ಚೋರೆ ಪಾಯಸ

April 17, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಚೋರೆ ಪಾಯಸ

ಬೇಕಪ್ಪ ಸಾಮಾನುಗೊ:

 • 4-5 ಕಪ್(ಕುಡ್ತೆ) ಚೋರೆ(ಬೊಂಡು)
 • 2 ಕಪ್(ಕುಡ್ತೆ) ಬೆಲ್ಲ
 • 3 ಕಪ್(ಕುಡ್ತೆ) ಕಾಯಿ ತುರಿ ಅಥವಾ 2.5-3 ಕಪ್(ಕುಡ್ತೆ) ಕಾಯಿ ಹಾಲು
 • 2 ಚಮ್ಚೆ ಗಟ್ಟಿ ಬೆಣ್ತಕ್ಕಿ ಹಿಟ್ಟು / ಅಕ್ಕಿ ಹೊಡಿ
 • ಚಿಟಿಕೆ ಉಪ್ಪು (ಬೇಕಾದರೆ ಮಾತ್ರ)
 • 3-4 ಏಲಕ್ಕಿ

ಮಾಡುವ ಕ್ರಮ:

ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಚೋರೆಯ ಉದ್ದಕೆ ಎರಡು ಭಾಗ ಮಾಡಿ. ಒಂದು ಕತ್ತಿ/ಪೀಶಕತ್ತಿ ಉಪಯೋಗುಸಿ ಬೀಜದ ಬೊಂಡಿನ ಎಳಕ್ಕುಸಿ.

ಒಂದು ಪಾತ್ರಲ್ಲಿ 5 ಕುಡ್ತೆ ನೀರು ಹಾಕಿ ಕೊದುಶಿ. ಅದಕ್ಕೆ ಕೊರದ ಚೋರೆಯ ಹಾಕಿ ಒಂದು 10 ನಿಮಿಷ ಮಡುಗಿ.

ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ, ಚೋರೆಯ ಹೆರಾಣ ಚೋಲಿಯ ತೆಗದು ಬೊಂಡಿನ ಮಾತ್ರ ಒಂದು ಪಾತ್ರಕ್ಕೆ ಹಾಕಿ.

ಕಾಯಿಯ ರೆಜ್ಜ ನೀರು ಹಾಕಿ ನೊಂಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ.

ಹಿಂಡಿದ ಪುಂಟೆಗೆ 3 ಕುಡ್ತೆ ನೀರು ಹಾಕಿ, ಲಾಯಿಕಲಿ ಬೆರುಸಿ ವಸ್ತ್ರಲ್ಲಿ ಪುನಃ ಹಿಂಡಿ. 
ಈ ನೀರು ಕಾಯಿಹಾಲಿನ ಪ್ರೆಶರ್ ಕುಕ್ಕರ್ಲ್ಲಿ ಹಾಕಿ. ಅದಕ್ಕೆ ಚೋರೆ, 1/2 ಕುಡ್ತೆ ಬೆಲ್ಲ ಹಾಕಿ ಲಾಯಿಕಲಿ ಬೇಶಿ.(2-3 ಸೀಟಿ ಸಾಕು) 
ಕುಕ್ಕರ್ನ ಪ್ರೆಶರ್ ಹೋದ ಮೇಲೆ, ಒಳುದ ಬೆಲ್ಲ ಹಾಕಿ ಕೊದುಶಿ, ಬೆಲ್ಲ ಕರಗುವನ್ನಾರ ಸಣ್ಣ ಕಿಚ್ಚಿಲ್ಲಿ ಮಡುಗಿ. 
ಒಂದು ಪಾತ್ರಲ್ಲಿ 1/2 ಕುಡ್ತೆ ನೀರು ಹಾಕಿ, ಅದಕ್ಕೆ ಅಕ್ಕಿ ಹಿಟ್ಟು/ಹೊಡಿ ಹಾಕಿ ಕರಡಿ. ಅದರ ಪಾಯಸಕ್ಕೆ ಹಾಕಿ ಕೊದುಶಿ. 
ಕಾಯಿ ಹಾಲನ್ನೂ ಹಾಕಿ ಕೊದುಶಿ. ಗುದ್ದಿ ಹೊಡಿ ಮಾಡಿದ ಏಲಕ್ಕಿಯನ್ನೂ ಹಾಕಿ ತೊಳಸಿ ಪಾಯಸವ 1-2 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.

ಬೆಶಿ-ಬೆಶಿ ಅಥವಾ ತಣ್ಣಂಗೆ(ಫ್ರಿಜ್ ಲ್ಲಿ ಮಡುಗಿ) ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಶೇಡಿಗುಮ್ಮೆ ಪುಳ್ಳಿ
  ಶೇಡಿಗುಮ್ಮೆ ಪುಳ್ಳಿ

  ಅಕ್ಕೋ ಹೀಂಗೇ (ಬೆಳದ,ಹಣ್ಣಾಗಿ ಬಿದ್ದ) ಬೀಜದ ಬೊಂಡಿಂದುದೇ ಮಾಡ್ಲಕ್ಕೋ ಹೇಂಗಾವುತ್ತು ನಮ್ಮತ್ಲಾಗಿ ಚೋರೆ ಬೆಳದು ಹಣ್ಣಾಗಿ ಮುಗುದತ್ತು, ಚೋರಗೆ ಇನ್ನೊಂದೊರಿಶ ಕಾಯೆಕ್ಕು ಹಾಂಗಾಗಿ ಕೇಳಿದ್ದು.

  [Reply]

  ವೇಣಿಯಕ್ಕ°

  ವೇಣಿಯಕ್ಕ° Reply:

  ಬೆಳದ ಬೀಜದ ಬೊಂಡು ಬೆಂದಪ್ಪಗ, ಚೋರೆಯಸ್ಟು ಹಿಟ್ಟು ಹಿಟ್ಟು ಆವ್ತಿಲ್ಲೆ. ಮತ್ತೆ ಬೆಳದ ಬೀಜವ ಹೆಚ್ಚು ಹೊತ್ತು ಬೇಶೆಕ್ಕು.

  [Reply]

  VN:F [1.9.22_1171]
  Rating: 0 (from 0 votes)
 2. ಜಯಶ್ರೀ ನೀರಮೂಲೆ
  jayashree.neeramoole

  ವಿಶುವಿಂಗೆ ವರ್ಷಕ್ಕೂ ವಿಶೇಷವಾಗಿ ಮಾಡುವ ಚೋರೆ ಪಾಯಸವ ಬೈಲಿಲ್ಲಿ ಕಂಡು ಖುಷಿ ಆತು… ಧನ್ಯವಾದ ವೇಣಿಯಕ್ಕ…

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ವಿಷು ದಿನದ ವಿಶೇಷ ಚೋರೆ ಪಾಯಸದ ತಯಾರಿ ಕ್ರಮ, ಅದರ ಫೊಟೊಂಗೊ ಮನಸ್ಸಿನ ಕದ್ದತ್ತು. ಹಳ್ಳಿಯ ಜೀವನವ ಪುನಃ ನೆಂಪು ಮಾಡಿತ್ತು. ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ

  ಪಷ್ಟಾಯ್ದು.

  [Reply]

  VA:F [1.9.22_1171]
  Rating: -1 (from 1 vote)
 5. ಸಂದೇಶ್ ಯೇತಡ್ಕ

  ಆನು ಇದುವರೆಗೆ ಚೋರೆ ಪಾಯಸ ತಿಂದಿದಿಲ್ಲೆ ಅಕ್ಕಾ. ಕೆಳಣ ಮನೆ ಶಿವರಾಮಣ್ಣನಲ್ಲಿ ಮಾಡಿತ್ತವು. ಎಂಗೊಗು ರಜ ಚೋರೆ ಕೊಟ್ಟಿತ್ತವು. ಚೋರೆ ಪಾಯಸ ವಿಷುವಿನ ವಿಶೇಷ ಹೇಳಿ ಗೊಂತೇ ಇತ್ತಿಲ್ಲೆ. ಮಾಡುದು ಹೇಂಗೆ ಹೇಳಿ ಹೇಳಿಕೊಟ್ಟದಕ್ಕೆ ಥ್ಯಾಂಕ್ಸ್, ಚೋರೆ ಪಾಯಸ ತಿಂದರೆ ‘ചോര കുഡു’ಹೇಳಿ ಶಿವಣ್ಣ ಹೇಳ್ತವು!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೀಲಾಲಕ್ಷ್ಮೀ ಕಾಸರಗೋಡುಹಳೆಮನೆ ಅಣ್ಣನೀರ್ಕಜೆ ಮಹೇಶಚೆನ್ನಬೆಟ್ಟಣ್ಣಬೋಸ ಬಾವಕಳಾಯಿ ಗೀತತ್ತೆಚುಬ್ಬಣ್ಣಸಂಪಾದಕ°ಮಾಷ್ಟ್ರುಮಾವ°ಶಾ...ರೀಗಣೇಶ ಮಾವ°ಅನು ಉಡುಪುಮೂಲೆಬೊಳುಂಬು ಮಾವ°ಶೇಡಿಗುಮ್ಮೆ ಪುಳ್ಳಿಪುಟ್ಟಬಾವ°ಶುದ್ದಿಕ್ಕಾರ°ನೆಗೆಗಾರ°ಸುಭಗವಾಣಿ ಚಿಕ್ಕಮ್ಮಶ್ರೀಅಕ್ಕ°ಶ್ಯಾಮಣ್ಣಕೊಳಚ್ಚಿಪ್ಪು ಬಾವದೇವಸ್ಯ ಮಾಣಿಶಾಂತತ್ತೆವಿಜಯತ್ತೆಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ