ದಾರಳೆಕಾಯಿ ಚಟ್ನಿ

ದಾರಳೆಕಾಯಿ ಚಟ್ನಿ

ಬೇಕಪ್ಪ ಸಾಮಾನುಗೊ:

 • 1 ದಾರಳೆಕಾಯಿ
 • 1-2 ಚಮ್ಚೆ ಗೋಡಂಬಿ
 • 1/2 ಸಾಧಾರಣ ಗಾತ್ರದ ನೀರುಳ್ಳಿ
 • 1 ಚಮ್ಚೆ ಚಟ್ನಿ ಕಡ್ಲೆ / ಪುಟಾಣಿ
 • 2-3 ಹಸಿಮೆಣಸು
 • 1-2 ಬೆಳ್ಳುಳ್ಳಿ ಎಸಳು
 • ಸಣ್ಣ ದ್ರಾಕ್ಷೆ ಗಾತ್ರದ ಹುಳಿ
 • 2-3 ಎಳೆ ಕೊತ್ತಂಬರಿ ಸೊಪ್ಪು
 • ರುಚಿಗೆ ತಕ್ಕಸ್ಟು ಉಪ್ಪು
 • 1/4 ಚಮ್ಚೆ ಜೀರಿಗೆ
 • 1 ಚಮ್ಚೆ ಸಾಸಮೆ
 • 1 ಚಮ್ಚೆ ಉದ್ದಿನ ಬೇಳೆ
 • ಚಿಟಿಕೆ ಇಂಗು
 • 1-2 ಮುರುದ ಒಣಕ್ಕು ಮೆಣಸು
 • 3-4 ಚಮ್ಚೆ ಎಣ್ಣೆ

ಮಾಡುವ ಕ್ರಮ:

ದಾರಳೆಕಾಯಿಯ ಚೋಲಿ ತೆಗದು, ತೊಳದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ ಮಡಿಕ್ಕೊಳ್ಳಿ. ನೀರುಳ್ಳಿಯ ಚೋಲಿ ತೆಗದು, ತೊಳದು, ಸಣ್ಣಕೆ ಕೊಚ್ಚಿ ಮಡಿಕ್ಕೊಳ್ಳಿ.  ಹಸಿಮೆಣಸಿನ ಸಿಗುದು ಮಡಿಕ್ಕೊಳ್ಳಿ. ಬೆಳ್ಳುಳ್ಳಿಯ ಸೊಲುದು ಜಜ್ಜಿ ಮಡಿಕ್ಕೊಳ್ಳಿ.

ಒಂದು ಬಾಣಲೆಲಿ 3 ಚಮ್ಚೆ ಎಣ್ಣೆ ಹಾಕಿ ಬೆಶಿ ಮಾಡಿ.  ಇದಕ್ಕೆ ಹುಳಿ, ಹಸಿಮೆಣಸು, ಗೋಡಂಬಿ, ಪುಟಾಣಿ, ಬೆಳ್ಳುಳ್ಳಿಯ ಬೇರೆ ಬೇರೆಯಾಗಿ ಹಾಕಿ 1-2 ನಿಮಿಷ ಹದ/ಸಣ್ಣ ಕಿಚ್ಚಿಲ್ಲಿ ಹೊರುದು ಕರೆಲಿ ಮಡಿಕ್ಕೊಳ್ಳಿ. ಇದಕ್ಕೆ 1/2 ಚಮ್ಚೆ ಸಾಸಮೆ, 1/4 ಚಮ್ಚೆ ಜೀರಿಗೆ ಹಾಕಿ ಹೊಟ್ಟಿ ಅಪ್ಪಗ, ಕೊಚ್ಚಿದ ನೀರುಳ್ಳಿಯ ಹಾಕಿ, 4-5 ನಿಮಿಷ ಸಣ್ಣ / ಹದ ಕಿಚ್ಚಿಲ್ಲಿ ನೀರುಳ್ಳಿ ಚಿನ್ನದ ಬಣ್ಣ ಬಪ್ಪನ್ನಾರ ಹೊರಿರಿ. ಇದಕ್ಕೆ ಕೊಚ್ಚಿದ ದಾರಳೆ, ಉಪ್ಪು ಹಾಕಿ ತೊಳಸಿ. ಇದಕ್ಕೆ ರೆಜ್ಜ ನೀರು ಹಾಕಿ, ಮುಚ್ಚಲು ಮುಚ್ಚಿ, 7-8 ನಿಮಿಷ ಬೇಶಿ.

ಮಿಕ್ಸಿಗೆ ಬೆಂದ ಬಾಗವ ಹಾಕಿ, ರೆಜ್ಜ ನೀರು ಹಾಕಿ, ಒಂದು ನಿಮಿಷ ಕಡೆರಿ. ಕೊಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ತೊಳಸಿ. ಒಗ್ಗರಣೆ ಸಟ್ಟುಗಿಲ್ಲಿ, ಮುರುದ ಒಣಕ್ಕು ಮೆಣಸು, 1/2 ಚಮ್ಚೆ ಸಾಸಮೆ, ಉದ್ದಿನ ಬೇಳೆ, 1 ಚಮ್ಚೆ ಎಣ್ಣೆ, ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ,ಇಂಗು ಹಾಕಿ, ಒಗ್ಗರಣೆಯ ರೆಜ್ಜ ಹೊತ್ತು ಮಡುಗಿ, ಚಟ್ನಿಗೆ ಹಾಕಿ, ತೊಳಸಿ. ಇದು ದೋಸೆ, ಇಡ್ಲಿ, ರೊಟ್ಟಿ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ವೇಣಿಯಕ್ಕ°

   

You may also like...

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *