ಚುಕ್ಕು(ಶುಂಠಿ)ಕಾಫಿ

December 4, 2010 ರ 12:47 pmಗೆ ನಮ್ಮ ಬರದ್ದು, ಇದುವರೆಗೆ 26 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಓ ಮೊನ್ನೆ ಬದಿಯಡ್ಕಲ್ಲಿ  ಡಾಮಹೇಶಣ್ಣನ ಸಮ್ಮಾನ ಕಳುಸಿ ಬಪ್ಪಗ – ದೊಡ್ದಭಾವನೂ ಯೇನಂಕೂಡ್ಳು ಅಣ್ಣನೂ ಬದಿಯಡ್ಕ ಪೇಟೇಲಿ ಇಪ್ಪ ಆನಂದ ಸಾಗರ ಹೇಳುವ ಹೋಟೇಲಿಂಗೆ ಕರಕ್ಕೊಂಡು ಹೋದವು.
ಬೈಲಿನವಕ್ಕೆ ನಿಜವಾಗಿ ಅಂದು ಆನಂದ ಸಾಗರ ಎಲ್ಲಾ ರೀತಿಲೂ ಆಯಿದು ಹೇಳುದಕ್ಕೆ ಇಷ್ಟರ ವರೆಗಾಣ ಶುದ್ಧಿಗಳ ನೋಡಿದ್ದೀರನ್ನೇ.

ಮಹೇಶಣ್ಣ ಅಂದು ಎಂಗೊಗೆ ಆನಂದ ಸಾಗರಲ್ಲಿ ಚುಕ್ಕು ಕಾಪಿ ಕುಡಿಶಿದವು..ಇದರ  ರುಚಿ  ಸೀವುದೇ ರೆಜ್ಜ ಖಾರವುದೇ ಒಟ್ಟು ಮಿಶ್ರಣವಾಗಿಯೇ ಇದ್ದು.
ನಮ್ಮ ಜೀವನ ಆನಂದ ಸಾಗರಲ್ಲಿ ಮುಳುಗಿ ಹೋಯಿಗೊಂಡಿಪ್ಪಗ ಕಷ್ಟ-ಸುಖ ಹೇಳುವ ಸೀವು ಖಾರ ಮಿಶ್ರಣಲ್ಲಿಯೇ ಇರೆಕು ಹೇಳುವ ಮರ್ಮವೋ ಎಂತೋ?

ಛೆ!! ವಿಷಯ ಎಲ್ಲೆಲ್ಲಿಗೋ ಹೋವ್ತು.
ಹ,ಅಷ್ಟೆಲ್ಲಾ ಆಲೋಚನೆ ಮಾಡಿಯೊಂಡಿಪ್ಪಗ  ಶ್ರೀ ಅಕ್ಕ ಹೇಳಿದವು.. ಈ ವಿಶೇಷವಾದ ಚುಕ್ಕು(ಶುಂಠಿ)ಕಾಪಿಯ ಬಗ್ಗೆ ಬೈಲಿಲಿ ತಿಳಿಶಿಕ್ಕು ಹೇಳಿ.
ನವಗೆ ಕಾಪಿ ಕುಡುದು ಮಾಂತ್ರ ಗೊಂತಿದಾ!!! ಅಂಬಗ ಅಲ್ಲಿಯಾಣವರ ಹತ್ತರೆ ಯೇನಂಕೂಡ್ಳು ಅಣ್ಣ ಈ ಕಾಪಿಯ ಹೇಂಗೆ (ಪಾಕ) ಮಾಡುದು ಹೇಳಿ ಕೇಳಿದವು.

ಅಷ್ಟೊತ್ತಿಂಗೆ ಅವು ಹೇಳಿದವು:
ಬದಿಯಡ್ಕ ಬಸ್ಸು ಸ್ಟಾಂಡಿನ ಎದುರೇ ಒಂದು ಅಂಗಡಿ ಇದ್ದು. ಅಲ್ಲಿ ಸಿಕ್ಕುತ್ತು. ಅದರ ಪೇಕೆಟಿಲಿ ಎಲ್ಲಾ ವಿವರಂಗ ಇದ್ದು ಹೇಳಿ.

ಹಾಂಗೆ ಶ್ರೀ ಅಕ್ಕ ಎರಡೆರಡು ಕಟ್ಟ ತೆಕ್ಕೊಂಡು ಬಂದವು.
ಡಾಕುಟ್ರಕ್ಕಂಗೆ ಕೊಡ್ಲೋ ಏನೋ?ಹೇಳಿ ಗ್ರೇಶಿದೆ.ಅಲ್ಲ!!
ಎಂಗೊಗೆ ಎಲ್ಲಾ ಒಂದೊಂದು  ಪೇಕೇಟು ಕೊಟ್ಟವು.ಅದರ ಪಟಂಗಳ ಇಲ್ಲಿ ಹಾಕುತ್ತೆ..

ಹೇಂಗೆ ಮಾಡುದು ಹೇಳಿ ಇನ್ನೂ ಹೆಚ್ಚು ವಿವರ ಬೇಕಾರೆ ಶ್ರೀ ಅಕ್ಕನ ಸಂಪರ್ಕ ಮಾಡಿ..

ಚುಕ್ಕು(ಶುಂಠಿ)ಕಾಫಿ, 3.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 26 ಒಪ್ಪಂಗೊ

  1. ಮುಳಿಯ ಭಾವ
    ರಘುಮುಳಿಯ

    ಗಣೇಶ ಭಾವ,
    ಕಾಪಿ ಪ್ರಿಯರಿ೦ಗೆ ಕೊಶಿ ಆತದಾ.ಬೇಗ ಬದಿಯಡ್ಕಕ್ಕೆ ಹೋಗಿ ಚುಕ್ಕು ಕಾಪಿ ತೆಕ್ಕೊಂಡು ಶ್ರೀ ಅಕ್ಕಂಗೆ ಫೋನು ಮಾಡುತ್ತೆ ಆಗದೋ?ಪೆಕೆಟಿಲಿ ಒಂದು ತುಂಡಿನ ಒಂದು ಗ್ಲಾಸ್ ನೀರಿಂಗೆ ಹಾಕಿ ಎರಡು ನಿಮಿಷ ಕೊದುಶೆಕ್ಕು ಹೇಳಿ ಇದ್ದಪ್ಪ..

    [Reply]

    ಶ್ಯಾಮಣ್ಣ

    ಶ್ಯಾಮಣ್ಣ Reply:

    ಹಾಂಗೇ ಚುಕ್ಕು ಕಾಪಿಯ ಬಗ್ಗೆ ಒಂದು ಭಾಮಿನಿಯೂ ಬಕ್ಕಾ ಹೇಳಿ ಕಾಣ್ತು….:)

    [Reply]

    ಮುಳಿಯ ಭಾವ

    ರಘುಮುಳಿಯ Reply:

    ಶ್ಯಾಮಣ್ಣ ಮೆಲ್ಲಂಗೆ ಕಡ್ಡಿ ಒರದವದ ಕಿಚ್ಚು ಹೊತ್ತಿತ್ತು..

    ಶಶಿಯ ಪ್ರಭೆ ಮೀರಿಸುವ ರೀತಿಯ
    ಕೊಶಿಯ ಮೊರೆಯ ನೋಡಿಯಪ್ಪಗ
    ವಶವದಾತೀಗೆನ್ನ ತನುವಾನಂದಸಾಗರದಿ
    ದಶಗುಣದ ಜೀವಾಮೃತ೦ಗಳ
    ಕಶಿಯ ಮಾಡಿದ ಕಾಪಿಹೊಡಿ ತಲೆ
    ಬೆಶಿಯ ನೀಗಿಸೆಬನ್ನಿ ಕುಡಿಯುವ° ಚುಕ್ಕು ಕಾಪಿಯನು.

    ಇನ್ನು ಭೋಗ ಷಟ್ಪದಿಲಿ ಕಾಪಿ ಕುಡುದರೆ ಹೇಂಗೆ?( ತಿರುಕನೋರ್ವನೂರ ಮುಂದೆ ನೆ೦ಪಕ್ಕೋ?)

    ಚಕ್ಕು ಬಾಳೆಹಣ್ಣ ಕಡದು
    ಮುಕ್ಕಿ ದೋಸೆಯನ್ನು ಬೋಸ°
    ನೆಕ್ಕುತಿದ್ದ° ರವೆಗೆ ಬೆರಳನದ್ದಿ ಕಿಸಿಯುತ
    ಪಕ್ಕ ಬೆಶಿಯ ಲೋಟೆ ತ೦ದ
    ಅಕ್ಕ° ಹೇಳಿತಿ೦ದು ಮೋರೆ
    ಸುಕ್ಕು ಮಾಯವಕ್ಕು ಕುಡಿಯೊ° ಚುಕ್ಕು ಕಾಪಿಯ

    [Reply]

    ಶ್ಯಾಮಣ್ಣ

    ಶ್ಯಾಮಣ್ಣ Reply:

    ವಾಹ್ ವಾಹ್ ಕ್ಯಾ ಷೇರ್ ಮಾರಾ…

    ಮುಳಿಯ ಭಾವ

    ರಘುಮುಳಿಯ Reply:

    ಹುಲಿ ಸತ್ತತ್ತೋ ಶ್ಯಾಮಣ್ಣ??

    ಶ್ಯಾಮಣ್ಣ

    ಶ್ಯಾಮಣ್ಣ Reply:

    ಆದು ಈ ಗಜಲು ಹೇಳ್ತವದ… ಆವಾಗೆಲ್ಲ ಖುಶಿ ಆದರೆ ಹಾಂಗೆ ಹೇಳುದದ..

    VA:F [1.9.22_1171]
    Rating: 0 (from 0 votes)
    ಶ್ಯಾಮಣ್ಣ

    ಶ್ಯಾಮಣ್ಣ Reply:

    ಇಂದು ಷೇರಿಲಿ ಎಷ್ಟು ಲೋಸಾತು ಹೇಳಿ ನೋಡಿಕೊಂಡು ಇತ್ತಿದ್ದೆ…. ಹಾಂಗಾಗಿ ಅದೇ ಪದ ನೆಂಪಾತದ…

    ಮುಳಿಯ ಭಾವ

    ರಘುಮುಳಿಯ Reply:

    ಹಾ, ಶೇರೋ??
    ಮೇಲೆ ಹೋದ್ದದು ಕೆಳ ಬರೆಕ್ಕಾದ್ದು ಪ್ರಕೃತಿಯ ನಿಯಮ ಅಲ್ಲದೋ? ಸಮುದ್ರದ ನೀರು ಆವಿ ಆಗಿ ಮುಗಿಲು,ಮಳೆ ಆಗಿ ಭೂಮಿಗೆ ಮತ್ತೆ ಸಮುದ್ರಕ್ಕೆ. ಹಾಂಗೆ ಶೇರುದೆ ,ಆದರೆ ಒಂದು ವೆತ್ಯಾಸ ಆ ಮುಗಿಲು ಗಾಳಿಗೆ ಎಲ್ಲಿಗೆ ರಟ್ಟುತ್ತೋ ಗೊಂತಾವುತ್ತಿಲ್ಲೆ, ಎಲ್ಲಿ ಪೈಸೆಯ ಮಳೆ ಸುರಿತ್ತೋ ದೇವರೇ ಬಲ್ಲ° !!

    ಶ್ಯಾಮಣ್ಣ

    ಶ್ಯಾಮಣ್ಣ Reply:

    ಶೇರಿನಿಂ ನಗೆನುಡಿಯು, ಶೇರಿನಿಂ ಹಗೆಹೊಲೆಯು
    ಶೇರಿನಿಂ ಸರ್ವಸಂಪದವು ಲೋಕಕ್ಕೆ
    ಶೇರೇಮಾಣಿಕವು —

    ಗಣೇಶ ಮಾವ°

    ಗಣೇಶ ಮಾವ° Reply:

    ಎಂತದೇ ಆಗಲಿ ಶ್ಯಾಮಣ್ಣ ಮುಳಿಯ ಭಾವನ ಹತ್ತರಂದ ಭಾಮಿನಿಯ ಹೆರಡ್ಸಿಯೇ ಬಿಟ್ಟವು.ಲಾಯಕ ಆಯಿದು..ಇಬ್ರಿಂಗೂ ಧನ್ಯವಾದ……

    VN:F [1.9.22_1171]
    Rating: 0 (from 0 votes)

    ಸುಬ್ಬಯ್ಯ ಭಟ್ಟ ವರ್ಮುಡಿ Reply:

    ಭಾರೀ ಲಾಇಕಾಯಿದು

    VA:F [1.9.22_1171]
    Rating: 0 (from 0 votes)
  2. ಗಣೇಶ ಪೆರ್ವ
    ಗಣೇಶ ಪೆರ್ವ

    ಕಡೇಗಾಣ ಫೊಟೋ ನೋಡುವಗ ಹಾಲು ಸೇರಿಸಿದ ಕಾಪಿಯ ಹಾ೦ಗೆ ಕಾಣ್ತು..? ಚುಕ್ಕು ಕಾಪಿಗೆ ಹಾಲು ಸೇರುಸುತ್ತ ಕ್ರಮ ಇದ್ದಾ? ಎನಗೆ ಗೊ೦ತಿಪ್ಪ ಹಾ೦ಗೆ ಇಲ್ಲೆ..

    [Reply]

    ಗಣೇಶ ಮಾವ°

    ಗಣೇಶ ಮಾವ° Reply:

    ಗೊಂತಿಲ್ಲೆ.ಅದು ಕಿಶೋರಣ್ಣ ಕುಡಿತ್ತಾ ಇಪ್ಪ ಪಟ..ಅವರತ್ರೆ ಕೇಳಕ್ಕಷ್ಟೇ…

    [Reply]

    ಬಲ್ನಾಡುಮಾಣಿ

    ಆದರ್ಶ Reply:

    [ಕಿಶೋರಣ್ಣ ಕುಡಿತ್ತಾ ಇಪ್ಪ ಪಟ]

    ಅಪ್ಪಪ್ಪು, ಕುಡಿದವನೇ ಬಲ್ಲ, ಕುಡಿದದ್ದರ ಸವಿಯ 😉

    [Reply]

    VA:F [1.9.22_1171]
    Rating: 0 (from 0 votes)
  3. ಮೋಹನಣ್ಣ

    ಈ ಚುಕ್ಕು ಕಾಪಿ ಸುಮಾರು ವರ್ಷ ಮದಲಿ೦ದಲೇ ಇತ್ತು ಅ೦ತು ಬಯಲಿನೋರಿ೦ಗೆ ಈಗ ಗೊ೦ತಾತಾನೆ.ಹಿ೦ಗೆ ಹೊಸತ್ತು ಗೊ೦ತಾಗಿಯಪ್ಪಗ ಒಬ್ಬೊಬ್ಬ೦ಹೇಳಿರೆ ಬಯಲಿನೋರಿ೦ಗೆ ಎಲ್ಲ ಗೊ೦ತಾವುತ್ತದ.ಒಪ್ಪ೦ಗಳೊಟ್ಟಿ೦ಗೆ.

    [Reply]

    VA:F [1.9.22_1171]
    Rating: 0 (from 0 votes)
  4. ಬೋಸ ಬಾವ
    ಬೋಸ...

    ಕಾಪಿ ಮೊದ್ಲೇ, ಉಷ್ಣ.. 😛
    ಅದಕ್ಕೆ ಶು೦ಠಿ ಹಾಕಿರೆ… ಅದೋ ಗತ್ತಿ ಅಕ್ಕನ್ನೆಪ್ಪಾ…!! :(

    [Reply]

    ಮುಳಿಯ ಭಾವ

    ರಘುಮುಳಿಯ Reply:

    ಬೋಸ ಭಾವ,ಹೊಳೇಲಿ ಮಿಂದು ನಿನಗೆ ಶೀತ ಆಯಿದನ್ನೇ.ಚುಕ್ಕು ಕಾಪಿ ನಿನಗೆ ಸರಿಯಾದ ಮದ್ದು .

    [Reply]

    ಬೋಸ ಬಾವ

    ಬೋಸ... Reply:

    ಅಪ್ಪು ರಘು ಭಾವಾ.. ಶೀತಾ ಶೀತ…!! ಎ೦ತ ಮಾಡುಸ್ಸು??
    ಕಶಾಯ ಮಾಡಿ ಕುಡಿಯೆಕೊ ಹೇಳಿ….!!
    ಚುಕ್ಕಿ ಕಾಪಿ ಉಷ್ಣ ಅಕ್ಕು.. :(

    [Reply]

    VA:F [1.9.22_1171]
    Rating: 0 (from 0 votes)
  5. ಕಲ್ಲಕಟ್ಟ ವಿಜಯಕ್ಕ

    ಅಂಗಡಿ ಹೆಸರು ಹೇಳಿದರೆ ಒಳ್ಳೇದಿತ್ತು

    [Reply]

    ಗಣೇಶ ಪೆರ್ವ

    ಗಣೇಶ ಪೆರ್ವ Reply:

    ಹೆಚ್ಚಿನ೦ಶ ಎಲ್ಲಾ ದಿನಸಿ ಅ೦ಗಡಿಗಳಲ್ಲೂ ಸಿಕ್ಕುಗು ಇದು. Eastern ಚುಕ್ಕುಕಾಪಿ ಕೇಳಿದರೆ ಸಾಕು. ‘ಮರುತ್ವ’ ಹೇಳ್ತ ಕ೦ಪೆನಿದು ಕೂಡ ಚುಕ್ಕುಕಾಪಿ ಸಿಕ್ಕುತ್ತು, ಅದು ಹೊಡಿ. ಕೊದಿತ್ತ ನೀರಿ೦ಗೆ ೧ ಚಮ್ಚ ಹಾಕಿ ಬತ್ತುಸಿರೆ ಸಾಕಾವ್ತು. ಇಲ್ಲಿ ಹೆಚ್ಚಿನ ಭಾರತೀಯ ಸುಪರ್ ಮಾರ್ಕೆಟಿಲ್ಲಿಯುದೆ ಇದು ಸಿಕ್ಕುತ್ತು. ಬದಿಯಡ್ಕ, ನೀರ್ಚಾಲುಗಳಲ್ಲಿ, ಹೆಚ್ಚಿನ೦ಶ ಎಲ್ಲಾ ದಿನಸಿ ಅ೦ಗಡಿಗಳಲ್ಲೂ ಸಿಕ್ಕುಗಾಯಿಕ್ಕು..

    [Reply]

    VA:F [1.9.22_1171]
    Rating: 0 (from 0 votes)
  6. ಏ ಗಣೇಶಮಾಮ, ಚಕ್ಕುಕಾಪಿಯ ಪಟ ನೋಡಿರೆ ಆನು ಕುಡಿತ್ತ ಹಾರ್ಲಿಕ್ಸಿನ ಹಾಂಗೆ ಇದ್ದನ್ನೆ!! 😉 ರುಚಿಯುದೆ ಹಾಂಗೆ ಇರ್ತಾ? ಇನ್ನೊಂದರಿ ಹೋಪಾಗ ಎನ್ನನ್ನು ಕರಕೊಂಡ್ ಹೋಯೆಕ್ಕು, ಎನಗೆ ಚಾಕ್ಲೇಟಿನೊಟ್ಟಿಂಗೆ ಚಕ್ಕು ಕಾಪಿ ಕುಡಿಯೆಕ್ಕು, ಅಮ್ಮಂಗೆ ಹೇಳಿರೆ ಮಾಡಿಕೊಡ್ತಿಲ್ಲೆ ಅದು, ಮಕ್ಕೊ ಕುಡ್ಯಲಾಗ ಹೇಳ್ತು.. 😡

    [Reply]

    ಗಣೇಶ ಮಾವ°

    ಗಣೇಶ ಮಾವ° Reply:

    ನೀನು ಶ್ರೀದೇವಿ ಅತ್ತೆಯ ಹತ್ತರೆ ಹೇಳು.ಅವು ಕಾರಿಲಿ ಕರಕ್ಕೊಂಡು ಹೋಕ್ಕು..

    [Reply]

    VN:F [1.9.22_1171]
    Rating: 0 (from 0 votes)
  7. ಮೋಹನಣ್ಣ

    ಏ ಒಪ್ಪಕು೦ಞಿ ಕೂಗೇಡ ಆತೊ ಅದಕ್ಕೆ ಮತ್ತೆ ಸಮಯ ಇದ್ದು೦.ನಿನು ಅಜ್ಜಕಾನ ಅಜ್ಜನತ್ರೆ ಹೋಗಾತೊ ಅವ್ವು ನಿನಗೆ ಕಾಸಿ ಕೊಡ್ತವಾಡ ಅದರ ತಿ೦ದಪ್ಪಗ ಹೋರ್ಲಿಕ್ಸಿನ ರುಚಿಯು ಚೋಕ್ಲೇಟಿನ ರುಚಿಯೂ ಒಟ್ಟು ಗೊ೦ತಕ್ಕು ಆತೊ.ಒಪ್ಪ್ಪ೦ಗಳೊಟ್ಟಿ೦ಗೆ.ಒಪ್ಪಕು೦ಞಿಗೆ ಒ೦ದು ಒಪ್ಪ ಹೆಚ್ಹು ಆತೊ.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿvreddhiವಿದ್ವಾನಣ್ಣವಸಂತರಾಜ್ ಹಳೆಮನೆಯೇನಂಕೂಡ್ಳು ಅಣ್ಣಹಳೆಮನೆ ಅಣ್ಣವಾಣಿ ಚಿಕ್ಕಮ್ಮಜಯಗೌರಿ ಅಕ್ಕ°ಕಳಾಯಿ ಗೀತತ್ತೆಶ್ರೀಅಕ್ಕ°ಅನುಶ್ರೀ ಬಂಡಾಡಿಅಕ್ಷರದಣ್ಣಪಟಿಕಲ್ಲಪ್ಪಚ್ಚಿಅಡ್ಕತ್ತಿಮಾರುಮಾವ°ದೀಪಿಕಾಅಕ್ಷರ°ದೊಡ್ಡಭಾವಬೊಳುಂಬು ಮಾವ°ರಾಜಣ್ಣಚೆನ್ನೈ ಬಾವ°ಚುಬ್ಬಣ್ಣಕೊಳಚ್ಚಿಪ್ಪು ಬಾವಸರ್ಪಮಲೆ ಮಾವ°ಕಜೆವಸಂತ°ನೆಗೆಗಾರ°ಮಾಷ್ಟ್ರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ