಲೆ, ಗೊಂತೂ ಇರ ಕೆಲಾವು ಜೆನಕ್ಕೆ.
ಅದರ ಕಾಸುದೇ ಇಪ್ಪದು ದೊಡ್ಡ ಕೆಲಸ. ಒಳ್ಳೆ ಒಣಗಿಲು ಸೌದಿಯ ಕಿಚ್ಚು ಇದ್ದರುದೇ ಮೂರು ಗಂಟೆ ಎಲ್ಲ ಕಾಸೆಕ್ಕಾವುತ್ತು. ಆದರೆ ಎರಡು ಮೂರು ವರ್ಷಕ್ಕೆಲ್ಲ ಏನಾಗ ಮಾತ್ರ.
ಹಲಸಿನ ಹಣ್ಣಿನ ಬೇಳೆ ತೆಗೆಯೆಕ್ಕು. ಅದರ ಸಾಂತಾಣಿ ಮಾಡ್ಳೆ ಗೊಂತಿದ್ದನ್ನೆ.. ಪುಳ್ಯಕ್ಕೊಗೆ ಹಾಂಗಿದ್ದ ಕಾಟಂಕೋಟಿ ಎಲ್ಲ ಲಾಯ್ಕ ಮೆಚ್ಚುಗು.

ಹ್ಮ್..ಬೇಳೆ ತೆಗದು ಅಟ್ಟಿನಳಗೆಲಿ ಹಾಕಿ ಒಂದು ಸೆಕೆ ಬರುಸೆಕ್ಕು. ಅದು ಪಕ್ಕನೆ ಸೆಕೆ ಬತ್ತು, ದಣಿಯ ಹೊತ್ತು ಬೇಡ.
ಮತ್ತೆ ಅದರ ಕಾಸುದು. ಗಟ್ಟಿಗೆ ಗಂಟೆಗಟ್ಳೆ ಕಾಸೆಕ್ಕು. ಕೈ ರಟ್ಟೆ  ಬೇನೆ ಆವುತ್ತು. ಆದರೆ ಮಾಡದ್ದೆ ಇಪ್ಪಲೆ ಮನಸ್ಸು ಕೇಳೆಕ್ಕೆ. ಮದಲಿಂದಲೇ ಮಾಡಿಯೊಂಡು ಬಂದದಿದ. ಈ ಅಜ್ಜಿಗೆ ತಳಿಯದ್ದೆ ಕಾಲ್ನೀಡಿ ಕೂಪಲಾಗದೊ ಹೇಳಿ ಪುಳ್ಯಕ್ಕೊ ಪರಂಚುಗು.
ಹೀಂಗೆ ಮಾಡಿದ ಬೆರಟಿಯ ಜೆಂಗಲ್ಲಿ ತೆಗದುಮಡಗಿರೆ ಬೇಕಾದಿಪ್ಪಗ ಪಾಯ್ಸವೊ ಮಣ್ಣ ಮಾಡ್ಳಕ್ಕು. ಅಂತೆ ತಿಂಬಲೂ ಅಕ್ಕು ಬೇಕಾರೆ ರಜ.

ಬೆರಟಿ ಪಾಯ್ಸ ಮಾಡ್ತದು ಹೇಂಗೇಳಿ ಹೇಳುವೋಳಿ ಕಂಡತ್ತು ಈ ಸರ್ತಿ. ಪುಳ್ಯಕ್ಕೊಗೆ ಪರೀಕ್ಷೆ. ಪರಂಚಿಗೊಂಡು ಪರಂಚಿಗೊಂಡು ಕರೆಂಟಿನ ಪುಸ್ತಕ ಬಿಡುಸಿ ಕೊಡ್ತವು ಪಾಪ. ಒಪ್ಪಣ್ಣ ಹೇಳಿದಾಂಗೆ ಇದರ ಮರುಳು ಒಂದರಿ ಹಿಡುದರೆ ಮತ್ತೆ ಬಿಡ.
ಹ್ಮ್..ಇರಳಿ..ಈಗ ಪಾಯ್ಸದ ಶುದ್ದಿ ಮಾತಾಡುವೊ.
ಪಾಯ್ಸ ಮಾಡ್ಳೆ ಬೆರಟಿಯ ಮದಾಲು ಕೊದಿಶಿದ ನೀರಿಲಿ ಬೊದುಲುಲೆ ಹಾಕೆಕ್ಕು. ಅದು ರೆಜ ತಣುದಪ್ಪಗ, ಲಾಯ್ಕಕ್ಕೆ ಪುರುಂಚೆಕ್ಕು. ಮಂದ ಎಸರು ತಯಾರಾತು.
ಅದು ತಣಿವ ಎಡೆಹೊತ್ತಿಲಿ ಕಾಯಿಹಾಲು ಮಾಡಿಯೊಂಬಲಕ್ಕು.
ಕಾಯಿಹಾಲು ತೆಗವಾಗ ಮಂದಹಾಲು, ನಡೂಕಾಣ ಹಾಲು ಮತ್ತೆ ನೀರು ಹಾಲು ಹೀಂಗೆ ಮೂರು ಸರ್ತಿ ತೆಗವಲಕ್ಕು. ಸುರೂವಿಂಗೆ ಪುರುಂಚಿದ ಎಸರಿನೊಟ್ಟಿಂಗೆ ನೀರುಹಾಲನ್ನುದೇ, ನಡೂಕಾಣ ಹಾಲನ್ನುದೇ ಹಾಕಿ, ಬೆಲ್ಲ ಹಾಕಿ ಕೊದಿವಲೆ ಮಡುಗಿತ್ತು. ಬೆರಟಿ ಕಮ್ಮಿ ಆದರೆ, ತುಂಬ ನೀರಾವುತ್ತೂಳಿ ಇದ್ದರೆ ನೀರು ಕಾಯಾಲು ಹಾಕುದು ಬೇಡ.
ಅದು ಕೊದಿವ ಹೊತ್ತಿಲಿ ಬೀಜದ ಬೊಂಡು ಹೊರುಕ್ಕೊಂಡು, ಏಲಕ್ಕಿ ಗುದ್ದಿ ಮಡಿಕ್ಕೊಂಡ್ರೆ ಒಳ್ಳೆದು.
ಕೊದುಕ್ಕೊಂಡು ಬಪ್ಪಗ ಮಂದ ಕಾಯಾಲು ಹಾಕಿ ಒಂದರಿ ಸೌಟಿಲಿ ಲಾಯ್ಕ ತೊಳಸಿತ್ತು. ಅದಕ್ಕೆ ಏಲಕ್ಕಿ, ಬೀಜದ ಬೊಂಡು ಎಲ್ಲ ಹಾಕಿ ಸರೀ ಕೊದಿಶಿರೆ ಬೆರಟಿ ಪಾಯ್ಸ ಆತದ. ಇದು ಬಾರೀ ರುಚಿ ತಿಂಬಲೆ. ಪುಳ್ಯಕ್ಕೊ ಸುರುದು ಸುರುದು ಉಂಗು. ಅಪುರೂಪಕ್ಕೊಂದರಿ ಮಾಡಿರಂತೂ ಕೇಳುದೇ ಬೇಡ. ಒಪ್ಪಣ್ಣ, ಅಜ್ಜಕಾನ ರಾಮ, ಆಚಕರೆ ಮಾಣಿ, ಅಬ್ರಾಜೆ ಪುಟ್ಟ ಇವ್ವು ನಾಕು ಜೆನ ಇದ್ದರೆ ಅದು ಒಂದೇ ಹೊತ್ತಂಗೆ ಕಾಲಿ ಅಕ್ಕು.

ಪುರುಸೊತ್ತಿಲಿ ನಿಂಗಳೂ ಮಾಡಿ ನೋಡಿ ಒಂದರಿ..ಆತೊ..
ಬೆರಟಿ ಕೊಡುವೊ ಬೇಕಾರೆ. ಕಳುದೊರ್ಷದ್ದು ಮುಗುಕ್ಕೊಂಡು ಬಂತು ಮಾತ್ರ.
ಈ ಸರ್ತಿ ಇನ್ನು ಎಂತ ಕತೆಯೊ ಗೊಂತಿಲ್ಲೆ. ಗುಜ್ಜೆ ಬಿಟ್ಟಿದು.

ಹಣ್ಣಪ್ಪಲೆ ಸುಮಾರು ತಡ ಇದ್ದು ಈ ಸರ್ತಿ. ನೋಡೊ.. ಎಡಿಗಾರೆ ಮಾಡಿ ಮಡುಗೆಕ್ಕು ರಜ ಬೆರಟಿ, ಪುಳ್ಯಕ್ಕೊ ಸೇರಿರೆ.

ಬಂಡಾಡಿ ಅಜ್ಜಿ

   

You may also like...

19 Responses

 1. prashant kuwait says:

  umm… yummy..

 2. ಅಜ್ಜೀ,
  ಪಾಯಿಸ ಲಾಯಿಕಾಯಿದಾತ.
  ಆದರೆ ಈ ಸರ್ತಿ ಆನು ಬಪ್ಪ ಮೊದಲೇ ಅಜ್ಜಕಾನ ಬಾವ ಸುಮಾರು ಮುಗುಶಿದ್ದ – ಎನಗೆ ಒಂದೇ ಗ್ಳಾಸು ಸಿಕ್ಕಿದ್ದು.
  ಇನ್ನೊಂದರಿ ಮಾಡಿ ಕೊಡೆಕ್ಕಾತಾ?

  • ಸನತ್ says:

   ಈ ಅಜ್ಜಕಾನ ಭಾವ ಮತ್ತೆ ಒಪ್ಪಣ್ಣನ ಗಲಾಟೆಲಿ ಎನಗೆ ಪಾಯಸ ಸಿಕ್ಕಿದ್ದಿಲ್ಲೆ.

   🙁

   • ಅಜ್ಜಕಾನ ಭಾವ says:

    ಸನತ್ ನೀನು ಎಡಕ್ಕಿಲಿ ಒಳ ಹೋಗಿ ಕುಡುದ್ದು ಎಂಗೊಗೆ ಗೊಂತಾಯಿದಿಲ್ಲೆ ಆತೋ…!!!

    • ಬಂಡಾಡಿ ಅಜ್ಜಿ says:

     ಅಪ್ಪೋ… ಒಳ ಬಂದು ಕುಡುದ್ದದು ಎನಗುದೆ ಗೊಂತಾಯಿದಿಲ್ಲೆ… ಆನು ಶಾಂತಕ್ಕನಲ್ಲಿಂದ ಮಾವಿನ ಮೆಡಿ ತಪ್ಪಲೆ ಹೋಗಿತ್ತಿದ್ದನೋಳಿ…

   • ಬಂಡಾಡಿ ಅಜ್ಜಿ says:

    ಕೊಳಚ್ಚಿಪ್ಪು ಪುಳ್ಳಿಗೆ ಸೀವು ಅಷ್ಟು ಆವುತ್ತಿಲ್ಲೇಳಿ ಮೊನ್ನೆ ಹೇಳಿದಾಂಗಾಗಿತ್ತು. ಹಾಂಗೆ ಮತ್ತೆ ಅಂತೆ ತೆಗದು ಮಡುಗಿ ಅವ ಕುಡಿಯದ್ದರೆ ಅಂತೆ ಹಳಸುದಲ್ಲದೋ ಹೇಳಿ ಒಳುದವಕ್ಕೆ ಕೊಟ್ಟುಮುಗಿಶಿದ್ದು…

  • ಶ್ರೀಕೃಷ್ಣ ಶರ್ಮ. ಹಳೆಮನೆ says:

   4 ಕುಡ್ತೆ ಹಿಡಿವ ದೊಡ್ಡ ಗ್ಲಾಸಿಲ್ಲಿ ಕೊಟ್ಟದಡ.

  • ಬಂಡಾಡಿ ಅಜ್ಜಿ says:

   ಒಪ್ಪಣ್ಣೊ… ಒಂದೇ ಗ್ಲಾಸು ಹೇಳಿ ಬೇಜಾರ ಮಾಡ್ಳೆ ಅದೆಂತ ಒಂದು ಕುಡ್ತೆ ಹಿಡಿತ್ತ ಗ್ಲಾಸಲ್ಲ ಆತೊ… ಶರ್ಮಣ್ಣ ಹೇಳಿದಾಂಗೆ ನಾಕು ಕುಡ್ತೆ ಹಿಡಿತ್ತದು. ಒಬ್ಬಂಗೇ ದಣಿಯ ಕೊಟ್ರೆ ಮತ್ತೆ ಒಳುದ ಪುಳ್ಯಕ್ಕೊಗೂ ಆಗೆಡದೋ… ಬೆರಟಿ ಕಾಸುಲೆ ಬಂದರೆ ತುಂಬ ಕೊಡ್ಳಕ್ಕು ಮತ್ತೆ ಬೇಕಾರೆ…

 3. abraje putta says:

  ajji vishu lekkali beejada chore haki payasa madidddeyaa….perati payasa supeeeeeeeeeer…malegallakke shantani madi madugu raje haki batte timbale, oppannanannu karkondu batte.

 4. srikrishna says:

  super… enage raja “minchance” maadi ajji

 5. Vasantha Krishna says:

  Baraddadu thumba laikayidu… Maneli madle ammanathre helthe….

 6. ಎಂಗಳ ಶ್ಯಾಮಲ ಬೆರಟಿ ಮಾಡಿ ಮಾರ್ತು.ಬೇಕಾರೆ ಹೇಳಿ,ಬಪ್ಪ ವರ್ಷ.

  • ಓ ಒಳ್ಳೆದಾತು.
   ಮಾಷ್ಟ್ರುಮಾವನ ದೊಡ್ಡ ಸೊಸಗೆ ಅಮೇರಿಕಕ್ಕೆ ತೆಕ್ಕೊಂಡು ಹೋಪಲಕ್ಕಿದಾ..!
   ನಿಂಗಳ ಶಾಮಲ ಎಂಗೊಗೆ ಕೊಡುಗಾ?
   ಎಲ್ಲಿ? ಎಷ್ಟು? ಯೇವತ್ತು? ರಜಾ ವಿವರ ಕೊಡಿ ಮಾವ°..

   • ಖಂಡಿತಾ,ಆನು ಹೇಳಿದ್ದಲ್ಲದೊ ಬಪ್ಪ ವರ್ಷ ಹೇಳಿ.ಕೊಡ್ಲೆ ಹೇಳುವೊ°.ಅದು ಎನ್ನ ಒಂದು ಪೇಶಂಟ್.ಒಳ್ಳೆ ಕೆಲಸಗಾರ್ತಿ.ಬೇಸಗೆಲಿ ಹಪ್ಪಳ,ಮಾಂಬಳ,ಬೆರಟಿ ಇತ್ಯಾದಿ ಮಾಡಿ ಮಾರ್ತು.ಮದಲೇ ಹೇಳೆಕ್ಕು ಮಾಂತ್ರ.ಆನು ತೆಕ್ಕೊಂಡಿದೆ,ಲಾಯಕಿದ್ದು.

 7. Raja says:

  Berati = Danada segani (cow dung); especially of calf (danada kanjiya sagani onagiddakke berati heluttavu)
  PERATI = HALASINA HANNINA SOLEYA PERATUVADU, PERATI means i think rolling under heat!!
  tappadare kshamisi, oorinda hera heratu kala sumaaaru aatu, haangaagi tappale avakasha iddu
  lekhana laayika iddu…

  • ರಘು ಮುಳಿಯ says:

   ರಾಜಣ್ಣ,
   ನಿ೦ಗೊ ಊರಿ೦ದ ದೂರ ಇದ್ದರೂ,ನಿ೦ಗಳ ನೆನಪ್ಪು ಗಟ್ಟಿ ಇದ್ದು,ಆತೋ. ಪೆರಟಿ ಅಥವಾ ಪೆರಟು ಹೇಳ್ತ ಶಬ್ದ ಸರಿಯಾದ್ದು.ಬೆರಟಿ ಹೇಳಿರೆ ಸಗಣವೇ. ಬ೦ಡಾಡಿ ಅಜ್ಜ್ಜಿ ಕನ್ನಡ್ಕ ಬದಲ್ಸೆಕ್ಕಾತು ಹೇಳಿಗೊ೦ಡಿತ್ತಿದ್ದವು,ಹಾ೦ಗಾಗಿ ತಪ್ಪಿದ್ದಾಗಿಕ್ಕು.

  • Heenge obba says:

   ಬೆರಣಿ ಹೇಳಿರೆ ಸೆಗಣಿ ಹೇಳಿ ಗೊ೦ತಿದ್ದು. ಬೆರಟಿ ಹೇಳಿರೆ ಸೆಗಣಿಯಾ?

  • ರಘು ಮುಳಿಯ says:

   ರಾಜಣ್ಣ,
   ವಾಪಾಸು ವಿಮರ್ಶೆ ಮಾಡಿ,ಅಜ್ಜಿಯಕ್ಕಳ ಹತ್ತರೆ ಮಾತಾಡಿ,ಮರಿಯಪ್ಪ ಭಟ್ರ ನಿಘ೦ಟು ನೋಡಿಯಪ್ಪಗ ನಿಘ೦ಟಾತು.ಬೆರಟಿ ಹೇಳುವ ಶಬ್ದಕ್ಕೆ ಎರಡು ಅರ್ಥವೂ ಇದ್ದು. ಸಗಣ ( ಬಜ೦ಟು) ಮತ್ತೆ ಹಲಸಿನಹಣ್ಣು ಕಾಸಿದ್ದದು.ಬ೦ಡಾಡಿ ಅಜ್ಜಿ ಸೂಕ್ಷ್ಮ ಇದ್ದಪ್ಪೋ..

 8. Raja says:

  Thanks Raghu bhava, enna hatre ratna kosha elle, modalee tappadare kshamisi heliddenne

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *