ಚೂರಿಬೈಲು ದೀಪಕ್ಕನ ವೆಬ್‌-ಸೌಟು!

January 26, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಚೂರಿಬೈಲು ದೀಪಕ್ಕನ ಗುರ್ತ ಹೇಳ್ತರೆ ಅಟ್ಟುಂಬೊಳಂದಲೇ ಸುರು ಮಾಡೆಕ್ಕಷ್ಟೆ!
ದೊಡ್ಡಮಾಣಿ ದೊಡ್ಡಕ್ಕನ ಓ ಮೊನ್ನೆ ಗುರ್ತ ಮಾಡುವಗ ಕೆಲಾವು ಜೆನ ಕೇಳಿದವು, ಚೂರಿಬೈಲು ದೀಪಕ್ಕ ಹೇಳಿರೆ ಇದೇ ಹೆಮ್ಮಕ್ಕಳೋ? ಹೇಳಿಗೊಂಡು.
ಅಲ್ಲ, ದೊಡ್ಡಕ್ಕ ದೊಡ್ಡಮಾಣಿಯವು, ದೀಪಕ್ಕ ಚೂರಿಬೈಲಿನವು – ಇಬ್ರಿಂಗೂ ಇಪ್ಪ ಒಂದೇ ಒಂದು ಸಾಮ್ಯತೆ – ಲಟ್ಟಣಿಗೆ!
ಲಟ್ಟಣಿಗೆ ಹೇಳಿದ ಕೂಡ್ಳೆ ಪೆಟ್ಟುಗುಟ್ಟು ಮಾಡ್ತವು ಹೇಳಿ ಗ್ರೇಶಿಕ್ಕೆಡಿ!
ಇಬ್ರುದೇ ಬಾರೀ ಚೆಂಙಾಯಿಗೊ! ದಿನಾ ಮದ್ಯಾನ್ನ ದೀಪಕ್ಕ ಈಟೀವಿ ನೋಡಿರೆ, ದೊಡ್ಡಕ್ಕ ಉದಯಟೀವಿ ನೋಡ್ತದು. ಮತ್ತೆ ಉಂಬಲಪ್ಪಗ ಪೋನಿಲಿ ಎರಡೂ ಹೊಸರುಚಿಯ ಅತ್ತಿತ್ತೆ ಹೇಳ್ತದು!
ಇಬ್ರಿಂಗೂ ಎರಡುದೇ ಗೊಂತಾತಿಲ್ಲೆಯೋ – ಹಾಂಗಿರ್ತ ಕೆಣಿ ಇವರದ್ದು!!

ಚೂರಿಬೈಲು ಡಾಗುಟ್ರು ಇದ್ದವಲ್ದ, ಅವರ ಎಜಮಾಂತಿ ಈ ದೀಪಕ್ಕ.
ಡಾಕುಟ್ರು ಊರವಕ್ಕೆ ಇಡೀ ಮದ್ದು ಕೊಟ್ಟು ಕೊಟ್ಟು, ಹೊತ್ತಪ್ಪಗ ಮನಗೆ ಬಚ್ಚಿ ಬತ್ತವು! ಅವಕ್ಕೆ ರುಚಿರುಚಿಯಾದ ಊಟದ ‘ಮದ್ದು’ ಈ ದೀಪಕ್ಕ ಕೊಡುದು!!
ಡಾಗುಟ್ರಿಂಗೆ ಶೀತವೋ – ಗೆಣಮೆಣಸು ಎರಾಡು ಗುದ್ದಿ, ಒಂದು ಚೊಕ್ಕಕೆ ಪಾನಕ ಮಾಡಿ ತಕ್ಕು. ಡಾಗುಟ್ರಿಂಗೆ ಸೆಮ್ಮವೋ – ಶುಂಟಿ ಗುದ್ದಿ ಒಂದು ಕಷಾಯ ಮಾಡುಗು! ಒಟ್ಟಿಲಿ ಈ ದೀಪಕ್ಕನ ಡಾಗುಟ್ರ-ಡಾಗುಟ್ರು ಹೇಳಿರೂ ತಪ್ಪಲ್ಲ!

ಅಡಿಗೆಲಿ ಎತ್ತಿದ ಕೈ!
ಕಣಿಲೆ ಉಪ್ಪಿನಕಾಯಿಂದ ಹಿಡುದು, ಶೆಕ್ಕರೆಬೆರಟಿ, ಹಾಲುಬಾಯಿಂದ ತೊಡಗಿ ನೀರುಳ್ಳಿ ಪಾಯಿಸದ ಒರೆಂಗೆ ಸಾಮಾನ್ಯ ವಿಶೇಷ, ವಿಚಿತ್ರದ್ದು ಎಲ್ಲವುದೇ ಅರಡಿಗು.
ಯೇವದಾರು ಅನುಪ್ಪತ್ಯಕ್ಕೆ ಅಡಿಗೆಬಟ್ರು ಇವರ ಮನಗೆ ಬಂದರೆ, ಎಂತಾರು ಹೊಸಾ ತಿಂಡಿ ಕಲ್ತುಗೊಂಡು ಹೋಪದು ನಿಘಂಟು.
ಒಪ್ಪಣ್ಣ ದೊಡ್ಡಬಾವನಲ್ಲಿಗೆ ಮದ್ಯಾನ್ನಕ್ಕೆ ಹೋದರೆ, ಹೊತ್ತಪ್ಪಗಾಣ ಚಾಯಕ್ಕೆ ಚೂರಿಬೈಲಿಂಗೆ – ಆ ದಿನ ಒಳ್ಳೆತ ಮೈಲೇಜು!!
ಡಾಗುಟ್ರುಬಾವ ಮಣಿಪುರಕ್ಕೆ ಹೋದರೆ, ನಾಲ್ಕೇ ದಿನಲ್ಲಿ ಒಪಾಸು ಬತ್ತವು, ಮನೆ ಅಡಿಗೆ ಉಣ್ಣದ್ದೆ ನಾಲಗೆ ರುಚಿ ಹೋದ್ದಡ!
ಗಣೇಶಮಾವ° ಅವರಲ್ಲಿಗೆ ಹೋದರೆ ಸೀತ ಹೋಗಿ ಉಣ್ತಮೇಜಿಂಗೆ ಹತ್ತಿ ಕೂಪದಡ, ಹೋಮದಬುಡಲ್ಲಿ ಬಟ್ಟಮಾವ ಕೂದ ಹಾಂಗೆ!
ಓ ಮೊನ್ನೆ ಅಮೇರಿಕಂದ ಬಂದಿತ್ತಿದ್ದವಂಗೆ, ದೀಪಕ್ಕನಲ್ಯಾಣ ಬಗೆಬಗೆ ತಿಂಡಿಗಳ ಕಂಡು ‘ಆನು ಅಮೇರಿಕಕ್ಕೆ ಒಪಾಸು ಹೋವುತ್ತಿಲ್ಲೇ’ ಹೇಳಿ ಹಟಮಾಡಿದನಡ!
ಅಷ್ಟುದೇ ಡಿಮಾಂಡು, ದೀಪಕ್ಕನ ಅಡಿಗೆಗೆ!

ಅಡಿಗೆ ಮಾಂತ್ರ ಅಲ್ಲ, ಬೇರೆ ಸುಮಾರು ವಿನಿಯೋಗಂಗೊ ಇದ್ದು.
ಜಾಲಿಡೀಕ ಮಲ್ಲಿಗೆಗೆಡು ಇಪ್ಪದು ಗೊಂತಿದ್ದನ್ನೆ ನಿಂಗೊಗೆಲ್ಲ, ಡಾಗುಟ್ರುಬಾವಂಗೆ ಮದ್ದಿನಬೇರು ಒಣಗುಸುಲೂ ಬರ್ಕತ್ತಿಂಗೆ ಜಾಗೆ ಇಲ್ಲೆ!
ಅದು ಮಾಂತ್ರ ಅಲ್ಲದ್ದೇ, ಈ ದೀಪಕ್ಕಂಗೆ ಎಂತ ಕಂಡ್ರುದೇ ಅದರ್ಲಿ ಹೂಗು ಮಾಡುಗು. ಡಾಗುಟ್ರುಬಾವಂಗೆ ಒಂದೋಂದರಿ ಪಿಸುರು ಬಪ್ಪದು ಇದಕ್ಕೇ ಇದಾ!
ಮೊನ್ನೆ ಸಂಜೀವಶೆಟ್ಟಿಯಲ್ಲಿಂದ ತಂದ ಟುವ್ವಲು ಪೂರ ಮುಗುತ್ತಡ. ಮುಗುದ್ದು ಹೇಂಗೆ – ಎಲ್ಲದಕ್ಕುದೇ ಒಂದೊಂದು ರಬ್ಬರುಬೇಂಡು ಸುರುಟಿ, ಎಂತದೋ ಪ್ಲೇಷ್ಟಿಕು ತುಂಡು ಸಿಕ್ಕುಸಿ, ಒಂದು ಹಾಳೆಕಡೆಗೆ ಬಣ್ಣಕೊಟ್ಟದಕ್ಕೆ ಕಟ್ಟಿ – ಹೂದಾನಿಯ ಹಾಂಗೆ ಮಾಡಿ..
– ಇದರ ನೋಡಿದ ಡಾಗುಟ್ರಿಂಗೆ ಬೆಗರಿ, ಮೋರೆಉದ್ದಲಪ್ಪಗ ನೋಡಿರೆ ಟುವ್ವಲು ಕಾಲಿ!!

ಅದೇನೇ ಇರಳಿ, ಓ ಮೊನ್ನೆ ದೀಪಕ್ಕ ಮಾಷ್ಟ್ರುಮಾವನಲ್ಲಿಗೆ ಬಂದಿಪ್ಪಗ ಮಾತಾಡ್ಳೆ ಸಿಕ್ಕಿತ್ತು.
‘ಚೂರಿಬೈಲುದೀಪಕ್ಕಾ, ಬೈಲಿಂಗೆ ಬಂದು ಅಡಿಗೆ ಶುದ್ದಿ ಹೇಳು, ವೆಬ್‌ಸೈಟಿಲಿ ಹಾಕಲೆ!’ ಹೇಳಿದೆ.
ಕುಶೀಲಿ ಒಪ್ಪಿತ್ತು ಕೇಳಿತ್ತು, “ವೆಬ್‌ಸೌಟಿಂಗೆ ಹಾಕಿರೆ ಎಂತರ ಗುಣ ಇದ್ದು?” ಹೇಳಿ. ಸೈಟು ಹೇಳ್ತದರ ಸೌಟು ಹೇಳಿಯೇ ಹೇಳಿದ್ದು ಅದು, ಅಷ್ಟುದೇ ಅಡಿಗೆ ಬಗ್ಗೆ ಆಸಕ್ತಿ!!

ಬನ್ನಿ, ಒಳ್ಳೊಳ್ಳೆ ಅಡಿಗೆ ಹೇಂಗೆ ಮಾಡುದು ಹೇಳುಗು..
ಟುವ್ವಲು ಹೂದಾನಿ ಮಾಡುದು ಹೇಳಿಕೊಡ್ತೋ ಏನೋ, ಹೇಳ್ತರೆ ಕೇಳುವೊ°.! ಮಲ್ಲಿಗೆ ಕೊಟ್ರೆ ಕೆಮಿಗೋ – ತಲಗೋ ಮಡಿಕ್ಕೊಂಬ°!
ಅಡಿಗೆ ಮೊದಾಲು ಕಲ್ತುಗೊಂಬ°.. ರುಚಿ ಆತೋ – ತಿಂದು ನೋಡಿಕ್ಕಿ ಹೇಳುವೊ°.. ಹೇಂಗೂ ಹೆಚ್ಚುಕಮ್ಮಿ ಆದರೆ ಚೂರಿಬೈಲುಡಾಗುಟ್ರು ಇದ್ದವನ್ನೆ!!!
ಅಡಿಗೆ ಲಾಯ್ಕಾದರೆ ಸೌಟಿಂಗೆ ಒಪ್ಪಕೊಡುವ°..
~
ಒಪ್ಪಣ್ಣ

ದೀಪಕ್ಕನ ಅಡಿಗೆಗೊ ಸದ್ಯಲ್ಲೇ ಇದೇ ಅಂಕಣಲಿ ಬತ್ತು..
ಗೇಸು ಷ್ಟೌ ಹೊತ್ತುಸಿಕ್ಕಿ ಕಾದೊಂಡಿರಿ!

~
ಗುರಿಕ್ಕಾರ°

ಚೂರಿಬೈಲು ದೀಪಕ್ಕನ ವೆಬ್‌-ಸೌಟು!, 3.0 out of 10 based on 4 ratings
ಶುದ್ದಿಶಬ್ದಂಗೊ (tags): , , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಗಣೇಶ ಮಾವ°
  ಗಣೇಶ ಮಾವ.

  ಏ!!!!!!!!!ಒಪ್ಪಣ್ಣ,,,,,,,, ಈ ದೀಪಕ್ಕನ ಹತ್ರೆ ತಿಮ್ಬಲೇ ಕೇಳಿದೆ ಹೇಳಿ ಆದರೆ ಇದ್ದಲ್ದೋ ಅದು ಅಸಲು ಬಡ್ಡಿ ಎಲ್ಲಾ ಒಟ್ಟು ಸೇರ್ಸಿ ವಸೂಲು ಮಾಡ್ತು.. ಮೊನ್ನೆ ಇದಾ!!!!!!! ಆನು ಮಾಷ್ಟ್ರು ಮಾವನಲ್ಲಿಗೆ ಅಂತೇ ಹೋದಿಪ್ಪಗ ಅಲ್ಲಿ ದೀಪಕ್ಕನ ಠಾಣೆ ಇತ್ತಿದ! ಅಲ್ಲಿ ಕಾರದ ಕಡ್ಡಿ ಮತ್ತೆ ಶಕ್ಕರೆ ಬೆರಟಿ ಪಾಕ ಆಯಿಗೊಂಡಿತ್ತು. ನವಗೆ ಬೇಕರಿಂದ ತಂದಷ್ಟೇ ಗೊಂತಿದ! ಹಾಂಗೆ ಕಾರದ ಕಡ್ಡಿ ರಜ ಒತ್ತುಲೇ ಸೇರ್ತೆಯ?ಹೇಳಿ ಕೇಳಿತ್ತು. ಇದು ಒತ್ತುಸ್ಲೆ ಹೆರಟು ಅದರ ಸೇಮಗೆ ಮುಟ್ಟು ತೆಗವಲೆ ಹಗ್ಗ ಜಗ್ಗಾಟ ಮಾಡಿ, ಇನ್ನು ಮುಂದೆ ಕಾರದ ಕಡ್ಡಿ ಸಹವಾಸ ಬೇಡ ಹೇಳಿ ಕಂಡತ್ತು. ಹಾಂಗೆ ನಿನ್ನ ಸೈಟಿಲಿ ಬರವಲೆ ಅದರ ಸೌಟು ಎಂತಾದರೂ ಬರೆಕು ಹೇಳಿ ಆದರೆ ?????????

  [Reply]

  VA:F [1.9.22_1171]
  Rating: +1 (from 1 vote)
 2. ಅನುಶ್ರೀ ಬಂಡಾಡಿ

  ಹ್ಹೆ ಹ್ಹೆ ಭಾರೀ ಲಾಯ್ಕಾಯಿದು… ಇನ್ನು ಒಪ್ಪಣ್ಣನ ಬೈಲಿಲಿ ಹೊಸ ಹೊಸ ರುಚಿಗೊ ಸಿಕ್ಕುಗು. ಪುರ್ಸೊತ್ತಿಲಿ ಹೂಗು ಮಾಡ್ತದನ್ನೂ ಹೇಳಿಕೊಡಿ ದೀಪಕ್ಕ…

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವನೀರ್ಕಜೆ ಮಹೇಶಅಡ್ಕತ್ತಿಮಾರುಮಾವ°ಬಂಡಾಡಿ ಅಜ್ಜಿವಾಣಿ ಚಿಕ್ಕಮ್ಮವಸಂತರಾಜ್ ಹಳೆಮನೆಜಯಶ್ರೀ ನೀರಮೂಲೆಪ್ರಕಾಶಪ್ಪಚ್ಚಿಬಟ್ಟಮಾವ°ಕೇಜಿಮಾವ°ಪೆರ್ಲದಣ್ಣಕಾವಿನಮೂಲೆ ಮಾಣಿಶಾ...ರೀಶರ್ಮಪ್ಪಚ್ಚಿವಿಜಯತ್ತೆಮಾಲಕ್ಕ°ಕೆದೂರು ಡಾಕ್ಟ್ರುಬಾವ°ವಿನಯ ಶಂಕರ, ಚೆಕ್ಕೆಮನೆಅನುಶ್ರೀ ಬಂಡಾಡಿಚೆನ್ನೈ ಬಾವ°ಶೇಡಿಗುಮ್ಮೆ ಪುಳ್ಳಿಪೆಂಗಣ್ಣ°ಮಂಗ್ಳೂರ ಮಾಣಿಚೆನ್ನಬೆಟ್ಟಣ್ಣಗೋಪಾಲಣ್ಣಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ