ಬನ್ಸ್

March 19, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬನ್ಸ್

ಬೇಕಪ್ಪ ಸಾಮಾನುಗೊ:

 • 1.5 ಒಳ್ಳೆ ಹಣ್ಣಾದ ದೊಡ್ಡ ಬಾಳೆ ಹಣ್ಣು
 • 1.5 ಕಪ್(ಕುಡ್ತೆ) ಮೈದಾ ಹೊಡಿ
 • 1/2 ಕಪ್(ಕುಡ್ತೆ) ಗೋಧಿ ಹೊಡಿ
 • 1/2 ಕಪ್(ಕುಡ್ತೆ) ಮೊಸರು
 • ಚಿಟಿಕೆ ಅಡುಗೆ ಸೋಡ
 • 2-3 ಚಮ್ಚೆ ಸಕ್ಕರೆ
 • 1/2 ಚಮ್ಚೆ ಜೀರಿಗೆ
 • 1 ಚಮ್ಚೆ ಬೆಣ್ಣೆ (ಬೇಕಾದರೆ ಮಾತ್ರ)
 • ರುಚಿಗೆ ತಕ್ಕಸ್ಟು ಉಪ್ಪು
 • ಎಣ್ಣೆ

ಮಾಡುವ ಕ್ರಮ:

ಬಾಳೆ ಹಣ್ಣಿನ ಚೋಲಿ ತೆಗದು, ಪುರುಂಚಿ ಒಂದು ಪಾತ್ರಕ್ಕೆ ಹಾಕಿ. ಅದಕ್ಕೆ ಉಪ್ಪು, ಸಕ್ಕರೆ, ಮೊಸರು, ಅಡುಗೆ ಸೋಡ, ಜೀರಿಗೆ, ಬೆಣ್ಣೆ ಹಾಕಿ ಲಾಯಿಕಲಿ ತೊಳಸಿ. ಅದಕ್ಕೆ ಮೈದಾ ಹೊಡಿ, ಗೋಧಿ ಹೊಡಿ ಹಾಕಿ ಹಿಟ್ಟಿನ ಲಾಯಿಕ ಕಲಸಿ. ಮುಚ್ಚಿ ಒಂದು ಕರೆಲಿ 7-8 ಘಂಟೆ ಮಡುಗಿ.

ದೊಡ್ಡ ನಿಂಬೆ ಹಣ್ಣಿನ ಗಾತ್ರದ ಹಿಟ್ಟಿನ ತೆಕ್ಕೊಂಡು, ಚಪಾತಿ ಮಣೆಲಿ ಬೇಕಾದಸ್ಟು ಮೈದಾ ಹೊಡಿ/ಅಕ್ಕಿ ಹೊಡಿ ಹಾಕಿ ಲಟ್ಟುಸಿ. (ಇದರ ಬದಲು ಹಪ್ಪಳದ ಮಣೆಲಿ 2 ಪ್ಲಾಸ್ಟೀಕು ಶೀಟ್ ನ ನಡುಕೆ ಮಡುಗಿ ಒತ್ತಿದರೂ ಆವುತ್ತು)

ಬಾಣಲೆಲಿ ಎಣ್ಣೆ ಮಡುಗಿ ಬೆಶಿ ಮಾಡಿ. ಎಣ್ಣೆ ಬೆಶಿ ಆದಪ್ಪಗ, ಲಟ್ಟುಸಿದ ಬನ್ಸ್ ನ ಎಣ್ಣೆಗೆ ಹಾಕಿ 2 ಹೊಡೆ ಚಿನ್ನದ ಬಣ್ಣ ಬಪ್ಪನ್ನಾರ ಹೊರಿರಿ.

ಬೆಶಿ ಬೆಶಿ ಬನ್ಸ್ ನ ಚಟ್ನಿ/ಸಾಂಬರಿನ ಒಟ್ಟಿಂಗೆ, ಚಾ, ಕಾಫಿ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ 5-6 ಬನ್ಸ್ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಎಂಗಳಲ್ಲಿ ಇಂದು ಬನ್ಸ್., ತಿಂದಿಕ್ಕೆ ಬೈಲಿಂಗೆ ಬಂದರೆ ಇಲ್ಲಿಯೂ ಬನ್ಸ್ !!

  ಬನ್ಸ್ ತಿಂಬಲೆ ಲಾಯಕ ಆವ್ತು ಮಾಡಿ ಕೊಟ್ರೆ. ಶುದ್ದಿಗೊಂದು ಒಪ್ಪ.

  [Reply]

  VA:F [1.9.22_1171]
  Rating: +2 (from 2 votes)
 2. ಅಜ್ಜಕಾನ ಭಾವ

  ಅಕ್ಕಅ

  ಇದರ ನೋಡಿ ಒಂದರಿ ತಾಜುಮಹಲಿಂಗೆ ಹೋಗಿ ಬರೆಕ್ಕಾತಡ ನಮ್ಮ ಸುಭಗ ಬಾವಂಗೆ..

  ಪಸ್ಟಾಯಿದು..

  [Reply]

  VN:F [1.9.22_1171]
  Rating: 0 (from 0 votes)
 3. Sandesh

  Ninga vivarsuvagale baayili neeru batha iddu. Madi nodeku.

  [Reply]

  VA:F [1.9.22_1171]
  Rating: 0 (from 0 votes)
 4. ಎನ್ನ ಇಷ್ಟದ ತಿಂಡಿ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೊಳಚ್ಚಿಪ್ಪು ಬಾವಅನು ಉಡುಪುಮೂಲೆಪ್ರಕಾಶಪ್ಪಚ್ಚಿಸುವರ್ಣಿನೀ ಕೊಣಲೆಜಯಶ್ರೀ ನೀರಮೂಲೆನೆಗೆಗಾರ°ಶುದ್ದಿಕ್ಕಾರ°ವಸಂತರಾಜ್ ಹಳೆಮನೆಪಟಿಕಲ್ಲಪ್ಪಚ್ಚಿಶೇಡಿಗುಮ್ಮೆ ಪುಳ್ಳಿಬೊಳುಂಬು ಮಾವ°ಅಡ್ಕತ್ತಿಮಾರುಮಾವ°ಶಾಂತತ್ತೆಅಕ್ಷರದಣ್ಣಕೇಜಿಮಾವ°ಚೆನ್ನಬೆಟ್ಟಣ್ಣಮಾಲಕ್ಕ°ಚೂರಿಬೈಲು ದೀಪಕ್ಕvreddhiವಾಣಿ ಚಿಕ್ಕಮ್ಮರಾಜಣ್ಣವೆಂಕಟ್ ಕೋಟೂರುದೊಡ್ಡಭಾವತೆಕ್ಕುಂಜ ಕುಮಾರ ಮಾವ°ಕಾವಿನಮೂಲೆ ಮಾಣಿದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ