ದಾರಳೆಕಾಯಿ ಬೆಂದಿ

August 5, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದಾರಳೆಕಾಯಿ ಬೆಂದಿ

ಬೇಕಪ್ಪ ಸಾಮಾನುಗೊ:

  • 3 ದಾರಳೆಕಾಯಿ
  • 1-1.25 ಕಪ್(ಕುಡ್ತೆ) ಕಾಯಿ ತುರಿ
  • ಚಿಟಿಕೆ ಅರುಶಿನ ಹೊಡಿ
  • 1/2 ಚಮ್ಚೆ ಜೀರಿಗೆ
  • ದ್ರಾಕ್ಷೆ ಗಾತ್ರದ ಹುಳಿ
  • 3-4 ಒಣಕ್ಕು ಮೆಣಸು
  • ರುಚಿಗೆ ತಕ್ಕಸ್ಟು ಉಪ್ಪು
  • 1 ಕಪ್(ಕುಡ್ತೆ) ಬೇಶಿದ ತೊಗರಿ ಬೇಳೆ
  • 4-5 ಬೇನ್ಸೊಪ್ಪು
  • 3-4 ಎಸಳು ಬೆಳ್ಳುಳ್ಳಿ
  • 1 ಚಮ್ಚೆ ಸಾಸಮೆ
  • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:
ದಾರಳೆಕಾಯಿಯ ಚೋಲಿ ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ ಮಡುಗಿ.

ಕೊರದ ದಾರಳೆಕಾಯಿಯ ಒಂದು ಪಾತ್ರಕ್ಕೆ ಹಾಕಿ, ಉಪ್ಪು, ಚಿಟಿಕೆ ಅರುಶಿನ ಹೊಡಿ, ಬೇಕಪ್ಪಸ್ಟು ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ. ಬೇಶಿದ ತೊಗರಿ ಬೇಳೆ ಹಾಕಿ ತೊಳಸಿ, ಕೊದುಶಿ.

ಒಣಕ್ಕು ಮೆಣಸಿನ ಮೈಕ್ರೋವೇವ್ ಲ್ಲಿ ಸುಟ್ಟು ಹಾಕಿ ಮಡುಗಿ ಅಥವಾ ಬಾಣಲೆಲಿ ಎಣ್ಣೆ ಹಾಕದ್ದೆ ಸಣ್ಣ ಕಿಚ್ಚಿಲ್ಲಿ ಪರಿಮ್ಮಳ ಬಪ್ಪನ್ನಾರ ಹೊರುದು ಮಡುಗಿ. ಕಾಯಿ ತುರಿ, ಒಣಕ್ಕು ಮೆಣಸು, ಜೀರಿಗೆಯ ಮಿಕ್ಸಿಲಿ ಹಾಕಿ ಬೇಕಾಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ.

ಕಡದ ಮಸಾಲೆಯ ಬೆಂದ ಬಾಗಕ್ಕೆ ಹಾಕಿ ತೊಳಸಿ, ಲಾಯಿಕಲಿ ಕೊದುಶಿ.(ಉಪ್ಪು, ನೀರು ಬೇಕಾದರೆ ಹಾಕಿ.)
ಬೆಳ್ಳುಳ್ಳಿಯ ಸೊಲುದು, ಜಜ್ಜಿ, ಒಗ್ಗರಣೆ ಸಟ್ಟುಗಿಲ್ಲಿ ಎಣ್ಣೆದೆ, ಬೆಳ್ಳುಳ್ಳಿದೆ ಹಾಕಿ ಹೊರಿಯೆಕ್ಕು. ಅದು ಚಿನ್ನದ ಬಣ್ಣ ಬಪ್ಪಗ, ಅದಕ್ಕೆ ಸಾಸಮೆ ಹಾಕೆಕ್ಕು.
ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಬೆಂದಿಗೆ ಹಾಕಿ. ಇದು ಅಶನ/ಚಪಾತಿ/ರೊಟ್ಟಿಯ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣವಾಣಿ ಚಿಕ್ಕಮ್ಮಅನು ಉಡುಪುಮೂಲೆಪುತ್ತೂರಿನ ಪುಟ್ಟಕ್ಕವಸಂತರಾಜ್ ಹಳೆಮನೆಶಾ...ರೀಡೈಮಂಡು ಭಾವಶಾಂತತ್ತೆಮಂಗ್ಳೂರ ಮಾಣಿಹಳೆಮನೆ ಅಣ್ಣಅಕ್ಷರ°ಬಂಡಾಡಿ ಅಜ್ಜಿಜಯಗೌರಿ ಅಕ್ಕ°ಅನುಶ್ರೀ ಬಂಡಾಡಿಬಟ್ಟಮಾವ°ದೊಡ್ಡಭಾವಡಾಗುಟ್ರಕ್ಕ°ಪುತ್ತೂರುಬಾವಸರ್ಪಮಲೆ ಮಾವ°ಉಡುಪುಮೂಲೆ ಅಪ್ಪಚ್ಚಿಜಯಶ್ರೀ ನೀರಮೂಲೆಪಟಿಕಲ್ಲಪ್ಪಚ್ಚಿಶೇಡಿಗುಮ್ಮೆ ಪುಳ್ಳಿಮಾಲಕ್ಕ°ಶ್ರೀಅಕ್ಕ°ಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ