ದಾರಳೆಕಾಯಿ ತೋವೆ

August 19, 2014 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದಾರಳೆಕಾಯಿ ತೋವೆ

ಬೇಕಪ್ಪ ಸಾಮಾನುಗೊ:

  • 2 ದಾರಳೆಕಾಯಿ
  • 1-2 ಚಮ್ಚೆ ಕಾಯಿ ತುರಿ
  • 1/4 ಚಮ್ಚೆ ಅರುಶಿನ ಹೊಡಿ
  • 1-2 ಚಮ್ಚೆ ನಿಂಬೆ ಹುಳಿ ಎಸರು
  • 2-3 ಹಸಿಮೆಣಸು
  • ರುಚಿಗೆ ತಕ್ಕಸ್ಟು ಉಪ್ಪು
  • 1.5 ಕಪ್(ಕುಡ್ತೆ) ಬೇಶಿದ ತೊಗರಿ ಬೇಳೆ
  • 3-4 ಎಳೆ ಕೊತ್ತಂಬರಿ ಸೊಪ್ಪು
  • 5-6 ಬೇನ್ಸೊಪ್ಪು
  • ದೊಡ್ಡ ಚಿಟಿಕೆ ಇಂಗು
  • 1/4 ಚಮ್ಚೆ ಜೀರಿಗೆ
  • 1/2 ಚಮ್ಚೆ ಸಾಸಮೆ
  • 1 ಚಮ್ಚೆ ತುಪ್ಪ

ಮಾಡುವ ಕ್ರಮ:
ದಾರಳೆಕಾಯಿಯ ಚೋಲಿ ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ ಮಡುಗಿ. ಹಸಿಮೆಣಸಿನ ಸಿಗುದು ಮಡುಗಿ.

ಕೊರದ ದಾರಳೆಕಾಯಿ, ಹಸಿಮೆಣಸಿನ ಒಂದು ಪಾತ್ರಕ್ಕೆ ಹಾಕಿ, ಉಪ್ಪು, ಅರುಶಿನ ಹೊಡಿ, ಬೇಕಪ್ಪಸ್ಟು ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ.

ದಾರಳೆಕಾಯಿ ಬೆಂದಪ್ಪಗ, ಬೇಶಿ ಮಡುಗಿದ ತೊಗರಿಬೇಳೆ ಹಾಕಿ, ಬೇಕಪ್ಪಸ್ಟು ಉಪ್ಪು, ನೀರು ಹಾಕಿ ಕೊದುಶಿ. ಇದಕ್ಕೆ ಕಾಯಿ ತುರಿ ಹಾಕಿ ತೋವೆಯ ಸಣ್ಣ ಕಿಚ್ಚಿಲ್ಲಿ 3-4 ನಿಮಿಷ ಮಡುಗಿ. ಇದಕ್ಕೆ ಕೊತ್ತಂಬರಿ ಸೊಪ್ಪು, ನಿಂಬೆ ಹುಳಿ ಎಸರು ಹಿಂಡಿ ತೊಳಸಿ.
ಒಗ್ಗರಣೆ ಸಟ್ಟುಗಿಲ್ಲಿ ತುಪ್ಪ, ಸಾಸಮೆ, ಜೀರಿಗೆ ಹಾಕಿ ಬೆಶಿ ಅಪ್ಪಲೆ ಮಡುಗಿ. ಅದು ಹೊಟ್ಟುವಗ ಇಂಗು, ಬೇನ್ಸೊಪ್ಪು ಹಾಕಿ ರೆಜ್ಜ ಹೊತ್ತು ಮಡುಗಿ ಒಗ್ಗರಣೆಯ ತೋವೆಗೆ ಹಾಕಿ.

ಇದು ಅಶನ/ಚಪಾತಿ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

 

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಉಡುಪುಮೂಲೆ ಅಪ್ಪಚ್ಚಿಬಂಡಾಡಿ ಅಜ್ಜಿಪೆರ್ಲದಣ್ಣಸಂಪಾದಕ°ಶಾಂತತ್ತೆವೇಣಿಯಕ್ಕ°ನೆಗೆಗಾರ°ಚೂರಿಬೈಲು ದೀಪಕ್ಕದೀಪಿಕಾವಿನಯ ಶಂಕರ, ಚೆಕ್ಕೆಮನೆಹಳೆಮನೆ ಅಣ್ಣಡೈಮಂಡು ಭಾವಪುಣಚ ಡಾಕ್ಟ್ರುಕಜೆವಸಂತ°ಚೆನ್ನಬೆಟ್ಟಣ್ಣಕಳಾಯಿ ಗೀತತ್ತೆಮಾಲಕ್ಕ°ಮುಳಿಯ ಭಾವಜಯಶ್ರೀ ನೀರಮೂಲೆಪುತ್ತೂರುಬಾವಡಾಮಹೇಶಣ್ಣಪುಟ್ಟಬಾವ°ಬಟ್ಟಮಾವ°ಶ್ಯಾಮಣ್ಣಅಡ್ಕತ್ತಿಮಾರುಮಾವ°vreddhi
ಬೈಲಿನ ಮೋರೆಪುಟ
ಸದ್ಯದ ಪಟಂಗೊ
"ಆನು ಕಂಡುಂಡ ಕಾಶೀಯಾತ್ರೆ"
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಬೆಣಚ್ಚಿಪ್ಪಲ್ಲಿ ಹುಡ್ಕಲೆ