Oppanna.com

ಚಕ್ಕುಲಿ

ಬರದೋರು :   ವೇಣಿಯಕ್ಕ°    on   27/12/2011    8 ಒಪ್ಪಂಗೊ

ವೇಣಿಯಕ್ಕ°

ಚಕ್ಕುಲಿ

ಬೇಕಪ್ಪ ಸಾಮಾನುಗೊ:

  • 2 ಕಪ್(ಕುಡ್ತೆ) ಬೆಣ್ತಕ್ಕಿ(ಸೋನಾ ಮಸೂರಿ ಒಳ್ಳೆದು)
  • 1 ಕಪ್(ಕುಡ್ತೆ) ಉದ್ದಿನ ಹೊಡಿ
  • 1/2 ಚಮ್ಚೆ ಜೀರಕ್ಕಿ
  • ರುಚಿಗೆ ತಕ್ಕಸ್ಟು ಉಪ್ಪು
  • 3-4 ಚಮ್ಚೆ ಬೆಣ್ಣೆ
  • ಎಣ್ಣೆ – ಹೊರಿವಲೆ

ಮಾಡುವ ಕ್ರಮ:

ಸಾಧಾರಣ ಒಂದು ಕುಡ್ತೆ ಅಪ್ಪಸ್ಟು ಉದ್ದಿನ ಬೇಳೆಯ ಒಂದು ಬಾಣಲೆಲಿ ಹಾಕಿ ಒಳ್ಳೆ ಪರಿಮ್ಮಳ ಬಪ್ಪನ್ನಾರ ಹೊರಿರಿ.
ಅದು ತಣುದ ಮೇಲೆ ಮಿಕ್ಸಿಲಿ ಹಾಕಿ ನೊಂಪು ಹೊಡಿ ಮಾಡಿ ಮಡಿಕ್ಕೊಳ್ಳಿ. (ತರಿ ತರಿ ಇದ್ದರೆ ಗಾಳ್ಸಿ ಮಡಿಕ್ಕೊಳ್ಳಿ.)

ಅಕ್ಕಿಯ 3-4 ಘಂಟೆ ನೀರಿಲ್ಲಿ ಬೊದುಳ್ಸಿ, ಲಾಯಿಕ ತೊಳದು, ಗಟ್ಟಿಗೆ ನೊಂಪು ಕಡೆರಿ. ಅದಕ್ಕೆ ಬೆಣ್ಣೆ, ಉಪ್ಪು, ಜೀರಕ್ಕಿ ಹಾಕಿ ಲಾಯಿಕ ಕಲಸಿ.

ಅದಕ್ಕೆ 1 ಕುಡ್ತೆ ಉದ್ದಿನ ಬೇಳೆ ಹೊಡಿಯ ಹಾಕಿ ಲಾಯಿಕಲಿ ಕಲಸಿ.(ನೀರು ಬೇಕಾದರೆ ಸೇರ್ಸಿ) ಹಿಟ್ಟು ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ಗಟ್ಟಿ ಇರಲಿ.
ಅದರ ಮುಚ್ಚಿ ಒಂದು ಕರೆಲಿ 20 ನಿಮಿಷ ಮಡುಗಿ.

ಒಂದು ಪ್ಲಾಸ್ಟೀಕು ಶೀಟಿಂಗೆ ರೆಜ್ಜ ಎಣ್ಣೆ ಹಾಕಿ ಉದ್ದಿ ಮಡುಗಿ.
ಕಲಸಿದ ಹಿಟ್ಟಿನ ಚಕ್ಕುಲಿ ಮುಟ್ಟಿಂಗೆ ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉರುಟಿಂಗೆ ಒತ್ತಿ.

ಎಣ್ಣೆಯ ಒಂದು ಬಾಣಲೆಲಿ ಮಡುಗಿ ಬೆಶಿ ಮಾಡೆಕ್ಕು.
ಆದು ಲಾಯಿಕಲ್ಲಿ ಬೆಶಿ ಆದಪ್ಪಗ ಅದಕ್ಕೆ ಒತ್ತಿ ಮಡುಗಿದ ಚಕ್ಕುಲಿಯ  ಹಾಕಿ ಚಿನ್ನದ ಬಣ್ಣ ಬಪ್ಪನ್ನಾರ ಹೊರುದು ತೆಗೆರಿ.
ತಣುದ ಮೇಲೆ ಒಂದು ಕರಡಿಗೆಲಿ ಹಾಕಿ ಮಡುಗಿ ಚಾ,ಕಾಫಿ ಒಟ್ಟಿಂಗೆ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

8 thoughts on “ಚಕ್ಕುಲಿ

  1. ಚಕ್ಕುಲಿ ತಯಾರಿ ಇಷ್ಟು ಸುಲಭವೋ ಹೇಳಿ ಗ್ರೇಶಿ ಹೋತು ! ಅಕ್ಕ೦ಗೆ ಧನ್ಯವಾದ

  2. ಇದರ ನೋಡಿ ಇಂದೇ ಚಕ್ಕುಲಿ ಮಾಡುವ ಆಸೆ ಆಯಿದು ವೇಣಿ.

  3. ವೇಣಿಯಕ್ಕಾ,
    ಸುಲಬಲ್ಲಿ ಮಾಡ್ಳೆಡಿವನಮುನೆ ತಿಂಡಿಗಳ ಮತ್ತೂ ಸುಲಬಲ್ಲಿ ಮಾಡಿತೋರುಸುತ್ತದು ತುಂಬ ರುಚಿ ಅಪ್ಪದು.
    ಬೇಕಾದಲ್ಲಿ ಬೇಕಾದ ನಮುನೆಯ ಪಟವ ಬೇಕಾದಹಾಂಗೇ ನೇಲುಸಿ ಹೇಳಿಕೊಡ್ತದು ಮತ್ತೂ ರುಚಿ ಅಪ್ಪದು.
    ಚಿಕ್ಕದಾಗಿ, ಚೊಕ್ಕದಾಗಿ ರುಚಿರುಚಿಯಾಗಿ ವಿವರುಸಿ ಬರೆತ್ತ ನಿಂಗಳ ಶೈಲಿಯೇ ಎಲ್ಲದರಿಂದಲೂ ರುಚಿ ಅಪ್ಪದು.

    ಇನ್ನೂ ತಿಂಡಿಗೊ ಬರಳಿ.
    ಕಾದೊಂಡಿದ್ದೆಯೊ°…

  4. ಒಳ್ಳೇ ಮಾಹಿತಿಯುಕ್ತ, ಉಪಕಾರಪ್ರದ ಲೇಖನ೦ಗೊಕ್ಕೆ ಧನ್ಯವಾದ೦ಗೊ. ನಿ೦ಗಳ ‘ರುಚಿರುಚಿಅಡಿಗೆ’ ಬ್ಲಾಗು ಸದ್ಯ ನೋಡಿದೆ. ಅದರಲ್ಲಿಪ್ಪ ಹಲವು ಹೊಸ/ಹಳೇ ರುಚಿಗಳ ಪ್ರಯೋಗವೂ ಮಾಡಿದೆ, ಬಹಳ ಉಪಕಾರ ಆತು. ಹಾ೦ಗಿರ್ತ ಒ೦ದು ಬ್ಲಾಗು ಮಾಡಿದ್ದಕ್ಕೆ ಹೃತ್ಪೂರ್ವಕ ಧನ್ಯವಾದ೦ಗೊ.

  5. ಸೋನಾ ಮಸೂರಿ ಒಳ್ಳೇದು ಹೇಳಿ ಕೂಡ ತಿಳಿಸಿದ್ದದು ವೇಣಿಯಕ್ಕನ ಪಾಕ ನೈಪುಣ್ಯತೆಯ ತೋರುಸುತ್ತು…

  6. ಅಕ್ಕೋ, ಚಕ್ಕುಲಿಮಾಡುಲೆ ಹೇಳಿಕೊಟ್ಟದು ಒಪ್ಪಾಅಯಿದು ಹೇಳಿ ಒಂದೊಪ್ಪ,
    (ತಣುದ ಮೇಲೆ ಒಂದು ಕರಡಿಗೆಲಿ ಹಾಕಿ ಮಡುಗಿ ಚಾ,ಕಾಫಿ ಒಟ್ಟಿಂಗೆ ತಿಂಬಲೆ ಕೊಡಿ. ) ಅಕ್ಕೋ ನವಗೆ ತಣಿವಲೆ ಎಲ್ಲಿದ್ದು ಪುರುಸೊತ್ತು ಅರ್ದಂಬರ್ದ ತಣುದಪ್ಪಗಳೇ ಎಣ್ಣೆಂದ ತೆಗದ್ದು ಕಾಲಿಮಾಡ್ತವು ನಾವು ಹಾಂಗಾಗಿ ಚಕ್ಕುಲಿಗೆ ಬೇಕಾಗಿಯೇ ಒಟ್ಟಿಂಗೆ ಚಾ,ಕಾಪಿ ಮಾಡ್ಸಿ ಕುಡಿವದು ನಮ್ಮ ಅಭ್ಯಾಸ . “ಕಂಡದು ಗೆನಾ ಹಾವಿನ ಕುಞಿ ಆದರುದೇ ಕುಡಗೆ ಹೋಪಲೆ ಬಿಡೆ ಹೇಳ್ತ ಜಾತಿ” ಹೇಳಿ ಮನೆಲಿ ಅಮ್ಮ ಬೈಗು …….. ಎಂತ ಮಾಡ್ತ್ಸು ಬೈದರುದೇ ಹೊಗಳೀರುದೇ ಅಮ್ಮನ್ನೇ ಹೇಳಿ ಸುಮ್ಮನೆ ನಮ್ಮ ಕಾರ್ಯ ನಾವು ಮಾಡ್ಸು…….

  7. ಚೆಲ! ಎಳ್ಪದ ಕೆಲಸ ಇದು. ದಣಿಯ ಬಂಙ ಇಲ್ಲೆ. ಪಟಂಗಳೂ ಲಾಯಕ ಬಯಿಂದು. ವೇಣಿ ಅಕ್ಕನ ಶ್ಲಾಘನೀಯ ಕಾರ್ಯಂಗೊ ಹೇಳಿ ನಮ್ಮದೊಂದು ಒಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×