Oppanna.com

ದಾಸನ ಹೂಗಿನ ಸಾರು

ಬರದೋರು :   ವೇಣಿಯಕ್ಕ°    on   13/11/2012    3 ಒಪ್ಪಂಗೊ

ವೇಣಿಯಕ್ಕ°

ದಾಸನ ಹೂಗಿನ ಸಾರು

ಬೇಕಪ್ಪ ಸಾಮಾನುಗೊ:

  • 20-25 ದಾಸನ ಹೂಗು (5 ಎಸಳಿನ ಕೆಂಪು ದಾಸನ ಒಳ್ಳೆದು)
  • ಚಿಟಿಕೆ ಅರುಶಿನ ಹೊಡಿ
  • 1-2 ಹಸಿಮೆಣಸು
  • ಸಾಧಾರಣ ದ್ರಾಕ್ಷೆ ಗಾತ್ರದ ಹುಳಿ
  • ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ
  • 5-6 ಬೇನ್ಸೊಪ್ಪು
  • 1 ಚಮ್ಚೆ ಸಾಸಮೆ
  • ಚಿಟಿಕೆ ಇಂಗು
  • 1 ಚಮ್ಚೆ ಎಣ್ಣೆ

ಮಾಡುವ ಕ್ರಮ:

ದಾಸನ ಹೂಗಿನ ಎಸಳಿನ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬೇರೆ ಮಾಡಿ ಮಡುಗಿ.

ಒಂದು ಪಾತ್ರಲ್ಲಿ, ದಾಸನ ಹೂಗಿನ ಎಸಳು, ಸಿಗುದು ಹಾಕಿದ ಹಸಿಮೆಣಸು, ಬೆಲ್ಲ, ಹುಳಿ ಪುರುಂಚಿದ ನೀರು, ಅರುಶಿನ ಹೊಡಿ, ಉಪ್ಪು ಸಾಧಾರಣ 4 ಕುಡ್ತೆ ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ.
ಒಗ್ಗರಣೆ ಸಟ್ಟುಗಿಲ್ಲಿ  ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಇಂಗು, ಬೇನ್ಸೊಪ್ಪು ಹಾಕಿ, ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಸಾರಿಂಗೆ ಹಾಕಿ.
ಇದು ಅಶನದ ಒಟ್ಟಿಂಗೆ ಕೂಡ್ಲೆ / ಹಾಂಗೆ ಕುಡಿವಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

3 thoughts on “ದಾಸನ ಹೂಗಿನ ಸಾರು

  1. ವೇಣಿಯಕ್ಕ°,
    ‘ದಾಸನ’ ಹೇದರೆ ಬೈಲಿಂಗೆ ತುಂಬಾ ಹತ್ರಾಣ ಸಂಗತಿ.
    ಸಾರಡಿ ತೋಡ ಕರೇಲಿ ಬೇಕಾದಷ್ಟು ನಮುನೆಯ ದಾಸನಂಗೊ ಇದ್ದು.
    ಹಾಂಗಾಗಿ ಮನೆಗೆ ಬಂದ ಮಕ್ಕೊ ಎಲ್ಲ ತೋಡ ಕರೇಂಗೆ ಒಂದರಿ ಹೋಗಿ ದಾಸನ ಕೊಯಿದು ತಂದು ಸಾರು ಮಾಡ್ತ ಕ್ರಮ ಇದ್ದು ಮನೇಲಿ.
    ಅವಕ್ಕೂ ನವಗೂ ಇಷ್ಟದ ಸಾರು ಇದು.
    ತುಂಬಾ ಕೊಶಿ ಆತು ನಿಂಗೊ ಕೊಟ್ಟ ಈ ಕ್ರಮ ನೋಡಿ…
    🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×