ದಾರಳೆಕಾಯಿ ದೋಸೆ

July 15, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದಾರಳೆಕಾಯಿ ದೋಸೆ

ಬೇಕಪ್ಪ ಸಾಮಾನುಗೊ:

  • 1 ಕಪ್(ಕುಡ್ತೆ) ಬೆಣ್ತಕ್ಕಿ
  • 1-2 ದಾರಳೆಕಾಯಿ (ಎಳತ್ತು ಆದರೆ ಒಳ್ಳೆದು)
  • 3-4 ಒಣಕ್ಕು ಮೆಣಸು
  • 2 ಚಮ್ಚೆ ಕಾಯಿ ತುರಿ
  • 8-10 ಕೊತ್ತಂಬರಿ
  • 5-6 ಜೀರಿಗೆ
  • ದೊಡ್ಡ ಚಿಟಿಕೆ ಇಂಗು
  • 5-6 ಬೇನ್ಸೊಪ್ಪು
  • ರುಚಿಗೆ ತಕ್ಕಸ್ಟು ಉಪ್ಪು
  • ಎಣ್ಣೆ / ತುಪ್ಪ

ಮಾಡುವ ಕ್ರಮ:
ಅಕ್ಕಿಯ ನೀರಿಲ್ಲಿ 4-5 ಘಂಟೆ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. ಅಕ್ಕಿಯ ಮಿಕ್ಸಿ/ಗ್ರೈಂಡರಿಲ್ಲಿ  ಹಾಕಿ, ಕಾಯಿ ತುರಿ, ಬೇನ್ಸೊಪ್ಪು, ಒಣಕ್ಕು ಮೆಣಸು, ಜೀರಿಗೆ, ಕೊತ್ತಂಬರಿ, ಇಂಗು, ಉಪ್ಪು, ಬೇಕಾದಸ್ಟು ನೀರು ಹಾಕಿ ನೊಂಪಿಂಗೆ ಕಡೆರಿ. ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ.

ದಾರಳೆಕಾಯಿಯ ಚೋಲಿ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಉರುಟಿಂಗೆ ಕೊರದು ಮಡುಗಿ.

ಕಾವಲಿಗೆಯ ಬೆಶಿ ಮಾಡಿ, ಕೊರದ ದಾರಳೆಕಾಯಿಯ ಹಿಟ್ಟಿಲ್ಲಿ ಅದ್ದಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಾವಲಿಗೆಲಿ ಜೋಡ್ಸಿ. ಮುಚ್ಚಲು ಮುಚ್ಚಿ ಸಾಧಾರಣ ಒಂದು ನಿಮಿಷ ಹದ ಕಿಚ್ಚಿಲ್ಲಿ ಬೇಶಿ. ಒಂದು ಸಕ್ಕಣ ತುಪ್ಪ/ಎಣ್ಣೆಯ ದೋಸೆಯ ಮೇಲಂಗೆ ಉದ್ದಿ, ದೋಸೆಯ ಕವುಂಚಿ ಹಾಕಿ.

ಪುನಃ ಅದರ ಮೇಲಂಗೆ ರೆಜ್ಜ ತುಪ್ಪ/ಎಣ್ಣೆಯ ಉದ್ದಿ ಮುಚ್ಚ್ಲಲು ಮುಚ್ಚಿ ಸಾಧಾರಣ ಒಂದು ನಿಮಿಷ ಬೇಶಿ. ಕವುಂಚಿ-ಮೊಗಚ್ಚಿ ಹಾಕಿ ಸಣ್ಣ ಕಿಚ್ಚಿಲ್ಲಿ ದೋಸೆಯ ಬೇಶಿ.
ತುಪ್ಪ ಹಾಕಿ, ಬೆಶಿ ಬೆಶಿ ದೋಸೆಯ, ಚಟ್ನಿ ಅಥವಾ ಸಾಂಬಾರಿನ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 4-5 ದೋಸೆ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ಶೀಲಾಲಕ್ಷ್ಮೀ ಕಾಸರಗೋಡುದೊಡ್ಡಮಾವ°ಪ್ರಕಾಶಪ್ಪಚ್ಚಿಕೇಜಿಮಾವ°ಅಕ್ಷರದಣ್ಣಡೈಮಂಡು ಭಾವಪವನಜಮಾವದೊಡ್ಮನೆ ಭಾವಬಟ್ಟಮಾವ°ಸುಭಗನೀರ್ಕಜೆ ಮಹೇಶಶುದ್ದಿಕ್ಕಾರ°ಕಜೆವಸಂತ°ಮಾಷ್ಟ್ರುಮಾವ°ಯೇನಂಕೂಡ್ಳು ಅಣ್ಣತೆಕ್ಕುಂಜ ಕುಮಾರ ಮಾವ°ಮಂಗ್ಳೂರ ಮಾಣಿಪಟಿಕಲ್ಲಪ್ಪಚ್ಚಿಪೆಂಗಣ್ಣ°ಪುತ್ತೂರುಬಾವಶಾಂತತ್ತೆನೆಗೆಗಾರ°ಮುಳಿಯ ಭಾವಅನಿತಾ ನರೇಶ್, ಮಂಚಿವೇಣೂರಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ